Bigg Boss Kannada 12: ಕಾವ್ಯಾ ಬೆನ್ನಿಗೆ ಚೂರಿ ಹಾಕಿದ ರಕ್ಷಿತಾ! ಇವರಲ್ಲಿ ಗಿಮಿಕ್ ಯಾರದ್ದು? ಸ್ಟ್ರಾಟಜಿ ಯಾರದ್ದು?
Kavya Shaiva: ಕಾವ್ಯ ಬೆನ್ನಿಗೆ ರಕ್ಷಿತಾ ಶೆಟ್ಟಿ ಚೂರಿ ಹಾಕಿದ್ದಾರೆ. ರಘು ಅವರು ಗಿಲ್ಲಿ ಬೆನ್ನಿಗೆ ಚೂರಿ ಹಾಕಿದ್ದಾರೆ. ಆ ಮೂಲಕ ನಾಮಿನೇಷನ್ಪ್ರ ಕ್ರಿಯೆ ನಡೆದಿದೆ. ಈ ನಡುವೆ ರಕ್ಷಿತಾ ಹಾಗೂ ಕಾವ್ಯ ನಡುವೆ ಗಲಾಟೆ ಜೋರಾಗಿದೆ. . ಬೆನ್ನಿಗೆ ಕಟ್ಟಿಕೊಂಡಿರೋ ವಸ್ತುವಿಗೆ ಚೂರಿ ಚುಚ್ಚುವ ವಿಚಾರದಲ್ಲಿ ಎಲ್ಲರೂ ಎಲ್ಲರಿಗೂ ಚುಚ್ಚಿದ್ದಾರೆ. ರಘು ಇಲ್ಲಿ ಅಶ್ವಿನಿ ಗೌಡ ಅವರಿಗೆ ಚುಚ್ಚುತ್ತಾರೆ. ಗಿಲ್ಲಿಗೂ ಹಲವರು ಚುಚ್ಚಿರೋದು ಇದೆ.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಶೋನಲ್ಲಿ ಸ್ಪರ್ಧಿಗಳ ನಡುವೆ ಪೈಪೋಟಿ ಶುರು ಆಗಿದೆ. ಕೆಲವೇ ವಾರಗಳಲ್ಲಿ ಫಿನಾಲೆ (Finale) ಹತ್ತಿರ ಆಗಲಿದೆ ಎನ್ನಲಾಗುತ್ತಿದೆ. ಡಿಸೆಂಬರ್ 1ರ ಸಂಚಿಕೆಯಲ್ಲಿ ಕಾವ್ಯ (Kavya Shaiva) ಬೆನ್ನಿಗೆ ರಕ್ಷಿತಾ ಶೆಟ್ಟಿ (Rakshitha Shetty) ಚೂರಿ ಹಾಕಿದ್ದಾರೆ. ರಘು ಅವರು ಗಿಲ್ಲಿ ಬೆನ್ನಿಗೆ ಚೂರಿ ಹಾಕಿದ್ದಾರೆ. ಆ ಮೂಲಕ ನಾಮಿನೇಷನ್ (Nomination) ಪ್ರಕ್ರಿಯೆ ನಡೆದಿದೆ. ಈ ನಡುವೆ ರಕ್ಷಿತಾ ಹಾಗೂ ಕಾವ್ಯ (rakshitha Kavya) ನಡುವೆ ಗಲಾಟೆ ಜೋರಾಗಿದೆ.
ಮೀಟರ್ ಇಲ್ವಾ?
ಈ ಮನೆಯಲ್ಲಿ ಇರಲು ಯೋಗ್ಯತೆ ಇಲ್ಲದ ಸದಸ್ಯರನ್ನು ಆರಿಸಿ ಚುಚ್ಚಬೇಕು ಎಂದು ಬಿಗ್ ಬಾಸ್ ಟಾಸ್ಕ್ ಕೊಟ್ಟಿದ್ದರು. ಯಾವಾಗ ನಾವು ನಾಮಿನೇಶನ್ ಮಾಡ್ತಿವಲ್ಲ ಅವರನ್ನ ಮೊದಲು ಹೊರಗೆ ಹಾಕಬೇಕು. ಆದರೆ ನನಗೆ ಒಂದೂ ಪರ್ಸೆಂಟ್ ಅನ್ನಿಸಿಲ್ಲ. ನೀವು ನನ್ನ ಕಾಂಪಿಟೇಟರ್ ಅಂತ ಕಾವ್ಯ ಬಗ್ಗೆ ರಕ್ಷಿತಾ ಹೇಳಿದ್ದರು. ಸ್ವಲ್ಪವೂ ಏಫರ್ಟ್ಸ್ ಇಲ್ಲ ಎಂದಿದ್ದಾರೆ. ಅದಕ್ಕೆ ಕಾವ್ಯ ಅವರು ನಿನ್ನ ಸ್ಟ್ರಾಟಜಿ, ನಿನ್ನ ಗಿಮಿಕ್ ನನ್ನತ್ರ ನಡೆಯಲ್ಲ. ನನ್ನ ಹತ್ರ ಮಾತಾಡೋಕೆ ಮೀಟರ್ ಇಲ್ವಾ? ಅಂತ ಅಬ್ಬರಿಸಿದ್ದಾರೆ.
ಇದನ್ನೂ ಓದಿ: Bigg Boss Kannada 12: ಏಕಾಏಕಿ ಎದ್ದು ಕಿವಿ ಹಿಡಿದುಕೊಂಡು, ಸುದೀಪ್ ಬಳಿ ಕೈ ಮುಗಿದು ಸ್ಪರ್ಧಿಗಳು ಮನವಿ ಮಾಡಿದ್ದೇನು?
ಈ ಒಂದು ಟಾಸ್ಕ್ ಮಜಾವಾಗಿಯೇ ಇದೆ. ಬೆನ್ನಿಗೆ ಕಟ್ಟಿಕೊಂಡಿರೋ ವಸ್ತುವಿಗೆ ಚೂರಿ ಚುಚ್ಚುವ ವಿಚಾರದಲ್ಲಿ ಎಲ್ಲರೂ ಎಲ್ಲರಿಗೂ ಚುಚ್ಚಿದ್ದಾರೆ. ರಘು ಇಲ್ಲಿ ಅಶ್ವಿನಿ ಗೌಡ ಅವರಿಗೆ ಚುಚ್ಚುತ್ತಾರೆ. ಗಿಲ್ಲಿಗೂ ಹಲವರು ಚುಚ್ಚಿರೋದು ಇದೆ.
ಬಿಗ್‌ಬಾಸ್ ಮನೆಯಲ್ಲಿರೋ ಇವರಿಬ್ಬರು ಡ್ರಾಮಾ ಮಾಡ್ತಿದ್ದಾರೆ. ಗಿಲ್ಲಿ ನಟ ಇಲ್ಲ ಅಂದ್ರೆ ಕಾವ್ಯಾ ಕಾಣಿಸಿಕೊಳ್ಳಲ್ಲ. ಅದೇ ರೀತಿ ಇತ್ತ ರಕ್ಷಿತಾ ಶೆಟ್ಟಿ ತುಂಬಾ ಓವರ್ ಆಕ್ಟಿಂಗ್ ಮಾಡುತ್ತಿದ್ದಾರೆ. ರಕ್ಷಿತಾ ಶೆಟ್ಟಿಯದ್ದು ಆಕ್ಟಿಂಗ್ ಅಂತ ಧ್ರುವಂತ್ ಹೇಳಿದ ಮಾತು ಸತ್ಯ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಕಲರ್ಸ್ ಕನ್ನಡ ವಿಡಿಯೋ
ಗಿಲ್ಲಿ ವಿರುದ್ಧ ರಘು, ರಕ್ಷಿತಾ ಕೆಂಡ
ಬೆಳಗ್ಗೆ ಪ್ರೋಮೋದಲ್ಲಿ ಗಿಲ್ಲಿ ವಿರುದ್ಧ ರಘು, ರಕ್ಷಿತಾ ಕೆಂಡ ಆಗಿದ್ದರು. ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಜಗಳ ತಾರಕಕ್ಕೇರಿದೆ. ವಂಶದ ಕುಡಿಯೇ ಗಿಲ್ಲಿ ವಿರುದ್ಧ ತಿರುಗಿ ಬಿದ್ದಿದೆ. ರಘು ಕೂಡ ಗಿಲ್ಲಿ ವಿರುದ್ಧವೇ ಕೂಗಾಡಿದ್ದಾರೆ. ಗಿಲ್ಲಿ ಕೂಡ ಈಗ ಅಬ್ಬರಿಸಿದ್ದಾರೆ. ಸದಸ್ಯರಿಗೆ 1ರಿಂದ 11 ರ್ಯಾಕಿಂಗ್ ನೀಡಬೇಕಿತ್ತು. ಧನುಷ್ ಅವರು ಎರಡನೇ ಸ್ಥಾನವನ್ನು ಗಿಲ್ಲಿಗೆ ನೀಡಿದರು. `ನಿನ್ನ ವಿಷಯಕ್ಕೆ ಬಂದಾಗ ನೀನು ಸ್ಟ್ಯಾಂಡ್ ತೆಗೆದುಕೊಳ್ತೀಯಾ ಅಂತ ಅನ್ನಿಸಿತು' ಅಂತ ಗಿಲ್ಲಿಗೆ ಹೇಳಿದ್ದಾರೆ. ಧನುಷ್ ಕೊಟ್ಟ ನಂಬರ್‌ಗೆ ಹಾಗೂ ಮಾತಿಗೆ ರಕ್ಷಿತಾ, ರಘು ಕೆಂಡ ಆದರು.
ಇದನ್ನೂ ಓದಿ: Bigg Boss Kannada 12: ನನ್ನನ್ನು ಹೊರಗೆ ಕಳುಹಿಸಿ ಎಂದು ಬಿಗ್ ಬಾಸ್‌ಗೆ ಮನವಿ ಮಾಡಿದ ಧ್ರುವಂತ್
`ಮನೆ ಕೆಲಸ ಆಗಲಿ ಏನೂ ನಿಭಾಯಿಸಲ್ಲ' ಅಂತ ಗಿಲ್ಲಿ ಬಗ್ಗೆ ರಕ್ಷಿತಾ ಕಾರಣ ಕೊಟ್ಟರು. `ಮನೆಯಲ್ಲಿ ಶುದ್ಧ ಸೋಮಾರಿ ಅವನೇ . ಆದರೆ ಎರಡನೇ ಸ್ಥಾನದಲ್ಲಿ ಇದ್ದಾರೆ' ಅವರು ಅಂತ ರಘು ಕಾರಣ ಕೊಟ್ಟರು. ಇದನ್ನು ಕೇಳಿ ಗಿಲ್ಲಿ ಕೆಂಡ ಆಗಿದ್ದಾರೆ.