Bigg Boss Kannada 12: ‘ಎಷ್ಟ್ರಲ್ಲಿ ಇರ್ಬೇಕೊ ಅಷ್ಟ್ರಲ್ಲಿ ಇರು’: ಸುದೀಪ್ ಮುಂದೆಯೇ 'ಧ್ರುವಂತ್-ರಜತ್' ವಾದ
Dhruvanth: ಕಿಚ್ಚನ ಪಂಚಾಯಿತಿಯಲ್ಲಿ ಇಂದು ಹಲವಾರು ವಿಚಾರಗಳು ಚರ್ಚೆ ಆಗಲಿದೆ. ಒಂದು ಜಂಟಿ ಆದವರು ಸಪರೇಟ್ ಆಗಿದ್ದಾರೆ. ಇನ್ನೂ ಕೆಲವರು ನಾಮಿನೇಟ್ ಮಾಡುವಾಗ ಸರಿಯದ ಸೂಕ್ತ ಕಾರಣ ಕೊಟ್ಟಿಲ್ಲ. ಹಾಗೇ ಧ್ರುವಂತ್ ವಿಚಾರವಾಗಿಯೂ ಚರ್ಚೆ ಆಗಿದೆ. ಹಿಂದಿನ ವಾರ ತನ್ನನ್ನು ಮನೆಯಿಂದ ಆಚೆ ಕಳುಹಿಸಿ ಎಂದು ಧ್ರುವಂತ್ ಬಿಗ್ ಬಾಸ್‌ಗೆ ಮನವಿ ಮಾಡಿದ್ದರು. ಇದು ಚರ್ಚೆ ಆಗುವ ವೇಳೆಯಲ್ಲಿ ರಜತ್ ಹಾಗೂ ಧ್ರುವಂತ್ ಸುದೀಪ್ ಮುಂದೆ ಕಿರುಚಾಡಿದ್ದಾರೆ.
ಬಿಗ್ ಬಾಸ್ ಕನ್ನಡ -
ಕಿಚ್ಚನ ಪಂಚಾಯಿತಿಯಲ್ಲಿ (Kichcha Sudeep) ಇಂದು ಹಲವಾರು ವಿಚಾರಗಳು ಚರ್ಚೆ ಆಗಲಿದೆ. ಒಂದು ಜಂಟಿ ಆದವರು ಸಪರೇಟ್ ಆಗಿದ್ದಾರೆ. ಇನ್ನೂ ಕೆಲವರು ನಾಮಿನೇಟ್ ಮಾಡುವಾಗ ಸರಿಯದ ಸೂಕ್ತ ಕಾರಣ ಕೊಟ್ಟಿಲ್ಲ. ಹಾಗೇ ಧ್ರುವಂತ್ (Dhruvanth) ವಿಚಾರವಾಗಿಯೂ ಚರ್ಚೆ ಆಗಿದೆ. ಹಿಂದಿನ ವಾರ ತನ್ನನ್ನು ಮನೆಯಿಂದ ಆಚೆ ಕಳುಹಿಸಿ ಎಂದು ಧ್ರುವಂತ್ ಬಿಗ್ ಬಾಸ್‌ಗೆ ಮನವಿ ಮಾಡಿದ್ದರು. ಇದು ಚರ್ಚೆ ಆಗುವ ವೇಳೆಯಲ್ಲಿ ರಜತ್ (Rajath) ಹಾಗೂ ಧ್ರುವಂತ್ ಸುದೀಪ್ ಮುಂದೆ ಕಿರುಚಾಡಿದ್ದಾರೆ.
ವೀಕ್ಷಕರೇ ಸ್ಪರ್ಧಿಗಳಿಗೆ ಪತ್ರ ಬರೆದಿದ್ದಾರೆ. ಅದನ್ನ ಕಿಚ್ಚ ಸುದೀಪ್ ಅವರ ಎಲ್ಲರ ಮುಂದೆಯೇ ಓದಿಸಿದರು. ಧ್ರುವಂತ್‌ಗೆ ಒಬ್ಬರು ಪತ್ರ ಬರೆದಿದ್ದು ಹೀಗೆ.
ಧ್ರುವಂತ್ ಉತ್ತರ
ಧ್ರುವಂತ್ ಅವರೇ ಮನೆ ಬಿಟ್ಟು ಹೋಗುವಂತದ್ದು ಏನಾಯ್ತು? ಅಂತ ವೀಕ್ಷರೊಬ್ಬರು ಬರೆದಿದ್ದರು. ಅದಕ್ಕೆ ಧ್ರುವಂತ್ ಉತ್ತರ ನೀಡಿ, ʻನಾವು ಕೆಲವೊಂದು ಬ್ಲೇಮ್ಸ್‌ಗಳನ್ನ ನಿರಂತರವಾಗಿ ತೆಗೆದುಕೊಳ್ಳಬೇಕಾಯ್ತು. ಡ್ಯಾಮೇಜ್ ಕೂಡ ಬೇಕಾ ಅಂತ ಅನ್ನಿಸಿತ್ತುʼ ಎಂದು ಹೇಳಿದ್ದಾರೆ. ಅದಕ್ಕೆ ರಜತ್ ಇದ್ದವರು,ʻ ಡ್ಯಾಮೇಜ್ ಮಾಡಿಕೊಳ್ಳುತ್ತಿರುವುದೇ ಧ್ರುವಂತ್. ಅಸಭ್ಯವಾಗಿ ಮಾತನಾಡೋದು, ಅಸಭ್ಯವಾಗಿ ನಡೆದುಕೊಳ್ಳೋದುʼ ಎಂದರು.
ಇದು ಧ್ರುವಂತ್‌ಗೆ ಕೋಪ ತರಿಸಿದೆ. ʻಈಗ ನಾನು ಮಾತಾಡೋದು ತಡ್ಕೋʼ ಅಂತ ಕಿಚ್ಚನ ಮುಂದೆಯೇ ಧ್ರುವಂತ್‌ಗೆ ಹೇಳಿದ್ದಾರೆ. ಧ್ರುವಂತ್ ಇದ್ದವರು, ʻನೀನೇ ತಡ್ಕೋ, ಎಷ್ಟರಲ್ಲಿ ಇರಬೇಕು. ಅಷ್ಟರಲ್ಲಿ ಇರುʼ ಅಂತ ಧ್ರುವಂತ್ ಅವಾಜ್ ಹಾಕಿದ್ದಾರೆ.
ಕಲರ್ಸ್ ಕನ್ನಡ ಪ್ರೋಮೋ
ಈ ವಾರ ಜಂಟಿ ಕಥೆ ಬಗ್ಗೆ ಕಿಚ್ಚ ಸುದೀಪ್ ಪಂಚಾಯ್ತಿ ನಡೆಸಲಿದ್ದಾರೆ. ಈ ವಾರ ಆಗಿರುವಂತಹ ಜಂಟಿಗಳ ವಾರ್‌ನಲ್ಲಿ ಒಂದಾಗಲ್ಲ ಅಂದುಕೊಂಡವರು ಒಟ್ಟಾಗ್ತಾರೆ. ಬೇರೆ ಆಗಲ್ಲ ಅಂದುಕೊಂಡವರು ಬೇರೆ ಆಗ್ತಾರೆ. ಒಂದಾಗಿದ್ದವರು ದೂರವಾದ್ರಾ? ದೂರ ಇದ್ದವರು ಒಂದಾದ್ರಾ? ಅನ್ನೋದೇ ಈ ವಾರದ ಪಂಚಾಯ್ತಿ.
ಈ ವಾರ ಒಟ್ಟು 9 ಜನರ ಹೆಸರನ್ನು ನಾಮಿನೇಟ್ ಮಾಡಲಾಗಿದೆ. ಇನ್ನೇನು ಕೆಲವೇ ವಾರಗಳಲ್ಲಿ ಫಿನಾಲೆ ಹತ್ತಿರ ಆಗಲಿರುವುದರಿಂದ ಎಲ್ಲ ಸ್ಪರ್ಧಿಗಳ ನಡುವೆ ಪೈಪೋಟಿ ಹೆಚ್ಚಾಗಿದೆ.ಧ್ರುವಂತ್, ಸೂರಜ್ ಸಿಂಗ್, ರಾಶಿಕಾ ಶೆಟ್ಟಿ, ಮಾಳು ನಿಪನಾಳ, ಕಾವ್ಯಾ ಶೈವ, ಅಭಿಷೇಕ್, ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿ ಅವರು ನಾಮಿನೇಟ್ ಆಗಿದ್ದಾರೆ.
ಅಶ್ವಿನಿ ಗೌಡ ಅವರು ಈಗ ಸೈಲೆಂಟ್ ಆಗಿದ್ದಾರೆ. ಆ ಕಾರಣದಿಂದಲೇ ನಾಮಿನೇಷನ್ನಿಂದ ಪಾರಾಗಿದ್ದಾರೆ. ರಘು ಕೂಡ ನಾಮಿನೇಶನ್‌ನಿಂದ ಪಾರಾಗಿದ್ದಾರೆ.