ಬಿಗ್ ಬಾಸ್ ಸೀಸನ್ 12ರ (Bigg Boss Kannada 12) ಈ ವಾರದ ವೀಕೆಂಡ್ ಪಂಚಾಯ್ತಿಯಲ್ಲಿ ಅಶ್ವಿನಿ ಗೌಡ ಹಾಗೂ ಚಂದ್ರಪ್ರಭ (Chandraprabha) ಅವರಿಗೆ ಚಳಿ ಬಿಡಿಸಿದ್ದಾರೆ ಕಿಚ್ಚ ಸುದೀಪ್. ಈ ಹಿಂದೆ ಬಿಗ್ ಬಾಸ್ ಸ್ಪರ್ಧಿಗಳಿಗೆ ಮಸಿ ಬಳಿಯುವ ಟಾಸ್ಕ್ ನೀಡಿದ್ದರು. ಆ ಸಂದರ್ಭದಲ್ಲಿ ಕಾವ್ಯ ಹಾಗೂ ಗಿಲ್ಲಿಯ (Kavya Gilli) ಗೆಳೆತನದ ಬಗ್ಗೆ ಕೆಟ್ಟದಾಗಿ ಮಾತನಾಡಿದರು. ಈ ಮಾತು ಅದೆಷ್ಟು ಕೆಟ್ಟದಾಗಿತ್ತು ಎಂದರೆ ಕಾವ್ಯಾ ಬೇಸರ ಮಾಡಿಕೊಂಡರು. ಈ ಬಗ್ಗೆ ಸುದೀಪ್ (Sudeep) ಮಾತನಾಡಿದ್ದಾರೆ. ಅಷ್ಟೇ ಅಲ್ಲ ಎರಡು ವಿಟಿ (VT) ತೋರಿಸಿ ನಡೆ ಹಾಗೂ ನುಡಿ ಬಗ್ಗೆ ಅರ್ಥ ಮಾಡಿಸಿದ್ದಾರೆ.
ಚಂದ್ರಪ್ರಭ ಕೊಟ್ಟ ಕಾರಣ
ಚಂದ್ರಪ್ರಭ ಅವರು ಗಿಲ್ಲಿ ನಟ, ಕಾವ್ಯ ಶೈವ ಅವರ ಸ್ನೇಹವನ್ನು ಟಾರ್ಗೆಟ್ ಮಾಡಿ ಮಾತನಾಡಿದ್ದರು.
ಇದನ್ನೂ ಓದಿ: Bigg Boss Kannada 12: `ತ್ಯಾಗ ಮಾಡಿದ ತಕ್ಷಣ ಎಲ್ಲವೂ ಸತ್ಯ ಅಂತಲ್ಲ'; ಧನುಷ್ ಹೊಗಳಿ ಈ ವಾರ ಚಪ್ಪಾಳೆ ಕೊಟ್ಟ ಕಿಚ್ಚ
ಎಲ್ಲ ವಿಚಾರದಲ್ಲಿಯೂ ನನ್ನ ತಂಗಿ ಕಾವ್ಯ ಶೈವ ಕರೆಕ್ಟ್ ಆಗಿ ಹೋಗ್ತಿದ್ದಾಳೆ ಅಂತ ನಾನು ಅಂದುಕೊಂಡಿದ್ದೆ. ಹಂಸ್, ಗುಂಡಿ ಎಲ್ಲಿ ಸಿಗ್ತಿದೆಯೋ ಅಲ್ಲಿ ಕರೆಕ್ಟ್ ಆಗಿ ಹೋಗ್ತಿದ್ದಾಳೆ ಅಂತ ಅಂದುಕೊಂಡಿದ್ದೆ. ಒಳ್ಳೆಯ ದಾರಿಯಲ್ಲಿ ಹೋಗ್ತಿದ್ದವಳಿಗೆ, ಗಾಡಿ ಓಡಿಸ್ಕೊಂಡು ಬರೋನು ಚೋಕ್ ಕೊಟ್ಟ ಅಂತ ಅವಳು ದಾರಿ ತಪ್ಪಿದಳು ಅಂತ ಅನಿಸುತ್ತದೆ ಎಂದಿದ್ದರು.
ಈ ಬಗ್ಗೆ ಕಿಚ್ಚ ಸುದೀಪ್ ಅವರು ಮಾತನಾಡಿ, ನಡೆ ಹೇಗೆ ಇರುತ್ತೋ ನುಡಿಯೂ ಹಾಗೇ ಇರಬೇಕು ಎಂದು ಬುದ್ದಿವಾದ ಹೇಳಿದ್ದಾರೆ. ರಿಷಾ ಜೊತೆ ಚಂದ್ರಪ್ರಭ ಇರೋ ವಿಡಿಯೋ ಪ್ಲೇ ಮಾಡಿಸಿ ವಾರ್ನ್ ಜೊತೆ ಅರಿವು ಮೂಡಿಸಿದ್ದಾರೆ.
ಸುದೀಪ್ ಹೇಳಿದ್ದೇನು?
ಚಂದ್ರಪ್ರಭ ಅವರೇ ನಿಮ್ಮ ಅಭಿಪ್ರಾಯಕ್ಕೆ ನಮ್ಮ ಗೌರವ ಇದೆ. ಅಭಿಪ್ರಾಯ ಹಂಚಿಕೊಳ್ಳುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ ಮನುಷ್ಯನಿಗೆ ನಡೆ ನುಡಿ ತುಂಬಾ ಮುಖ್ಯ. ನಮ್ಮ ನಡೆ ಹೇಗೆ ಇರುತ್ತೋ ಹಾಗೇ ನುಡಿಯಲ್ಲಿ ಇರಬೇಕು ಎಂದು ಅವರು ಹಾಗೂ ರಿಷಾ ಇರೋ ವಿಟಿಯನ್ನ ತೋರಿಸಿದ್ದಾರೆ.
ಇದಾದ ಬಳಿಕ ಸುದೀಪ್ ಅವರು ‘ತಂಗಿ ಎಂದು ಕರೆಯುವ ನೀವು ಈ ರೀತಿಯ ವಿಚಾರಗಳನ್ನು ವೈಯಕ್ತಿಕವಾಗಿ ಕರೆದು ಹೇಳಬೇಕು. ನನ್ನ ತಂಗಿ ಆಗಿದ್ದರೆ ನಾನು ಎಲ್ಲರ ಮುಂದೆ ಬಹಿರಂಗವಾಗಿ ಈ ಬಗ್ಗೆ ಹೇಳ್ತಾ ಇರಲಿಲ್ಲ’ ಎಂದರು. ಆ ಬಳಿಕ ಚಂದ್ರಪ್ರಭ ಅವರು ಕ್ಷಮೆ ಕೇಳಿದರು.
ಈ ಹಿಂದೆ ಬೇಸರ ಹೊರ ಹಾಕಿದ್ದ ಕಾವ್ಯ
ಲವ್ ಅನ್ನೋ ಟ್ಯಾಗ್ ಕೊಟ್ಟ ಚಂದ್ರಪ್ರಭ ಬಗ್ಗೆ ಕಾವ್ಯ ಕೂಡ ಬೇಸರ ಹೊರಹಾಕಿದರು. `ಅಣ್ಣ ಅಣ್ಣ ಅಂತ ಕಾವ್ಯ ಎನ್ನೋ ಹೆಸರಿಗೆ ನೀವು ಮಸಿ ಬಳಿದಿದ್ದೀರಿ. ನೀವು ನಮ್ಮ ಜೊತೆ ಇರ್ತೀರಿ, ಗಿಲ್ಲಿ ಜೊತೆ ಇರ್ತೀರಿ. ನಮ್ಮಿಬ್ಬರ ಜೊತೆ ಯಾರು ಏನು ಅಂದುಕೊಳ್ತಾರೋ ಏನೋ.
ಇದನ್ನೂ ಓದಿ: BBK 12: ತಂಗಿ ಅಂಥ ಕರೆದು ಹೀಗಾ ಹೇಳೋದು? ಕಾವ್ಯ ಸ್ನೇಹವನ್ನೇ ಟಾರ್ಗೆಟ್ ಮಾಡಿದ ಚಂದ್ರಪ್ರಭ
ನೀವು ಮಾತ್ರ ಲವ್ ಎನ್ನೋ ಟೈಟಲ್ ಕೊಟ್ರಿ. ಈ ರೀತಿ ಇಲ್ಲ ಎನ್ನೋದು ನಿಮಗೆ ಗೊತ್ತಿದೆ, ಆದರೆ ನೀವು ಹೀಗೆ ಹೇಳಿದ್ದು ಬೇಸರ ತಂದಿದೆ. ನಾನು ರಾಖಿ ಕಟ್ಟಿ, ಅಣ್ಣಾ ಅಂತ ಕರೆದಿದ್ದೀನಿ, ನಾನು, ಗಿಲ್ಲಿ ಹೇಗಿದೀವಿ ಅಂತ ಇಬ್ಬರಿಗೂ ಗೊತ್ತಿದೆ' ಎಂದು ಕಾವ್ಯ ಶೈವ ಹೇಳಿದ್ದರು.