ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಮಾಳುಗೆ ಬೆಂಬಲ ನೀಡಿದ ರೀತಿ, ಆಟ ಆಡುವ ಶೈಲಿಗೆ ಟೀಕೆಗೆ ಗುರಿಯಾದ ರಕ್ಷಿತಾ!

Rakshitha Shetty: ರಕ್ಷಿತಾ ವಿಚಿತ್ರವಾಗಿ ಆಟ ಆಡಲು ಶುರು ಮಾಡಿದ್ದಾರೆ. ಮಾಳು ಅವರ ಪರ ಸ್ಟ್ಯಾಂಡ್‌ ತೆಗೆದುಕೊಂಡು ಆಡಿದ್ದಾರೆ. ರಕ್ಷಿತಾ ಅವರು ಅವರ ಆಟವನ್ನು ಮರೆತು ಬೇರೆಯವರ ಪರ ಆಟ ಆಡುತ್ತಿರುವ ಬಗ್ಗೆ ತೀವ್ರ ಅಸಮಾಧಾನ ಶುರು ಆಗಿದೆ. ರಕ್ಷಿತಾ ಅವರು ತಮ್ಮ ಆಟ ಬಿಟ್ಟು ಬೇರೆ ಅವರ ಪರ ವಹಿಸಿ ಮಾತಾಡಿಕೊಂಡೇ ಆಟ ಆಡುತ್ತಿದ್ದಾರೆ.

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ ಮನೆಯಲ್ಲಿ (Bigg Boss Kannada 12) ನಿನ್ನೆ ನಾಮಿನೇಷನ್‌ (Nomination) ಪ್ರಕ್ರಿಯೆ ನಡೆದಿದೆ. ಅದರಲ್ಲೂ ರಕ್ಷಿತಾ ಅವರು ನಿನ್ನೆ ನಡೆದುಕೊಂಡ ವರ್ತನೆಗೆ ವೀಕ್ಷಕರಿಂದ ಭಾರಿ ಅಸಮಾಧಾನ ವ್ಯಕ್ತವಾಗಿದೆ. ಈ ಹಿಂದೆ ರಘು (Raghu) ಅವರನ್ನು ನೇರವಾಗಿ ನಾಮಿನೇಟ್‌ ಮಾಡಿ, ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಆ ಬಳಿಕ ಕಿಚ್ಚ ಸುದೀಪ್‌ ಅವರು ಕ್ಲಾಸ್‌ ತೆಗೆದುಕೊಂಡಿದ್ದರು. ಬಳಿಕ ತಮ್ಮದೇ ರೀತಿಯಲ್ಲಿ ಆಟ ಆಡಿ, ಕಿಚ್ಚನ ಚಪ್ಪಾಳೆ ಪಡೆದುಕೊಂಡಿದ್ದರು. ಆದರೆ ಕಳೆದ ವಾರದಿಂದ ರಕ್ಷಿತಾ (Rakshitha Shetty) ಆಟ ಹಳಿ ತಪ್ಪಿದೆ. ಕಿಚ್ಚನ ಚಪ್ಪಾಳೆಯೇ ರಕ್ಷಿತಾ ಅವರ ಚೇಂಜಸ್‌ಗೆ ಕಾರಣ ಎಂಬುದು ನೆಟ್ಟಿಗರ ಅಭಿಪ್ರಾಯ.

ಮಾಳು ಪರ ನಿಂತ ರಕ್ಷಿತಾ

ರಕ್ಷಿತಾ ವಿಚಿತ್ರವಾಗಿ ಆಟ ಆಡಲು ಶುರು ಮಾಡಿದ್ದಾರೆ. ಮಾಳು ಅವರ ಪರ ಸ್ಟ್ಯಾಂಡ್‌ ತೆಗೆದುಕೊಂಡು ಆಡಿದ್ದಾರೆ. ರಕ್ಷಿತಾ ಅವರು ಅವರ ಆಟವನ್ನು ಮರೆತು ಬೇರೆಯವರ ಪರ ಆಟ ಆಡುತ್ತಿರುವ ಬಗ್ಗೆ ತೀವ್ರ ಅಸಮಾಧಾನ ಶುರು ಆಗಿದೆ. ರಕ್ಷಿತಾ ಅವರು ತಮ್ಮ ಆಟ ಬಿಟ್ಟು ಬೇರೆ ಅವರ ಪರ ವಹಿಸಿ ಮಾತಾಡಿಕೊಂಡೇ ಆಟ ಆಡುತ್ತಿದ್ದಾರೆ.

ಇದನ್ನೂ ಓದಿ: Bigg Boss Kannada 12: ಏಕಾಏಕಿ ಎದ್ದು ಕಿವಿ ಹಿಡಿದುಕೊಂಡು, ಸುದೀಪ್‌ ಬಳಿ ಕೈ ಮುಗಿದು ಸ್ಪರ್ಧಿಗಳು ಮನವಿ ಮಾಡಿದ್ದೇನು?

ಈ ವಾರ ಧನುಷ್‌ ಅವರಿಗೆ ಬಿಗ್‌ ಬಾಸ್‌ ಒಂದು ಟಾಸ್ಕ್‌ ನೀಡಿದ್ದರು. 1ರಿಂದ 11ರವರೆಗೆ ಸಂಖ್ಯೆ ನೀಡಿ ಪ್ರತಿ ಸ್ಪರ್ಧಿಯನ್ನು ಅವರವರ ಆಟಕ್ಕೆ ಅನುಸಾರವಾಗಿ ಒಂದು ಸಂಖ್ಯೆಯನ್ನು ಕ್ಯಾಪ್ಟನ್ ಧನುಷ್ ನೀಡಬೇಕಿತ್ತು. ಆದರೆ ಮಾಳು ಅವರಿಗೆ 11 ಸ್ಥಾನವನ್ನು ನೀಡಿದ್ದರು.

ಈ ಬಗ್ಗೆ ರಕ್ಷಿತಾ ಆಟ ಆದಮೇಲೆ ಪ್ರಶ್ನೆ ಇಟ್ಟರು, ಅದಕ್ಕೂ ಮೊದಲು ಗಿಲ್ಲಿ ಅವರು 2ನೇ ಸ್ಥಾನಕ್ಕೆ ಅರ್ಹರಲ್ಲ ಎಂದು ಕೂಗಾಡಿದರು. ತಾವು ಒಂದು ಅಥವಾ ಎರಡನೇ ಸ್ಥಾನ ಪಡೆಯಬೇಕು ಎಂದು ಆಲೋಚಿಸುವ ಬದಲು ಮಾಳುಗೆ 11ನೇ ಸ್ಥಾನ ನೀಡಿದ್ದು ಏಕೆ ಎಂದು ಪ್ರಶ್ನೆ ಮಾಡಲು ಆರಂಭಿಸಿದರು.

ಕಾವ್ಯ ಜೊತೆ ಕಿರಿಕ್‌

ಇನ್ನು ಈ ವಾರ ನಾಮಿನೇಟ್‌ ಮಾಡುವಾಗ, ಎಲ್ಲರಿಗೂ ಬೆನ್ನಿಗೆ ಬೆಂಡಿನ ಬಾಕ್ಸ್ ನೀಡಿದ್ದರು. ಇದಕ್ಕೆ ಚಾಕು ಚುಚ್ಚಬೇಕಿತ್ತು. ಯಾರ ಬಳಿ ಕಡಿಮೆ ಚಾಕು ಇರುತ್ತದೆಯೋ ಅವರು ನಾಮಿನೇಷನ್​ನಿಂದ ಬಚಾವ್ ಆಗುತ್ತಾರೆ.

ರಕ್ಷಿತಾ ಅವರು ತಮ್ಮ ಬೆನ್ನಿನ ಚಾಕುವನ್ನು ಬೇರೆಯವರಿಗೆ ಚುಚ್ಚುವ ಬದಲು ಮಾಳು ಅವರ ಬೆನ್ನಿನ ಚಾಕುವನ್ನು ತೆಗೆದು ಚುಚ್ಚೋಕೆ ಆರಂಭಿಸಿದರು. ಬಿಗ್ ಬಾಸ್​ನಲ್ಲಿ ತಮಗಾಗಿ ಹೋರಾಡಬೇಕು. ಆದರೆ, ಮಾಳುಗೋಸ್ಕರ ರಕ್ಷಿತಾ ಅನೇಕ ಸ್ಟ್ಯಾಂಡ್ ತೆಗೆದುಕೊಂಡರು. ಅಷ್ಟೇ ಅಲ್ಲ ಗಿಲ್ಲಿ ಹಾಗೂ ಕಾವ್ಯಾ ಅವರನ್ನು ರಕ್ಷಿತಾ ನಾಮಿನೇಟ್ ಮಾಡಿದ್ದಾರೆ. ಕಾವ್ಯ ಜೊತೆ ಅತಿಯಾಗಿ ಕೂಗಾಡಿದ್ದಾರೆ. ಕಾವ್ಯ ಮೇಲೆ ಹಲವು ಆರೋಪಗಳನ್ನೂ ಮಾಡಿದ್ದಾರೆ.

ಇದನ್ನೂ ಓದಿ: Bigg Boss Kannada 12: ಕಾವ್ಯಾ ಬೆನ್ನಿಗೆ ಚೂರಿ ಹಾಕಿದ ರಕ್ಷಿತಾ! ಇವರಲ್ಲಿ ಗಿಮಿಕ್ ಯಾರದ್ದು? ಸ್ಟ್ರಾಟಜಿ ಯಾರದ್ದು?

ಗಿಲ್ಲಿ ಕೂಡ ನಾಮಿನೇಟ್‌ ಮಾಡುವ ಸಮಯದಲ್ಲಿ, ರಕ್ಷಿತಾ ಅವರಿಗೆ ಮಾತಿನಲ್ಲಿ ತಿವಿದರು. ನೀನು ಬೇರೆ ಅವರನ್ನು ಗೆಲ್ಲಿಸಲು ಬಂದಿದ್ದೀಯಾನೀನು ಗೆಲ್ಲಲು ಬಂದಿದ್ದೀಯಾ ಅಂತ ನೇರವಾಗಿಯೇ ಕೇಳಿದ್ದಾರೆ. ಗಿಲ್ಲಿಯನ್ನ ರಘು ಕೂಡ ನಾಮಿನೇಟ್‌ ಮಾಡಿದ್ದಾರೆ. ಕಾವ್ಯ ಅವರನ್ನ ಅಶ್ವಿನಿ ನಾಮಿನೇಟ್‌ ಮಾಡಿದ್ದರು.

Yashaswi Devadiga

View all posts by this author