ಕ್ಯಾಪ್ಟನ್ (Captain) ಆದ ಬಳಿಕ ಮಾಳು (Malu Nipanal ಬಿಗ್ ಬಾಸ್ ಮನೆಯ ಸ್ಪರ್ಧಿಗಳ ಮುಂದೆ ಕೆಂಗಣ್ಣಿಗೆ ಗುರಿಯಾದರು. ಅದರ ಜೊತೆಗೆ ಬಿಗ್‌ಬಾಸ್ ಕೊಟ್ಟ ಆಘಾತಕ್ಕೆ ಮಾಳು ಕಣ್ಣೀರಿಟ್ಟಿದ್ದಾರೆ. ಮುಖದ ಮೇಲೆ ಟವೆಲ್ ಹಾಕಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮಕ್ಕಳ ದಿನಾಚರಣೆಯಂದು (Children's Day) ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಅವರ ಮಕ್ಕಳ ವಿಡಿಯೋ ತೋರಿಸಿ ಸರ್ಪ್ರೈಸ್ ನೀಡಲಾಯಿತು. ಆದರೆ ಮಾಳು ಅವರು ಜೈಲಿನಲ್ಲಿ ಇದ್ದ ಕಾರಣ ಆ ಅವಕಾಶವನ್ನು ಕಳೆದುಕೊಂಡರು. ಜೈಲಿನಲ್ಲಿ ಮಕ್ಕಳ ನೆನೆದು ಬಿಕ್ಕಿ ಬಿಕ್ಕಿ ಅತ್ತರು.
ಮಾಳುಗೆ ಕಳಪೆ ಪಟ್ಟ
ಈ ವಾರ ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಿದ್ದ ಮಾಳುಗೆ ನಾಮಿನೇಟ್ ಮಾಡುವ ಅಧಿಕಾರ ಸಿಕ್ಕಿತ್ತು. ಏಳು ಮಂದಿಯನ್ನು ನಾಮಿನೇಟ್ ಮಾಡಿದ್ದ ಮಾಳು ಅವರು ಏಳು ಮಂದಿಯನ್ನು ನಾಮಿನೇಟ್ ಮಾಡಿದ್ದರು. ಬಿಗ್ ಬಾಸ್ ಮನೆಯ ಹಲವರು ಕಳಪೆ ಪಟ್ಟಕ್ಕೆ ಮಾಳು ಹೆಸರನ್ನು ಆಯ್ಕೆ ಮಾಡಿಕೊಂಡಿದ್ದರಿಂದ ಅವರಿಗೆ ಜೈಲು ವಾಸ ನೀಡಲಾಯಿತು. ಕ್ಯಾಪ್ಟನ್ ಆದ ಬೆನ್ನಲ್ಲೇ ಮಾಳು ಅವರು ಜೈಲು ಸೇರುವಂತಾಗಿದ್ದು ಬೇಸರ ಉಂಟುಮಾಡಿತು.
ಮಕ್ಕಳ ವಿಡಿಯೋ
ಮಕ್ಕಳ ದಿನಾಚರಣೆ ಪ್ರಯುಕ್ತ ಸ್ಪರ್ಧಿಗಳ ಮಕ್ಕಳ ವಿಡಿಯೋಗಳನ್ನು ಬಿಗ್ ಬಾಸ್ ಮನೆಯೊಳಗಿನ ಟಿವಿಯಲ್ಲಿ ಹಾಕಲಾಯಿತು. ಆದರೆ ಮಾಳು ಅವರು ಜೈಲಿನಲ್ಲಿ ಇದ್ದ ಕಾರಣದಿಂದ ಅವರಿಗೆ ಈ ವಿಡಿಯೋ ನೋಡಲು ಸಾಧ್ಯವಾಗಲೇ ಇಲ್ಲ.
ಜಾನ್ವಿ, ಕಾಕ್ರೋಚ್ ಸುಧಿ, ಅಶ್ವಿನಿ ಗೌಡ ಅವರ ಮಕ್ಕಳ ವಿಡಿಯೋ ಸಹ ತೋರಿಸಲಾಯ್ತು. ಈ ಎಲ್ಲಾ ವಿಡಿಯೋಗಳು ಪ್ಲೇ ಆಗುತ್ತಿರುವ ಸಂದರ್ಭದಲ್ಲಿ ಕಳಪೆಯಾಗಿರುವ ಮಾಳು ನಿಪನಾಳ, ಜೈಲಿನಲ್ಲಿದ್ದರು
ಮಾಳು ಮಕ್ಕಳ ಮಕ್ಕಳ ವಿಡಿಯೋ ಪ್ಲೇ ಆಗುತ್ತಿದ್ದಂತೆ ರಘು ಜೈಲಿನತ್ತ ಹೋಗುತ್ತಾರೆ. ಲಾಕ್ ತೆಗೆದು ಮಾಳು ಅವರನ್ನು ಕರೆದುಕೊಂಡು ಬರುತ್ತಾರೆ. ಜೈಲಿನಿಂದ ಮನೆಯೊಳಗೆ ಬರುವಷ್ಟರಲ್ಲಿ ಮಾಳು ಮಕ್ಕಳ ವಿಡಿಯೋ ಮುಗಿದಿರುತ್ತದೆ. ಮಕ್ಕಳ ವಿಡಿಯೋ ಪ್ಲೇ ಆಗದಿದ್ದಾಗ ಜೈಲಿನೊಳಗೆ ಹೋಗಿ ಮಾಳು ಕಣ್ಣೀರು ಹಾಕುತ್ತಾರೆ. ಇನ್ನು ವೀಕ್ಷಕರು ಕೂಡ ಮಾಳು ಕಣ್ಣೀರಿಟ್ಟಿದ್ದು ನೋಡಿ ಬೇಸರ ವ್ಯಕ್ತಪಡಿಸಿದ್ದಾರೆ.
ಈ ವಾರ ಅಶ್ವಿನಿ ಉತ್ತಮ
ಬಹುತೇಕ ಮನೆಯ ಎಲ್ಲ ಸದಸ್ಯರು ಮಾಳು ಅವರಿಗೆ ಕಳಪೆ ಕೊಟ್ಟರು. ಕ್ಯಾಪ್ಟನ್ ಆಗಿದ್ದವರಿಗೆ ತಲೆಯಲ್ಲಿ ಬುದ್ಧಿ ಇರಬೇಕು. ಅಡುಗೆ ಮಾಡಬೇಕು ಎಂದರೆ, ಅವರ ಕಡೆಗೆ ಕ್ಯಾಮೆರಾ ಟರ್ನ್ ಆಗಬೇಕು, ಬ್ಯಾಟರಿ ಹಾಕಿಕೊಳ್ಳಬೇಕು ಎಂದರೆ, ಅವರ ಕಡೆ ಕ್ಯಾಮೆರಾ ಟರ್ನ್ ಆಗಬೇಕು ಎಂದು ಕಾರಣ ನೀಡಿದ್ರಿ ನೋಡಿ, ಆಗ ನನಗೆ ತುಂಬಾ ಹರ್ಟ್ ಆಯ್ತು.
ಇದನ್ನೂ ಓದಿ: Bigg Boss Kannada 12: ಕಿಚ್ಚ ಚರ್ಚಿಸಬೇಕಾದ ಈ ವಾರದ ಸಮಾಚಾರಗಳಿವು!
ಅಹಂಕಾರಿ ಆದರೂ ಒಪ್ಪಿಕೊಳ್ಳಬಹುದು, ಆದರೆ ಆತ ದಡ್ಡನಾದರೆ ಅದರಿಂದ ಸಮರ್ಥರ ಆಟಕ್ಕೂ ತೊಂದರೆ ಆಗುತ್ತದೆ’ ಎಂದು ಜಾಹ್ನವಿ ಹೇಳಿದರು. ಈ ವಾರ ಅಶ್ವಿನಿ ಗೌಡ ಅವರು ಉತ್ತಮರಾಗಿ ಹೊರಹೊಮ್ಮಿದ್ದಾರೆ.