ಬಿಗ್ ಬಾಸ್ (Bigg Boss Kannada 12) ಅಂದರೆ ಹಾಗೇ, ಈಗ ಸ್ನೇಹಿತರಾಗಿದ್ದವರು, ಮುಂದೆ ಶತ್ರುಗಳು ಆಗಬಹುದು, ಶತ್ರು ಮಿತ್ರನೂ ಆಗಬಹುದು. ರಘು ಹಾಗೂ ಗಿಲ್ಲಿ (Raghu and Gilli) ವಿಚಾರದಲ್ಲಿಯೂ ಅದೇ ಆಗಿದೆ. ಕುಚಿಕು ಗೆಳಯರ ಮಧ್ಯೆ ಇದೀಗ ಬಿರುಕು ಮೂಡಿದೆ. ರಘು ಅವರು ಗಿಲ್ಲಿಯನ್ನೇ ನಾಮಿನೇಟ್ (Nominate) ಮಾಡಿದ್ದಾರೆ. ಗಿಲ್ಲಿ ಹಾಗೂ ರಘು ಇಬ್ಬರೂ ಕಿತ್ತಾಡಿಕೊಂಡಿದ್ದಾರೆ. ಸದಾ ಕಾಲ ರಘು ಅಕ್ಕ-ಪಕ್ಕನೇ ಗಿಲ್ಲಿ ನಟ ಕಾಣಿಸಿಕೊಳ್ಳುತ್ತಿದ್ದರು. ಎಷ್ಟೋ ಬಾರಿ ರಘು ತೊಡೆ ಮೇಲೆ ಗಿಲ್ಲಿ ಮಲಗಿರುತ್ತಿದ್ದರು. ಆದರೆ ಇವರಿಬ್ಬರ ಭಿನ್ನಾಭಿಪ್ರಾಯ ಕಂಡು ವೀಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲ ಇದೀಗ ಬಾಹುಬಲಿ’ (Bahubali Movie) ಸಿನಿಮಾದ ಸೀನ್ ರೀ-ಕ್ರಿಯೇಟ್ ಆಗಿದೆ.
ಗಿಲ್ಲಿ ನಟನ ಬೆನ್ನಿಗೇ ರಘು ಚೂರಿ
ಚೂರಿ ಇರಿಯುವ ಮೂಲಕ ನಾಮಿನೇಟ್ ಮಾಡುವ ಟಾಸ್ಕ್ ಅನ್ನು ನೀಡಲಾಗಿತ್ತು ಗಿಲ್ಲಿ ನಟನ ಬೆನ್ನಿಗೇ ರಘು ಚೂರಿ ಚುಚ್ಚಿ ನಾಮಿನೇಟ್ ಮಾಡಿದ್ದಾರೆ. ಅದನ್ನ ಕಂಡು ‘ಬಾಹುಬಲಿ’ ಸಿನಿಮಾದ ಸೀನ್ ರೀಕ್ರಿಯೇಟ್ ಆಗಿದೆ ಅಂತಿದ್ದಾರೆ ವೀಕ್ಷಕರು. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವುದಕ್ಕೆ ಶುರು ಮಾಡಿದೆ.
ವೈರಲ್ ಪೋಸ್ಟ್
ಮಾಳು ಬಳಿ ಇದ್ದ ಚೂರಿ ತೆಗೆದುಕೊಂಡು ಗಿಲ್ಲಿಗೆ ರಘು ಚುಚ್ಚಿ ನಾಮಿನೇಟ್ ಮಾಡಿದರು. ʻಮನೆಯಿಂದ ಆಚೆ ಹೋಗಬೇಕಾದರೆ ಒಳ್ಳೆಯವರ ಜೊತೆ ಫ್ರೆಂಡ್‌ಶಿಪ್ ಮಾಡ್ರಪ್ಪ ಗೊತ್ತಿರೋರೇ ಹೀಗೆ ಮಾಡಿದ್ರೆ ನಾವು ಎಲ್ಲಿಗೆ ಹೋಗೋದು ಅಂತʼ ಗಿಲ್ಲಿ ಅವರು ರಘುಗೆ ಹೇಳಿದರು.
ರಘು ಹಾಗೂ ಗಿಲ್ಲಿ ಮಧ್ಯೆ ವಾದ ವಿವಾದ
ಧನುಷ್‌ಗೆ ಕೂಡ ಒಂದು ಟಾಸ್ಕ್ ಬಿಗ್ ಬಾಸ್ ನೀಡಿದ್ದರು. ಸ್ಪರ್ಧಿಗಳಿಗೆ ರ್ಯಾಂಕಿಂಗ್ ನೀಡಬೇಕಿತ್ತು. ಗಿಲ್ಲಿಗೆ ಎರಡನೇ ಸ್ಥಾನವನ್ನು ನೀಡಿದ್ದರು ಧನುಷ್. ಇದು ರಘು ಅವರಿಗೆ ಕೋಪ ತರಿಸಿದೆ. ಅಲ್ಲಿಂದ ರಘು ಹಾಗೂ ಗಿಲ್ಲಿ ಮಧ್ಯೆ ವಾದ ವಿವಾದವೂ ನಡೆಯಿತು . ರಘು ಮೊದಲು ಧ್ರುವಂತ್‌ಗೆ ನಾಮಿನೇಟ್ ಮಾಡಿದರೆ, ಎರಡನೇಯದಾಗಿ ಗಿಲ್ಲಿಗೆ ನಾಮಿನೇಟ್ ಮಾಡಿದರು. ಇದು ಗಿಲ್ಲಿ ಅಭಿಮಾನಿಗಳಿಗೆ ತಡೆದುಕೊಳ್ಳುವುದಕ್ಕೆ ಆಗಲಿಲ್ಲ. ಹೀಗಾಗಿ ಈ ವಿಡಿಯೋವನ್ನು ಇಟ್ಟುಕೊಂಡು ಕಟ್ಟಪ್ಪ ಸೀನ್‌ಗೆ ಹೋಲಿಕೆ ಮಾಡಲಾಗುತ್ತಿದೆ.
ಕುಚ್ಚಿಕ್ಕುನಾ ಬಿಟ್ಟುಕೊಡೋದಿಲ್ಲ ಎಂದ ಗಿಲ್ಲಿ
ರಘು ಅವರು ಗಿಲ್ಲಿ ಬಗ್ಗೆ ಅನೇಕ ಕಾರಣವನ್ನು ಕೊಟ್ಟರು ಆದರೆ ಗಿಲ್ಲಿ ಕೂಡ ಸುಮ್ಮನಾಗಿಲ್ಲ. ʻನನ್ನ ಡ್ರಾಯರ್‌ಗೆ ಕೈಹಾಕಿ ಬಟ್ಟೆ ಮುಟ್ಟೋಕೆ ನೀನ್ಯಾರು ಅಂದಿದ್ರೆ ನೀನೇ ತಪ್ಪಿತಸ್ಥ ಆಗ್ತಿದ್ದೆ. ಬಟ್ಟೆಗಳನ್ನ ಎಸೆದಿದ್ದು ಅದಕ್ಕಿಂತ ದೊಡ್ಡ ತಪ್ಪು. ಟಾಸ್ಕ್‌ಗಳಲ್ಲಿ ನಾನೂ ಆಡಿದೆ. ನೀವು ಆಡಿ ಗೇಮ್‌ನಲ್ಲಿ ಸೋತ್ರಿʼ ಎಂದು ರಘುಗೆ ಗಿಲ್ಲಿ ಹೇಳಿದ್ದಾರೆ. ಆ ಬಳಿಕ ರಘು ಕೂಡ ನನ್ನ ಪಕ್ಕ ಇನ್ನು ಮುಂದೆ ಕೂರಬೇಡ ಅಂತ ಗಿಲ್ಲಿಗೆ ಹೇಳಿದರು, ʻನೀನಂದ್ರೆ ನಂಗೆ ಇಷ್ಟ. ನೀನು ನನ್ನ ಫ್ರೆಂಡ್. ನಾನು ಕುಚ್ಚಿಕ್ಕುನಾ ಬಿಟ್ಟುಕೊಡೋದಿಲ್ಲʼ ಅಂತ ಗಿಲ್ಲಿ ಹೇಳಿದ್ದಾರೆ.
ರಘು ಈ ನಡೆಯ ಬಗ್ಗೆ ವೀಕ್ಷಕರು ಅಸಮಾಧನ ಹೊರ ಹಾಕಿದ್ದಾರೆ. ಕಾರಣವೇ ಇಲ್ಲದೆ ಎರಡನೇ ಬಾರಿ ಗಿಲ್ಲಿ ಮೇಲೆ ಕಿರಿಕಿರಿಗೊಂಡಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಇಂದಿನ ಸಂಚಿಕೆಯಲ್ಲಿ ಗಿಲ್ಲಿ ಹಾಗೂ ರಾಶಿಕಾ ಮಧ್ಯೆ ಮಾತಿನ ಚಕಮಕಿ ನಡೆದಿದೆ. ರಾಶಿಕಾ ಕೂಡ ಗಿಲ್ಲಿ ವಿರುದ್ಧ ಅಬ್ಬರಿಸಿದ್ದಾರೆ. ಕಾವ್ಯ ಹಾಗೂ ಗಿಲ್ಲಿ ಫ್ರೆಂಡ್‌ಶಿಪ್ ಬಗ್ಗೆ ಪರೋಕ್ಷವಾಗಿಯೇ ಟಾಂಗ್ ಕೊಟ್ಟಿದ್ದಾರೆ.
ಕಾವ್ಯ ಅವರು ಒಂದೇ ಪರ್ಸನ್‌ಗೆ (ಗಿಲ್ಲಿ) ಸ್ಟ್ಯಾಂಡ್ ತೆಗೆದುಕೊಳ್ಳುತ್ತಾರಂತೆ ಎಂದು ಕಾವ್ಯ ಬಗ್ಗೆ ಕ್ಯಾಮೆರಾ ಮುಂದೆ ರಾಶಿಕಾ ಹೇಳಿದರು. ಕಾವ್ಯ ಅವರು ಈ ಬಗ್ಗೆ ಕೂಗಾಡಿ, ತಾಕತ್ತು ಇದ್ದರು ಬೇರೆಯವರು ಫ್ರೆಂಡ್‌ಶಿಪ್ ಬೆಳೆಸಿಕೊಂಡು ತೋರಿಸಲಿ ಎಂದು ಅಬ್ಬರಿಸಿದ್ದಾರೆ.