Bigg Boss Kannada 12: ಗಿಲ್ಲಿ ಕೈರುಚಿ ಸವಿದು ಧ್ರುವಂತ್ ಬ್ರೈನ್ ವರ್ಕ್ ಆಗ್ತಿಲ್ವಂತೆ; ಗಿಲ್ಲಿ ಮೂಗು ಆಲೂಗಡ್ಡೆ ಥರಾನೇ ಇದೆಯಂತೆ!
Gilli Nata: ಬಿಗ್ ಬಾಸ್ ಮನೆಯಲ್ಲೂ ಹೊರಗೂ ಗಿಲ್ಲಿ ಹವಾ ಜೋರಾಗಿದೆ. ಸುದೀಪ್ ಅವರು ವೀಕೆಂಡ್ ಪಂಚಾಯ್ತಿಯಲ್ಲಿ ಗಿಲ್ಲಿ ಅವರೇ ಉಳಿದ ಒಂದು ವಾರ ಅಡುಗೆ ಮಾಡಿ ಬಡಿಸಬೇಕು ಅಂದಿದ್ದರು. ಅದರಂತೆ ಅಡುಗೆ ಮಾಡಿದ್ದಾರೆ. ಗಿಲ್ಲಿ ಮಾಡಿದ ಅಡುಗೆ ತಿಂದು ಹೈರಾಣ್ ಆಗಿದ್ದಾರೆ ಮನೆಮಂದಿ. ಧ್ರುವಂತ್ ಅಂತೂ ನನ್ನ ಬ್ರೇನ್ ವರ್ಕ್ ಆಗ್ತಿಲ್ಲ ಎಂದಿದ್ದಾರೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ (Bigg Boss Kannada 12) ಮನೆಯಲ್ಲೂ ಹೊರಗೂ ಗಿಲ್ಲಿ (Gilli Nata) ಹವಾ ಜೋರಾಗಿದೆ. ಸುದೀಪ್ (Sudeep) ಅವರು ವೀಕೆಂಡ್ ಪಂಚಾಯ್ತಿಯಲ್ಲಿ ಗಿಲ್ಲಿ ಅವರೇ ಉಳಿದ ಒಂದು ವಾರ ಅಡುಗೆ ಮಾಡಿ ಬಡಿಸಬೇಕು ಅಂದಿದ್ದರು. ಅದರಂತೆ ಅಡುಗೆ ಮಾಡಿದ್ದಾರೆ. ಗಿಲ್ಲಿ ಮಾಡಿದ ಅಡುಗೆ ತಿಂದು ಹೈರಾಣ್ ಆಗಿದ್ದಾರೆ ಮನೆಮಂದಿ. ಧ್ರುವಂತ್ (Dhruvanth) ಅಂತೂ ನನ್ನ ಬ್ರೇನ್ ವರ್ಕ್ ಆಗ್ತಿಲ್ಲ ಎಂದಿದ್ದಾರೆ.
ಬ್ರೇನ್ ವರ್ಕ್ ಆಗ್ತಿಲ್ಲ
ಗಿಲ್ಲಿ ಮಾಡಿದ ಅಡುಗೆಯನ್ನ ಮೊದಲಿಗೆ ಧ್ರುವಂತ್ ಸವಿದಿದ್ದಾರೆ. ಇದು ಏನು ಅಂತನೇ ಅರ್ಥ ಆಗ್ತಿಲ್ಲ. ಉಪ್ಪಿಟ್ಟಾ, ಪಲಾವ್ ಅರ್ಥ ಆಗ್ತಿಲ್ಲ. ಇದನ್ನ ತಿಂದು ಬ್ರೇನ್ ವರ್ಕ್ ಆಗ್ತಿಲ್ಲ ಎಂದಿದ್ದಾರೆ. ಇನ್ನೊಂದು ಕಡೆ ರಘು ಕೂಡ ಸಿಪ್ಪೆ ತೆಗೆದು ಮಾಡೇ ಇಲ್ಲ ಎಂದಿದ್ದಾರೆ.
ಇದನ್ನೂ ಓದಿ: Bigg Boss Kannada 12: ಗಿಲ್ಲಿಗೆ ಕಠಿಣ ಶಿಕ್ಷೆ ಕೊಟ್ಟ ಕಾವ್ಯ! ಗಿಲ್ಲಿ ನಟ ಕೊಟ್ಟ ಗಿಫ್ಟ್ ಏನು?
ಮತ್ತೊಂದು ಕಡೆ ಧ್ರುವಂತ್, ಆಲೂಗಡ್ಡೆಯೇ ಬೆಂದೇ ಇಲ್ಲ, ಗೋಡೆಗೆ ಹೊಡೆದರೆ ವಾಪಸ್ ಬರುತ್ತದೆ ಎಂದಿದ್ದಾರೆ. ಇನ್ನು ಆಲೂಗಡ್ಡೆ ಗಿಲ್ಲಿ ಮೂಗು ಥರ ಇದೆ ಎಂದಿದ್ದಾರೆ ಧ್ರುವಂತ್. ಅದಕ್ಕೆ ನಾನು ಏನು ಮಾಡಲಿ ಅಂತ ಗಿಲ್ಲಿ ಕೂಡ ಸಖತ್ ನಕ್ಕಿದ್ದಾರೆ. ಇದೆಲ್ಲ ನೋಡಿ ಅಶ್ವಿನಿ ಗೌಡ ನಕ್ಕು ನಕ್ಕು ಸುಸ್ತಾದರು.
ಕಲರ್ಸ್ ಕನ್ನಡ ಪ್ರೋಮೋ
ಪೈಪೋಟಿ ಜೋರು
ಬಿಗ್ ಬಾಸ್ ಸೀಸನ್ 12ರ ಫಿನಾಲೆ ಸಮೀಪಿಸುತ್ತಿದ್ದು, ಮನೆಯೊಳಗಿನ ಪೈಪೋಟಿ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಈಗಾಗಲೇ ರಾಶಿಕಾ ಎಲಿಮಿನೇಟ್ ಆಗಿದ್ದು, ಉಳಿದ ಸ್ಪರ್ಧಿಗಳ ನಡುವೆ ಪೈಪೋಟಿ ಜೋರಾಗಿದೆ. ಬಿಗ್ ಬಾಸ್ ಒಂದು ಚಟುವಟಿಕೆ ನೀಡಿದ್ದಾರೆ. ಇದರಲ್ಲಿ ಅಭಿಮಾನಿಗಳು ನಿಮಗೆ ಯಾವ ಬಿರುದು ನೀಡಬೇಕು ಎಂದು ಬಯಸುವಿರಿ ಎಂದು ಬಿಗ್ ಬಾಸ್ ಸ್ಪರ್ಧಿಗಳಿಗೆ ಕೇಳಿದ್ದಾರೆ. ಗಿಲ್ಲಿ ಅವರು ಸಕಲ ಕಲಾ ವಲ್ಲಭ ಎಲ್ಲ ಆಟ ಬಲ್ಲವ ಎಂದು ಬರೆದಿದ್ದಾರೆ.
ಬಿಗ್ ಬಾಸ್ ಒಂದು ಟಾಸ್ಕ್ ಕೊಟ್ಟಿದ್ದಾರೆ. ಅಭಿಮಾನಿಗಳು ಯಾವ ಬಿರುದುಯಿಂದ ಗುರುತಿಸಬೇಕು ಅಂತ ಹೇಳಿದ್ದಾರೆ. ಆಗ ಗಿಲ್ಲಿ ಅವರು ಸಕಲ ಕಲಾ ವಲ್ಲಭ ಎಲ್ಲ ಆಟ ಬಲ್ಲವ ಎಂದು ಬರೆದಿದ್ದಾರೆ. ಇನ್ನು ಧ್ರುವಂತ್ ಅವರು ಡ್ಯಾಶಿಂಗ್ ಧ್ರುವಂತ್ ಅಂತ ಬರೆದಿದ್ದಾರೆ.
ಇದನ್ನೂ ಓದಿ: Bigg Boss Kannada 12: ಸಕಲಕಲಾ ವಲ್ಲಭ, ಎಲ್ಲಾ ಆಟ ಬಲ್ಲವ ಎಂದ ಗಿಲ್ಲಿ! ಸ್ಪರ್ಧಿಗಳಿಗೆ ನೀವು ಕೊಡಲು ಬಯಸೋ ಬಿರುದು ಏನು?
ಆಗ ಅಶ್ವಿನಿ ಅವರು ಸೀಕ್ರೆಟ್ ರೂಂ ಹೀರೋ ಅಂತ ಸಲಹೆ ಕೊಟ್ಟರು. ಆಗ ರಕ್ಷಿತಾ ಇದ್ದವರು, ಧನುಷ್ ಅವರ ಬಳಿ ಸೀಕ್ರೆಟ್ ರೂಂ ಜೀರೋ ಎಂದಿದ್ದಾರೆ. ಆಗ ಧನುಷ್ ಅವರು, ಟಾರ್ಗೆಟ್ ಮಾಡ್ತಾರೆ ಅನ್ನಿಸಿದಾಗ ದೊಡ್ಡ ಘರ್ಜನೆಯೊಂದಿಗೆ ಬಂದಿದ್ದೀನಿ ಎಂದರು.