ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannnada 12: ಓವರ್ ಕಾನ್ಫಿಡೆನ್ಸ್ ಬೇಡ! ಮಾಳು ವಿಚಾರಕ್ಕೆ ಗಿಲ್ಲಿ ನಟನಿಗೆ ಕಿಚ್ಚನ ಕ್ಲಾಸ್‌

BBK 12: ಗಿಲ್ಲಿ ಅವರು ಕಳೆದ ವಾರದಿಂದ ಸರಿಯಾಗಿ ಆಡುತ್ತಿಲ್ಲ. ತಂತ್ರ ಕುತಂತ್ರಗಳನ್ನೂ ಮಾಡಿದ್ದಾರೆ. ಅವರ ಆಟ ಹಳಿ ತಪ್ಪಿದೆ ಎಂಬುದೂ ಸ್ಪಷ್ಟ. ಮಾಳು ಅವರಿಗೆ ಕಳಪೆಯನ್ನ ಬಹುತೇಕರು ನೀಡಿದ್ದರು. ಮಾಳು ಕೊಟ್ಟ ಕಾರಣವೇ ಹಾಗಿತ್ತು. ಈ ವಾರ ನಾಮಿನೇಷನ್ ನಡೆಯಿತು. ಈ ನಾಮಿನೇಷನ್ ಮಾಡುವ ಅಧಿಕಾರ ಕ್ಯಾಪ್ಟನ್ ಮಾಳುವಿಗೆ ಇತ್ತು. ಮಾಳು ಅವರು ಒಂದಷ್ಟು ಹೆಸರನ್ನು ನಾಮಿನೇಟ್ ಮಾಡಿದರು. ಅವರು ನೀಡಿದ ಕಾರಣ ಸರಿ ಇಲ್ಲ ಎಂಬ ಕಾರಣಕ್ಕೆ ಅವರಿಗೆ ಕಳಪೆ ಸಿಕ್ಕಿದೆ. ಆ ದಿನ ಗಿಲ್ಲಿ ನಟ ಅವರು ಕ್ಯಾಪ್ಟನ್ ಮಾಳು ಅವರನ್ನು ಹೊಗಳಿದ್ದರು. ಈ ಬಗ್ಗೆ ಸುದೀಪ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ ಸೀಸನ್‌ 12ರಲ್ಲಿ (Bigg Boss Kannada 12) ಕಳೆದ ವಾರ ಮಾಳು (Malu Cpatain) ಕ್ಯಾಪ್ಟನ್ಸಿಯಲ್ಲಿ ಹಲವು ಬದಲಾವಣೆಗಳು ಆದವು. ಈ ವಾರ ನಾಮಿನೇಷನ್ ನಡೆಯಿತು. ಈ ನಾಮಿನೇಷನ್ ಮಾಡುವ ಅಧಿಕಾರ ಕ್ಯಾಪ್ಟನ್ ಮಾಳುವಿಗೆ ಇತ್ತು. ಮಾಳು ಅವರು ಒಂದಷ್ಟು ಹೆಸರನ್ನು ನಾಮಿನೇಟ್ ಮಾಡಿದರು. ಅವರು ನೀಡಿದ ಕಾರಣ ಸರಿ ಇಲ್ಲ ಎಂಬ ಕಾರಣಕ್ಕೆ ಅವರಿಗೆ ಕಳಪೆ ಸಿಕ್ಕಿದೆ.

ಆದರೆ ಮಾಳು ಅವರಿಗೆ ಗಿಲ್ಲಿ ಮಾತ್ರ ಉತ್ತಮ ನೀಡಿದ್ದರು. ಕೊಟ್ಟ ಕಾರಣ ಸೋಷಿಯಲ್‌ ಮೀಡಿಯಾದಲ್ಲಿಯೂ ಮೆಚ್ಚಗಿ ವ್ಯಕ್ತವಾಗಿತ್ತು. ಆದರೆ ಕಿಚ್ಚ ಸುದೀಪ್‌ ಈ ಬಗ್ಗೆ ಗರಂ ಆಗಿದ್ದಾರೆ. ಗಿಲ್ಲಿ ಅವರಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: Bigg Boss Kannada 12: ಗಿಲ್ಲಿ- ರಕ್ಷಿತಾ ತಂತ್ರ ಕುತಂತ್ರ ಆಟ! ಕಿಚ್ಚ ಸುದೀಪ್‌ ಕ್ಲಾಸ್‌ ಫಿಕ್ಸ್‌

ಓವರ್ ಕಾನ್ಫಿಡೆನ್ಸ್ ಬೇಡ

ಗಿಲ್ಲಿ ಅವರು ಕಳೆದ ವಾರದಿಂದ ಸರಿಯಾಗಿ ಆಡುತ್ತಿಲ್ಲ. ತಂತ್ರ ಕುತಂತ್ರಗಳನ್ನೂ ಮಾಡಿದ್ದಾರೆ. ಅವರ ಆಟ ಹಳಿ ತಪ್ಪಿದೆ ಎಂಬುದೂ ಸ್ಪಷ್ಟ. ಮಾಳು ಅವರಿಗೆ ಕಳಪೆಯನ್ನ ಬಹುತೇಕರು ನೀಡಿದ್ದರು. ಮಾಳು ಕೊಟ್ಟ ಕಾರಣವೇ ಹಾಗಿತ್ತು.

ಆ ದಿನ ಗಿಲ್ಲಿ ನಟ ಅವರು ಕ್ಯಾಪ್ಟನ್ ಮಾಳು ಅವರನ್ನು ಹೊಗಳಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಸುದೀಪ್ ಕೇಳಿದರು. ಆದರೆ, ಗಿಲ್ಲಿಗೆ ಮಾತು ಬರಲೇ ಇಲ್ಲ. ʻಅಧಿಕ ಪ್ರಸಂಗ, ಓವರ್ ಕಾನ್ಫಿಡೆನ್ಸ್ ಬೇಡʼ ಎಂದು ಸುದೀಪ್ ಅವರು ಎಚ್ಚರಿಕೆ ನೀಡಿದರು ಎಂಬುದು ವಿಶೇಷ.

ಗಿಲ್ಲಿ ನಟ ಅವರು ಈ ವಾರ ಆಟ ಹಾಳು ಮಾಡಿದ್ದಾರೆ ಎಂದು ಹೇಳಲಾಗುತ್ತಾ ಇದೆ. ಈ ವಿಚಾರದಲ್ಲೂ ಸುದೀಪ್ ಅವರು ಕ್ಲಾಸ್ ತೆಗೆದುಕೊಂಡಿದ್ದಾರೆ.

ಮಾಳು ಬಗ್ಗೆ ಗಿಲ್ಲಿ ಕೊಟ್ಟ ಕಾರಣ ಏನಾಗಿತ್ತು?

ʻಉತ್ತಮವನ್ನು ಮಾಳು ಅವರಿಗೆ ಕೊಡಲು ಇಷ್ಟ ಪಡುತ್ತೇನೆ. ನನಗೂ ಅನ್ನಿಸಿತ್ತು. 6 ಜನಕ್ಕೆ ನಾಮಿನೇಟ್‌ ಮಾಡುವಾಗ, ಯಾಕೆ ಇವರು ಈ ರೀತಿ ಕಾರಣ ಕೊಡುತ್ತಿದ್ದಾರೆ ಅಂತ. ಬಹುಶಃ, ಅವರು ಯಾತಕ್ಕಾಗಿ ನಾಮಿನೇಟ್‌ ಮಾಡಿದೆ ಅಂತ ಹಿಂಟ್‌ ಕೊಡಲು ಹಾಗೆ ಮಾಡಿರಬೇಕು. ಆಮೇಲೆ ಮಾಳು ಅವರ ನಿರ್ಧಾರ ಸರಿ ಅನ್ನಿಸಿತು.

ಏನಕ್ಕೆ ಅಂದ್ರೆ ಈ ನಾಮಿನೇಟ್‌ ಆದವರು, ತಾವು ಸೇಫ್‌ ಆಗಬೇಕು ಅಂತ ಕಿತ್ತಾಡ್ತಾ ಇರಲಿಲ್ಲ. ಮುಂದಿನ ಅಪೋಸಿಟ್‌ ತಂಡದವರು ನಾಮಿನೇಟ್‌ ಆಗಬೇಕು ಅಂತ ತಲೆ ಕೆಡಿಸಿಕೊಳ್ತಾ ಇದ್ದರು. ಅದು ಎದ್ದು ಕಾಣಿಸ್ತಾ ಇತ್ತು ಎಂದಿದ್ದರು.



ಇನ್ನು ಕಳಪೆ ರಾಶಿಕಾ ಎಂದರು. ನಾನು ಉದಾಹರಣೆ ಕೊಟ್ಟು ಹೇಳ್ತಿನಿ. ನೀನು ಕಸ ಅಲ್ಲ ರಸ. ಆದರೆ ರಸ ಆಗದೇ ಇದ್ದರೂ ಪರವಾಗಿಲ್ಲ. ಸ್ಪಂದನಾ ಕಸ ಆಗಬೇಕು ಅಂತ ತಲೆ ಕೆಡಿಸಿಕೊಳ್ತಾ ಇದ್ದರು. ಹಾಗೇ ರಾಶಿಕಾ ಅವರು ಗೇಮ್‌ನಲ್ಲಿ ಕಾಣಿಸಿಕೊಳ್ಳಲೇ ಇಲ್ಲ ಎಂಬ ಕಾರಣವನ್ನು ನೀಡಿದ್ದರು.

ಇದನ್ನೂ ಓದಿ: Bigg Boss Kannada 12: ಕಿಚ್ಚನ ಕೋಪ ನೆತ್ತಿಗೆ ಏರಿಸಿದ್ರಾ ರಕ್ಷಿತಾ? ಗಿಲ್ಲಿ ಸೀಕ್ರೆಟ್‌ ಮ್ಯಾಚ್‌ ಬಗ್ಗೆ ಸುದೀಪ್‌ ಕೆಂಡ!

ಈ ವಾರ ಬಿಗ್‌ ಬಾಸ್‌ʼ ಮನೆಯಲ್ಲಿ ಈ ವಾರ ಒಟ್ಟು 8 ಮಂದಿ ನಾಮಿನೇಟ್‌ ಆಗಿದ್ದಾರೆ. ಅಶ್ವಿನಿ ಗೌಡ, ಜಾಹ್ನವಿ, ರಿಷಾ ಗೌಡ, ರಾಶಿಕಾ ಶೆಟ್ಟಿ, ರಘು, ಕಾಕ್ರೋಚ್‌ ಸುಧಿ, ರಕ್ಷಿತಾ ಶೆಟ್ಟಿ ಹಾಗೂ ಧ್ರುವಂತ್ ಅವರು ಈ ವಾರ ನಾಮಿನೇಟ್‌ ಆಗಿದ್ದರು. ನಿನ್ನೆ ರಕ್ಷಿತಾ ಅಶ್ವಿನಿ ಸೇಫ್‌ ಆಗಿದ್ದಾರೆ

Yashaswi Devadiga

View all posts by this author