ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss 12: ಗಿಲ್ಲಿ ನಟನ ಬಗ್ಗೆ ಒಬ್ಬರಿಗೆ ಅಸಮಾಧಾನ, ಮತ್ತೊಬ್ಬರಿಗೆ ಅಭಿಮಾನ; ವೈರಲ್‌ ಆಗ್ತಿದೆ ಎಲಿಮಿನೇಟ್‌ ಆದ ಮಾಳು - ಸೂರಜ್‌ ಹೇಳಿಕೆ

ಬಿಗ್ ಬಾಸ್ ಕನ್ನಡ ಸೀಸನ್ 12ರಿಂದ ಹೊರಬಂದಿರುವ ಮಾಳು ನಿಪನಾಳ್ ಮತ್ತು ಸೂರಜ್ ಸಿಂಗ್ ಅವರು ಗಿಲ್ಲಿ ನಟನ ಬಗ್ಗೆ ಭಿನ್ನವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗಿಲ್ಲಿ ಇನ್ನೊಬ್ಬರನ್ನು ಕೀಳಾಗಿ ಕಾಮಿಡಿ ಮಾಡುತ್ತಾರೆ ಎಂದು ಮಾಳು ಅಸಮಾಧಾನ ಹೊರಹಾಕಿದ್ದರೆ, ಸೂರಜ್ ಸಿಂಗ್ ಮಾತ್ರ ಗಿಲ್ಲಿ ಒಬ್ಬ ಅದ್ಭುತ ಆಟಗಾರ ಮತ್ತು ಆತ ಈ ಬಾರಿ ಬಿಗ್ ಬಾಸ್ ಗೆಲ್ಲುವ ಅರ್ಹತೆ ಹೊಂದಿದ್ದಾನೆ ಎಂದು ಬೆಂಬಲ ಸೂಚಿಸಿದ್ದಾರೆ.

ಬಿಗ್‌ ಬಾಸ್‌ ಮನೆಯಿಂದ ಸೂರಜ್‌ ಸಿಂಗ್ ಮತ್ತು ಮಾಳು‌ ನಿಪನಾಳ್‌ ಅವರು ಎಲಿಮಿನೇಟ್‌ ಆಗಿದ್ದಾರೆ. ಸದ್ಯ ಇವರಿಬ್ಬರು ಮಾಧ್ಯಮಗಳಿಗೆ ಸಂದರ್ಶನಗಳನ್ನು ನೀಡುತ್ತಿದ್ದು, ಇಬ್ಬರ ಮಾತಿನಲ್ಲೂ ಹೈಲೈಟ್‌ ಆಗುತ್ತಿರುವ ಒಬ್ಬ ವ್ಯಕ್ತಿ ಎಂದರೆ, ಅದು ಗಿಲ್ಲಿ ನಟ. ಹೌದು, ಸದ್ಯ ಮನೆಯ ಕ್ಯಾಪ್ಟನ್‌ ಆಗಿರುವ ಗಿಲ್ಲಿ ಬಗ್ಗೆ ಸೂರಜ್‌ ಮತ್ತು ಮಾಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಆದರೆ ಆ ಅಭಿಪ್ರಾಯಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ.

ಮಾಳು ಏನಂದ್ರು ನೋಡಿ!

"ರೇಗಿಸುವುದಕ್ಕೂ ಒಂದು ಇತಿಮಿತಿ ಇರುತ್ತದೆ. ಒಬ್ಬ ವ್ಯಕ್ತಿ ಒಂದು ಸಲ ಎರಡು ಸಲ ಹೇಳಿಸಿಕೊಳ್ಳಬೇಕು. 10 ಸಲ ಹೇಳಿಸಿಕೊಂಡರೆ, ಅವನು ಮನುಷ್ಯನೇ ಅಲ್ಲ. ಒಬ್ಬರ ಮನಸ್ಸಿಗೆ ಹರ್ಟ್‌ ಆಗೋ ಥರ ಕಾಮಿಡಿ ಮಾಡಬಾರದು. ಕೀಳಾಗಿ ಮಾತನಾಡಬಾರದು. ರಘು ಸರ್‌ನ ಕೆಳಗೆ ಹಾಕಿ ಮಾತನಾಡೋದು ನನಗೆ ಬಹಳ ನೋವಾಯ್ತು. ಗಿಲ್ಲಿ ಕಾಮಿಡಿ ಮಾಡಲಿ, ಆದರೆ ಇನ್ನೊಬ್ಬರನ್ನು ಕೀಳಾಗಿ ತೋರಿಸಿ, ಕಾಮಿಡಿ ಮಾಡೋದು, ಅದು ಕಾಮಿಡಿ ಅಲ್ಲ. ಪ್ರತಿಯೊಬ್ಬರಿಗೂ ಅವರದ್ದೇ ಆದ ಬೆಲೆ ಇರುತ್ತದೆ. ಸ್ವಂತಿಕೆ ಇರಲಿ, ಇನ್ನೊಬ್ಬರ ಕಾಲೆಳೆದು ಕಾಮಿಡಿ ಮಾಡೋದು ಸರಿ ಅಲ್ಲ" ಎಂದು ಮಾಳು ಹೇಳಿದ್ದಾರೆ.

The Devil Movie: `ಡೆವಿಲ್‌' ಸಿನಿಮಾದಲ್ಲಿ ಗಿಲ್ಲಿ ನಟನ ಪರ್ಫಾರ್ಮೆನ್ಸ್ ಹೇಗಿದೆ? ನಟ ಚಂದು ಗೌಡ ಮನದಾಳದ ಮಾತು!

"ನನ್ನ ಹತ್ರ ಇಂತಹ ಕಾಮಿಡಿ ನಡೆಯೋದಿಲ್ಲ. ನನಗೂ ಗಿಲ್ಲಿಗೂ ಅಷ್ಟಕ್ಕಷ್ಟೇ. ನಾನು ಕೂಡ ಗಿಲ್ಲಿ ಮಾಡುವ ಕಾಮಿಡಿಗೆ ನಕ್ಕಿದ್ದೇನೆ. ಆದರೆ ಎಲ್ಲದಕ್ಕೂ ನಕ್ಕಿಲ್ಲ. ಇನ್ನೊಬ್ಬರ ಮನಸ್ಸಿಗೆ ನೋವಾಗುವಂತಹ ಕಾಮಿಡಿ ಮಾಡಿದರೆ ನಾನು ಅದಕ್ಕೆ ನಕ್ಕಿಲ್ಲ. ಅದು ನನಗೆ ಬೇಜಾರನ್ನೇ ಉಂಟು ಮಾಡುತ್ತಿತ್ತು" ಎಂದು ಮಾಳು ನಿಪನಾಳ್‌ ಹೇಳಿದ್ದಾರೆ.

ಮಾಳು ನಿಪನಾಳ್‌ ಸಂದರ್ಶನ



ಗಿಲ್ಲಿಯನ್ನು ಹೊಗಳಿದ ಸೂರಜ್‌ ಸಿಂಗ್‌

"ಗಿಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೂ ಕಂಟೆಂಟ್‌ ಕೊಡುತ್ತಲೇ ಇರುತ್ತಾನೆ. ಆತ ಇರುವುದೇ ಹಾಗೇ. ಅವನೊಬ್ಬ ಪ್ಲೇಯರ್..‌ ಅದ್ಭುತವಾಗಿ ಆಟ ಆಡ್ತಾ ಇದ್ದಾನೆ. ಗಿಲ್ಲಿ ತಂದೆ - ತಾಯಿ ಬಂದಾಗ, ಅವರು ಗಿಲ್ಲಿ ಬಗ್ಗೆ ಹೇಳಿದರು. ಹುಟ್ಟಿನಿಂದ ಗಿಲ್ಲಿ ಇರುವುದೇ ಹೀಗೆ ಎಂಬುದು ನನಗೆ ಗೊತ್ತಾಯಿತು. ಹೊರಗೆ ಹೇಗಿದ್ನೋ, ಒಳಗೆಯೂ ಹಾಗೇ ಇದ್ದಾನೆ. ಅವನು ಬೇಕು ಅಂತ ಏನೂ ಮಾಡುವುದಿಲ್ಲ. ಆ ರೀತಿ ಮಾಡಿದಾಗ ನಮಗೆ ಬೇಗ ಗೊತ್ತಾಗುತ್ತದೆ. ಅವರ ಟೈಮಿಂಗ್‌ ಸೂಪರ್‌ ಆಗಿದೆ" ಎಂದು ಸೂರಜ್‌ ಹೇಳಿದ್ದಾರೆ.

ಸೂರಜ್‌ ಸಿಂಗ್‌ ಸಂದರ್ಶನ



"ನನಗೆ ಬಿಗ್‌ ಬಾಸ್‌ನಲ್ಲಿ ಗಿಲ್ಲಿ ಗೆಲ್ಲುತ್ತಾನೆ ಎಂದು ಅನ್ನಿಸಿದೆ. ಆದರೆ ನನಗೆ ವೈಯಕ್ತಿಕವಾಗಿ ಅಶ್ವಿನಿ ಅಥವಾ ರಾಶಿಕಾ ಅವರು ಗೆಲ್ಲಬೇಕು ಎಂಬ ಆಸೆ ಇದೆ. ಆದರೆ ಯಾರು ಗೆಲ್ಲುತ್ತಾರೆ ಎಂದು ಕೇಳಿದರೆ, ಅದಕ್ಕುತ್ತರ ಗಿಲ್ಲಿ. ಯಾಕೆಂದರೆ, ಮೊದನಿಂದಲೂ ಅವನ ಆಟ ನೋಡಿದ್ದೇನೆ. ಹೊರಗಡೆಯೂ ಗಿಲ್ಲಿಗೆ ದೊಡ್ಡ ಕ್ರೇಜ್‌ ಇದೆ" ಎಂದು ಹೇಳಿದ್ದಾರೆ ಸೂರಜ್.‌