Bigg Boss Kannada 12: ಮನೆಮಂದಿ ಎಷ್ಟೇ ಕೀಳಾಗಿ ಕಂಡರೂ ಕುಗ್ಗದ ಧ್ರುವಂತ್! ನ್ಯಾಯದ ಆಟಕ್ಕೆ ಶಭಾಷ್ ಅಂದ್ರು ವೀಕ್ಷಕರು
Dhruvanth: ಬಿಗ್ ಬಾಸ್ ಮನೆಯಲ್ಲಿ ಈ ವಾರ ಸ್ಪರ್ಧಿಗಳು ಜಂಟಿ ಆಗಿ ಆಡಿದ್ದಾರೆ. ಸ್ಪರ್ಧಿಗಳೇ ತಮ್ಮ ಜೊತೆಗಾರರನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು. ಹೀಗಾಗಿ ಮನೆಯಲ್ಲಿ ಕಾವ್ಯ-ಗಿಲ್ಲಿ ಜೋಡಿಯಾದರೆ, ರಾಶಿಕಾ-ಸೂರಜ್, ಸ್ಪಂದನಾ -ಅಭಿಷೇಕ್, ಅಶ್ವಿನಿ-ರಘು, ಮಾಳು-ರಕ್ಷಿತಾ, ಚೈತ್ರಾ ಕುಂದಾಪುರ ಮತ್ತು ರಜತ್ ಕಿಶನ್ ಜೋಡಿ ಆದರು. ಧ್ರುವಂತ್ ಅವರನ್ನು ಮಾತ್ರ ಯಾರೂ ಜೋಡಿಯಾಗಿ ಸೆಲೆಕ್ಟ್ ಮಾಡಿರಲಿಲ್ಲ. ಹೀಗಾಗಿ ಧ್ರುವಂತ್ ಅವರಿಗೆ ಬಿಗ್ ಬಾಸ್ ಉಸ್ತುವಾರಿ ನೀಡಿದ್ದರು.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಮನೆಯಲ್ಲಿ (Bigg Boss Kannada 12) ಈ ವಾರ ಸ್ಪರ್ಧಿಗಳು ಜಂಟಿ ಆಗಿ ಆಡಿದ್ದಾರೆ. ಸ್ಪರ್ಧಿಗಳೇ ತಮ್ಮ ಜೊತೆಗಾರರನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು. ಹೀಗಾಗಿ ಮನೆಯಲ್ಲಿ ಕಾವ್ಯ-ಗಿಲ್ಲಿ ಜೋಡಿಯಾದರೆ, ರಾಶಿಕಾ-ಸೂರಜ್, ಸ್ಪಂದನಾ -ಅಭಿಷೇಕ್, ಅಶ್ವಿನಿ-ರಘು, ಮಾಳು-ರಕ್ಷಿತಾ, ಚೈತ್ರಾ ಕುಂದಾಪುರ ಮತ್ತು ರಜತ್ ಕಿಶನ್ ಜೋಡಿ ಆದರು. ಧ್ರುವಂತ್ (Dhruvanth) ಅವರನ್ನು ಮಾತ್ರ ಯಾರೂ ಜೋಡಿಯಾಗಿ ಸೆಲೆಕ್ಟ್ ಮಾಡಿರಲಿಲ್ಲ. ಹೀಗಾಗಿ ಧ್ರುವಂತ್ ಅವರಿಗೆ ಬಿಗ್ ಬಾಸ್ ಉಸ್ತುವಾರಿ ನೀಡಿದ್ದರು. ಆದರೆ ನಿನ್ನೆಯ ರಿಂಗ್ (Ring Task) ಟಾಸ್ಕ್‌ನಲ್ಲಿ ಮಾತ್ರ ಧ್ರುವಂತ್ ಸಖತ್ ಹೈಲೈಟ್ ಆಗಿದ್ದಾರೆ. ಯಾವ ಸ್ಪರ್ಧಿಗೂ ನನ್ನಿಂದ ಅನ್ಯಾಯ ಆಗಬಾರದು ಅಂತ ಕಣ್ಣು ಮುಚ್ಚಿಕೊಂಡು ರಿಂಗ್ ಎಸೆದಿದ್ದಾರೆ ಧ್ರುವಂತ್.
ನ್ಯಾಯ ಒದಗಿಸಿದ ಧ್ರುವಂತ್
ಈ ನ್ಯಾಯದ ಆಟಕ್ಕೆ ಶಭಾಷ್ ಅಂರ ಕಮೆಂಟ್ ಮಾಡ್ತಿದ್ದಾರೆ ವೀಕ್ಷಕರು. 'ರಿಂಗ ರಿಂಗ' ಟಾಸ್ಕ್ ಅನ್ನು ಶ್ರದ್ಧೆಯಿಂದ ನಿರ್ವಹಿಸಿ ಎಲ್ಲರ ಮೆಚ್ಚುಗೆ ಗಳಿಸಿದರು. ಕಣ್ಣು ಮುಚ್ಚಿ ರಿಂಗ್ ಎಸೆದು ಪ್ರಾಮಾಣಿಕತೆ ತೋರಿದ್ದರಿಂದ, ಈ ವಾರ ಅವರಿಗೆ ಕಿಚ್ಚನ ಚಪ್ಪಾಳೆ ಸಿಗಬೇಕು ಅಂತ ಕಮೆಂಟ್ ಮಾಡುತ್ತಿದ್ದಾರೆ ವೀಕ್ಷಕರು.
ಇದನ್ನೂ ಓದಿ: Bigg Boss Kannada 12: ಗಿಲ್ಲಿ-ಕಾವ್ಯಾ ಜೋಡಿಗೆ ಟಾಸ್ಕ್‌ನಿಂದ ಗೇಟ್‌ಪಾಸ್? ಅಶ್ವಿನಿ, ರಘು ನಿರ್ಧಾರ ಎನು?
ಕಳೆದ ವಾರ ವೀಕೆಂಡ್‌ನಲ್ಲಿ ಕಿಚ್ಚನ ಮುಂದೆಯೇ ಧ್ರುವಂತ್ ಅವರಿಗೆ ಸಾಕಷ್ಟು ಬಿರುದುಗಳು ಸಿಕ್ಕವು. ಅವರನ್ನು ಕೆಲವರು ಊಸರವಳ್ಳಿ ಎಂದರು, ಕೆಲವರು ಕಪಟಿ ಎಂದರು. ಹೀಗೆ ನಾನಾ ರೀತಿಯಲ್ಲಿ ಕರೆಯಲಾಯಿತು. ಹೀಗಾಗಿ, ಬಿಗ್ ಬಾಸ್ನಿಂದ ಹೊರ ಹೋಗುತ್ತೇನೆ ಎಂದು ಅವರು ಹೇಳಿದರು. ಆದರೆ, ಇದಕ್ಕೆ ಸುದೀಪ್ ಒಪ್ಪಿಲ್ಲ. ಅದಾದ ಬಳಿಕವೂ ಬಿಗ್ ಬಾಸ್ ಬಳಿ ತನ್ನನ್ನು ಹೊರಗೆ ಕಳುಹಿಸಿ ಅಂತ ಮನವಿ ಕೂಡ ಮಾಡಿದ್ದರು.
ವೈರಲ್ ಪೋಸ್ಟ್
Appreciation post for #Dhruvanth For his dedication and fair play 👏
— Pranooth Gowda (@pranooth_mp) December 3, 2025
Underrated contestant of #BBK12 pic.twitter.com/HVf3eMqA5G
ಅದೇ ಕಾರಣವನ್ನು ಇಟ್ಟುಕೊಂಡು ಮನೆಯ ಸದಸ್ಯರು ಕೂಡ ಧ್ರುವಂತ್ ಅವರನ್ನು ನಾಮಿನೇಟ್ ಮಾಡಿದ್ದರು. ಜೋಡಿ ಟಾಸ್ಕ್‌ನಲ್ಲಿ ಯಾರೊಬ್ಬರೂ ಧ್ರುವಂತ್ ಅವರನ್ನು ಆಯ್ಕೆ ಮಾಡಿಯೇ ಇಲ್ಲ. ಹೀಗಾಗಿ ಬಿಗ್ ಬಾಸ್ ಅವರಿಗೆ ಉಸ್ತುವಾರಿ ವಹಿಸಿದ್ದಾರೆ. ಆದರೀಗ ಧ್ರುವಂತ್ ಸಿಕ್ಕ ಕೆಲಸಕ್ಕೆ ನ್ಯಾಯ ಒದಗಿಸಿದ್ದಾರೆ. ರಿಂಗ್ನ ಎಸೆಯುವ ಕೆಲಸ ಧ್ರುವಂತ್‌ಗೆ ನೀಡಲಾಗಿತ್ತು. ಫೇವರಿಸಂ ಆಗುತ್ತೆ ಅನ್ನೋ ಕಾರಣಕ್ಕೆ ಕಣ್ಣು ಮುಚ್ಚಿಕೊಂಡು ರಿಂಗ್ನ ಎಸೆದಿದ್ದಾರೆ.
ಅವಮಾನ ಸಹಿಸಿಕೊಂಡಿದ್ದ ಧ್ರುವಂತ್!
ಅವಮಾನ ಸಹಿಸಿಕೊಂಡು, ಇನ್ನೊಬ್ಬರಿಂದ ನೆಗೆಟಿವ ಮಾತುಗಳನ್ನು ಹೇಳಿಸಿಕೊಂಡು ಬಿಗ್ ಬಾಸ್ ಮನೆಯಲ್ಲಿ ಇರುವುದಕ್ಕಿಂತ ಹೊರಗೆ ಹೋಗುವುದೇ ಉತ್ತಮ ಎಂಬುದು ಅವರ ಅಭಿಪ್ರಾಯವಾಗಿತ್ತು. ಆದರೆ ಹಾಗೆಲ್ಲಾ ಕಳುಹಿಸಲು ಸಾಧ್ಯವಿಲ್ಲ ಎಂದು ಸ್ವತಃ ಸುದೀಪ್ ಹೇಳಿದ್ದರು. ಆದೃೂ ಧ್ರುವಂತ್ ಮನೆಯಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದಾರೆ.
ಟಾಸ್ಕ್ ವಿಚಾರಕ್ಕೆ ಬರೋದಾದರೆ, ಮೇಲಿನಿಂದ ಎಸೆಯುವ ರಿಂಗ್‌ಗಳನ್ನು ಭುಜದಲ್ಲಿ ಹಾಗೂ ಕುತ್ತಿಗೆಯಲ್ಲಿ ರಿಂಗ್‌ಗಳನ್ನು ಸಂಗ್ರಹಿಸಬೇಕು. ಅತಿ ಹೆಚ್ಚು ರಿಂಗ್‌ಗಳನ್ನು ತಮ್ಮದಾಗಿಸಿಕೊಳ್ಳುವ ಜೋಡಿ ಟಾಸ್ಕ್ ಗೆಲ್ಲುತ್ತದೆ.
ಇದನ್ನೂ ಓದಿ: Bigg Boss Kannada 12: ಬಿಗ್ ಬಾಸ್ ಮನೆಯಲ್ಲಿ ಧ್ರುವಂತ್‌ಗೆ ಕಾಡುವ ಕಟ್ಟ ಕಡೆಯ ಪ್ರಶ್ನೆ ಇದೊಂದೆ!
ಇದರಲ್ಲಿ ಅಶ್ವಿನಿ ಹಾಗೂ ರಘು ಜೋಡಿ ಗೆದ್ದಿದೆ. ಆದರೆ ಬಿಗ್ ಬಾಸ್ ಒಂದು ಟ್ವಿಸ್ಟ್ ಕೊಟ್ಟಿದರು. ಉಳಿದ ಜೋಡಿಯಲ್ಲಿ ಒಂದು ಜೋಡಿಯನ್ನ ಹೊರಗೆ ಇಡಬೇಕು ಎಂದು ಆದೇಶಿಸಿದ್ದರು ಬಿಗ್ ಬಾಸ್. ಅದರಂತೆ ಯಾರು ಟಾಸ್ಕ್‌ನಿಂದ ಹೊರಗೆ ಹೋಗ್ತಾರೆ ಅನ್ನೋದು ಕುತೂಹಲ.