Bigg Boss Kannada 12: ಫ್ರೆಂಡ್‌ಶಿಪ್ ಬಗ್ಗೆಯೇ ಟಾಂಗ್ ಕೊಟ್ರಾ ರಾಶಿಕಾ? ನೀನು ಮನೆಗೆ ಹೋಗೋದು ಪಕ್ಕಾ ಎಂದು ಅಬ್ಬರಿಸಿದ ಗಿಲ್ಲಿ!
Gilli Nata: ನಾಮಿನೇಷನ್ ಮಾಡುವಾಗ ಚಾಕು ತೆಗೆದು ಬೇರೆಯವರ ಬೆನ್ನಿನ ಬಾಕ್ಸ್ಗೆ ಚುಚ್ಚಬೇಕು. ಯಾರ ಬಳಿ ಕಡಿಮೆ ಚಾಕು ಇರುತ್ತದೆಯೋ ಅವರು ನಾಮಿನೇಷನ್ನಿಂದ ಬಚಾವ್ ಆಗುತ್ತಾರೆ. ರಕ್ಷಿತಾ ಅವರು ನಿನ್ನೆ ಈ ಪ್ರಕ್ರಿಯೆ ವೇಳೆ ಕಾವ್ಯ ವಿರುದ್ಧ ಹಲವು ಆರೋಪಗಳನ್ನು ಮಾಡಿದರು. ಗಿಲ್ಲಿ ವಿಚಾರವಾಗಿಯೂ ಕಾವ್ಯ ಅವರೇ ತಡೆ ಆಗುತ್ತಿದ್ದಾರೆ ಅನೋ ಕಾರಣ ಕೊಟ್ಟರು. ಇದೀಗ ರಾಶಿಕಾ ಕೂಡ ಗಿಲ್ಲಿ ವಿರುದ್ಧ ಅಬ್ಬರಿಸಿದ್ದಾರೆ. ಕಾವ್ಯ ಹಾಗೂ ಗಿಲ್ಲಿ ಫ್ರೆಂಡ್‌ಶಿಪ್ ಬಗ್ಗೆ ಪರೋಕ್ಷವಾಗಿಯೇ ಟಾಂಗ್ ಕೊಟ್ಟಿದ್ದಾರೆ. ಗಿಲ್ಲಿ-ರಾಶಿಕಾ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ಬಿಗ್ ಬಾಸ್ ಕನ್ನಡ -
ಸೋಮವಾರ ಬಿಗ್ ಬಾಸ್ ಸಂಚಿಕೆಯಲ್ಲಿ (ನ.1) (Bigg Boss Kannada 12)ನಾಮಿನೇಷನ್‌ಗೆ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದಾರೆ. ನಾಮಿನೇಷನ್ (Nomination) ಸಂದರ್ಭದಲ್ಲಿ ಎಲ್ಲರಿಗೂ ಬೆನ್ನಿಗೆ ಬೆಂಡಿನ ಬಾಕ್ಸ್ ನೀಡಿದ್ದರು. ಇದಕ್ಕೆ ಚಾಕು ಚುಚ್ಚಿಕೊಂಡಿರುತ್ತದೆ. ನಾಮಿನೇಷನ್ ಮಾಡುವಾಗ ಚಾಕು ತೆಗೆದು ಬೇರೆಯವರ ಬೆನ್ನಿನ ಬಾಕ್ಸ್ಗೆ ಚುಚ್ಚಬೇಕು. ಯಾರ ಬಳಿ ಕಡಿಮೆ ಚಾಕು ಇರುತ್ತದೆಯೋ ಅವರು ನಾಮಿನೇಷನ್ನಿಂದ ಬಚಾವ್ ಆಗುತ್ತಾರೆ. ರಕ್ಷಿತಾ (Rakshitha) ಅವರು ನಿನ್ನೆ ಈ ಪ್ರಕ್ರಿಯೆ ವೇಳೆ ಕಾವ್ಯ ವಿರುದ್ಧ ಹಲವು ಆರೋಪಗಳನ್ನು ಮಾಡಿದರು. ಗಿಲ್ಲಿ ವಿಚಾರವಾಗಿಯೂ ಕಾವ್ಯ ಅವರೇ ತಡೆ ಆಗುತ್ತಿದ್ದಾರೆ ಅನೋ ಕಾರಣ ಕೊಟ್ಟರು. ಇದೀಗ ರಾಶಿಕಾ (Rashika Shetty) ಕೂಡ ಗಿಲ್ಲಿ ವಿರುದ್ಧ ಅಬ್ಬರಿಸಿದ್ದಾರೆ. ಕಾವ್ಯ ಹಾಗೂ ಗಿಲ್ಲಿ ಫ್ರೆಂಡ್‌ಶಿಪ್ ಬಗ್ಗೆ ಪರೋಕ್ಷವಾಗಿಯೇ ಟಾಂಗ್ ಕೊಟ್ಟಿದ್ದಾರೆ. ಗಿಲ್ಲಿ-ರಾಶಿಕಾ (Gilli Rashika) ಮಧ್ಯೆ ಮಾತಿನ ಚಕಮಕಿ ನಡೆದಿದೆ.
ಪ್ರೋಮೋ ಔಟ್
ಕಾವ್ಯ ಅವರು ಒಂದೇ ಪರ್ಸನ್‌ಗೆ (ಗಿಲ್ಲಿ) ಸ್ಟ್ಯಾಂಡ್ ತೆಗೆದುಕೊಳ್ಳುತ್ತಾರಂತೆ ಎಂದು ಕಾವ್ಯ ಬಗ್ಗೆ ಕ್ಯಾಮೆರಾ ಮುಂದೆ ರಾಶಿಕಾ ಹೇಳಿದರು. ಕಾವ್ಯ ಅವರು ಈ ಬಗ್ಗೆ ಕೂಗಾಡಿ, ತಾಕತ್ತು ಇದ್ದರು ಬೇರೆಯವರು ಫ್ರೆಂಡ್‌ಶಿಪ್ ಬೆಳೆಸಿಕೊಂಡು ತೋರಿಸಲಿ ಎಂದು ಅಬ್ಬರಿಸಿದ್ದಾರೆ.
ಕಲರ್ಸ್ ಕನ್ನಡ ಪ್ರೋಮೋ
ಗಿಲ್ಲಿ ಕೂಡ ರಾಶಿಕಾಗೆ ಈ ಬಗ್ಗೆ ಮಾತನಾಡಿ, ನೀವು ಇದ್ದರೆ ಕಂಫರ್ಟ್ ಝೋನ್ ಬೇರೆ ಅವರು ಇದ್ದರೆ ಅಲ್ವಾ? ಎಂದು ಕೇಳಿದ್ದಾರೆ. ಅಷ್ಟೇ ಅಲ್ಲ ರಾಶಿಕಾ ಅವರು ಕಾಫಿ, ಟೀ ಎಲ್ಲವನ್ನೂ ಸೂರಜ್ ಬಳಿಗೆ ತರೆಸಿಕೊಳ್ತಾರೆ ಅಂತ ಮಾತನಾಡಿದ್ದಾರೆ ಗಿಲ್ಲಿ. ಇದು ರಾಶಿಕಾ ಅವರಿಗೆ ಕೋಪ ಬರಿಸಿದೆ.
ಎಲ್ಲಿ ಕಾಮಿಡಿ ಮಾಡಬೇಕು ಅಲ್ಲಿ ಮಾತ್ರ ಮಾಡು ಅಂತ ರಾಶಿಕಾ ಗಿಲ್ಲಿ ಮೇಲೆ ಕೂಗಾಡಿದರು. ಅದಕ್ಕೆ ಗಿಲ್ಲಿ ನೀನು ಕ್ಯೂಟ್ ಆಗಿದ್ದೀಯಾ ಬಿಡು ಅಂತ ರಾಶಿಕಾ ಕಾಲೆಳೆದಿದ್ದಾರೆ. ಅದು ನಂಗೊತ್ತು ಅಂತ ರಾಶಿಕಾ ಅಂದರು. ಹೀಗೆ ಹೇಳುತ್ತಿದ್ದಂತೆ ಗಿಲ್ಲಿ ನೀನು ಕ್ಯೂಟ್ ಆಗಿದ್ದೀಯಾ ಅಂದ್ಯಲ್ಲ ಅದೇ ನಿಜವಾದ ಕಾಮಿಡಿ, ನೀನು ಮಾತ್ರ ಮನೆಯಿಂದ ಪಕ್ಕಾ ಹೋಗುತ್ತೀಯಾ ಅಂತ ಕೂಗಾಡಿದ್ದಾರೆ ಗಿಲ್ಲಿ.
ರಕ್ಷಿತಾಗೆ ಬುದ್ಧಿವಾದ ಹೇಳಿದ ಗಿಲ್ಲಿ
ಯಾವಾಗ ಗಿಲ್ಲಿ ಕಾವ್ಯ ಫ್ರೆಂಡ್‌ಶಿಪ್ ಬಗ್ಗೆ ರಾಶಿಕಾ ಮಾತನಾಡಿದರೂ, ಸೂರಜ್ ಅವರನ್ನ ಎಳೆದು ತಂದಿದ್ದಾರೆ ಗಿಲ್ಲಿ. ನಿನ್ನೆಯಷ್ಟೇ ರಕ್ಷಿತಾ ಅವರು ಕಾವ್ಯ ವಿರುದ್ಧ ಹಲವು ಆರೋಪ ಮಾಡಿದರು. ಅಷ್ಟೇ ಅಲ್ಲ ರಕ್ಷಿತಾ ಅವರಿಗೆ ಬುದ್ಧಿ ಮಾತಿಗಳನ್ನು ಹೇಳಿದ್ದಾರೆ ಗಿಲ್ಲಿ.
ಇದನ್ನೂ ಓದಿ: Bigg Boss Kannada 12: ಮಾಳುಗೆ ಬೆಂಬಲ ನೀಡಿದ ರೀತಿ, ಆಟ ಆಡುವ ಶೈಲಿಗೆ ಟೀಕೆಗೆ ಗುರಿಯಾದ ರಕ್ಷಿತಾ!
ಇದೇನೋ ಫ್ಯಾಮಿಲಿ ಅಲ್ಲ. ನಿನ್ನ ಆಟವನ್ನು ನೀನು ಆಡಬೇಕು. ನಿನಗೆ ಮಾಳು ಅವರನ್ನು ಸೇವ್ ಮಾಡೋದು ಬೇಕಿದೆ ಎಂದು ಗಿಲ್ಲಿ ನಟ ಹೇಳುತ್ತಾರೆ. ಇದಕ್ಕೆ ಜನರು ನನ್ನನ್ನು ಉಳಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ರಕ್ಷಿತಾ ಶೆಟ್ಟಿ ತಿರುಗೇಟು ಕೊಡುತ್ತಾರೆ.