Bigg Boss Kannada 12: ವುಮೆನ್ ಕಾರ್ಡ್ ಪ್ಲೇ ಮಾಡಿದ ಅಶ್ವಿನಿ ಗೌಡಗೆ ಕಿಚ್ಚನ ಖಡಕ್ ಕ್ಲಾಸ್!
Ashwini Gowda: ಹೆಣ್ಣು ಮಕ್ಕಳಿಗೆ ಯಾರೂ ಗೌರವ ನೀಡುತ್ತಿಲ್ಲ ಎಂದು ರಂಪಾಟ ಮಾಡಿ, ಉಪವಾಸ ಸತ್ಯಾಗ್ರಹ ಕೂಡ ಆರಂಭಿಸಿದ್ದರು ಅಶ್ವಿನಿ ಗೌಡ. ಬಿಗ್ ಬಾಸ್ ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಗೌರವವಿಲ್ಲ ಎಂದು ಸದಾ ಆರೋಪಿಸುತ್ತಲೇ ಬಂದಿದ್ದರು. ತಾವು ಯಾರಗೆ ಬೇಕಾದರೂ ಏಕವಚನ ಬಳಕೆ ಮಾಡಬಹುದು. ಇತರರನ್ನು ಅವಮಾನಿಸುವ ವರ್ತನೆ ತೋರಿದ್ದರು. ಅಶ್ವಿನಿ ಎಲ್ಲರಿಂದಲೂ ಗೌರವ ನಿರೀಕ್ಷೆ ಮಾಡುವ ಅವರು ಬಹುತೇಕ ಸಂದರ್ಭಗಳಲ್ಲಿ ಏಕವಚನ ಬಳಕೆ ಮಾಡುತ್ತಾರೆ. ಈ ಬಗ್ಗೆ ಕಿಚ್ಚ ಖಡಕ್ ಆಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಮನೆಯಲ್ಲಿ ವುಮನ್ ಕಾರ್ಡ್ ಬೇಡ ಎಂದು ಅಶ್ವಿನಿಗೆ ಖಡಕ್ ಆಗಿ ಹೇಳಿದ್ದಾರೆ ಕಿಚ್ಚ ಸುದೀಪ್.
ಬಿಗ್ ಬಾಸ್ ಕನ್ನಡ -
ಬಿಗ್ ಬಾಸ್ ಮನೆಯಲ್ಲಿ (Bigg Boss Kannada 12) ಅಶ್ವಿನಿ ಗೌಡ (Ashwini Gowda) 'ವುಮೆನ್ ಕಾರ್ಡ್' (Women Card) ಬಳಸುತ್ತಿರುವ ಬಗ್ಗೆ ಚರ್ಚೆ ಜೋರಾಗಿಯೇ ನಡೆದಿತ್ತು. ಹೆಣ್ಣು ಮಕ್ಕಳಿಗೆ ಗೌರವವಿಲ್ಲ ಎಂದು ಸದಾ ಆರೋಪಿಸುತ್ತಲೇ ಬಂದಿದ್ದರು. ತಾವು ಯಾರಗೆ ಬೇಕಾದರೂ ಏಕವಚನ ಬಳಕೆ ಮಾಡಬಹುದು. ಇತರರನ್ನು ಅವಮಾನಿಸುವ ವರ್ತನೆ ತೋರಿದ್ದರು. ಈ ಬಗ್ಗೆ ಕಿಚ್ಚ (Sudeep) ಖಡಕ್ ಆಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಮನೆಯಲ್ಲಿ ವುಮನ್ ಕಾರ್ಡ್ ಬೇಡ ಎಂದು ಅಶ್ವಿನಿಗೆ ಖಡಕ್ ಆಗಿ ಹೇಳಿದ್ದಾರೆ ಕಿಚ್ಚ ಸುದೀಪ್.
ʻಯಾವಾಗ ನೋಡಿದರೂ ಏಕವಚನ ಏಕವಚನ ಅಂತೀರಾʼ ಎಂದು ಮೊದಲಿಗೆ ಕಿಚ್ಚ ಅಶ್ವಿನಿಗೆ ಕ್ಲಾಸ್ ತೆಗೆದುಕೊಂಡರು. ಅಶ್ವಿನಿ ಪ್ರತಿಕ್ರಿಯೆ ನೀಡಿ, ಗಿಲ್ಲಿ ಅವರು ಎಷ್ಟು ಆಗುತ್ತೋ ಅಷ್ಟು ತೇಜೋವಧೆ ಮಾಡೋಕೆ ನೋಡ್ತಾ ಇದ್ದರು ಎಂದಿದ್ದಾರೆ.
ಇದನ್ನೂ ಓದಿ: Bigg Boss Kannada 12: ಆಡಿದ ಮಾತಿಗೆ ಅಶ್ವಿನಿ ಬಳಿ ಕೈ ಮುಗಿದು ಕ್ಷಮೆ ಕೇಳಿದ ಗಿಲ್ಲಿ
ವುಮನ್ ಕಾರ್ಡ್ ಬೇಡ
ಈ ಬಗ್ಗೆ ಕೋಪಗೊಂಡ ಕಿಚ್ಚ, ʻನಿಮಗೆ ಹೋಗಿ ಬನ್ನಿ ಅನ್ನಿಸ್ಕೋಬೆಕು ಅಂದರೆ, ಪ್ರತಿ ಚಿಕ್ಕ ಮಗುಗೂ ಹೋಗಿ ಬನ್ನಿ ಅನ್ನೋದು ಕಲೀರಿ. ಮಾತು ಎತ್ತಿದ್ದರೆ, ಯಾವ ಹುಡುಗಿಗೂ ಹೀಗೆ ಅನ್ನಿಬೇಡಿ ಅಂತೀರಾ. ಯಾರು ಏನು ಮಾತಾಡ್ತಾ ಇದ್ದಾರೆ ಇಲ್ಲಿ. ಯಾರೆಲ್ಲ ಅಶ್ವಿನಿ ಅವರ ಕೈಯಲ್ಲಿ ನಿಮ್ಮ ಮಾನ ಮರ್ಯಾದೆ ಕೊಟ್ಟು ಕೂತಿದ್ದೀರಿ ಕೈ ಎತ್ತಿ ಹುಡುಗೀರುʼ ಎಂದಿದ್ದಾರೆ. ʻಅಶ್ವಿನಿ ಅವರೇ ಈ ಮನೆಯಲ್ಲಿ ವುಮನ್ ಕಾರ್ಡ್ʼ ಬೇಡ ಎಂದಿದ್ದಾರೆ.
ಹೆಣ್ಣು ಮಕ್ಕಳಿಗೆ ಯಾರೂ ಗೌರವ ನೀಡುತ್ತಿಲ್ಲ ಎಂದು ರಂಪಾಟ ಮಾಡಿ, ಉಪವಾಸ ಸತ್ಯಾಗ್ರಹ ಕೂಡ ಆರಂಭಿಸಿದ್ದರು ಅಶ್ವಿನಿ ಗೌಡ. ಎಲ್ಲರಿಂದಲೂ ಗೌರವ ನಿರೀಕ್ಷೆ ಮಾಡುವ ಅವರು ಬಹುತೇಕ ಸಂದರ್ಭಗಳಲ್ಲಿ ಏಕವಚನ ಬಳಕೆ ಮಾಡುತ್ತಾರೆ.
ಕಲರ್ಸ್ ಕನ್ನಡ ಪ್ರೋಮೋ
ಅಶ್ವಿನಿ ಗೌಡ ಉಪವಾಸ ಸತ್ಯಾಗ್ರಹ!
ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಅವರು ಕಣ್ಣೀರಿಟ್ಟಿದ್ದರು. ಈ ಹಿಂದೆ ಗಿಲ್ಲಿ ಅವರು ಏಕವಚನ ಬಳಕೆ ಮಾಡಿ, ಅಶ್ವಿನಿ ಅವರು ನೋವಲ್ಲಿ ಕಣ್ಣಿರಿಟ್ಟಿದ್ದರು. ಕ್ಯಾಪ್ಟನ್ ರಘು ಅವರು ಕೂಡ ಅಶ್ವಿನಿ ಅವರಿಗೆ ಏಕವಚನ ಬಳಕೆ ಮಾಡಿದ್ದು, ಇನ್ನಷ್ಟು ನೋವು ತರಿಸಿತ್ತು ಅಶ್ವಿನಿ ಅವರಿಗೆ. ಹೀಗಾಗಿ ಊಟ ಬಿಟ್ಟು ಕೂತಿದ್ದರು. ಮನೆಯವರು ಎಷ್ಟೇ ರಿಕ್ವೆಸ್ಟ್ ಮಾಡಿದರೂ ನಾನು ಊಟ ಮಾಡಲ್ಲ ಅಂತ ಕೂತಿದ್ದರು ಅಶ್ವಿನಿ ಗೌಡ.
ರಘು ಜೊತೆಗೆ ಕ್ಲ್ಯಾಶ್!
ಅಶ್ವಿನಿ ಏಕವಚನ ಬಳಕೆ ಮಾಡಿದ್ದಕ್ಕೆ ಗಿಲ್ಲಿ ಕೂಡ ಏಕವಚನ ಬಳಸಿದ್ದರು. ಮನೆಯ ಕ್ಲೀನಿಂಗ್ ವಿಚಾರವಾಗಿ , ರಘು ಹಾಗೂ ಅಶ್ವಿನಿ ಮಧ್ಯೆ ವಾದ ನಡೆದಿತ್ತು. ಈ ವೇಳೆ ರಘು ಅವರು ಅಶ್ವಿನಿ ಅವರ ವಿರುದ್ಧ ಏಕವಚನ ಬಳಕೆ ಮಾಡಿದ್ದರು. ಇದು ಅಶ್ವಿನಿ ಅವರಿಗೆ ನೋವುಂಟು ಮಾಡಿತ್ತು. ʻನನಗೆ ತುಂಬಾ ನೋವಾಗಿದೆ. ನನ್ನ ವಯಸ್ಸಿಗೆ, ನನ್ನ ಮೆಚ್ಯುರಿಟಿಗೆ ಈ ಥರಹದ ಅವಮಾನ ನನಗಲ್ಲ. ನನ್ನ ಸ್ವಾಭಿಮಾನ ಕೊಂದುಕೊಂಡು ತಿನ್ನೋಕೆ ಮನಸ್ಸು ಬರುತ್ತಾ? ನನಗೆ ನಾನೇ ಸ್ಟ್ಯಾಂಡ್ ತೆಗೆದುಕೊಳ್ಳುವೆʼ ಎಂದು ಕಣ್ಣೀರಿಟ್ಟಿದ್ದರು.
"ಹೆಣ್ಣುಮಕ್ಕಳಿಗೆ ಗೌರವ ನೀಡ್ತಾ ಇಲ್ಲ. ಬಿಗ್ ಬಾಸ್ ಮಧ್ಯ ಪ್ರವೇಶ ಮಾಡಬೇಕು. ಇಲ್ಲವೆ ನನ್ನನ್ನು ಹೊರಕ್ಕೆ ಕಳುಹಿಸಿ" ಎಂದು ಹಠ ಮಾಡುತ್ತಿದ್ದ ಅಶ್ವಿನಿ ಗೌಡ ಅವರನ್ನು ಮನೆಯ ಸದಸ್ಯರು ಸಮಾಧಾನ ಮಾಡೋಕೆ ತುಂಬಾ ಪ್ರಯತ್ನಿಸಿದ್ದರು.
ಇದನ್ನೂ ಓದಿ: Bigg Boss Kannada 12: ಎರಡನೇ ಬಾರಿ ಅಶ್ವಿನಿ ಗೌಡಗೆ ಕಳಪೆ ಪಟ್ಟ! ಅಭಿಷೇಕ್ ಕ್ಯಾಪ್ಟನ್, ಉತ್ತಮ ಇವರೇ ನೋಡಿ
ಈ ಮುಂಚೆ ರಕ್ಷಿತಾ ಅವರಿಗೂ ಬೇಕಾ ಬಿಟ್ಟಿ ಮಾತನಾಡಿ, ಕೆಲವು S ಪದ ಬಳಕೆ ಮಾಡಿ, ಕಾರ್ಟೂನ್, ಫ್ರೀ ಪ್ರಾಡಕ್ಟ್, ಅಂತೆಲ್ಲ ಪದ ಬಳಕೆ ಮಾಡಿದ ಅಶ್ವಿನಿ ಅವರು ಹೇಗೆ ಬೇರೆಯವರಿಂದ ಗೌರವ ನಿರೀಕ್ಷೆ ಮಾಡ್ತಾರೆ? ಅಂತ ನೆಟ್ಟಿಗರು ಕಮೆಂಟ್ ಕೂಡ ಮಾಡಿದ್ದರು.