ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bigg Boss Kannada 12: ಎಪಿಸೋಡ್‌ ನೋಡಿ ಕಿಚ್ಚ ಮಾತನಾಡಲ್ವಾ? ರಾಶಿಕಾ-ರಕ್ಷಿತಾ ಮ್ಯಾಟರ್‌ಗೆ ನೆಟ್ಟಿಗರ ತರಾಟೆ

Rashika: ಬಿಗ್‌ಬಾಸ್‌ ಕನ್ನಡ ಸೀಸನ್‌ 12 ಮುಗಿಯುವ ಹಂತ ಬಂದಿದೆ. ಬಹುತೇಕ ಮುಂದಿನ ವಾರ ಬಿಗ್‌ಬಾಸ್‌ ಫಿನಾಲೆ ನಡೆಯಲಿದೆ. ಈಗಾಗಲೇ ಬಿಗ್‌ಬಾಸ್‌ನಲ್ಲಿ ಮುಂದಿನ ವಾರ ಶೋ ಮುಗಿಯುವ ಸೂಚನೆಯನ್ನೂ ನೀಡಲಾಗಿದೆ. ಸೀಸನ್‌ನ ಕೊನೆಯ ವೀಕೆಂಡ್‌ ವಿತ್‌ ಕಿಚ್ಚ ಸುದೀಪ್‌, ವಾರದ ಕಥೆ ಕಿಚ್ಚನ ಜೊತೆ ಪ್ರೋಗ್ರಾಮ್‌ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ಆಗುತ್ತಿವೆ. ಕಿಚ್ಚ ಸುದೀಪ್‌ ಅವರನ್ನೇ ನೆಟ್ಟಿಗರು ಟ್ರೋಲ್‌ ಮಾಡ್ತಾ ಇದ್ದಾರೆ.

ಬಿಗ್‌ ಬಾಸ್‌ ಕನ್ನಡ

ಬಿಗ್‌ಬಾಸ್‌ ಕನ್ನಡ ಸೀಸನ್‌ 12 (Bigg Boss Kannada 12) ಮುಗಿಯುವ ಹಂತ ಬಂದಿದೆ. ಬಹುತೇಕ ಮುಂದಿನ ವಾರ ಬಿಗ್‌ಬಾಸ್‌ ಫಿನಾಲೆ (Finale) ನಡೆಯಲಿದೆ. ಈಗಾಗಲೇ ಬಿಗ್‌ಬಾಸ್‌ನಲ್ಲಿ ಮುಂದಿನ ವಾರ ಶೋ ಮುಗಿಯುವ ಸೂಚನೆಯನ್ನೂ ನೀಡಲಾಗಿದೆ. ಸೀಸನ್‌ನ ಕೊನೆಯ ವೀಕೆಂಡ್‌ ವಿತ್‌ ಕಿಚ್ಚ ಸುದೀಪ್‌, ವಾರದ ಕಥೆ ಕಿಚ್ಚನ ಜೊತೆ ಪ್ರೋಗ್ರಾಮ್‌ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ಆಗುತ್ತಿವೆ. ಕಿಚ್ಚ ಸುದೀಪ್‌ ಅವರನ್ನೇ ನೆಟ್ಟಿಗರು ಟ್ರೋಲ್‌ ಮಾಡ್ತಾ ಇದ್ದಾರೆ. ರಾಶಿಕಾ Rashika Rakshitha) ಹಾಗೂ ರಕ್ಷಿತಾ ವಿಚಾರವಾಗಿ ಸುದೀಪ್‌ ಅವರಿಗೆ ಸಖತ್‌ ನೆಗೆಟಿವ್‌ ಕಮೆಂಟ್‌ ಮಾಡಿದ್ದಾರೆ ನೆಟ್ಟಿಗರು.

ರಕ್ಷಿತಾಗೆ ಕ್ಲಾಸ್‌

ನಾಮಿನೇಶನ್‌ ಸಮಯದಲ್ಲಿ ರಕ್ಷಿತಾ ಹಾಗೂ ರಾಶಿಕಾ ನಡುವೆ ಜಗಳ ಆಗುತ್ತೆ. ರಾಶಿಕಾ ಅವರು ನನ್ನ ಫ್ಯಾಮಿಲಿಗೂ ಇಷ್ಟ ಆಗಿಲ್ಲ ಅಂತಾರೆ. ಇದು ಅತಿರೇಕಕ್ಕೆ ಹೋಗಿ ದೇವರ ಮೇಲೆ ಪ್ರಮಾಣವನ್ನೂ ರಾಶಿಕಾ ಮಾಡುತ್ತಾರೆ. ಈ ವಿಚಾರವಾಗಿ ರಕ್ಷಿತಾ ಅವರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ ಕಿಚ್ಚ.

ಇದನ್ನೂ ಓದಿ: Bigg Boss Kannada 12: ಗಿಲ್ಲಿಗೆ ಸಿಕ್ಕೇ ಬಿಡ್ತು ಬಂಪರ್ ಆಫರ್!

ಕಿಚ್ಚ ಮೊದಲಿಗೆ, ರಕ್ಷಿತಾ ಅವರೇ, ರಾಶಿಕಾ ಅವರು ಫ್ಯಾಮಿಲಿ ಅಂತ ಹೇಳಿದ್ರು ಅಂತ ನೀವು ಹೇಳ್ತೀರಿ. ರಾಶಿಕಾ ದೇವರ ಮುಟ್ಟಿದ ನಂತರ ಸಾರಿ ಸಾರಿ ಅಂತ ಅಲ್ಲೇ ನಿಲ್ಲಿಸಿಬಿಟ್ರಿ.ಅಲ್ಲೇ ನಿಮಗೆ ಅರ್ಥ ಆಗಿದ್ರೆ ಅದಷ್ಟು ನಡೆತಾ ಇತ್ತಾ? ಎಂದು ಪ್ರಶ್ನೆ ಹಾಕಿದ್ದಾರೆ. ಈ ಕ್ಲಿಪ್‌ನ್ನು ಹಾಗೂ ರಕ್ಷಿತಾ ರಾಶಿಕಾ ನಡುವೆ ಆದ ಜಗಳವನ್ನು ಪೋಸ್ಟ್‌ ಮಾಡಿದ್ದಾರೆ.



ರಾಶಿಕಾ ನಾಮಿನೇಶನ್‌ ವೇಳೆ ಹೇಳಿದ್ದೇನು?

ರಾಶಿಕಾ ನಾಮಿನೇಶನ್‌ ವೇಳೆ ಮಾತನಾಡಿ, ಮೂರನೇ ವೀಕ್‌ ತನಕ ಮಾತ್ರ ರಕ್ಷಿತಾಳ ಡ್ರಾಮ ನಡೆದಿದ್ದು. ಎಲ್ಲ ಸಂದರ್ಭಗಳು ರಕ್ಷಿತಾ ಪರ ಇತ್ತು. ಆದರೆ ಮೂರನೇ ವಾರದ ನಂತರ ರಕ್ಷಿತಾ ಏನು ಅಂತ ಆಚೆ ಕಡೆನೂ ಗೊತ್ತಾಗಿದೆ. ನಮ್ಮ ಮನೆಯವರು ಗೊತ್ತಾಗಿದೆ, ಎಷ್ಟು ನಾಟಕ ಅಂತ ಹೇಳಿದ್ದರು. ಆಗ ರಕ್ಷಿತಾ ಅವರು ಮನೆಯವರು ಎಲ್ಲ ಹೇಳಿದ್ದಾರೆ ಅಂದರೆ ರೂಲ್ಸ್‌ ಬ್ರೇಕ್‌ ಮಾಡಿದ್ದಾರೆ. ಎಲ್ಲ ಅವರೇ ಹೇಳಿಕೊಟ್ಟಿದ್ರಾ? ಅಂತ ಕೂಗಾಡಿದ್ದರು.

ಇದೀಗ ಈ ಬಗ್ಗೆ ಸಖತ್‌ ಚರ್ಚೆಗಳು ಆಗುತ್ತಿವೆ. ನಮ್ ಮನೆಯವರು ಎಂದಾಗ ಅಲ್ಲಿ ನಮ್ ಮನೆಯವರು ಸ್ಪರ್ಧಿಗಳು ಅಂತ ರಾಶಿಕಾ ಅವರು ಹೇಳಿದ್ದರೆ, ಅಲ್ಲಿಗೆ ಈ ತರ್ಕ ಮುಗದೇ ಹೋಗ್ತಾ ಇತ್ತು. ಇಷ್ಟೆಲ್ಲ ಜಗಳ ಆಗ್ತಾ ಇರಲಿಲ್ಲ. ಆದರೆಸುದೀಪ್‌ ಅವರು ಈ ಬಗ್ಗೆ ಕೊನೆಗೂ ಒಂದು ಮಾತನ್ನು ಹೇಳಿಲ್ಲ. ಸುದೀಪ್‌ ಅವರು ಎಪಿಸೋಡ್‌ ನೋಡ್ರಾರೋ ಇಲ್ವಾ ಅನ್ನೋದು ಡೌಟ್‌ ಅಂತ ಕಮೆಂಟ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ: Bigg Boss Kannada 12: ಮತ್ತೊಬ್ಬರಿಗೆ ಛತ್ರಿ ಆಗುವುದು ಬೇಡ! ಅಶ್ವಿನಿಗೆ ಥ್ಯಾಂಕ್ಸ್‌ ಹೇಳಿ ಎಂದಿದ್ದೇಕೆ ಕಿಚ್ಚ?

ಮೂಲಗಳ ಪ್ರಕಾರ ಮ್ಯೂಟಂಟ್‌ ರಘು ಹಾಗೂ ರಾಶಿಕಾ ಈ ವಾರ ಮನೆಯಿಂದ ಹೊರಬಂದಿದ್ದಾರೆ ಎನ್ನಲಾಗುತ್ತಿದೆ. ಅಶ್ವಿನಿ ಗೌಡ ಹಾಗೂ ಧ್ರುವಂತ್‌, ಕಿಚ್ಚ ಸುದೀಪ್‌ ಅವರಿಂದ ಪ್ರಶಂಸೆಯ ಮಹಾಪೂರವೇ ಹರಿಸಿದ್ದಾರೆ.

Yashaswi Devadiga

View all posts by this author