ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bigg Boss Kannada 12: ಬಿಗ್‌ ಬಾಸ್‌ ಮನೆಗೆ ಬಂದು ಉರುಳು ಸೇವೆ ಮಾಡಿದ ಮಲ್ಲಮ್ಮ! ಕಾರಣ ಇದು

Mallamma: ಬಿಗ್‌ ಬಾಸ್‌ ಫಿನಾಲೆ ಸಮೀಪಿಸುತ್ತಿದೆ. ಮಾತಿನ ಮಲ್ಲಮ್ಮ ಅವರು ಬಿಗ್‌ ಬಾಸ್‌ ಮನೆಗೆ ಬಂದಿದ್ದರು. ಅಷ್ಟೇ ಅಲ್ಲ ಸೂರಜ್‌ ಕೂಡ ಬಿಗ್‌ ಬಾಸ್‌ ಮನೆಗೆ ಬಂದಿದ್ದರು. ಸೂರಜ್‌ರನ್ನು ನೋಡಿ ಮನೆ ಮಂದಿ ಶಾಕ್‌ ಆದರು. ಇನ್ನು ಮಲ್ಲಮ್ಮ ಬಿಗ್ ಬಾಸ್ ಮನೆಯಲ್ಲಿ ಉರುಳು ಸೇವೆ ಮಾಡಿದರು. ಹರಕೆ ತೀರಿಸುವ ಸಲುವಾಗಿ ಅವರು ಹೀಗೆ ಮಾಡಿದ್ದಾರೆ. ಮಲ್ಲಮ್ಮನಿಗೆ ಬಿಗ್‌ ಬಾಸ್‌ ಕೊಟ್ಟ ಉಡುಗೊರೆ ಏನು?

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ ಫಿನಾಲೆ (Bigg Boss Kannada Finale) ಸಮೀಪಿಸುತ್ತಿದೆ. ಮಾತಿನ ಮಲ್ಲಮ್ಮ (Mallamma) ಅವರು ಬಿಗ್‌ ಬಾಸ್‌ ಮನೆಗೆ ಬಂದಿದ್ದರು. ಅಷ್ಟೇ ಅಲ್ಲ ಸೂರಜ್‌ ಕೂಡ ಬಿಗ್‌ ಬಾಸ್‌ ಮನೆಗೆ ಬಂದಿದ್ದರು. ಸೂರಜ್‌ರನ್ನು (Sooraj Singh) ನೋಡಿ ಮನೆ ಮಂದಿ ಶಾಕ್‌ ಆದರು. ಇನ್ನು ಮಲ್ಲಮ್ಮ ಬಿಗ್ ಬಾಸ್ ಮನೆಯಲ್ಲಿ ಉರುಳು ಸೇವೆ ಮಾಡಿದರು. ಹರಕೆ ತೀರಿಸುವ ಸಲುವಾಗಿ ಅವರು ಹೀಗೆ ಮಾಡಿದ್ದಾರೆ. ಮಲ್ಲಮ್ಮನಿಗೆ (Mallamma) ಬಿಗ್‌ ಬಾಸ್‌ ಕೊಟ್ಟ ಉಡುಗೊರೆ ಏನು?

ಏನಿದು ಹರಕೆ?

ಮಲ್ಲಮ್ಮ ಅವರು ಒಂದಷ್ಟು ದಿನ ಆಟ ಆಡಿ ಎಲಿಮಿನೇಟ್‌ ಆಗಿ ಆಚೆ ಹೋಗಿದ್ದರು. ಗಟ್ಟಿಗಿತ್ತಿ ಮಲ್ಲಮ್ಮ ಟಾಸ್ಕ್‌ನಲ್ಲಿಯೂ ಸೈ ಎನಿಸಿಕೊಂಡವರು. ಮಲ್ಲಮ್ಮ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಒಂದು ಹರಕೆ ಮಾಡಿಕೊಂಡಿದ್ದರು.

ಇದನ್ನೂ ಓದಿ: Bigg Boss Kannada 12: ಕಿಚ್ಚನ ಚಪ್ಪಾಳೆ ಬಗ್ಗೆ ರಜತ್ ಕಿಶನ್ ಹೇಳಿದ್ದೇನು?

ಸೊಸೆಗೆ ನಾರ್ಮಲ್ ಹೆರಿಗೆ ಆಗಬೇಕು ಎಂದು ಬೇಡಿಕೊಂಡಿದ್ದರು. ಪ್ರಾರ್ಥನೆಯಂತೆಯೇ ಸೊಸೆಗೆ ನಾರ್ಮಲ್ ಡೆಲಿವರಿ ಆಗಿದೆ. ಅದಕ್ಕಾಗಿ ಅವರು ಬಿಗ್ ಬಾಸ್ ಮನೆಗೆ ಮರಳಿಬಂದು ಹರಕೆ ತೀರಿಸಿದ್ದಾರೆ. ನಾವು ಬಡವರು. ಕೆಲಸ ಮಾಡಬೇಕಲ್ಲವಾ? ಹಾಗಾಗಿ ನಾರ್ಮಲ್ ಡೆಲಿವರಿ ಆಗಲಿ ಅಂತ ಬೇಡಿಕೊಂಡಿದ್ದೆ ಎಂದು ಈ ಮೂಲಕ ಹೇಳಿದರು.

ಬಿಗ್ ಬಾಸ್ ಮನೆಯಲ್ಲೇ ಮೊಮ್ಮಗನಿಗೆ ನಾಮಕರಣ

ಮಲ್ಲಮ್ಮ ಎಂಟ್ರಿ ಕೊಡುತ್ತಲೇ ಗಿಲ್ಲಿ ಅವರನ್ನು ಅವರಾಗಿ ಮಾತನಾಡಿಸಿದರು. ಧ್ರುವಂತ್‌ ಅವರು ಎಷ್ಟೇ ಮಾತಾಡಿದರೂ ಅಷ್ಟಾಗಿ ರೆಸ್ಪಾನ್ಸ್‌ ಮಾಡಿಲ್ಲ. ಹೀಗಾಗಿ ಧ್ರುವಂತ್‌ ಹಾಗೂ ಅಶ್ವಿನಿ ತಮ್ಮಲ್ಲಿಯೇ ಮಾತನಾಡಿಕೊಂಡರು. ಎಲ್ಲೋ ಮಿಸ್‌ ಹೊಡಿತಾ ಇದೆ ಎಂದು ಧ್ರುವಂತ್‌ ಹೇಳುತ್ತಿದ್ದರು. ಬಿಗ್ ಬಾಸ್ ಮನೆಯಲ್ಲೇ ಮೊಮ್ಮಗನಿಗೆ ಗಣೇಶ ಎಂದು ನಾಮಕರಣ ಮಾಡಿದರು ಬಿಗ್‌ ಬಾಸ್.



ಮಲ್ಲಮ್ಮ ಅವರು ಹೋದ ಬಳಿಕ ಸೂರಜ್‌ ಎಂಟ್ರಿ ಕೊಟ್ಟರು. ಒಂದು ಕ್ಷಣ ಸೂರಜ್‌ ಲುಕ್‌ ಕಂಡು ಶಾಕ್‌ ಆಗಿದ್ದಾರೆ ಮನೆಮಂದಿ. ಅಷ್ಟೇ ಅಲ್ಲ ಸೂರಜ್‌ ಅವರ ಹೊಸ ಧಾರಾವಾಹಿ ಪ್ರೋಮೋ ಕಂಡು ಶುಭ ಹಾರೈಸಿದರು.

ಕಳೆದ ವಾರದ ಎಲಿಮಿನೇಷನ್‌ನಲ್ಲಿ ರಾಶಿಕಾ ಶೆಟ್ಟಿ ಅವರನ್ನು ಎಲಿಮಿನೇಟ್‌ ಮಾಡಲಾಗಿದೆ. ಸದ್ಯ ಧನುಷ್‌, ಗಿಲ್ಲಿ ನಟ, ಅಶ್ವಿನಿ ಗೌಡ, ರಘು, ರಕ್ಷಿತಾ ಶೆಟ್ಟಿ, ಕಾವ್ಯ ಮತ್ತು ಧ್ರುವಂತ್‌ ಅವರು ಮನೆಯೊಳಗೆ ಉಳಿದುಕೊಂಡಿದ್ದಾರೆ.

ಇದನ್ನೂ ಓದಿ: Bigg Boss Kannada 12: ಗಿಲ್ಲಿ ಕೈರುಚಿ ಸವಿದು ಧ್ರುವಂತ್‌ ಬ್ರೈನ್ ವರ್ಕ್‌ ಆಗ್ತಿಲ್ವಂತೆ; ಗಿಲ್ಲಿ ಮೂಗು ಆಲೂಗಡ್ಡೆ ಥರಾನೇ ಇದೆಯಂತೆ!

ಇವರಲ್ಲೀಗ ಧನುಷ್‌ ಅವರನ್ನು ಹೊರತುಪಡಿಸಿ, ಮಿಕ್ಕ ಎಲ್ಲಾ ಆರು ಸ್ಪರ್ಧಿಗಳು ನಾಮಿನೇಟ್‌ ಆಗಿದ್ದಾರೆ. ಅಂದಹಾಗೆ, ಈ ವಾರ ಮಿಡ್‌ ವೀಕ್‌ ಎಲಿಮಿನೇಷನ್‌ ಇರಲಿದೆ. ಬುಧವಾರದೊತ್ತಿಗೆ ಒಬ್ಬ ಸ್ಪರ್ಧಿ ಸದ್ದಿಲ್ಲದೇ ಮನೆಯಿಂದ ಎಲಿಮಿನೇಟ್‌ ಆಗಲಿದ್ದಾರೆ. ಆ ಎಲಿಮಿನೇಷನ್‌ಗೆಂದು ಈ ಆರು ಮಂದಿಯನ್ನು ನೇರವಾಗಿ ನಾಮಿನೇಟ್‌ ಮಾಡಲಾಗಿದೆ. ಇವರಲ್ಲೀಗ ಮಿಡ್‌ ವೀಕ್‌ ಎಲಿಮೇಷನ್‌ ಆಗೋದ್ಯಾರು ಎಂಬ ಬಗ್ಗೆ ಚರ್ಚೆಗಳು ಶುರುವಾಗಿವೆ. ‌

Yashaswi Devadiga

View all posts by this author