ಜೋಡಿ ಸದಸ್ಯರನ್ನು ಆರಿಸಲು ಬಿಗ್ ಬಾಸ್ (Bigg Boss Kannada 12) ಒಂದು ಟಾಸ್ಕ್ ನೀಡಿದ್ದರು. ಈ ಬಾರಿ ಸ್ಪರ್ಧಿಗಳೇ ತಮ್ಮ ಜೊತೆಗಾರರನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು. ಧ್ರುಂವತ್ (Dhruvanth) ಅವರನ್ನು ಯಾರೂ ಆಯ್ಕೆ ಮಾಡಿರಲಿಲ್ಲ. ಕಾವ್ಯಾ ಮತ್ತು ಗಿಲ್ಲಿ ಮತ್ತೆ ಒಂದಾಗಿದ್ದಾರೆ. ರಾಶಿಕಾ ಸಹಜವಾಗಿಯೇ ಸೂರಜ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ವಾರ ಮತ್ತೆ ಜಂಟಿಯಾಗಿಯೇ ಆಟ ಆಡಲಿದ್ದಾರೆ ಸ್ಪರ್ಧಿಗಳು. ಕಾವ್ಯ - ಗಿಲ್ಲಿನ (Kavya and Gilli) ಸೋಲಿಸಬೇಕು ಅಂತ ರಾಶಿಕಾ (Rashika Shetty) ಪಣ ತೊಟ್ಟಿದ್ದಾರೆ. ಇದು ಸಾಧ್ಯವಾ ಅಂತ ಕಾದುನೋಡಬೇಕಿದೆ.
ಕಾವ್ಯ ಗಿಲ್ಲಿ ಸೋಲಿಸಲು ಪಣ ತೊಟ್ಟ ರಾಶಿಕಾ
ರಾಶಿಕಾ ಅವರಂತೂ ಕಾವ್ಯಾ ಮತ್ತು ಗಿಲ್ಲಿಯನ್ನು ಸೋಲಿಸಿ ಟಾಸ್ಕ್ನಿಂದ ಹೊರಗೆ ಹಾಕುವ ನಿರ್ಧಾರ ಮಾಡಿದ್ದು, ಸೂರಜ್ ಜೊತೆಗೆ ಈ ಬಗ್ಗೆ ಚರ್ಚೆ ಮಾಡಿದ್ದಾರೆ. ʻಕಾವ್ಯ ಕೂಡ ಬೇರೆ ಅವರನ್ನು ಕಂಪೇರ್ ಮಾಡಿದರೆ, ಗಿಲ್ಲಿಗೆ ನಾನೇ ಬೆಸ್ಟ್ ಅಂತ ಅನ್ನಿಸುತ್ತೆʼ ಎಂದಿದ್ದಾರೆ.
ಕಲರ್ಸ್ ಕನ್ನಡ ಪ್ರೋಮೋ
ಅತ್ತ ರಾಶಿಕಾ ಕೂಡ ʻಸೂರಜ್ ಅವರು ನನ್ನನ್ನು ಸೆಲೆಕ್ಟ್ ಮಾಡುತ್ತಾರೆ ಅನ್ನೋದು ಗೊತ್ತಿತ್ತು ಎಂದಿದ್ದಾರೆ. ಒಟ್ಟಾರೆಯಾಗಿ ಈ ಜೋಡಿಗಳಲ್ಲಿ ಗಿಲ್ಲಿ ಮತ್ತು ಕಾವ್ಯ ವಿನ್ ಆಗಬೇಕುʼ ಅಂತ ಕಮೆಂಟ್ ಮಾಡ್ತಿದ್ದಾರೆ ವೀಕ್ಷಕರು.
ರಾಶಿಕಾ ಹಾಗೂ ಗಿಲ್ಲಿ ಮಧ್ಯೆ ಮಾತಿನ ಚಕಮಕಿ
ಬೆಳಗ್ಗೆಯ ಪ್ರೋಮೊದಲ್ಲಿ ನೋಡುವಾಗ ರಾಶಿಕಾ ಹಾಗೂ ಗಿಲ್ಲಿ ಮಧ್ಯೆ ಮಾತಿನ ಚಕಮಕಿ ನಡೆದಿದೆ. ರಾಶಿಕಾ ಕೂಡ ಗಿಲ್ಲಿ ವಿರುದ್ಧ ಅಬ್ಬರಿಸಿದ್ದಾರೆ. ಕಾವ್ಯ ಹಾಗೂ ಗಿಲ್ಲಿ ಫ್ರೆಂಡ್‌ಶಿಪ್ ಬಗ್ಗೆ ಪರೋಕ್ಷವಾಗಿಯೇ ಟಾಂಗ್ ಕೊಟ್ಟಿದ್ದಾರೆ. ಗಿಲ್ಲಿ-ರಾಶಿಕಾ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಕಾವ್ಯ ಅವರು ಒಂದೇ ಪರ್ಸನ್‌ಗೆ (ಗಿಲ್ಲಿ) ಸ್ಟ್ಯಾಂಡ್ ತೆಗೆದುಕೊಳ್ಳುತ್ತಾರಂತೆ ಎಂದು ಕಾವ್ಯ ಬಗ್ಗೆ ಕ್ಯಾಮೆರಾ ಮುಂದೆ ರಾಶಿಕಾ ಹೇಳಿದರು.
ಕಾವ್ಯ ಅವರು ಈ ಬಗ್ಗೆ ಕೂಗಾಡಿ, ತಾಕತ್ತು ಇದ್ದರು ಬೇರೆಯವರು ಫ್ರೆಂಡ್‌ಶಿಪ್ ಬೆಳೆಸಿಕೊಂಡು ತೋರಿಸಲಿ ಎಂದು ಅಬ್ಬರಿಸಿದ್ದಾರೆ.ಗಿಲ್ಲಿ ಕೂಡ ರಾಶಿಕಾಗೆ ಈ ಬಗ್ಗೆ ಮಾತನಾಡಿ, ನೀವು ಇದ್ದರೆ ಕಂಫರ್ಟ್ ಝೋನ್ ಬೇರೆ ಅವರು ಇದ್ದರೆ ಅಲ್ವಾ? ಎಂದು ಕೇಳಿದ್ದಾರೆ. ಅಷ್ಟೇ ಅಲ್ಲ ರಾಶಿಕಾ ಅವರು ಕಾಫಿ, ಟೀ ಎಲ್ಲವನ್ನೂ ಸೂರಜ್ ಬಳಿಗೆ ತರೆಸಿಕೊಳ್ತಾರೆ ಅಂತ ಮಾತನಾಡಿದ್ದಾರೆ ಗಿಲ್ಲಿ. ಇದು ರಾಶಿಕಾ ಅವರಿಗೆ ಕೋಪ ಬರಿಸಿದೆ.
ಇದನ್ನೂ ಓದಿ: Bigg Boss Kannada 12: ಗಿಲ್ಲಿಯ ಕಾಮಿಡಿ ಟಾನಿಕ್‌ಗೆ ಮನೆಮಂದಿ ಸುಸ್ತೋ ಸುಸ್ತು! ಅಭಿಮಾನಿಗಳಿಂದ ಬಹುಪರಾಕ್
ಎಲ್ಲಿ ಕಾಮಿಡಿ ಮಾಡಬೇಕು ಅಲ್ಲಿ ಮಾತ್ರ ಮಾಡು ಅಂತ ರಾಶಿಕಾ ಗಿಲ್ಲಿ ಮೇಲೆ ಕೂಗಾಡಿದರು. ಅದಕ್ಕೆ ಗಿಲ್ಲಿ ನೀನು ಕ್ಯೂಟ್ ಆಗಿದ್ದೀಯಾ ಬಿಡು ಅಂತ ರಾಶಿಕಾ ಕಾಲೆಳೆದಿದ್ದಾರೆ. ಅದು ನಂಗೊತ್ತು ಅಂತ ರಾಶಿಕಾ ಅಂದರು. ಹೀಗೆ ಹೇಳುತ್ತಿದ್ದಂತೆ ಗಿಲ್ಲಿ ನೀನು ಕ್ಯೂಟ್ ಆಗಿದ್ದೀಯಾ ಅಂದ್ಯಲ್ಲ ಅದೇ ನಿಜವಾದ ಕಾಮಿಡಿ, ನೀನು ಮಾತ್ರ ಮನೆಯಿಂದ ಪಕ್ಕಾ ಹೋಗುತ್ತೀಯಾ ಅಂತ ಕೂಗಾಡಿದ್ದಾರೆ ಗಿಲ್ಲಿ.