ಕಳೆದ ವಾರ ಬಿಗ್ ಬಾಸ್ ಮನೆಯೊಳಗೆ ದೊಡ್ಡ ಟ್ವಿಸ್ಟ್ ಎದುರಾಗಿತ್ತು. ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಅವರನ್ನು ಎಲಿಮಿನೇಟ್ ಮಾಡಿ, ಹೊರಗೆ ಕಳುಹಿಸಲಾಗಿತ್ತು. ಆದರೆ ಉಳಿದ ಸದಸ್ಯರಿಗೆ ಗೊತ್ತಿಲ್ಲದಂತೆ ಅವರಿಬ್ಬರನ್ನು ಸೀಕ್ರೆಟ್ ರೂಮ್‌ಗೆ ಕಳುಹಿಸಿದ್ದರು ಬಿಗ್ ಬಾಸ್. ಬಹಳ ಸೀಸನ್‌ಗಳ ಬಳಿಕ ಈ ಟಾಸ್ಕ್ ಮಾಡಿಸಲಾಗಿತ್ತು. ಆದರೆ ಧ್ರುವಂತ್ ಜೊತೆಗೆ ಇರಲಾರದೇ, ವಾಪಸ್ ಬಿಗ್ ಬಾಸ್ ಮನೆಗೆ ಕಳುಹಿಸಿ ಎಂದು ಗೋಳಾಡಿದ್ದರು ರಕ್ಷಿತಾ. ಇದೀಗ ಅದು ನೇರವೇರಿದೆ. ಇಬ್ಬರು ಕೂಡ ಮತ್ತೆ ಮನೆಯೊಳಗೆ ಬಂದಿದ್ದಾರೆ. ಆದರೆ ಅದಕ್ಕೂ ಮುನ್ನ ಹೈಡ್ರಾಮಾ ನಡೆದಿದೆ.
ಧ್ರುವಂತ್ & ರಕ್ಷಿತಾ ಜೊತೆ ಕಿಚ್ಚನ ಮಾತು
ಶನಿವಾರದ ಪಂಚಾಯಿತಿಯಲ್ಲಿ ಮೊದಲು ಬಿಗ್ ಬಾಸ್ ಮನೆಯ ಸದಸ್ಯರೊಟ್ಟಿಗೆ ಮಾತುಕತೆ ನಡೆಸಿದ ಕಿಚ್ಚ ಸುದೀಪ್ ಅವರು ಬಳಿಕ ಸೀಕ್ರೆಟ್ ರೂಮ್‌ನಲ್ಲಿದ್ದ ಧ್ರುವಂತ್ & ರಕ್ಷಿತಾ ಜೊತೆ ಮಾತುಕತೆ ನಡೆಸಿದರು. ಆಗ ಒಂದೇ ಸಮನೇ ಗೋಳು ಹೇಳಿಕೊಂಡ ರಕ್ಷಿತಾ, ಮೊದಲು ನನ್ನನ್ನು ಇಲ್ಲಿಂದ ಬಿಗ್ ಬಾಸ್ ಮನೆಗೆ ಕಳುಹಿಸಿ ಎಂದು ಹಠ ಹಿಡಿದರು. ಅದಕ್ಕೇ ಕಾರಣ, ಧ್ರುವಂತ್ ಜೊತೆ ಅವರಿಗೆ ಇರುವುದು ಕಷ್ಟವಾಗುತ್ತಿತ್ತು. ಕೊನೆಗೆ ಧ್ರುವಂತ್ ಅವರನ್ನು ಕನ್ವಿನ್ಸ್ ಮಾಡಿದರೆ, ಕಳುಹಿಸುತ್ತೇವೆ ಎಂದು ಸುದೀಪ್ ಹೇಳಿದರು. ರಕ್ಷಿತಾ ಎಷ್ಟೇ ಪ್ರಯತ್ನಪಟ್ಟರು ಧ್ರುವಂತ್ ಒಪ್ಪಿಕೊಳ್ಳಲೇ ಇಲ್ಲ. "ನಾನು ಸೀಕ್ರೆಟ್ ರೂಮ್‌ನಲ್ಲಿ ಇರುತ್ತೇನೆ" ಎಂದರು.
Bigg Boss Kannada 12: ‘ಎಷ್ಟ್ರಲ್ಲಿ ಇರ್ಬೇಕೊ ಅಷ್ಟ್ರಲ್ಲಿ ಇರು’: ಸುದೀಪ್ ಮುಂದೆಯೇ 'ಧ್ರುವಂತ್-ರಜತ್' ವಾದ
ಕೊನೆಗೆ ಎಮೋಷನಲ್ ಆಗಿ ಮನವಿ ಮಾಡಿದ ರಕ್ಷಿತಾ, ಕೊನೆಗೆ ಧಮಕಿ ಕೂಡ ಹಾಕಿದರು. ಆದರೂ ಧ್ರುವಂತ್ ಕರಗಲಿಲ್ಲ. ಆಮೇಲೆ ಸುದೀಪ್ ಅವರೇ ಒಂದು ವಾರದ ನಿಮ್ಮ ಸೀಕ್ರೆಟ್ ರೂಮ್‌ನ ಜರ್ನಿ ಮುಕ್ತಾಯವಾಗಿದೆ ಎಂದು ಹೇಳುವ ಮೂಲಕ ಒಂದು ಟ್ವಿಸ್ಟ್ ನೀಡಿದರು. ನೀವಿಬ್ಬರು ಮನೆಗೆ ವಾಪಸ್ ಆದರೂ ಹೋಗಬಹುದು ಅಥವಾ ಎಲಿಮಿನೇಟ್ ಕೂಡ ಆಗಬಹುದು ಎಂದು ಸುದೀಪ್ ಶಾಕ್ ನೀಡಿದರು. ಅಂತಿಮವಾಗಿ ಅವರನ್ನು ಮನೆಯೊಳಗೆ ವಾಪಸ್ ಕಳುಹಿಸಲಾಯಿತು,
ಸೀಕ್ರೆಟ್ ರೂಮ್ ಬಗ್ಗೆ ಸುದೀಪ್ ಮಾತುಕತೆ
ಸದಸ್ಯರಿಗೆ ದೊಡ್ಡ ಸರ್ಪ್ರೈಸ್
ಧ್ರುವಂತ್ & ರಕ್ಷಿತಾ ಅವರನ್ನು ಸರಳವಾಗಿಯೇನು ಮನೆಯೊಳಗೆ ಕಳುಹಿಸಲಿಲ್ಲ. ಅಲ್ಲಿಯೂ ಒಂದು ಟ್ವಿಸ್ಟ್ ನೀಡಲಾಗಿತ್ತು. ನಾಮಿನೇಟ್ ಆದವರ ಫೋಟೋಗಳನ್ನು ಅಂಟಿಸಿದ ದೊಡ್ಡ ಬಾಕ್ಸ್ ಗಳನ್ನು ಗಾರ್ಡನ್ ಏರಿಯಾದಲ್ಲಿ ಇರಿಸಲಾಗಿತ್ತು. ಎಲ್ಲಾ ಸದಸ್ಯರನ್ನು ತಮ್ಮ ತಮ್ಮ ಫೋಟೋಗಳಿರುವ ಬಾಕ್ಸ್ ಹಿಂದೆ ನಿಲ್ಲುವಂತೆ ಸುದೀಪ್ ಹೇಳಿದರು. ಬಾಕ್ಸ್ ತೆರೆಸುವ ಮೂಲಕ ಒಂದು ಚಿಕ್ಕ ಚಟುವಟಿಕೆಯನ್ನು ಕೂಡ ಮಾಡಲಾಯಿತು. ಕೊನೆಗೆ ಅಶ್ವಿನಿ ಮತ್ತು ಸ್ಪಂದನಾ ಅವರನ್ನು ಬಾಕ್ಸ್ ಓಪನ್ ಮಾಡಿದಾಗ, ಅದರಲ್ಲಿ ಧ್ರುವಂತ್ ಮತ್ತು ರಕ್ಷಿತಾ ಎದ್ದು ಹೊರಗೆ ಬಂದರು. ಆ ಕ್ಷಣ ಇಡೀ ಮನೆಗೆ ಶಾಕ್ ಎನಿಸಿತು. ಎಲ್ಲರೂ ಜೋರಾಗಿ ಕೂಗಾಡಿದರು. ಆದರೆ ರಘು, ಗಿಲ್ಲಿ ಇದನ್ನು ಮೊದಲೇ ಊಹಿಸಿದ್ದರು ಎಂಬುದನ್ನು ನಾವಿಲ್ಲಿ ಗಮನಿಸಬೇಕು.
Bigg Boss Kannada 12: ತಾನೊಂದು ಬಗೆದರೆ ದೈವವೊಂದು ಬಗೆದಂತೆ! ಟ್ರೋಲ್ ಆದ ರಕ್ಷಿತಾ; ಧ್ರುವಂತ್‌ಗೆ ಮೆಚ್ಚುಗೆ ಏಕೆ?
ಇನ್ನು, ವಾರಪೂರ್ತಿ ನಡೆದ ಟಾಸ್ಕ್‌ಗಳಲ್ಲಿ ಧ್ರುವಂತ್ ಮತ್ತು ರಕ್ಷಿತಾ ಅವರ ಕಾಣದ ಕೈ ಇತ್ತು ಎಂಬ ವಿಚಾರವನ್ನು ಕೂಡ ಸುದೀಪ್ ಬಯಲು ಮಾಡಿದರು. ವಿಶೇಷವೆಂದರೆ, ಈ ವಾರ ಇಬ್ಬರು ಸ್ಪರ್ಧಿಗಳು ಮನೆಯೊಳಗೆ ಎಂಟ್ರಿ ನೀಡಿದ್ದಾರೆ. ಆದರೆ ಈ ವಾರ ಇಬ್ಬರು ಹೊರಗೆ ಹೋಗುವುದು ಖಚಿತ ಎಂದು ಸುದೀಪ್ ಹೇಳಿದ್ದಾರೆ. ಆದರೆ ವೋಟಿಂಗ್ ಲೈನ್ಸ್ ಓಪನ್ ಆಗದೇ ಇರುವುದರಿಂದ ರಜತ್ ಮತ್ತು ಚೈತ್ರಾ ಕುಂದಾಪುರ ಅವರನ್ನೇ ಹೊರಗೆ ಕರೆಸಿಕೊಳ್ಳಬಹುದು ಎಂಬ ಮಾಹಿತಿ ಇದೆ.