BBK 12: ಅಶ್ವಿನಿ ಗೌಡ-ಜಾನ್ವಿ ಮಧ್ಯೆ ಕಿತ್ತಾಟ: ಬೇರೆ-ಬೇರೆಯಾದ ಜೋಡೆತ್ತುಗಳು
ತಮ್ಮ ಎದುರಾಳಿ ಸ್ಪರ್ಧಿ ಈ ಮನೆಯಲ್ಲಿ ಇರಲು ಏಕೆ ಯೋಗ್ಯರಲ್ಲ ಎಂದು ಸೂಕ್ತ ಕಾರಣ ನೀಡಿ ಹೇಳಬೇಕು ಎಂದು ಬಿಗ್ ಬಾಸ್ ಹೇಳಿದ್ದಾರೆ. ಈ ಸಂದರ್ಭ ಅಶ್ವಿನಿ ಗೌಡ ಅವರು ಜಾನ್ವಿ ಹೆಸರು ತೆಗೆದುಕೊಂಡಿದ್ದಾರೆ. ಜಾನ್ವಿ ಫ್ರೆಂಡ್ಶಿಪ್ನಿಂದ ನನಗೆ ಕಳಪೆ ಬಂದಿದೆ. ನನ್ನನ್ನ ಮುಂದೆ ಬಿಟ್ಟು ಹಿಂದೆಯಿಂದ ನೀವು ತಮಾಷೆ ನೋಡಿ ನನ್ನ ಬಿಗ್ ಬಾಸ್ ಮನೆಯಿಂದ ಹೊರಗೆ ಹಾಕಬೇಕು ಅಂತ ಕಾಯ್ತಾ ಇದ್ದೀರ ನೀವು ಎಂದಿದ್ದಾರೆ.
 
                                Jhanvi and Ashwini gowda -
 Vinay Bhat
                            
                                Oct 27, 2025 8:21 AM
                                
                                Vinay Bhat
                            
                                Oct 27, 2025 8:21 AM
                            ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಐದನೇ ವಾರಕ್ಕೆ ಕಾಲಿಟ್ಟಿದ್ದು, ಇದೀಗ ಅಸಲಿ ಆಟ ಶುರುವಾದಂತಿದೆ. ಕಿಚ್ಚ ಸುದೀಪ್ ವೀಕೆಂಡ್ನಲ್ಲಿ ಬಂದು ಹೋದ ನಂತರ ಸ್ಪರ್ಧಿಗಳು ಸಂಬಂಧವನ್ನು ಬಿಟ್ಟು ತಮ್ಮ ವೈಯಕ್ತಿಕ ಆಟಕ್ಕೆ ಒತ್ತುಕೊಟ್ಟಂತೆ ಕಾಣುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತಹ ಘಟನೆ ಇಂದು ದೊಡ್ಮನೆಯೊಳಗೆ ನಡೆಯಲಿದೆ. ಮೊದಲ ದಿನದಿಂದ ಬಿಗ್ ಬಾಸ್ ಮನೆಯಲ್ಲಿ ತುಂಬಾನೇ ಕ್ಲೋಸ್ ಇದ್ದ ಅಶ್ವಿನಿ ಗೌಡ ಹಾಗೂ ಜಾನ್ವಿ ಸ್ನೇಹದ ಮಧ್ಯೆ ಈಗ ಭಿರುಕು ಮೂಡಿದೆ. ಇದಕ್ಕೆ ಕಾರಣವಾಗಿದ್ದು ಬಿಗ್ ಬಾಸ್ ನೀಡಿದ ಒಂದು ಚಟುವಟಿಕೆ.
ತಮ್ಮ ಎದುರಾಳಿ ಸ್ಪರ್ಧಿ ಈ ಮನೆಯಲ್ಲಿ ಇರಲು ಏಕೆ ಯೋಗ್ಯರಲ್ಲ ಎಂದು ಸೂಕ್ತ ಕಾರಣ ನೀಡಿ ಹೇಳಬೇಕು ಎಂದು ಬಿಗ್ ಬಾಸ್ ಹೇಳಿದ್ದಾರೆ. ಈ ಸಂದರ್ಭ ಅಶ್ವಿನಿ ಗೌಡ ಅವರು ಜಾನ್ವಿ ಹೆಸರು ತೆಗೆದುಕೊಂಡಿದ್ದಾರೆ. ಜಾನ್ವಿ ಫ್ರೆಂಡ್ಶಿಪ್ನಿಂದ ನನಗೆ ಕಳಪೆ ಬಂದಿದೆ. ನನ್ನನ್ನ ಮುಂದೆ ಬಿಟ್ಟು ಹಿಂದೆಯಿಂದ ನೀವು ತಮಾಷೆ ನೋಡಿ ನನ್ನ ಬಿಗ್ ಬಾಸ್ ಮನೆಯಿಂದ ಹೊರಗೆ ಹಾಕಬೇಕು ಅಂತ ಕಾಯ್ತಾ ಇದ್ದೀರ ನೀವು.. ಫ್ರೆಂಡ್ಶಿಪ್ ಅಂತ ಹೇಳ್ಕೊಂಡು ನನಗೆ ಬಾವಿ ತೋಡ್ತಾ ಇದ್ದೀರಾ ಅಂತ ಗೊತ್ತಿರಲಿಲ್ಲ.. ಆ ತರದ ಒಂದು ಸ್ನೇಹಕ್ಕೆ ನಾವು ಬ್ರೇಕ್ ಕೋಡೋದು ಉತ್ತಮ ಎಂದು ನೇರವಾಗಿ ಹೇಳಿದ್ದಾರೆ.
ಇದರ ಮಧ್ಯೆ ಮಾತನಾಡಿದ ಜಾನ್ವಿ, ನಿಮ್ಮ ಆಟ ನೀವು ಆಡ್ತಾ ಇದ್ದೀರಾ.. ನನ್ನ ಆಟವನ್ನ ನಾನು ಆಟ ಆಡ್ತಾ ಇದ್ದೀನಿ.. ಕೆಲವರ ಆಟ ತುಂಬಾ ಫಾಸ್ಟ್ ಆಗಿ ಕಾಣಿಸಬಹುದು ಇನ್ನು ಕೆಲವರು ಸ್ಲೋ ಆಗಿ ಹೋಗಿ ಗುರಿ ತಲುಪಬಹುದು. ಅಶ್ವಿನಿ ಅವರು ನನ್ನ ಜೊತೆಗೆ ಇರೋದು ಕೂಡ ಒಂದು ಸ್ಟ್ರಾಟರ್ಜಿ ಎಂದು ಹೇಳಿದ್ದಾರೆ. ಒಟ್ಟಾರೆ ಬಿಗ್ ಬಾಸ್ ಮನೆ ಎಂತಾ ಸ್ನೇಹ-ಪ್ರೀತಿಯನ್ನು ಮುರಿಯುತ್ತೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ ಆಗಿದೆ. ಶೋ ಆರಂಭ ಆದಾಗಿನಿಂದ ಸದಾ ಕೀಟಲೆ ಮಾಡಿಕೊಂಡು, ಒಬ್ಬರಿಗೊಬ್ಬರು ಸ್ಟ್ಯಾಂಡ್ ತೆಗೆದುಕೊಳ್ಳುತ್ತಿದ್ದ ಸ್ನೇಹಿತರು ಈಗ ಸ್ಪರ್ಧಿಗಳಾಗಿ ತಮ್ಮ ಆಟವನ್ನು ಶುರುಮಾಡಿದಂತೆ ಕಾಣುತ್ತಿದೆ.
BBK 12: ರಾಶಿಕಾಗೆ ವಾರ್ನ್ ಮಾಡಿದ ಕಿಚ್ಚ: ಒಂದೇ ವಾರಕ್ಕೆ ಎಂಡ್ ಆಗುತ್ತ ಸೂರಜ್ ಜೊತೆಗಿನ ಲವ್?
