ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಕೊನೆಗೂ ರಕ್ಷಿತಾರ ಈ ವಿಚಾರಗಳ ಬಗ್ಗೆ ಮಾತೇ ಆಡಲಿಲ್ಲ ಕಿಚ್ಚ!

Bigg boss Kannada 12 : ಕಳೆದ ವಾರ ಮಸಿ ಬಳಿಯುವ ಟಾಸ್ಕ್‌ನಲ್ಲಿ ಅಶ್ವಿನಿ ಗೌಡ (Ashwini Gowda) ಅವರು ರಕ್ಷಿತಾ ಮೇಲೆ ಅತಿರೇಕದ ವರ್ತನೆ ತೋರಿದರು. ಅಷ್ಟೇ ಅಲ್ಲ ಕ್ಯಾರೆಕ್ಟರ್‌ ಬಗ್ಗೆ ನಿಂದನೆ ಮಾಡಿದರು. ವೀಕ್ಷಕರು ಕೆಲವು ವಿಷಯಗಳ ಬಗ್ಗೆ ಕಿಚ್ಚ ಸುದೀಪ್‌ (Kichcha Sudeep) ಚರ್ಚೆಯೇ ಮಾಡಿಲ್ಲ ಎಂದು ವ್ಯಕ್ತಪಿಡಿಸುತ್ತಿದ್ದಾರೆ. ರಕ್ಷಿತಾ ಶೆಟ್ಟಿ (Rakshitha Shetty) ವಿಚಾರಕ್ಕೆ ಸುದೀಪ್‌ ಹೀಗೆ ಮಾಡಬಾರದಿತ್ತು ಎನ್ನುತ್ತಿದ್ದಾರೆ. ಹಾಗಾದ್ರೆ ಆ ವಿಷಯ ಯಾವುದು? ಪ್ರತಿ ಬಾರಿ ಅಶ್ವಿನಿ ಅವರ ಪರವಾಗೇ ಇರ್ತಾರಾ ಕಿಚ್ಚ?

Ashwini Gowda Rakshitha

ಬಿಗ್‌ ಬಾಸ್‌ ಸೀಸನ್‌ 12ರ (Bigg Boss Kannada 12) ವೀಕೆಂಡ್‌ ವೀಕೆಂಡ್‌ ಪಂಚಾಯ್ತಿ ಬಗ್ಗೆ ಈ ನಡುವೆ ಅಸಮಾಧಾನ ಹೊರ ಹಾಕುತ್ತಿದ್ದಾರೆ ವೀಕ್ಷಕರು. ಕೆಲವು ವಿಷಯಗಳ ಬಗ್ಗೆ ಕಿಚ್ಚ ಸುದೀಪ್‌ (Kichcha Sudeep) ಚರ್ಚೆಯೇ ಮಾಡಿಲ್ಲ ಎಂದು ವ್ಯಕ್ತಪಿಡಿಸುತ್ತಿದ್ದಾರೆ. ರಕ್ಷಿತಾ ಶೆಟ್ಟಿ (Rakshitha Shetty) ವಿಚಾರಕ್ಕೆ ಸುದೀಪ್‌ ಹೀಗೆ ಮಾಡಬಾರದಿತ್ತು ಎನ್ನುತ್ತಿದ್ದಾರೆ. ಹಾಗಾದ್ರೆ ಆ ವಿಷಯ ಯಾವುದು? ಪ್ರತಿ ಬಾರಿ ಅಶ್ವಿನಿ ಅವರ ಪರವಾಗೇ ಇರ್ತಾರಾ ಕಿಚ್ಚ? ಎನಿದು ನೆಟ್ಟಿಗರ ಚರ್ಚೆ?

ಯಾರಿಗೂ ಅಂಟಿಕೊಂಡು ಇರಲಿಲ್ಲ!

ಕಳೆದ ವಾರ ಮಸಿ ಬಳಿಯುವ ಟಾಸ್ಕ್‌ನಲ್ಲಿ ಅಶ್ವಿನಿ ಗೌಡ ಅವರು ರಕ್ಷಿತಾ ಮೇಲೆ ಅತಿರೇಕದ ವರ್ತನೆ ತೋರಿದರು. ಅಷ್ಟೇ ಅಲ್ಲ ಕ್ಯಾರೆಕ್ಟರ್‌ ಬಗ್ಗೆ ನಿಂದನೆ ಮಾಡಿದರು.

ಇದನ್ನೂ ಓದಿ: Bigg Boss Kannada 12: ಕಣ್ಣೀರಿಡುತ್ತಾ ಬಿಗ್ ಬಾಸ್ ಮನೆಯಿಂದ ಹೊರಟೇ ಬಿಟ್ಟ ಚಂದ್ರಪ್ರಭ!

ಅಶ್ವಿನಿ ಮಾತನಾಡಿ, `ರಕ್ಷಿತಾ ಮುಗ್ದೆ ಅಲ್ಲ. ಡ್ರಾಮಾ ಕಂಪನಿಗೆ ಅಪ್ಪ ಅಲ್ಲ, ಮುತ್ತಾತ ಇವರು. ಅಷ್ಟು ಡ್ರಾಮಾ ಮಾಡಿಕೊಂಡು ಬಂದಿದ್ದಾರೆ. ಅಲ್ಲಿ ಹೋಗಿ ಅವರ ಕೈ ಹಿಡಿದುಕೊಳ್ಳುವುದು ಮಾಡ್ತಾರೆ. ನಾವು ಯಾರೂ 25ನೇ ವಯಸ್ಸಿಗೆ ಯಾರಿಗೂ ಅಂಟಿಕೊಂಡು ಮಕ್ಕಳ ಥರ ಆಡಲಿಲ್ಲ. ದಯವಿಟ್ಟು ಅದನ್ನು ಕಡಿಮೆ ಮಾಡಿಕೊಳ್ಳಿ. ನಿಮ್ಮಷ್ಟೇ ವಯಸ್ಸಿನವರು ಹೊರಗಡೆ ನೋಡುತ್ತಾರೆ.’ ಎಂದು ಅಶ್ವಿನಿ ಗೌಡ ಅವರು ಹೇಳಿದ್ದರು.

ಯುಟ್ಯೂಬ್‌ ಚಾನೆಲ್‌ ಮಾಡಿದ ಹಾಗಲ್ಲ

ಹಾಗೇ ಸಿನಿಮಾ ಬಗ್ಗೆಯೂ ಪ್ರಸ್ತಾಪಿಸಿದರು. ನಾವು ಕಷ್ಟಗಳನ್ನು ನೋಡಿ ಬಂದಿದ್ದು. 100ಕ್ಕೂ ಹೆಚ್ಚು ಸಿನಿಮಾ ಮಾಡಿರುವೆ. ನಿಮ್ಮ ಹಾಗೇ ಯುಟ್ಯೂಬ್‌ ಚಾನೆಲ್‌ ಮಾಡಿ ಬಂದಿಲ್ಲ. ನಮ್ಮ ವ್ಯಕ್ತಿತ್ವವನ್ನು ಕಸದ ಬುಟ್ಟಿಗೆ ಹಾಕುವ ಯೋಗ್ಯತೆ ನಿನಗೆ ಇಲ್ಲ. ನಿನ್ನಂತಹ ಚಾನೆಲ್ ನಾನು 100 ಮಾಡಬಹುದು. ನನ್ನ ರೀತಿ ಸಿನಿಮಾ ಮಾಡಿಬಿಡು.

ಇದು ನಿನಗೆ ಚಾಲೆಂಜ್ ಎಂದು ಅಬ್ಬರಿಸಿದ್ದರು. ಜೈಲಿಗೆ ಹೋಗೋಕೆ ರೆಡಿ ಇರುವ ಹೆಣ್ಣು ನಾನು. ನಿನ್ನ ರೀತಿ ರೂಮ್​​ಗಳಲ್ಲಿ ಹೋಗಿ ಒಬ್ಬೊಬ್ಬರನ್ನೇ ಕೈ ಹಿಡಿದುಕೊಂಡು ಬಕೆಟ್ ಹಿಡಿಯೋ ಕೆಲಸ ನಾನು ಮಾಡ್ತಾ ಇಲ್ಲ ಎಂದು ಆರೋಪಿಸಿದ್ದರು.



ಮರೆತ ರಕ್ಷಿತಾ!

ಈ ಎಲ್ಲ ವಿಚಾರಗಳ ಬಗ್ಗೆ ಸುದೀಪ್‌ ಏನನ್ನೂ ಮಾತನಾಡಲಿಲ್ಲ. ರಕ್ಷಿತಾ ಅವರಿಗೆ ಕೆಲವು ವಿಚಾರಗಳನ್ನ ನೆನಪಿಸಿಕೊಂಡು ಹೇಳಿ ಅಂದರೂ ರಕ್ಷಿತಾಗೂ ಕೂಡ ನೆನಪಿಗೆ ಬರಲೇ ಇಲ್ಲ. ಆದರೆ ಈ ಬಗ್ಗೆ ಕಿಚ್ಚ ಸುದೀಪ್‌ ಅವರು ತಾವಾಗಿಯೇ ಹೇಳಿ ಅಶ್ವಿನಿ ಅವರನ್ನ ಕ್ಲಾಸ್‌ ತೆಗೆದುಕೊಳ್ಳದೇ ಇರೋದು ಸರಿಯಲ್ಲ ಅನ್ನೋದು ಕೆಲವು ವೀಕ್ಷಕರ ಅಭಿಪ್ರಾಯ.

ಮುಂದಿನ ದಿನಗಳಲ್ಲಿ ರಕ್ಷಿತಾ ನೆನಪಿಸಿಕೊಂಡು ಹೇಳಿದರೆ ಸುದೀಪ್‌ ಈ ಬಗ್ಗೆ ಮಾತನಾಡಬಹುದು ಎಂಬುದು ವೀಕ್ಷಕರ ಅಭಿಪ್ರಾಯ.

ಅಣುಕಿಸಿ ವಿಷಕಾರಿದ ಧ್ರುವಂತ್‌!

ಮತ್ತೊಂದೆಡೆ ಧ್ರುವಂತ್‌ ಅವರು ರಕ್ಷಿತಾ ಮೇಲೆ ಟಾರ್ಗೆಟ್‌ ಮಾಡುತ್ತಲೇ ಇದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ರಕ್ಷಿತಾ ಬಗ್ಗೆ ಧ್ರುವಂತ್‌ ಆರೋಪ ಮಾಡಿದ್ದರು. ಮಂಗಳೂರು ಕಡೆ ರಕ್ಷಿತಾ ತರಹ ಯಾರೂ ಮಾತನಾಡೋಲ್ಲ.

ಇದನ್ನೂ ಓದಿ: Bigg Boss Kannada 12: ಇವೆರಡು ಕಾರಣಕ್ಕೆ ಗಿಲ್ಲಿಗೆ ವಾರ್ನಿಂಗ್‌ ಕೊಟ್ಟ ಕಿಚ್ಚ; ಮನೆಗೆ ಹೋಗೋದು ಪಕ್ಕಾ ಅಂದಿದ್ಯಾಕೆ ಸುದೀಪ್‌?

ನಾನು ಮೊದಲಿನಿಂದಲೂ ಅವಳ ವಿಡಿಯೋಗಳನ್ನು ನೋಡಿದ್ದೇನೆ. ಅವಳಿಗೆ ಕ್ಲೀನ್ ಆಗಿ ಮಾತಾಡೋಕೆ ಬರತ್ತೆ ಎಂದಿದ್ದರು. ಇದೀಗ ಮತ್ತೆ ರಕ್ಷಿತಾ ಬಗ್ಗೆಯೇ ಆರೋಪ ಮಾಡಿದ್ದಾರೆ. ಮೆಣಸನ್ನು (Chilli) ನೀಡಿ ರಕ್ಷಿತಾ ಹಾಗೂ ಗಿಲ್ಲಿ ಬಗ್ಗೆ ಅಣುಕಿಸಿ ಮಾತನಾಡಿದ್ದಾರೆ.

Yashaswi Devadiga

View all posts by this author