ಈ ವಾರ ಬಿಗ್ ಬಾಸ್ (Bigg Boss Kannada 12) ವೀಕೆಂಡ್ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ (sudeep) ಅವರು ಅಶ್ವಿನಿ ಅವರನ್ನ ಗರಂ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಟಾಸ್ಕ್ ಸರಿಯಾಗಿ ನಿರ್ವಹಿಸಿಲ್ಲ ಎಂಬುದರಿಂದ ಹಿಡಿದು, ಮನೆಯಲ್ಲಿ ಊಟ ಬಿಟ್ಟು ಕ್ಷಮಾಪಣೆ ಕೇಳಿಸಿಕೊಂಡ ವರೆಗೆ ಕಿಚ್ಚ ಕ್ಲಾಸ್ ತೆಗೆದುಕೊಂಡಿದ್ದಾರೆ.
`ಒಂದು ಟಾಸ್ಕ್ ಬರತ್ತೆ, ಉಸ್ತುವಾರಿಯನ್ನು ಸರಿಯಾಗಿ ನಿಭಾಯಿಸಬೇಕಿತ್ತು' ಎಂದರು. ಅದಕ್ಕೆ ರಘು ಅವರು, ಉಸ್ತುವಾರಿ ಏನು ಅನ್ನೋದೇ ಅಶ್ವಿನಿ ಅವರಿಗೆ ಗೊತ್ತಾಗಿಲ್ಲ ಎಂದಿದ್ದಾರೆ, ಅದಕ್ಕೆ ಕಿಚ್ಚ, ʻರೂಲ್ಸ್ ಬುಕ್ ಇರಲಿಲ್ವಾ?ʼ ಅಂತ ಪ್ರಶ್ನೆ ಇಟ್ಟಿದ್ದಾರೆ. ʻಇನ್ನೊಂದು ಕಡೆ ಊಟ ಬಿಟ್ಟು ಸಾರಿ ಕೇಳಿಸಿಕೊಳ್ಳೋದು. ಎಮೋಷನಲ್ ಬ್ಲಾಕ್ಮೇಲ್ ಆಗಿ ಬಿಡತ್ತೆ. ʻಯಾಕೆ ಊಟ ಬಿಟ್ಟಿರಿ ಅನ್ನೋದೇ ಅರ್ಥ ಆಗಿಲ್ಲ. ಮುಖಕ್ಕೆ ಹೊಡೆಯುವ ರೀತಿ ಎಲ್ಲ ಇವತ್ತು ಹೇಳುವೆʼ ಎಂದು ಗರಂ ಆಗಿ ಹೇಳಿದ್ದಾರೆ ಕಿಚ್ಚ ಸುದೀಪ್.
ಇದನ್ನೂ ಓದಿ: Bigg Boss Kannada 12: ಮಾತೆ, ರಾಜಮಾತೆ ಇವತ್ತು ನೀ ಸತ್ತೆ! ಗಿಲ್ಲಿ ಮಿಮಿಕ್ರಿಗೆ ಅಶ್ವಿನಿ ಸೈಲೆಂಟ್
ಕಲರ್ಸ್ ಕನ್ನಡ ಪ್ರೋಮೋ
ವುಮೆನ್ ಕಾರ್ಡ್ ಪ್ಲೇ ಮಾಡಿದ ಅಶ್ವಿನಿ ಗೌಡಗೆ ಕಿಚ್ಚನ ಖಡಕ್ ಕ್ಲಾಸ್!
ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ 'ವುಮೆನ್ ಕಾರ್ಡ್' ಬಳಸುತ್ತಿರುವ ಬಗ್ಗೆ ಚರ್ಚೆ ಜೋರಾಗಿಯೇ ನಡೆದಿತ್ತು. ಹೆಣ್ಣು ಮಕ್ಕಳಿಗೆ ಗೌರವವಿಲ್ಲ ಎಂದು ಸದಾ ಆರೋಪಿಸುತ್ತಲೇ ಬಂದಿದ್ದರು. ತಾವು ಯಾರಗೆ ಬೇಕಾದರೂ ಏಕವಚನ ಬಳಕೆ ಮಾಡಬಹುದು. ಇತರರನ್ನು ಅವಮಾನಿಸುವ ವರ್ತನೆ ತೋರಿದ್ದರು. ಈ ಬಗ್ಗೆ ಕಿಚ್ಚ ಖಡಕ್ ಆಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಮನೆಯಲ್ಲಿ ವುಮನ್ ಕಾರ್ಡ್ ಬೇಡ ಎಂದು ಅಶ್ವಿನಿಗೆ ಖಡಕ್ ಆಗಿ ಹೇಳಿದ್ದಾರೆ ಕಿಚ್ಚ ಸುದೀಪ್.
ʻಯಾವಾಗ ನೋಡಿದರೂ ಏಕವಚನ ಏಕವಚನ ಅಂತೀರಾʼ ಎಂದು ಮೊದಲಿಗೆ ಕಿಚ್ಚ ಅಶ್ವಿನಿಗೆ ಕ್ಲಾಸ್ ತೆಗೆದುಕೊಂಡರು. ಅಶ್ವಿನಿ ಪ್ರತಿಕ್ರಿಯೆ ನೀಡಿ, ಗಿಲ್ಲಿ ಅವರು ಎಷ್ಟು ಆಗುತ್ತೋ ಅಷ್ಟು ತೇಜೋವಧೆ ಮಾಡೋಕೆ ನೋಡ್ತಾ ಇದ್ದರು ಎಂದಿದ್ದಾರೆ.
ವುಮನ್ ಕಾರ್ಡ್ ಬೇಡ
ಈ ಬಗ್ಗೆ ಕೋಪಗೊಂಡ ಕಿಚ್ಚ, ʻನಿಮಗೆ ಹೋಗಿ ಬನ್ನಿ ಅನ್ನಿಸ್ಕೋಬೆಕು ಅಂದರೆ, ಪ್ರತಿ ಚಿಕ್ಕ ಮಗುಗೂ ಹೋಗಿ ಬನ್ನಿ ಅನ್ನೋದು ಕಲೀರಿ. ಮಾತು ಎತ್ತಿದ್ದರೆ, ಯಾವ ಹುಡುಗಿಗೂ ಹೀಗೆ ಅನ್ನಿಬೇಡಿ ಅಂತೀರಾ. ಯಾರು ಏನು ಮಾತಾಡ್ತಾ ಇದ್ದಾರೆ ಇಲ್ಲಿ. ಯಾರೆಲ್ಲ ಅಶ್ವಿನಿ ಅವರ ಕೈಯಲ್ಲಿ ನಿಮ್ಮ ಮಾನ ಮರ್ಯಾದೆ ಕೊಟ್ಟು ಕೂತಿದ್ದೀರಿ ಕೈ ಎತ್ತಿ ಹುಡುಗೀರುʼ ಎಂದಿದ್ದಾರೆ. ʻಅಶ್ವಿನಿ ಅವರೇ ಈ ಮನೆಯಲ್ಲಿ ವುಮನ್ ಕಾರ್ಡ್ʼ ಬೇಡ ಎಂದಿದ್ದಾರೆ.
ಇದನ್ನೂ ಓದಿ: Bigg Boss Kannada 12: ಆಡಿದ ಮಾತಿಗೆ ಅಶ್ವಿನಿ ಬಳಿ ಕೈ ಮುಗಿದು ಕ್ಷಮೆ ಕೇಳಿದ ಗಿಲ್ಲಿ
ಹೆಣ್ಣು ಮಕ್ಕಳಿಗೆ ಯಾರೂ ಗೌರವ ನೀಡುತ್ತಿಲ್ಲ ಎಂದು ರಂಪಾಟ ಮಾಡಿ, ಉಪವಾಸ ಸತ್ಯಾಗ್ರಹ ಕೂಡ ಆರಂಭಿಸಿದ್ದರು ಅಶ್ವಿನಿ ಗೌಡ. ಎಲ್ಲರಿಂದಲೂ ಗೌರವ ನಿರೀಕ್ಷೆ ಮಾಡುವ ಅವರು ಬಹುತೇಕ ಸಂದರ್ಭಗಳಲ್ಲಿ ಏಕವಚನ ಬಳಕೆ ಮಾಡುತ್ತಾರೆ.