ಬಿಗ್ ಬಾಸ್ (Bigg Boss Kannada 12) ಮನೆಯಲ್ಲಿ ರಕ್ಷಿತಾ ಶೆಟ್ಟಿ (Rakshitha shetty) ಹಾಗೂ ಧ್ರುವಂತ್ (Dhruvanth) ಸೀಕ್ರೇಟ್ ರೂಂನಲ್ಲಿ ಇದ್ದಾರೆ. ಆದರೆ ಧ್ರುವಂತ್ ಕೊಡುವ ಕಾಟಕ್ಕೆ ಹೈರಾಣ್ ಆಗಿದ್ದಾರೆ ರಕ್ಷಿತಾ. ಧ್ರುವಂತ್ ಕೇಳಿದ ಒಂದು ಸಿಂಪಲ್ ಪ್ರಶ್ನೆಗೆ ರಕ್ಷಿತಾ ಶೆಟ್ಟಿ ಓವರ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ. ಸಣ್ಣ ಪ್ರಶ್ನೆ ಕೂಡ ರಕ್ಷಿತಾಗೆ ಅರ್ಥ ಆಗಿಲ್ಲ ಎಂದು ಧ್ರುವಂತ್ ವ್ಯಂಗ್ಯವಾಡಿದ್ದಾರೆ.
ಧ್ರುವಂತ್‌ಗೆ ರಕ್ಷಿತಾಗೂ ಜಗಳ!
ಆಕಸ್ಮಾತ್ ನೀವು ಸೀಕ್ರೆಟ್ ರೂಂನಲ್ಲಿ ಇದ್ದು ನಾನು ಅಲ್ಲಿ ಇದಿದ್ದರೆ ಏನು ಅನ್ನಿಸ್ತಾ ಇತ್ತು? ಅಂತ ರಕ್ಷಿತಾಗೆ ಧ್ರುವಂತ್ ಕೇಳಿದ್ದಾರೆ. ಅದಕ್ಕೆ ರಕ್ಷಿತಾ ಏನೋ ಅರ್ಥ ಮಾಡಿಕೊಂಡು, ಅಲ್ಲಿ ಇಲ್ಲ ಅಂತ ನೀವು ಯಾಕೆ ಕನ್ಸಿಡರ್ ಮಾಡಲ್ಲ ಅಂತ ಕೇಳಿದ್ದಾರೆ. ನಾನು ಕನಸಲ್ಲಿ ಕೂಡ ಯೋಚನೆ ಮಾಡಲಿಕ್ಕೆ ಇಲ್ಲ ಎಂದಿದ್ದಾರೆ. ಅದಕ್ಕೆ ಧ್ರುವಂತ್ ಅವರು, ಈ ಪ್ರಾಸೆಸ್‌ನಲ್ಲಿ ನೀನು ಈವಾಗ ಎಲ್ಲಿ ಇದ್ದೀಯಾ ಅಂತ ಕೇಳಿದ್ದಾರೆ.
ಇದನ್ನೂ ಓದಿ: Bigg Boss Kannada 12: ಧ್ರುವಂತ್‌ಗೆ ಆಟ, ರಕ್ಷಿತಾಗೆ ಪ್ರಾಣ ಸಂಕಟ; ಸೀಕ್ರೆಟ್ ರೂಮ್‌ನಲ್ಲಿ ಪುಟ್ಟಿ ನಡುಕ!
ಧ್ರುವಂತ್ ಅವರು “ಈಗ ಎಲ್ಲಿದ್ದೀಯಾ? ನಮ್ಮನ್ನು ಬಿಟ್ಟು ಪ್ರೊಸೆಸ್ ನಡೆಯುತ್ತಿದೆ. ತಲೆಯಲ್ಲಿ ಕಾಲೇಜಿನಲ್ಲಿ ಓದಿರೋದು ಯಾವುದು ಇಲ್ಲವಾ? ಎಂದು ಕೇಳಿದ್ದೀರಾ. ಹಾಗಾದ್ರೆ ನೀವು ಏಕೆ ಕೇಳ್ತಾ ಇದ್ದೀರಾ? ಯಾರು ಬೆಸ್ಟ್ ಅಂತ? ಕೇಳಿದ್ದಾರೆ. ಅದಕ್ಕೆ ಧ್ರುವಂತ್‌ಗೆ ಪಿತ್ತ ನೆತ್ತಿಗೇರಿದೆ. ನಿಂಗೆ ಜನರಲ್ ಆಗಿ ಕೇಳಿದ್ದು, ಆಟ ಶುರುವಾಗಿ ಫೈನಲ್ ತೀರ್ಪು ಕೇಳಿದ್ದಿಲ್ಲ” ಎಂದಿದ್ದಾರೆ.
ಧ್ರುವಂತ್ ಸಹಜವಾಗಿ ಪ್ರಶ್ನೆ ಮಾಡಿದ್ದು, ರಕ್ಷಿತಾ ಅವರು ಉರಿದುರಿದು ಮಾತನಾಡಿದ್ದಾರೆ. ಈ ಬಗ್ಗೆ ವೀಕ್ಷಕರೊಬ್ಬರು, “ಧ್ರುವಂತ್ ಮತ್ತು ರಕ್ಷಿತಾ...! ಅವನು ಮೃದುವಾಗಿ ಒಂದು ಸರಳ ಪ್ರಶ್ನೆ ಕೇಳಿದ್ದು. ಇವಳು ಉಲ್ಟಾ ಏನೇನೋ ಹೇಳ್ತಾ ಇದ್ದಾಳೆ. ಒಳ್ಳೇ ತಮಾಷೆ. ಅಂತ ಕಮೆಂಟ್ ಮಾಡಿದ್ದಾರೆ.
ಮನೆಮಂದಿ ಧ್ರುವಂತ್ ಹಾಗೂ ರಕ್ಷಿತಾ ಅವರು ಔಟ್ ಆಗಿದ್ದಾರೆ ಎಂದು ಭಾವಿಸಿದ್ದಾರೆ. ಹೀಗಾಗಿ ಅವರೆಲ್ಲರೂ ಹಿಂದೆ ಮಾತನಾಡಿರೋದು ಧ್ರುವಂತ್ ಹಾಗೂ ರಕ್ಷಿತಾ ಮುಂದೆ ವಿಡಿಯೋ ಪ್ಲೇ ಆಗಿದೆ. ಮನೆಯ ಒಳಗೆ ಚೈತ್ರಾ ಅವರು ರಾಶಿಕಾ ಬಳಿ, ರಕ್ಷಿತಾದು ಒಂದೇ ಸಮಸ್ಯೆ ಅಂದ್ರೆ ತುಂಬಾ ಕನ್‌ಫ್ಯೂಸ್ ಆಗಿರ್ತಾ ಇದ್ಲು ಎಂದಿದ್ದಾರೆ.
ಇನ್ನು ರಜತ್, ರಕ್ಷಿತಾ ಮನೆಯಿಂದ ಹೊರಗೆ ಹೋಗುವಾಗ ಪ್ರತಿಯೊಬ್ಬರ ಕಣ್ಣಲ್ಲಿ ನೀರು ಇತ್ತು. ಧ್ರುವಂತ್‌ಗೆ ಯಾರು ಒಬ್ಬರು ಮಾತನಾಡಿಸಲಿಲ್ಲ ಎಂದಿದ್ದಾರೆ. ಈ ವೇಳೆ ರಕ್ಷಿತಾ, ಧ್ರುವಂತ್‌ಗೆ ನನ್ನ ಜನ ನನ್ನನ್ನು ಬಿಟ್ಟುಕೊಡಲಿಲ್ಲ ಎಂದಿದ್ದಾರೆ.
ಇದನ್ನೂ ಓದಿ: Bigg Boss Kannada 12: ಧ್ರುವಂತ್‌ಗೆ ಆಟ, ರಕ್ಷಿತಾಗೆ ಪ್ರಾಣ ಸಂಕಟ; ಸೀಕ್ರೆಟ್ ರೂಮ್‌ನಲ್ಲಿ ಪುಟ್ಟಿ ನಡುಕ!
ಮನೆಮಂದಿ ರಕ್ಷಿತಾ ಬಗ್ಗೆ ಒಳ್ಳೆಯ ಅಭಿಪ್ರಾಯ ಹೇಳಿದ್ದಕ್ಕೆ ಏನೋ, ಧ್ರುವಂತ್ ವ್ಯಂಗ್ಯ ಮಾಡಲು ಶುರು ಮಾಡಿದರು. ನಿನ್ನಂಥವರೇ, ನಿನ್ನ ಇಡೀ ಮನೆಯಲ್ಲಿ ಡ್ರಾಮಗಳನ್ನು ನೋಡಿಕೊಂಡೇ ಬಂದಿದ್ದೇನೆ ಎಂದಿದ್ದಾರೆ. ಧ್ರುವಂತ್ ಕೊಡೋ ಕಾಟಕ್ಕೆ, ಅಯ್ಯೋ ದೇವರೇ ಒಂದೇ ರೂಮಲ್ಲಿ ನಿಮ್ಮ ಜೊತೆ ಹೇಗೆ ಇರೋದು! ಅಂತ ಫುಲ್ ಟೆನ್ಷನ್ ಮಾಡಿಕೊಂಡಿದ್ದಾರೆ.