Bigg Boss Kannada 12: ಈ ಸ್ಪರ್ಧಿಗೆ ಕಳಪೆ ಕೊಡಬೇಕು ಅಂತ ಅಶ್ವಿನಿ -ಜಾಹ್ನವಿ ಪ್ಲ್ಯಾನ್! ಆದ್ರೆ ಮಾಳು ಆಯ್ಕೆ ಯಾಕಾಗಿ ಆಯ್ತು?
ಈ ಹಿಂದೆ ಕೂಡ ಗಿಲ್ಲಿ ( Bigg Boss Gilli) ಅವರಿಗೆ ಕಳಪೆಯನ್ನು (Kalape) ನೀಡುವಾಗ ಪ್ಲಾನ್ ಮಾಡಿಯೇ ನೀಡಿದ್ದರು. ವೀಕೆಂಡ್‌ನಲ್ಲಿ ಗಿಲ್ಲಿಗೆ ಕಳಪೆ ನೀಡಬೇಕು ಎಂದು ಚರ್ಚಿಸಿ ಕಳಪೆ ಕೊಟ್ಟಿದ್ದು ಎಷ್ಟು ಸರಿ? ಎಂದು ಕಿಚ್ಚ ಸುದೀಪ್ (sudeep) ಅವರು ಕೂಡ ಪ್ರಶ್ನೆ ಮಾಡಿದ್ದರು. ಆ ವೇಳೆ, ಕಾಕ್ರೋಚ್ ಸುಧಿ ಸುದೀಪ್ ಅವರ ಮುಂದೆ ತಾವು ಮಾಡಿದ ಪ್ಲ್ಯಾನಿಂಗ್ ಬಗ್ಗೆ ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಇದೀಗ ಮತ್ತೆ ಅದೇ ತಪ್ಪನ್ನ ಮಾಡಿದ್ದಾರೆ ಅಶ್ವಿನಿ -ಜಾಹ್ನವಿ (Ashwini). ಕೊನೆಯಲ್ಲಿ ಮಾಳು ಅವರಿಗೆ ಕಳಪೆ ಕೊಟ್ಟಿದ್ದೇಕೆ? ಈ ನಿರ್ಧಾರ ಬದಲಾಗಿದ್ದೇಕೆ?
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ (Bigg Boss Kannada 12) ಮನೆಯಲ್ಲಿ ಅಶ್ವಿನಿ ಗೌಡ (Ashwini Gowda) ಹಾಗೂ ಜಾಹ್ನವಿ (Jhanvi)z ಎಷ್ಟೇ ದೂರವಿದ್ದಂತೆ ನಟಿಸಿದ್ರೂ, ಕೊನೆಗೂ ಇವರಿಬ್ಬರು ಒಂದೇ. ಸಾಕಷ್ಟು ಬಾರಿ ಈ ಸ್ನೇಹಿತೆಯರು ಈ ಬಗ್ಗೆ ಪ್ರೂವ್ ಮಾಡಿದ್ದಾರೆ. ಈ ಹಿಂದೆ ಗಿಲ್ಲಿ (Gilli) ಅವರಿಗೆ ಕಳಪೆ (Kalape) ಕೊಡುವ ವಿಚಾರಕ್ಕೆ ಅಶ್ವಿನಿ ಅವರು ಮನೆಯಲ್ಲಿ ಕೆಲವರ ಜೊತೆ ಚರ್ಚೆ ಮಾಡಿದ್ದರು.
ವೀಕೆಂಡ್‌ನಲ್ಲಿ ಗಿಲ್ಲಿಗೆ ಕಳಪೆ ನೀಡಬೇಕು ಎಂದು ಚರ್ಚಿಸಿ ಕಳಪೆ ಕೊಟ್ಟಿದ್ದು ಎಷ್ಟು ಸರಿ? ಎಂದು ಕಿಚ್ಚ ಸುದೀಪ್ ಅವರು ಕೂಡ ಪ್ರಶ್ನೆ ಮಾಡಿದ್ದರು. ಆ ವೇಳೆ, ಕಾಕ್ರೋಚ್ ಸುಧಿ ಸುದೀಪ್ ಅವರ ಮುಂದೆ ತಾವು ಮಾಡಿದ ಪ್ಲ್ಯಾನಿಂಗ್ ಬಗ್ಗೆ ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಆದರೀಗ ಮತ್ತದೇ ರಾಗ ಮನೆಯಲ್ಲಿ ಶುರುವಾಗಿದೆ. ಹೌದು ಮಾಳು, ಬದಲಾಗಿ ರಕ್ಷಿತಾ ಅವರಿಗೆ ಕಳಪೆ ಕೊಡಬೇಕು ಅಂತ ರಕ್ಷಿತಾ ಹಾಗೂ ಜಾಹ್ನವಿ ಈ ಮೊದಲೇ ಚರ್ಚಿಸಿದ್ದಾರೆ. ಕೊನೆಯಲ್ಲಿ ಈ ನಿರ್ಧಾರ ಬದಲಾಗಿದ್ದೇಕೆ?
ಇದನ್ನೂ ಓದಿ: Bigg Boss Kannada 12: ಓವರ್ ಕಾನ್ಫಿಡೆನ್ಸೇ ಗಿಲ್ಲಿಗೆ ಮುಳುವಾಯ್ತಾ? ರಘು ಆಟಕ್ಕೆ ಬಹುಪರಾಕ್ ಅಂತಿದ್ದಾರೆ ವೀಕ್ಷಕರು!
ಗಿಲ್ಲಿಗೆ ಕಳಪೆ!
ಈ ಹಿಂದೆ ಕೂಡ ಗಿಲ್ಲಿ ಅವರಿಗೆ ಕಳಪೆಯನ್ನು ನೀಡುವಾಗ ಮಾಸ್ಟರ್ ಪ್ಲಾನ್ ಮಾಡಿಯೇ ನೀಡಿದ್ದರು. ವೀಕೆಂಡ್‌ನಲ್ಲಿ ಈ ಬಗ್ಗೆ ಚರ್ಚೆಗಳು ಬಂತು. ಈ ವಾರ ಗಿಲ್ಲಿಗೆ ಕಳಪೆ ಪಟ್ಟಕ್ಕೆ ಆಯ್ಕೆ ಮಾಡಿದ್ದು ಸರಿ ಇದೆ ಎನ್ನುವವರು ಕೈ ಎತ್ತಿ ಎಂದು ಸುದೀಪ್ ಕೇಳಿದರು. ಆಗ ಕಳಪೆಗೆ ಆಯ್ಕೆ ಮಾಡಿದವರೆಲ್ಲರೂ ಕೈ ಎತ್ತಿದರು.
ಆದರೆ ಕಾಕ್ರೋಚ್ ಸುಧಿ ಮಾತ್ರ ಕೈ ಎತ್ತಲಿಲ್ಲ. ತಾನು ಬಚಾವ್ ಆಗಬೇಕು ಎಂಬ ಕಾರಣಕ್ಕೇ ಇಷ್ಟವಿಲ್ಲದಿದ್ದರೂ ಗಿಲ್ಲಿಗೆ ಕಳಪೆ ನೀಡಿದ್ದರು. ಒಂದು ವೇಳೆ ತಾನು ಕಳಪೆ ಪಟ್ಟ ಪಡೆದು ಜೈಲಿಗೆ ಹೋದರೆ, ಸ್ಮೋಕಿಂಗ್ ಝೋನ್ ಹೋಗೋಕೆ ಆಗಲ್ಲ ಎಂಬ ಭಯ ಸುಧಿಗೆ ಕಾಡಿತ್ತು. ಇದನ್ನು ಸುದೀಪ್ ಎದುರು ಒಪ್ಪಿಕೊಂಡರು.
ಇದನ್ನು ಕೇಳಿದ ಕಿಚ್ಚ ಎರಡು ವಾರ ಸ್ಮೋಕಿಂಗ್ ಝೋನ್ ಬಂದ್ ಮಾಡಿ ಎಂದು ಬಿಗ್ ಬಾಸ್‌ಗೆ ಸೂಚಿಸಿದರು.
ರಕ್ಷಿತಾಗೆ ಕಳಪೆ ಕೊಡಲು ಪ್ಲ್ಯಾನ್
ಈ ವಾರ ರಕ್ಷಿತಾ ಶೆಟ್ಟಿಗೆ ಕಳಪೆ ಕೊಡಬೇಕು ಎಂದು ಅಶ್ವಿನಿ ಮತ್ತು ಜಾಹ್ನವಿ ಪ್ಲ್ಯಾನ್ ಮಾಡಿದ್ದರು. ರಕ್ಷಿತಾಗೆ ಕೊಡಬೇಕು ಅನ್ನೋ ರೀತಿ ಅಶ್ವಿನಿ ಗೌಡ ಮುಂದೆ ಜಾಹ್ನವಿ ಮಾತನಾಡಿದ್ದಾರೆ. ಆದರೆ ಪ್ಲ್ಯಾನ್ ಏನೋ ಮಾಡಿದ್ದರು ನಿಜ. ಆದರೆ ಕಳಪೆಕೊಟ್ಟಿದ್ದು ಮಾತ್ರ ಮಾಳುಗೆ.
ಕ್ಯಾಪ್ಟನ್ ಮಾಳು ನಿರ್ಧಾರಕ್ಕೆ ಸೇಡು ತೀರಿಸಿಕೊಂಡ್ರಾ?
ಮೊದಲಿಗೆ ರಕ್ಷಿತಾಗೆ ಕಳಪೆ ನೀಡಬೇಕು ಅಂತ ಮಾತುಕತೆ ಆಗಿದ್ದೇನೋ ನಿಜ. ಆದರೆ ಯಾವಾಗ ಮಾಳು ಅವರು ಕಪ್ಪು ನೀರು ಹಾಗೂ ಚಿಣಿಮಿಣಿ ನೀರು ಸುರಿದು ನೇರವಾಗಿ ನಾಮಿನೇಟ್ ಮಾಡಿದ್ರೋ ಆ ಸೇಡುನ್ನು ತೀರಿಸಿಕೊಳ್ಳುವ ಸಲುವಾಗಿ ಕ್ಯಾಪ್ಟನ್ ಆಗಿದ್ದ ಮಾಳುಗೆ ಕಳಪೆ ಕೊಟ್ಟು ಜೈಲಿಗೆ ಕಳುಹಿಸಿದ್ದಾರೆ.
ಇದನ್ನೂ ಓದಿ: Bigg Boss Kannada 12: ರಘು ಕೊಟ್ಟ ಟಾರ್ಚರ್‌ಗೆ ಸುಸ್ತಾದ ಗಿಲ್ಲಿ! 'ಮೋಟು ಪತ್ಲು' ಜೋಡಿ ಕಂಡು ಬಿದ್ದು ಬಿದ್ದು ನಕ್ಕ ಮನೆಮಂದಿ
ಇದೀಗ ಈ ಬಗ್ಗೆಯೂ ವೀಕೆಂಡ್‌ನಲ್ಲಿ ಚರ್ಚೆ ಆಗಬೇಕು ಅಂತ ವೀಕ್ಷಕರು ಸೋಷಿಯಲ್ ಮೀಡಿಯಾ ಮೂಲಕ ಅಭಿಪ್ರಾಯ ಹೊರಹಾಕುತ್ತಿದ್ದಾರೆ. ಈ ವಾರ ಅಶ್ವಿನಿ ಗೌಡ, ಜಾಹ್ನವಿ, ಧ್ರುವಂತ್, ರಕ್ಷಿತಾ ಶೆಟ್ಟಿ, ಕಾಕ್ರೋಚ್ ಸುಧಿ, ರಿಷಾ ಗೌಡ, ರಾಶಿಕಾ ಶೆಟ್ಟಿ ಮತ್ತು ರಘು ಅವರು ನಾಮಿನೇಟ್ ಆಗಿದ್ದಾರೆ.