ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ನೀಡಿರುವ ರಜತ್ ಕಿಶನ್ ಅವರು ಸಖತ್ ವೈಲೆಂಟ್ ಆಗಿದ್ದಾರೆ. ಇದೀಗ ಮನೆಯೊಳಗೆ ಬಿಗ್ ಬಾಸ್ ಬದಲು ವಿಲನ್ ಎಂಟ್ರಿ ನೀಡಿದ್ದು, ಎಲ್ಲರ ಆಟದ ಶೈಲಿಯೂ ಬದಲಾಗಿದೆ. ಅದರಲ್ಲೂ ಒಂದು ವಾರ ಸೈಲೆಂಟ್ ಆಗಿದ್ದ ರಜತ್ ಅವರು ಈಗ ಸಖತ್ ವೈಲೆಂಟ್ ಆಗಿದ್ದಾರೆ. ಡಿಸೆಂಬರ್ 9ರ ಸಂಚಿಕೆಯಲ್ಲಿ ಸಿಕ್ಕಾಪಟ್ಟೆ ಅಗ್ರೆಸ್ಸಿವ್ ಆಗಿ ರಜತ್ ಆಟ ಆಡುತ್ತಿರುವುದಕ್ಕೆ ಪ್ರೋಮೋಗಳೇ ಸಾಕ್ಷಿ.
ಅಶ್ವಿನಿ ಮತ್ತು ರಜತ್ ನಡುವೆ ಕಿತ್ತಾಟ
ಹೌದು, ಬಿಗ್ ಬಾಸ್ ಮನೆಯಲ್ಲಿ ಈಗ ಅಶ್ವಿನಿ ಗೌಡ ಮತ್ತು ರಜತ್ ಮಧ್ಯೆ ದೊಡ್ಡ ಜಗಳವಾಗಿದೆ. "ಧ್ರುವಂತ್ ಟಿ - ಗಾಂಚಲಿ ಎಂದಾಗಲೇ ಸುಮ್ಮನೆ ಇದ್ದ ಅಶ್ವಿನಿ ಗೌಡ ಅವರು, ರಘು ಸರ್ ಒಂದು ಮಾತು ಹೇಳಿದ ತಕ್ಷಣ, ಹಂಗೆ ಹೇಳಬಾರದು, ಹಿಂಗೆ ಹೇಳಬಾರದು ಅಂತ ನಿಂತ್ಕೊಂಡ್ರು. ಅಲ್ಲದೆ, ಇವರ ಜೊತೆಗೆ ನಾವು ಫೈಟ್ ಕೂಡ ಆಡೋಕೆ ಆಗಲ್ಲ. ಸೋ ಬೆಟರ್ ಇವರು ಮನೆಗೆ ಹೋಗೋದು ಉತ್ತಮ" ಎಂದು ಅಶ್ವಿನಿ ಗೌಡ ಮೇಲೆ ಬಾತಿನ ಬಾಣ ಬಿಟ್ಟಿದ್ದಾರೆ ರಜತ್. ಇದಕ್ಕೆ ಅಶ್ವಿನಿ ಗೌಡ ಕಡೆಯಿಂದಲೂ ಪ್ರತ್ಯುತ್ತರ ಸಿಕ್ಕಿದೆ.
BBK 12: ಅಶ್ವಿನಿ ಗೌಡ-ಜಾನ್ವಿ ಮಧ್ಯೆ ಕಿತ್ತಾಟ: ಬೇರೆ-ಬೇರೆಯಾದ ಜೋಡೆತ್ತುಗಳು
"ಹೇ ಕಚಡಾ" ಎಂದು ಬೈದ ಅಶ್ವಿನಿ ಗೌಡ
"ನಿಮ್ಮಷ್ಟು ಥರ್ಡ್ ರೇಟೆಡ್ ಭಾಷೆಯನ್ನು ಇಲ್ಲಿ ಇರೋರು ಯಾರೂ ಬಳಸಿಲ್ಲ. ನಾವು ಗಂಡಸರ ಜೊತೆಗೆ ಗುದ್ದಾಡ್ತಿವಿ ಅಂತೀರಿ. ನೀವು ಗಂಡಸಲ್ವಾ? ಕೇಳಬೇಕಿತ್ತು.." ಎಂದು ಅಶ್ವಿನಿ ಆವಾಜ್ ಹಾಕಿದ್ದಾರೆ. ಅದಕ್ಕೆ "ನಾವು ಹೊಡೆದಾಡಿದ್ರೆ ಗಂಡಸರ ಜೊತೆಗೆ ಹೊಡೆದಾಡೋದು" ಎಂದು ರಜತ್ ಮರುಉತ್ತರ ನೀಡಿದ್ದಾರೆ. ಬಳಿಕ ಅಶ್ವಿನಿ ಗೌಡ ಅವರನ್ನು ಸ್ವಿಮ್ಮಿಂಗ್ ಪೂಲ್‌ಗೆ ತಳ್ಳಿದ್ದಾರೆ. ನಂತರ ಅಶ್ವಿನಿ ಗೌಡ, "ಹೇ ಕಚಡಾ.." ಎಂದು ಅಬ್ಬರಿಸಿದ್ದಾರೆ. ಆಗ ರಜತ್, "ಹೇ ಕಚಡಾ.... ನೀನೇನು ನನಗೆ ಕಚಡಾ ಅಂತ ಹೇಳೋದು ಕಚಡಾ.." ಎಂದು ಕೌಂಟರ್ ಕೊಟ್ಟಿದ್ದಾರೆ. ಇವರಿಬ್ಬರನ್ನು ಸಮಾಧಾನ ಮಾಡಲು ಮನೆ ಮಂದಿಯೆಲ್ಲಾ ಭಾರಿ ಪ್ರಯತ್ನ ಮಾಡಿದ್ದಾರೆ.
ಬಿಗ್ ಬಾಸ್ ಕನ್ನಡ 12 ಪ್ರೋಮೋ
ಸೋಶಿಯಲ್ ಮೀಡಿಯಾ ಅಡ್ಮಿನ್ ಹೇಳಿದ್ದೇನು?
ಇನ್ನು, ಈ ಪ್ರೋಮೋವನ್ನು ಕಲರ್ಸ್ ಕನ್ನಡದ ಎಲ್ಲಾ ಸೋಶಿಯಲ್ ಮೀಡಿಯಾದ ಪೇಜ್‌ಗಳಲ್ಲೂ ಹಂಚಿಕೊಳ್ಳಲಾಗಿದೆ. ಆದರೆ ಈ ವಿಡಿಯೋಗೆ ಯಾವುದೇ ಕ್ಯಾಪ್ಷನ್ ನೀಡಿಲ್ಲ. ಬದಲಿಗೆ, "ಈ ವಿಡಿಯೋಗೆ ಕ್ಯಾಪ್ಷನ್ ಅಗತ್ಯ ಇಲ್ಲ" ಎಂದು ಅಡ್ಮಿನ್ ಹೇಳಿದ್ದಾರೆ. ಇದು ಕೂಡ ಬಹಳ ವಿಶೇಷ ಎನಿಸಿದೆ. ಅಂದರೆ, ಅಶ್ವಿನಿ ಗೌಡ ಮತ್ತು ರಜತ್ ಕಂಡು ಅಡ್ಮಿನ್‌ಗೂ ಕ್ಯಾಪ್ಷನ್ ಕೊಡಲು ಸಾಧ್ಯವಾಗಿಲ್ಲ ಎಂದು ನೆಟ್ಟಿಗರು ಕಾಮೆಂಟ್ ಹಾಕಿದ್ಧಾರೆ. ಅಂದಹಾಗೆ, ಇದೇ ಎಪಿಸೋಡ್‌ನಲ್ಲಿ ರಜತ್ ಮತ್ತು ಧ್ರುವಂತ್ ನಡುವೆಯೂ ಜೋರು ಜಗಳವಾಗಿದೆ.