ಬಿಗ್ ಬಾಸ್ ಮನೆಯೊಳಗೆ ʻಕ್ರೇಜಿ ಸ್ಟಾರ್ʼ ರವಿಚಂದ್ರನ್ ಅವರು ಕಾಲಿಟ್ಟಿದ್ದಾರೆ. ರಾಶಿಕಾ ಶೆಟ್ಟಿ ಅಭಿನಯದ ʻಪ್ಯಾರ್ʼ ಸಿನಿಮಾದಲ್ಲಿ ರವಿಚಂದ್ರನ್ ತಂದೆ ಪಾತ್ರದಲ್ಲಿ ನಟಿಸಿದ್ದು, ಆ ಚಿತ್ರದ ಪ್ರಮೋಷನ್‌ಗಾಗಿ ಮನೆಯೊಳಗೆ ಹೋಗಿದ್ದಾರೆ. ಜೊತೆಗೆ ಚಿತ್ರದ ಹೀರೋ ಭರತ್ ಕೂಡ ಇದ್ದಾರೆ. ಅಂದಹಾಗೆ, ಈ ವೇಳೆ ರವಿಚಂದ್ರನ್ ಅವರು ತಮ್ಮ ಬದುಕಿನ ರಿಯಲ್ ಪ್ರೇಮ್ ಕಹಾನಿಯ ಬಗ್ಗೆಯೂ ಮಾತನಾಡಿದ್ದಾರೆ. ಲಿವಿಂಗ್ ಏರಿಯಾದಲ್ಲಿ ಮನೆಯ ಎಲ್ಲಾ ಸದಸ್ಯರ ಎದುರು ಕಾಲೇಜು ದಿನಗಳ ತಮ್ಮ ಲವ್ ಸ್ಟೋರಿಯನ್ನು ರವಿ ಬಿಚ್ಚಿಟ್ಟಿದ್ದಾರೆ.
ಪ್ರೋಮೋ ರಿಲೀಸ್ ಮಾಡಿದ ಕಲರ್ಸ್ ಕನ್ನಡ
ಕಲರ್ಸ್ ಕನ್ನಡ ವಾಹಿನಿಯು ರವಿಚಂದ್ರನ್ ಅವರು ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ನೀಡಿರುವ ಬಗ್ಗೆ ಒಂದು ಪ್ರೋಮೋವನ್ನು ಹಂಚಿಕೊಂಡಿದೆ. ಅದರಲ್ಲಿ ರವಿಚಂದ್ರನ್ ಅವರ ಲವ್ ಸ್ಟೋರಿ ಇದೆ. "ನಾ ನಿನ್ನ ಮರೆಯಲಾರೆ ಚಿತ್ರದಲ್ಲಿ ಡಾ. ರಾಜ್‌ಕುಮಾರ್ ಅವರು ಓಡಿಸಿದ್ದ ಬೈಕ್ ಅನ್ನು ತೆಗೆದುಕೊಂಡು ಕಾಲೇಜ್‌ಗೆ ನಾನು ಎಂಟ್ರಿ ಕೊಡ್ತಿನಿ. ಕಾಪೌಂಡ್ ದಾಟಿ ನಾನು ಒಳಗೆ ಹೋಗುವುದಕ್ಕೆ ಸರಿಯಾಗಿ ಒಂದು ಹತ್ತು-ಹದಿನೈದು ಹುಡುಗಿಯರು ನಿಂತಿದ್ದಾರೆ. ಆಗ ನನ್ನ ಆ ಮೋಟಾರ್ ಬೈಕ್ ಸೌಂಡ್‌ಗೆ ಒಂದು ಹುಡುಗಿ ನನ್ನ ತಿರುಗಿ ನೋಡ್ತಾಳೆ. ನಾನು ಪ್ರೀತಿಸಿದ ಮೊದಲ ಹುಡುಗಿ ಅವಳೇ. ಇಂದಿಗೂ ನಾನು ಆ ಕ್ಷಣದ ಅವಳ ನಗುವನ್ನು ಮರೆತಿಲ್ಲ" ಎಂದು ವಿ ರವಿಚಂದ್ರನ್ ಹೇಳಿಕೊಂಡಿದ್ದಾರೆ.
Ravichandran: ನನ್ನ ಮನೆ ಮೇಲೆ ಕಲ್ಲು ಬಿಸಾಕಿದ್ರು, ಪ್ರಿಂಟ್ ಸುಟ್ಟಾಕಿದ್ರು.. ರವಿಚಂದ್ರನ್ ಹೀಗಂದಿದ್ದೇಕೆ?
ಒಂದು ವಾರ ಮಾತನಾಡಿರಲಿಲ್ಲ
"ಆ ಹುಡುಗಿಗೆ ಐ ಲವ್ ಯು ಎಂದು ಹೇಳುವುದಕ್ಕೆ ನಾನು ಒಂದು ವರ್ಷ ಸಮಯ ತೆಗೆದುಕೊಂಡೆ. ಆದರೆ ಒಂದು ವರ್ಷ ನಾವಿಬ್ಬರೂ ಕಣ್ಣಿನಲ್ಲಿ ಪ್ರೀತಿ ಮಾಡಿದ್ದೇವೆ. ಅವಳನ್ನ ಮಾತನಾಡಿಸಲೇಬೇಕು ಎಂದು ನಿರ್ಧಾರ ಮಾಡಿ, ಒಂದು ಕಾರಿನಲ್ಲಿ ಕಾಲೇಜಿಗೆ ಹೋಗಿದ್ದೆ. ಅವಳು ಎದುರಿಗೆ ಬರುವಾಗ ನಾನು ಕಾರಿನಿಂದ ಇಳಿದು, ʻಎಕ್ಸ್‌ಕ್ಯೂಸ್ ಮೀ, ನಿಮ್ಮನ್ನು ಡ್ರಾಪ್ ಮಾಡಬಹುದಾʼ ಅಂತ ಕೇಳುತ್ತೇನೆ. ಆದರೆ ಅವಳು, ʻನೋ ಥ್ಯಾಂಕ್ಸ್ʼ ಎಂದು ಹೇಳಿ ಹೋಗಿಬಿಡ್ತಾಳೆ. ಆಮೇಲೆ ನಾನು ಒಂದು ವಾರ ಕಾಲೀಜ್‌ಗೇ ಹೋಗಲಿಲ್ಲ. ಆಮೇಲೆ ಒಂದು ದಿನ ನನ್ನ ಮನೆಗೆ ಒಂದು ಫೋನ್ ಕಾಲ್ ಬರುತ್ತದೆ. ಅದು ಅವಳೇ. ಹೇಗೋ ಮಾಡಿ, ನನ್ನ ಮನೆ ಫೋನ್ ನಂಬರ್ ತಗೊಂಡು, ಫೋನ್ ಮಾಡಿದಳು. ಅಲ್ಲಿಂದ ನಮ್ಮಿಬ್ಬರ ಮಾತುಕತೆ ಶುರುವಾಗುತ್ತದೆ" ಎಂದು ರವಿಚಂದ್ರನ್ ಹೇಳಿದ್ದಾರೆ.
ರವಿಚಂದ್ರನ್ ಲವ್ ಸ್ಟೋರಿ ಪ್ರೋಮೋ
ಆದರೆ, ಈ ಪ್ರೀತಿ ಬ್ರೇಕಪ್ ಆಗಿದ್ದೇಗೆ? ಆ ಹುಡುಗಿ ಏನಾದಳು ಎಂಬ ವಿಚಾರಗಳನ್ನು ಇಂದಿನ (ಡಿ.18) ಸಂಚಿಕೆಯಲ್ಲಿ ರವಿಚಂದ್ರನ್ ಹೇಳಿಕೊಂಡಿದ್ದಾರೆ. ಪೂರ್ಣ ಮಾಹಿತಿ ಇಂದಿನ ಸಂಚಿಕೆಯಲ್ಲಿ ಸಿಗಲಿದೆ.