ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ರಾಖಿ ಕಟ್ಟಿಸ್ತಾರೆ ಅಂದುಕೊಂಡ್ರೆ ಬೆಳ್ಳಿ ಬ್ರೇಸ್‌ಲೆಟ್ ತಂದು ಕೊಡೋದಾ? ಕಾವ್ಯ ತಂದೆ ಸರ್‌ಪ್ರೈಸ್ ಗಿಫ್ಟ್‌ಗೆ ಗಿಲ್ಲಿ ಫ್ಯಾನ್ಸ್‌ ಅಚ್ಚರಿ!

Gilli Nata: ಬಿಗ್‌ ಬಾಸ್‌ ಸೀಸನ್‌ 12ರಲ್ಲಿ ಹೈಲೈಟ್‌ ಆಗಿರೋ ಜೋಡಿ ಅಂದರೆ ಅದುವೇ ಗಿಲ್ಲಿ ಹಾಗೂ ಕಾವ್ಯ. ಕಾವ್ಯ ಅವರನ್ನು ಕಾಡದೇ ಬಿಡಲ್ಲ ಗಿಲ್ಲಿ. ಅದೆಷ್ಟೋ ಬಾರಿ ಕಾವ್ಯರಿಂದ ಗಿಲ್ಲಿಗೆ ಅಣ್ಣ ಅಂತ ಹೇಳಿಸಿ, ಉಳಿದ ಸ್ಪರ್ಧಿಗಳು ರಾಖಿ ಕಟ್ಟಿಸಿದ್ದೂ ಉಂಟು. ಆದ್ರೂ ಗಿಲ್ಲಿ ಮಾತ್ರ ಕಾವ್ಯ ಅವರನ್ನ ತಂಗಿ ಅಂತ ಒಪ್ಪಲೇ ಇಲ್ಲ. ಗಿಲ್ಲಿ ನಟನ ಕಾಮಿಡಿಗೆ ಪ್ರೇಕ್ಷಕರು ಮಾತ್ರ ಅಲ್ಲ ಅಲ್ಲ ಮನೆಮಂದಿಯ ಮನಯವರೂ ಫಿದಾ ಆಗಿದ್ದಾರೆ. ಬಂದವರೆಲ್ಲರೂ ಗಿಲ್ಲಿಯೇ ನಮ್ಮ ಫೇವರೆಟ್‌ ಎಂದು ಕ್ಯಾಪ್ಟನ್‌ ಆಗಬೇಕು ಎಂದು ವೋಟ್‌ ಕೂಡ ಹಾಕಿದ್ದಾರೆ. ನಿನ್ನೆ ಕಾವ್ಯ ಅವರ ತಂದೆ ತಾಯಿ ಬಿಗ್‌ ಬಾಸ್‌ ಮನೆಗೆ ಬಂದಿದ್ದರು. ಗಿಲ್ಲಿ ನಟನಿಗೆ ಸರ್‌ಪ್ರೈಸ್‌ ಗಿಫ್ಟ್‌ ಕೊಟ್ಟಿದ್ದಾರೆ.

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ ಸೀಸನ್‌ 12ರಲ್ಲಿ (Bigg Boss Kannada 12) ಹೈಲೈಟ್‌ ಆಗಿರೋ ಜೋಡಿ ಅಂದರೆ ಅದುವೇ ಗಿಲ್ಲಿ ಹಾಗೂ ಕಾವ್ಯ. ಕಾವ್ಯ ಅವರನ್ನು ಕಾಡದೇ ಬಿಡಲ್ಲ ಗಿಲ್ಲಿ. ಅದೆಷ್ಟೋ ಬಾರಿ ಕಾವ್ಯರಿಂದ ಗಿಲ್ಲಿಗೆ ಅಣ್ಣ ಅಂತ ಹೇಳಿಸಿ, ಉಳಿದ ಸ್ಪರ್ಧಿಗಳು ರಾಖಿ ಕಟ್ಟಿಸಿದ್ದೂ ಉಂಟು. ಆದ್ರೂ ಗಿಲ್ಲಿ ಮಾತ್ರ ಕಾವ್ಯ ಅವರನ್ನ ತಂಗಿ ಅಂತ ಒಪ್ಪಲೇ ಇಲ್ಲ. ಗಿಲ್ಲಿ ನಟನ ಕಾಮಿಡಿಗೆ ಪ್ರೇಕ್ಷಕರು ಮಾತ್ರ ಅಲ್ಲ ಅಲ್ಲ ಮನೆಮಂದಿಯ ಮನಯವರೂ ಫಿದಾ ಆಗಿದ್ದಾರೆ. ಬಂದವರೆಲ್ಲರೂ ಗಿಲ್ಲಿಯೇ (Gilli Nata) ನಮ್ಮ ಫೇವರೆಟ್‌ ಎಂದು ಕ್ಯಾಪ್ಟನ್‌ (Captain) ಆಗಬೇಕು ಎಂದು ವೋಟ್‌ ಕೂಡ ಹಾಕಿದ್ದಾರೆ. ನಿನ್ನೆ ಕಾವ್ಯ ಅವರ ತಂದೆ ತಾಯಿ ಬಿಗ್‌ ಬಾಸ್‌ ಮನೆಗೆ ಬಂದಿದ್ದರು. ಗಿಲ್ಲಿ ನಟನಿಗೆ ಸರ್‌ಪ್ರೈಸ್‌ ಗಿಫ್ಟ್‌ ಕೊಟ್ಟಿದ್ದಾರೆ.

ತಂದೆ ತಾಯಿ ಸರ್‌ಪ್ರೈಸ್‌

ಮೊನ್ನೆ ತಾನೆ ಕಾವ್ಯ ಅವರ ತಮ್ಮ ಹಾಗೂ ಅಮ್ಮ ಬಿಗ್‌ ಬಾಸ್‌ ಮನೆಗೆ ಬಂದಿದ್ದರು. ಮೂಲ ನಿಯಮ ಉಲ್ಲಂಘನೆ ಮಾಡಿದ ಪರಿಣಾಮ ಹೊರಗೆ ಹೋಗಲು ಬಿಗ್‌ ಬಾಸ್‌ ಆದೇಶಿಸಿದ್ದರು. ಹೀಗಾಗಿ ನಿನ್ನೆ ಮತ್ತೆ ಕಾವ್ಯ ಅವರ ತಂದೆ ತಾಯಿ ಸರ್‌ಪ್ರೈಸ್‌ ಆಗಿ ಬಿಗ್‌ ಬಾಸ್‌ ಮನೆಗೆ ಬಂದಿದ್ದಾರೆ. ಅಷ್ಟೇ ಅಲ್ಲ ಗಿಲ್ಲಿ ಅವರಿಗೆ ಒಳ್ಳೆಯ ಗಿಫ್ಟ್‌ ಕೂಡ ಕೊಟ್ಟಿದ್ದಾರೆ.

ಇದನ್ನೂ ಓದಿ: Bigg Boss Kannada 12: ಈ ಸ್ಪರ್ಧಿಗೆ ನೇರವಾಗಿ ಫಿನಾಲೆ ಟಿಕೆಟ್? ಇಂದು ಮತ್ತೊಬ್ಬರೂ ಔಟ್!

ಮನೆಯಲ್ಲಿ "ಪದೇ ಪದೆ ರಘು ಕೈಯಲ್ಲಿದ್ದ ಬ್ರೇಸ್‌ಲೆಟ್ ತೆಗೆದುಕೊಳ್ಳುತ್ತಿದ್ರು. ಅದಕ್ಕೆ ನಾವು ಗಿಲ್ಲಿ ಬ್ರೇಸ್‌ಲೆಟ್ ಕೊಟ್ವಿ" ಎಂದು ಕಾವ್ಯಾ ತಂದೆ ಹೇಳಿದ್ದಾರೆ. ಗಿಲ್ಲಿಗೆ ಬ್ರೇಸ್‌ಲೆಟ್‌ ಗಿಫ್ಟ್‌ ಮಾಡಿದ್ದಾರೆ. ಇನ್ನು ಗಿಲ್ಲಿ ಅವರು ಸಖತ್‌ ಖುಷ್‌ ಆಗಿದ್ದಾರೆ.

ಬೇರೆ ಸ್ಪರ್ಧಿಗಳ ಮನೆ ಮಂದಿ ಕೂಡ ಗಿಲ್ಲಿ ಆಟವನ್ನು ಮೆಚ್ಚಿಕೊಂಡಿದ್ದಾರೆ. ಅದನ್ನು ಬಹಿರಂಗವಾಗಿ ಮನೆಯೊಳಗೆ ಹೋಗಿ ಹೇಳಿದ್ದಾರೆ. ಇಷ್ಟು ದಿನ ಸ್ಪರ್ಧಿಗಳ ಬಗ್ಗೆ ತಮಾಷೆ ಮಾಡಿ ಗೋಳು ಹೊಯ್ದುಕೊಳ್ಳುತ್ತಿದ್ದ ಗಿಲ್ಲಿ ಈ ವಾರ ಅವರ ಮನೆಮಂದಿಯ ಬಗ್ಗೆ ಕೂಡ ತಮಾಷೆ ಮಾಡಿದ್ದಾರೆ. ಸ್ವತಃ ತಮ್ಮ ತಂದೆ-ತಾಯಿಯನ್ನು ಕಿಚಾಯಿಸಿದ್ದಾರೆ.



ಕಾವ್ಯ ಸಹೋದರ ಹೇಳಿದ್ದೇನು?

ತಮ್ಮ ಬಿ ಬಾಸ್‌ ಮನೆಗೆ ಬಂದಾಗ ಹೇಳಿದ್ದು ಹೀಗೆ. ನೋಡುವರಿಗೆ ನೀನು ಎಫರ್ಟ್‌ ಹಾಕುತ್ತದ್ದೀಯಾ ಅನ್ನಿಸುತ್ತಿದೆ. ನೀನು ಜಾಸ್ತಿ ಕಾಣಿಸಿಕೊಳ್ಳಬೇಕು. ತಲೆ ಕೆಡಿಸಿಕೊಳ್ಳಬೇಡ. ನಿನ್ನ ಮತ್ತು ಗಿಲ್ಲಿ ಸ್ನೇಹ ನೆಕ್ಟ್ಸ್​ ಲೆವೆಲ್​​ನಲ್ಲಿ ಇದೆ. ನಾಮಿನೇಷನ್​ನಲ್ಲಿ ಅವನ ಹೆಸರು ತೆಗೆದುಕೊಳ್ಳುತ್ತೀಯ. ಆದರೂ ಅವನು ಅದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದರು. ಇದಾದ ಬಳಿಕ ಬಿಗ್‌ ಬಾಸ್‌ ಒಂದು ವಾರ್ನಿಂಗ್‌ ಕೊಟ್ಟರು. ಹೊರಗಡೆ ವಿಚಾರ ಚರ್ಚಿಸುವಂತಿಲ್ಲ ಎಂದು. ಆದರೂ ಕಾವ್ಯ ಅವರು ಮಾತು ಮುಂದುವರಿಸಿದರು.

ಇದನ್ನೂ ಓದಿ: Bigg Boss Kannada 12: ಈ ವಾರ ಡಬಲ್‌ ಎಲಿಮಿನೇಷನ್! ಸ್ಪರ್ಧಿಗಳಿಗೆ ಸಖತ್ ಶಾಕ್

ಅಣ್ಣ ಅಣ್ಣ ಅನ್ನೋಕೆ ಹೋಗಬೇಡ

ಗಿಲ್ಲಿಯಿಂದ ಕಾವ್ಯಾ ಅಂತ ಹೇಳಿಸಿಕೊಳ್ಳುವುದು ನನಗೆ ಇಷ್ಟ ಇಲ್ಲಒಬ್ಬರನ್ನು ಕೆಳಗೆ ಇಟ್ಟು ಮಾತಾಡೋದು ಅವನ ಉದ್ದೇಶ ಆಗಿರಲ್ಲ. ಮಾತಿನ ಭರದಲ್ಲಿ ಹೇಳುತ್ತಾನೆ. ಅದನ್ನು ಕಟ್ ಮಾಡಲು ನಾನು ಅವನನ್ನು ನಾಮಿನೇಟ್ ಮಾಡಿದೆ. ಎಂದು ಕಾವ್ಯ ಅಂದರು. ‘ಗಿಲ್ಲಿಗೆ ಯಾವಾಗಲೂ ಅಣ್ಣ ಅಣ್ಣ ಅನ್ನೋಕೆ ಹೋಗಬೇಡ. ಅವನು ನಿನ್ನ ಫ್ರೆಂಡ್ ಎಂದು ಕಾವ್ಯಾ ಅವರ ತಾಯಿ ಹೇಳಿದರು. ನಿಮ್ಮಿಬ್ಬರ ಸ್ನೇಹ ಬ್ರೇಕ್ ಆಗದೇ ಬಂದಿದೆ ಹಾಗೇ ಇರಲಿ ಎಂದು ಕಾವ್ಯ ತಮ್ಮ ಹೇಳಿದರು.

Yashaswi Devadiga

View all posts by this author