ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bigg Boss Kannada 12: ಮತ್ತೊಬ್ಬರಿಗೆ ಛತ್ರಿ ಆಗುವುದು ಬೇಡ! ಅಶ್ವಿನಿಗೆ ಥ್ಯಾಂಕ್ಸ್‌ ಹೇಳಿ ಎಂದಿದ್ದೇಕೆ ಕಿಚ್ಚ?

Gilli Nata: ಮುಂದಿನ ವಾರವೇ ಫಿನಾಲೆ ಇರುವುದರಿಂದ ಇನ್ನಷ್ಟು ಸ್ಪರ್ಧೆ ಕಠಿಣವಾಗಿದೆ. ಶನಿವಾರ ಕಿಚ್ಚನ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್‌ ಅವರು ಕೆಲವು ಬದ್ಧಿ ಮಾತುಗಳನ್ನು ಹೇಳಿದ್ದಾರೆ. ಕೆಲವರಿಗೆ ಬೇರೆಯವರ ಆಟವನ್ನು ನೀವು ಆಡುವುದು ಬೇಡ ಎಂದರೆ ಇನ್ನೂ ಕೆಲವರಿಗೆ ಮತ್ತೊಬ್ಬರಿಗೆ ಛತ್ರಿ ಆಗೋದು ಬೇಡ ಎಂದಿದ್ದಾರೆ. ತುಸು ಖಾರವಾಗಿಯೇ ಕಿಚ್ಚ ಅವರು ಮಾತನಾಡಿದ್ದಾರೆ. ಹಾಗಾದ್ರೆ ಕಿಚ್ಚ ಹೇಳಿದ್ದು ಯಾರಿಗೆ?

ಛತ್ರಿ ಆಗುವುದು ಬೇಡ! ಅಶ್ವಿನಿಗೆ ಥ್ಯಾಂಕ್ಸ್‌ ಹೇಳಿ ಎಂದ ಕಿಚ್ಚ

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Jan 11, 2026 8:58 AM

ಮುಂದಿನ ವಾರವೇ ಫಿನಾಲೆ (Bigg Boss Kannada Finale) ಇರುವುದರಿಂದ ಇನ್ನಷ್ಟು ಸ್ಪರ್ಧೆ ಕಠಿಣವಾಗಿದೆ. ಶನಿವಾರ ಕಿಚ್ಚನ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್‌ (kichcha sudeep) ಅವರು ಕೆಲವು ಬದ್ಧಿ ಮಾತುಗಳನ್ನು ಹೇಳಿದ್ದಾರೆ. ಕೆಲವರಿಗೆ ಬೇರೆಯವರ ಆಟವನ್ನು ನೀವು ಆಡುವುದು ಬೇಡ ಎಂದರೆ ಇನ್ನೂ ಕೆಲವರಿಗೆ ಮತ್ತೊಬ್ಬರಿಗೆ ಛತ್ರಿ ಆಗೋದು ಬೇಡ ಎಂದಿದ್ದಾರೆ. ತುಸು ಖಾರವಾಗಿಯೇ ಕಿಚ್ಚ ಅವರು ಮಾತನಾಡಿದ್ದಾರೆ. ಹಾಗಾದ್ರೆ ಕಿಚ್ಚ ಹೇಳಿದ್ದು ಯಾರಿಗೆ?

ಮತ್ತೊಬ್ಬರಿಗೆ ಛತ್ರಿ ಆಗುವುದು ಬೇಡ

ಈ ವಾರ ಮಿಡ್‌ ವೀಕ್‌ ಎಲಿಮಿನೇಶನ್‌ ಕೂಡ ನಡೆಯಲಿದೆ. ಭಾನುವಾರ ಸಂಖ್ಯೆ ಏಳಕ್ಕೆ ಇಳಿಯಲಿದೆ. ಹೀಗಿರುವಾಗ ಸ್ಪರ್ಧಿಗಳು ಬೇರೆಯವರಿಗಾಗಿ ಆಡಲು ಶುರು ಮಾಡಿದರೆ ಅಥವಾ ಬೇರೆಯವರ ನೆರಳಿನಲ್ಲಿ ಇರಲು ಶುರು ಮಾಡಿದರೆ. ಮತ್ತೊಬ್ಬರಿಗೆ ಛತ್ರಿ ಆಗುವುದು ಎಂದು ಕರೆದಿದ್ದಾರೆ ಕಿಚ್ಚ ಸುದೀಪ್. ಅದುವೇ ಕಾವ್ಯ.

ಇದನ್ನೂ ಓದಿ: Bigg Boss Kannada 12: ಗಿಲ್ಲಿಗೆ ಸಿಕ್ಕೇ ಬಿಡ್ತು ಬಂಪರ್ ಆಫರ್!

ಬಿಗ್‌ ಬಾಸ್‌ ಶುರುವಾದಾಗಿನಿಂದ ಕಾವ್ಯ ಅವರನ್ನು ಗುರುತಿಸೋದು ಗಿಲ್ಲಿಯಿಂದ ಎಂಬ ಮಾತಿದೆ. ಫಿನಾಲೆಯ ವಾರದ ವರೆಗೆ ಗಿಲ್ಲಿ ಸಹಾಯದಿಂದ ಬಂದಿದ್ದಾರೆ ಎಂಬ ಚರ್ಚೆಗಳೂ ಇವೆ. ಆದರೆ ಈ ವಾರ ಹಾಗಿರಲಿಲ್ಲ.

ಅಶ್ವಿನಿ ಅವರಿಗೆ ಥ್ಯಾಂಕ್ಸ್ ಹೇಳಬೇಕು

ಕಾವ್ಯ ಅವರನ್ನು ಉಲ್ಲೇಖಿಸಿ ಮಾತನಾಡಿದ ಕಿಚ್ಚ, ಆಟವನ್ನು ಆಡದೇ ಈ ಹಂತಕ್ಕೆ ಬರೋದು ಸುಲಭದ ಮಾತಲ್ಲ. ನೀವು ಒಳ್ಳೆಯ ಆಟಗಾರ್ತಿ. ಮತ್ತೊಬ್ಬರಿಗೆ ಛತ್ರಿ ಆಗೋದು ಬೇಡ’ನೀವು ಅಶ್ವಿನಿ ಅವರಿಗೆ ಥ್ಯಾಂಕ್ಸ್ ಹೇಳಬೇಕು. ಏಕೆಂದರೆ ಅವರು ನಿಮಗೆ ಸವಾಲು ಹಾಕಿದರು. ನಿಮ್ಮತನ ಹೊರಗೆ ಬರುವಂತೆ ಮಾಡಿದರು.

ಇನ್ನು ಧನುಷ್‌ ಅವರಿಗೂ ಅನ್ವಯವಾಗುತ್ತೆ ಎಂದರು. ಅಶ್ವಿನಿ ಜೊತೆ ಟಾಸ್ಕ್ ಆಡುವಾಗ ಇಡೀ ಮನೆಯ ಮಂದಿ ಕಾವ್ಯಾಗೆ ಬೆಂಬಲ ನೀಡುತ್ತಿದ್ದರು. ಆಗ ಸುದೀಪ್‌ ಈ ಬಗ್ಗೆ ಈ ವಿಚಾರ ಪ್ರಸ್ತಾಪ ಮಾಡಿದ್ದಾರೆ.

ಸಂಬಂಧಗಳು ಶಾಶ್ವತ ಅಲ್ಲ

ರಕ್ಷಿತಾ ವಿಚಾರವಾಗಿಯೂ ಕಿಚ್ಚ ಕ್ಲಾಸ್‌ ತೆಗೆದುಕೊಂಡರು ಗಿಲ್ಲಿ - ರಘು ಜೊತೆ ಯಾರು ಕ್ಲೋಸ್‌ ಆಗಬಾರದು, ಇದು ರಕ್ಷಿತಾಗೆ ಇಷ್ಟ ಆಗಲ್ಲ. ಇಲ್ಲಿ ಸಂಬಂಧಗಳನ್ನು ಇಟ್ಟುಕೊಂಡು, ಮನೆಯನ್ನು ನರಕ ಮಾಡುತ್ತೀರಿ ಎಂದರೆ, ಎರಡು ಅಂಶಗಳು. ಸಂಬಂಧಗಳು ಶಾಶ್ವತ ಅಲ್ಲ, ಇದು ಯಾರಪ್ಪನ ಮನೆಯೂ ಅಲ್ಲ" ಎಂದು ಸುದೀಪ್‌ ಅವರು ಹೇಳಿದ್ದಾರೆ. ರಕ್ಷಿತಾ, ಗಿಲ್ಲಿ ಮತ್ತು ರಘು ಬಗ್ಗೆ ಅತೀವ ಆತ್ಮೀಯತೆ ಬೆಳೆಸಿಕೊಂಡು, ಅದರಿಂದ ಬೇರೆಯವರನ್ನು ಅವರಿಂದ ದೂರ ಇಡಲು ಪ್ರಯತ್ನ ಮಾಡುತ್ತಿರುವ ಬಗ್ಗೆಯೂ ಸುದೀಪ್ ಟೀಕೆ ಮಾಡಿದರು.

ಇದನ್ನೂ ಓದಿ: Bigg Boss Kannada 12: ಅಶ್ವಿನಿ ಗೌಡ - ಧ್ರುವಂತ್ ಮೇಲೆ ಎಲ್ರಿಗೂ ಕಣ್ಣು; ಒಬ್ರು ಉತ್ತಮ, ಮತ್ತೊಬ್ರು ಕಳಪೆ!

ನಂತರ ಸುದೀಪ್‌ ಅವರು ರಕ್ಷಿತಾಗೆ, ನಿಮ್ಮ ಮೂರು (ರಕ್ಷಿತಾ, ಗಿಲ್ಲಿ, ರಘು) ಜನರಲ್ಲಿ ಯಾರು ಗೆಲ್ಲಬೇಕು ಎಂದು ಕೇಳಿದ್ದಾರೆ. ಅದಕ್ಕೇ ರಕ್ಷಿತಾ, "ಮೊದಲು ನಾನು ಗೆಲ್ಲಬೇಕು" ಎಂದು ಹೇಳಿದ್ದಾರೆ. ಆಗ ಸುದೀಪ್‌ ಚಪ್ಪಾಳೆ ಹೊಡೆದಿದ್ದಾರೆ. ಬಳಿಕ, "ಎಲ್ಲರೂ ಇಲ್ಲಿ ಸಂಬಂಧ ಕಟ್ಟುಕೊಂಡ್ರಿ, ನನ್ನ ಅಣ್ಣ, ನನ್ನ ತಂಗಿ ಅಂತ.. ಬಾಗಿಲು ಓಪನ್‌ ಆಗುತ್ತೆ ಈಗ. ಹಿಂಗ್‌ ಅಂತ ಎಲ್ರೂ ಹೊರಗೆ ಹೋಗ್ತಿರಿ" ಎಂದು ಸುದೀಪ್‌ ಎಚ್ಚರಿಕೆ ನೀಡಿದ್ದಾರೆ.