Bigg Boss Kannada 12: ಗಿಲ್ಲಿ ಮೇಲೆ ಒಟ್ಟಿಗೆ ಅಟ್ಯಾಕ್ ಮಾಡಿದ ಧ್ರುವಂತ್-ಅಶ್ವಿನಿ; ಸ್ನೇಹಿತನಿಗೆ ಕಾವು ಬುದ್ಧಿ ಮಾತು
Gilli Nata: ಬಿಗ್ ಬಾಸ್ ಮುಗಿಯಲು ಕೆಲವು ದಿನಗಳು ಬಾಕಿ ಇವೆ. ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಮತ್ತೊಂದು ಕಡೆ ಧ್ರುವಂತ್ , ಅಶ್ವಿನಿ ಒಂದಾಗಿ ಗಿಲ್ಲಿಯನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಗಿಲ್ಲಿ ಕಾಮಿಡಿ ಕೆಲವೊಮ್ಮೆ ವಿಪರೀತಕ್ಕೆ ತಿರುಗುತ್ತದೆ. ಈ ಬಗ್ಗೆ ಗಿಲ್ಲಿ ನಟ ವಿರೋಧ ಕಟ್ಟಿಕೊಂಡಿದ್ದೂ ಸಹ ಇದೆ. ಆದರೆ ಈ ಬಾರಿ ಧ್ರುವಂತ್ ಮತ್ತು ಅಶ್ವಿನಿ ಅವರು ಗಿಲ್ಲಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ವಾದ ವಿವಾದ ಬಳಿಕ ಕಾವ್ಯ ಅವರು ಗಿಲ್ಲಿ ನಟನಿಗೆ ಬುದ್ಧಿ ಮಾತುಗಳನ್ನು ಹೇಳಿದ್ದಾರೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ (Bigg Boss Kannada 12) ಮುಗಿಯಲು ಕೆಲವು ದಿನಗಳು ಬಾಕಿ ಇವೆ. ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿದೆ. ಮತ್ತೊಂದು ಕಡೆ ಧ್ರುವಂತ್ (Dhruvanth), ಅಶ್ವಿನಿ ಒಂದಾಗಿ ಗಿಲ್ಲಿಯನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಗಿಲ್ಲಿ ಕಾಮಿಡಿ ಕೆಲವೊಮ್ಮೆ ವಿಪರೀತಕ್ಕೆ ತಿರುಗುತ್ತದೆ. ಈ ಬಗ್ಗೆ ಗಿಲ್ಲಿ ನಟ ವಿರೋಧ ಕಟ್ಟಿಕೊಂಡಿದ್ದೂ ಸಹ ಇದೆ. ಆದರೆ ಈ ಬಾರಿ ಧ್ರುವಂತ್ ಮತ್ತು ಅಶ್ವಿನಿ (Ashwini Gowda) ಅವರು ಗಿಲ್ಲಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ವಾದ ವಿವಾದ ಬಳಿಕ ಕಾವ್ಯ ಅವರು ಗಿಲ್ಲಿ ನಟನಿಗೆ ಬುದ್ಧಿ ಮಾತುಗಳನ್ನು ಹೇಳಿದ್ದಾರೆ.
ಒಟ್ಟಿಗೆ ಅಟ್ಯಾಕ್ ಮಾಡಿದ ಧ್ರುವಂತ್-ಅಶ್ವಿನಿ
ಅಶ್ವಿನಿ, ಧ್ರುವಂತ್ ಅವರು ಗಾರ್ಡನ್ ಏರಿಯಾನಲ್ಲಿ ಕುಳಿತಿದ್ದಾಗ ಸುಮ್ಮನೆ ನಿನ್ನೆ ನಡೆದ ಟಾಸ್ಕ್ ವಿಚಾರವಾಗಿ ಚರ್ಚೆಗೆ ಎಳೆದಿದ್ದಾರೆ ಗಿಲ್ಲಿ. ಅಶ್ವಿನಿ ಅವರನ್ನು ಮೂದಲಿಸಲು ಆರಂಭಿಸಿದರು. ಕೂಡಲೇ ಧ್ರುವಂತ್ ಕೂಡ ಈ ಅಖಾಡಕ್ಕೆ ಇಳಿದರು. ಈ ಮೂವರು ಜಗಳ ಆರಂಭಿಸಲು ಶುರು ಮಾಡಿದರು. ಮಬೆಯವರು ಎದ್ದು ಮತ್ತೆ ಬಂದರೂ ಗಾರ್ಡನ್ ಏರಿಯಾದಲ್ಲಿ ಈ ಮೂವರ ಜಗಳ ನಿಂತಿರಲಿಲ್ಲ.
ನಿನ್ನ ಮೂರು-ಮುಕ್ಕಾಲು ರಿಯಾಲಿಟಿ ಶೋನ ಕಂಟೆಂಟ್ ಮುಗಿದು ಹೋಗಿದೆ ಅದೇ ಕಾರಣಕ್ಕೆ ಈಗ ಏನೇನೋ ಶಬ್ದ ಮಾಡುತ್ತಿದ್ದೀಯ ಎಂದು ಧ್ರುವಂತ್ ಕೂಗಾಡಿದರು.
ವೈರಲ್ ವಿಡಿಯೊ
Honestly her analysis were so good and making him understand is excellent
— Abhi (@Abhi1879734) December 31, 2025
Both are equal in acceptance according to the situation
Top 2 in one frame 🤗🤗🥰#BBK12#BBKSeason12#bbk12kannada #BBK12live #Gilli #Kavya pic.twitter.com/v42Me8P5Cl
‘ಜೋಕರ್, ಥರ್ಡ್ ಕ್ಲಾಸ್’ ಎಂದ ಅಶ್ವಿನಿ
ಅತ್ತ ಅಶ್ವಿನಿ ಅವರು ‘ಜೋಕರ್, ಥರ್ಡ್ ಕ್ಲಾಸ್’ ಎಂದೆಲ್ಲ ಬೈದಿದ್ದಾರೆ.ಅಶ್ವಿನಿ ವಿರುದ್ಧ ಏಕವಚನ ಪದ ಬಳಕೆ ಮಾಡಿದರು ಗಿಲ್ಲಿ. ಇದರಿಂದ ಸಿಟ್ಟಾದ ಅಶ್ವಿನಿ, ‘ಗಿಲ್ಲಿ ನಿಂಗೆ ಬೆನ್ನುಮೂಳೆ ಇಲ್ಲ. ನೀನೊಬ್ಬ ಜೋಕರ್, ಜೋಕರ್ ಕ್ಯಾಪ್ಟನ್, ಥರ್ಡ್ ಕ್ಲಾಸ್ ನೀನು’ ಎಂದು ಕೂಗಾಡಿದ್ದಾರೆ. ನಿಮ್ಮ ಜಗಳದಿಂದ ಇಡೀ ಮನೆಗೆ ಗಾರ್ಡನ್ಗೆ ಬರೋಕೆ ಆಗ್ತಾ ಇಲ್ಲ. ಟಾಕ್ಸಿಕ್ ಎನಿಸುತ್ತಿದೆ. ದಯವಿಟ್ಟು ನಿಲ್ಲಿಸಿ. ಈ ರೀತಿಯ ವಿಷಯಗಳನ್ನು ಮಾತನಾಡಲು ಸುದೀಪ್ ಅವರು ಬರಬೇಕಾ’ ಎಂದು ಸ್ಪಂದನಾ ಅವರು ಕೇಳಿಕೊಂಡರು. ಇಷ್ಟೆಲ್ಲ ಆದ ಬಳಿಕ ಗಿಲ್ಲಯೇ ಎದ್ದು ಹೋದರು.
ಕಾವ್ಯ ಬುದ್ಧಿ ಮಾತು
ಇದಾದ ಬಳಿಕ ಕಾವ್ಯ ಅವರ ಜೊತೆ ಗಿಲ್ಲಿ ಈ ಬಗ್ಗೆ ಚರ್ಚಿಸಿದ್ದಾರೆ. ಕಾವ್ಯ ಅವರು ಗಿಲ್ಲಿಗೆ ಬುದ್ಧಿ ಮಾತನ್ನ ಹೇಳಿದ್ದಾರೆ. ಈ ಹಂತ ತುಂಬಾ ಮುಖ್ಯ. ಇದು ವ್ಯಕ್ತಿತ್ವದ ಆಟ, ನಿರ್ಧಾರಗಳು ಸರಿ ಇರಬೇಕು. ಮನರಂಜನೆ ಇರಬೇಕು ಎಲ್ಲವೂ ಇರಬೇಕು. ಇದೆಲ್ಲ ತಲೆಯಲ್ಲಿ ಇಟ್ಟುಕೊಂಡು ಆಡು. ಇಷ್ಟೆಲ್ಲ ಅಂದ್ರುನೂ ಗಿಲ್ಲಿ ವಾಪಸ್ ಏನು ಹೇಳಲ್ಲ ಅನ್ನೋದು ಹೇಗಿದೆ.
ಇದನ್ನೂ ಓದಿ: Bigg Boss Kannada 12: ಉಸ್ತುವಾರಿಯಲ್ಲಿ ಧ್ರುವಂತ್ ಭಾರೀ ಮೋಸ? ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರ ಬಿದ್ರಾ ಗಿಲ್ಲಿ ನಟ?
ಅವರು ಮಾತಾಡಿದ್ರು ಅಂತ ನೀನು ಹಾಗೆ ಹೇಳೋದು ಎಷ್ಟು ಸರಿ ಇದೆ ಯೋಚನೆ ಮಾಡು. ನೀನು ವಾಪಸ್ ಕೊಡು. ಕೊಡಬೇಡ ಅಂತಿಲ್ಲ. ವಾಪಸ್ ನೀನು ಹೇಗೆ ಮಾತಾಡ್ತೀಯಾ ಅನ್ನೋದು ಕೂಡ ಮ್ಯಾಟರ್ ಆಗುತ್ತೆ ಎಂದಿದ್ದಾರೆ.