ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಸ್ಪಂದನಾ VS ಮಾಳು; ಬಿಗ್‌ಬಾಸ್ ಮನೆಯಿಂದ ಆಚೆ ಹೋಗೋದು ಯಾರು?

Spandana: ಬಿಗ್‌ ಬಾಸ್‌ ಮನೆಯಲ್ಲಿ ಈ ವಾರ ಡಬಲ್‌ ಎಲಿಮಿನೇಶನ್‌ ಇದೆ ಎಂದು ಬಿಗ್‌ ಬಾಸ್‌ ಈಗಾಗಲೇ ಅನೌನ್ಸ್‌ ಮಾಡಿದ್ದಾರೆ. ಅದರಂತೆ ಶನಿವಾರದ ಸಂಚಿಕೆಯಲ್ಲಿ ಸೂರಜ್‌ ಅವರು ಮನೆಯಿಂದ ಹೊರ ನಡೆದಿದ್ದಾರೆ. ಭಾನುವಾರ ಸ್ಪಂದನಾ ಹಾಗೂ ಮಾಳು ಅವಬರು ಡೇಂಜರ್‌ ಝೋನ್‌ನಲ್ಲಿ ಇರೋ ಪ್ರೋಮೋ ) ಹಂಚಿಕೊಂಡಿದೆ ಕಲರ್ಸ್‌ ಕನ್ನಡ ವಾಹಿನಿ.

ಸ್ಪಂದನಾ VS ಮಾಳು; ಬಿಗ್‌ಬಾಸ್ ಮನೆಯಿಂದ ಆಚೆ ಹೋಗೋದು ಯಾರು?

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Dec 28, 2025 6:24 PM

ಬಿಗ್‌ ಬಾಸ್‌ ಮನೆಯಲ್ಲಿ (Bigg Boss Kannada 12) ಈ ವಾರ ಡಬಲ್‌ ಎಲಿಮಿನೇಶನ್‌ (Double elimination) ಇದೆ ಎಂದು ಬಿಗ್‌ ಬಾಸ್‌ ಈಗಾಗಲೇ ಅನೌನ್ಸ್‌ ಮಾಡಿದ್ದಾರೆ. ಅದರಂತೆ ಶನಿವಾರದ ಸಂಚಿಕೆಯಲ್ಲಿ ಸೂರಜ್‌ ಅವರು ಮನೆಯಿಂದ ಹೊರ ನಡೆದಿದ್ದಾರೆ. ಭಾನುವಾರ ಸ್ಪಂದನಾ (Spandana) ಹಾಗೂ ಮಾಳು ಅವಬರು ಡೇಂಜರ್‌ ಝೋನ್‌ನಲ್ಲಿ ಇರೋ ಪ್ರೋಮೋ (Promo) ಹಂಚಿಕೊಂಡಿದೆ ಕಲರ್ಸ್‌ ಕನ್ನಡ ವಾಹಿನಿ.

ಸ್ಪಂದನಾ VS ಮಾಳು

ಪ್ರೋಮೋದಲ್ಲಿ ಮೊದಲಿಗೆ ಬಿಗ್‌ ಬಾಸ್‌ ಸ್ಪಂದನಾ ಹಾಗೂ ಮಾಳು ಅವರಲ್ಲಿ ಒಬ್ಬರು ಮನೆಯಿಂದ ಆಚೆ ಹೋಗುತ್ತಾರೆ ಎಂದು ಅನೌನ್ಸ್‌ ಮಾಡಿದ್ದಾರೆ. ಗಿಲ್ಲಿ ಕೂಡ, ಸ್ಪಂದನಾ ಯಾರೂ ಎಂಬುದು ಇದುವರೆಗೂ ಕ್ಲಾರಿಟಿ ಸಿಕ್ಕಿಲ್ಲ ಅಂತ ಗಿಲ್ಲಿ ನಟ ಹೇಳಿದ್ದಾರೆ. ಇನ್ನು ಧನುಷ್‌ ಕೂಡ ಮಾಳು ಅವರು ಸ್ಟ್ಯಾಂಡ್‌ ತೆಗೆದುಕೊಂಡಿಲ್ಲ ಎಂದಿದ್ದಾರೆ. ಬಿಗ್‌ ಬಾಸ್‌ಗೆ ಕಾರ್‌ ಬಂದಿದೆ. ಇಬ್ಬರೂ ಕಾರು ಹತ್ತಿದ್ದು, ಒಬ್ಬರು ಹೊರ ಹೋದರೆ ಒಬ್ಬರು ಉಳಿದುಕೊಂಡಿದ್ದಾರೆ. ಯಾರದು? ಎಂಬ ಕುತೂಹಲ ವೀಕ್ಷಕರಲ್ಲಿದೆ.

ಇದನ್ನೂ ಓದಿ: Bigg Boss Kannada 12: ಬಿಗ್‌ ಬಾಸ್‌ ಮನೆಯಿಂದ ಸೂರಜ್‌ ಸಿಂಗ್‌ ಎಲಿಮಿನೇಟ್‌! ರಾಶಿಕಾ ಕಣ್ಣೀರು

ನೇರವಾಗಿ ಫಿನಾಲೆಗೆ?

ಈ ವಾರ ಕಿಚ್ಚ ಸುದೀಪ್ ಅವರ ಅನುಪಸ್ಥಿತಿಯಲ್ಲಿ ಎಲಿಮಿನೇಷನ್ ನಡೆಯುತ್ತಿದ್ದು, ಶನಿವಾರದ ಎಪಿಸೋಡ್‌ನಲ್ಲಿ (ಡಿ.28) ಸೂರಜ್ ಮನೆಯಿಂದ ಹೊರಹೋಗಿದ್ದಾರೆ.ಇದರ ಬೆನ್ನಲ್ಲೇ ಇದೀಗ ಹೊಸ ಸುದ್ದಿಯೊಂದು ವೈರಲ್‌ ಆಗ್ತಿದೆ.

ಇದೇ ವೇಳೆ ಓರ್ವ ಸ್ಪರ್ಧಿಗೆ ನೇರವಾಗಿ ಫಿನಾಲೆಗೆ ಟಿಕೆಟ್ (Finale Ticket) ಸಿಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಹಾಗಾದ್ರೆ ಅದು ಯಾರಿರಬಹುದು? ಕಿಚ್ಚ ಸುದೀಪ್‌ ಅವರು ಇಲ್ಲದ ಕಾರಣ ಈ ವಾರ ನಿರ್ದೇಶಕ ಪ್ರೇಮ್‌, ನಟ ರೀಷ್ಮಾ ಹಾಗೂ ಸುಷ್ಮಾ, ತಾಂಡವ್‌ ಅತಿಥಿಗಳಾಗಿ ಬಂದಿದ್ದರು. ಬಿಗ್‌ ಬಾಸ್‌ ಕೊಟ್ಟ ಕೆಲವು ಟಾಸ್ಕ್‌ಗಳನ್ನು ನಿಭಾಯಿಸಿದ್ದಾರೆ. ಇದೀಗ ಮತ್ತೊಂದು ಸುದ್ದಿ ಸಖತ್‌ ವೈರಲ್‌ ಆಗ್ತಿದೆ. ಓರ್ವ ಸ್ಪರ್ಧಿಗೆ ನೇರವಾಗಿ ಫಿನಾಲೆಗೆ ಟಿಕೆಟ್ ಸಿಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಇದನ್ನೂ ಓದಿ: Bigg Boss Kannada 12: ಈ ಸ್ಪರ್ಧಿಗೆ ನೇರವಾಗಿ ಫಿನಾಲೆ ಟಿಕೆಟ್? ಇಂದು ಮತ್ತೊಬ್ಬರೂ ಔಟ್!

ಫಿನಾಲೆ ಟಿಕೆಟ್ ಪಡೆದುಕೊಳ್ಳುವ ಸ್ಪರ್ಧಿ ಯಾರು ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಈ ವಿಷಯ ಕೇಳುತ್ತಿದ್ದಂತೆ ಬಿಗ್‌ಬಾಸ್ ವೀಕ್ಷಕರು ಗಿಲ್ಲಿ ನಟ ಅವರೇ ಫಿನಾಲೆ ಸ್ಪರ್ಧಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ಹಾಗೆಯೇ ಗಿಲ್ಲಿಯೇ ಈ ಸೀಸನ್ ವಿನ್ನರ್ ಎಂದು ಸಂಭ್ರಮಿಸುತ್ತಿದ್ದಾರೆ.