ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆಗೆ ದಿನಗಣನೆ ಆರಂಭವಾಗಿದೆ. ಈ ಮಧ್ಯೆ ಒಂದು ಬಿಗ್ ಟ್ವಿಸ್ಟ್ ಅನ್ನು ಬಿಗ್ ಬಾಸ್ ನೀಡಿದ್ದಾರೆ. ಸದ್ಯ ಮನೆಯೊಳಗೆ ಧನುಷ್, ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಧ್ರುವಂತ್, ರಘು, ಕಾವ್ಯ ಮತ್ತು ಅಶ್ವಿನಿ ಗೌಡ ಅವರು ಇದ್ದಾರೆ. ಈಗಾಗಲೇ ಧನುಷ್ ಅವರು ಫಿನಾಲೆ ತಲುಪಿರುವುದರಿಂದ ಮಿಕ್ಕ ಆರು ಮಂದಿ ನಾಮಿನೇಟ್ ಆಗಿದ್ದರು. ಅವರಲ್ಲಿ ಒಬ್ಬರನ್ನು ಮಿಡ್ ವೀಕ್ ಎಲಿಮಿನೇಷನ್ ಮೂಲಕ ಮನೆಗೆ ಕಳುಹಿಸಿದ್ದಾರೆ ಬಿಗ್ ಬಾಸ್.
ಎಲಿಮಿನೇಟ್ ಆಗಿದ್ದು ಯಾರು?
ಆಕ್ಟಿವಿಟಿ ರೂಮ್ ಒಳಗೆ ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಧ್ರುವಂತ್, ರಘು, ಕಾವ್ಯ ಮತ್ತು ಅಶ್ವಿನಿ ಗೌಡ ಅವರು ಹೋಗಿದ್ದರು. ಅಲ್ಲಿಂದ ಒಬ್ಬರೊಬ್ಬರನ್ನೇ ಹೊರಗೆ ಕರೆದ ಬಿಗ್ ಬಾಸ್ ಸೇಫ್ ಮಾಡುತ್ತ ಹೋದರು. ಮೊದಲು ರಕ್ಷಿತಾ ಶೆಟ್ಟಿ, ಗಿಲ್ಲಿ ನಟ, ಅಶ್ವಿನಿ ಗೌಡ. ರಘು ಅವರು ಕ್ರಮವಾಗಿ ಸೇಫ್ ಆದರು. ಅಂತಿಮವಾಗಿ ಕಾವ್ಯ ಮತ್ತು ಧ್ರುವಂತ್ ಮಾತ್ರ ಉಳಿದುಕೊಂಡರು. ಆದರಲ್ಲಿ ಕಾವ್ಯ ಅವರು ಸೇಫ್ ಆದರೆ, ಧ್ರುವಂತ್ ಎಲಿಮಿನೇಟ್ ಆದರು.
Bigg Boss Kannada 12: ಧ್ರುವಂತ್-ಅಶ್ವಿನಿ ಜಗಳ; ಗಿಲ್ಲಿಗೆ ಸಖತ್ ಮಜಾ! ನಕ್ಕು ನಕ್ಕು ಮನೆಮಂದಿ ಸುಸ್ತು
ಸ್ಪರ್ಧಿಗಳಿಂದ ಸಿಕ್ಕಿತ್ತು ಅಭಿಪ್ರಾಯ
ಧ್ರುವಂತ್ ಮತ್ತು ಕಾವ್ಯ ಅವರಲ್ಲಿ ಎಲಿಮಿನೇಟ್ ಆಗದೇ ಇರಲು ಯಾರು ಯೋಗ್ಯರು ಎಂಬುದನ್ನು ತಿಳಿಸಿ ಎಂದು ಬಿಗ್ ಬಾಸ್ ಕೇಳಿದರು. ಆಗ ಅಶ್ವಿನಿ ಗೌಡ, "ಧ್ರುವಂತ್ ಅವರು ಎಲ್ಲಿಯೂ ತಾಳ್ಮೆ ಕಳೆದುಕೊಂಡಿಲ್ಲ. ಅವರು ಯೋಗ್ಯರು ಎನಿಸುತ್ತದೆ. ವ್ಯಕ್ತಿತ್ವದ ಪ್ರದರ್ಶನವನ್ನ ವಿಭಿನ್ನವಾಗಿ ಮಾಡಿದ್ದಾರೆ. ಆಟವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಟಾಪ್ 6ರಲ್ಲಿ ಧ್ರುವಂತ್ ಇರಬೇಕು" ಎಂದು ಹೇಳಿದರು.
ನಂತರ ರಕ್ಷಿತಾ, "ನಾನು ಟಾಪ್ 6ರಲ್ಲಿ ಕಾವ್ಯ ಇರಬೇಕು ಎಂದು ಇಷ್ಟಪಡ್ತಿನಿ. ಧ್ರುವಂತ್‌ಗಿಂತ ಕಾವ್ಯ ಬೆಟರ್ ಇದ್ದಾರೆ" ಎಂದು ಹೇಳಿದರೆ, ಧನುಷ್ ಕೂಡ, "ಟಾಪ್ 6ರಲ್ಲಿ ಇರಲು ಕಾವ್ಯ ಅರ್ಹರು. ಅವರ ವ್ಯಕ್ತಿತ್ವ ನೋಡಿದ್ದೇನೆ. ಟಾಸ್ಕ್‌ಗಳಲ್ಲಿ ಉತ್ತಮವಾಗಿ ಆಡಿದ್ದಾರೆ. ಮಾತನಾಡುವ ರೀತಿ ಎಲ್ಲವೂ ಚೆನ್ನಾಗಿದೆ" ಎಂದು ಹೇಳಿದರು.
ರಘು ಅವರು ಮಾತ್ರ ಧ್ರುವಂತ್ ಹೆಸರನ್ನು ಆಯ್ಕೆ ಮಾಡಿದರು. "ಧ್ರುವಂತ್ ಈ ಮನೆಗೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ತಪ್ಪುಗಳನ್ನು ತಿದ್ದಿಕೊಂಡಿದ್ದಾರೆ. ಕಾವ್ಯಗಿಂತ ಧ್ರುವಂತ್ ಇರಬೇಕು" ಎಂದು ರಘು ಹೊಗಳಿದರು. ಗಿಲ್ಲಿ ನಟ ಅವರು ಕಾವ್ಯಗೆ ಸಪೋರ್ಟ್ ಮಾಡಿದರು. "ಮೊದಲಿನಿಂದಲೂ ಕಾವ್ಯ ಅವರನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಕಾವ್ಯ ಉತ್ತಮ ಸ್ಪರ್ಧಿ ಮತ್ತು ಒಳ್ಳೆಯ ವ್ಯಕ್ತಿತ್ವ ಇರುವ ಸ್ಪರ್ಧಿ. ಎದುರಾಳಿಗೆ ಉತ್ತಮವಾಗಿ ಫೈಟ್ ನೀಡಿದ್ದಾರೆ. ನಿರ್ಧಾರಗಳನ್ನು ತುಂಬಾ ಯೋಚನೆ ಮಾಡಿ ತೆಗೆದುಕೊಳ್ಳುತ್ತಿದ್ದರು. ಎಲ್ಲರ ಜೊತೆಗೂ ತುಂಬಾ ಚೆನ್ನಾಗಿ ಬೆರೆತರು" ಎಂದು ಗಿಲ್ಲಿ ನಟ ಹೇಳಿದರು.
ಧ್ರುವಂತ್ ಎಲಿಮಿನೇಟ್
ಅಂತಿಮವಾಗಿ ಆಕ್ಟಿವಿಟಿ ರೂಮ್‌ನಿಂದ ಹೊರಗೆ ಹೋದ ಧ್ರುವಂತ್, ಮತ್ತೆ ವಾಪಸ್ ಬರಲಿಲ್ಲ. ಆದರೆ ಕಾವ್ಯ ಅವರು ಮಾತ್ರ ಮುಖ್ಯದ್ವಾರದಿಂದ ಪುನಃ ಮನೆಯೊಳಗೆ ಬಂದರು. ಅಂತಿಮವಾಗಿ ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಫಿನಾಲೆಗೆ ಆರು ಮಂದಿ ಆಯ್ಕೆ ಆಗಿದ್ಧಾರೆ. ಧನುಷ್, ರಕ್ಷಿತಾ, ಗಿಲ್ಲಿ ನಟ, ರಘು, ಅಶ್ವಿನಿ ಗೌಡ ಮತ್ತು ಕಾವ್ಯ ಅವರು ಈ ಸೀಸನ್‌ನಲ್ಲಿ ಟ್ರೋಫಿಗಾಗಿ ಫೈಟ್ ಮಾಡಲಿದ್ದಾರೆ.