Bigg Boss Kannada 12: ಗಿಲ್ಲಿ- ರಕ್ಷಿತಾ ತಂತ್ರ ಕುತಂತ್ರ ಆಟ! ಕಿಚ್ಚ ಸುದೀಪ್ ಕ್ಲಾಸ್ ಫಿಕ್ಸ್
ಈ ವಾರ (Bigg Boss Kannada 12) ಒಂದರ ಹಿಂದೊಂದು ಟಾಸ್ಕ್ಗಳು ನಡೆದಿವೆ. ಎಲ್ಲ ಸ್ಪರ್ಧಿಗಳು ಸಹ ಟಾಸ್ಕ್ನಲ್ಲಿ ಆಡಲು ಶ್ರಮ ಪಟ್ಟಿದ್ದರು. ಅಶ್ವಿನಿ ಮತ್ತು ಗಿಲ್ಲಿ ಬೇರೆ ಬೇರೆ ತಂಡಗಳಲ್ಲಿ ಇದ್ದರು. ಅಶ್ವಿನಿ ತಂಡದಲ್ಲಿ ರಕ್ಷಿತಾ ಶೆಟ್ಟಿ (Rakshitha Shetty) ಸಹ ಇದ್ದರು. ಆದರೆ ಟಾಸ್ಕ್ ವೇಳೆ ಗಿಲ್ಲಿ ಮತ್ತು ರಕ್ಷಿತಾ ಪರಸ್ಪರ ಗುಟ್ಟಾಗಿ ಮಾತನಾಡಿದ್ದು, ಅಶ್ವಿನಿಗೆ ವಿಪರೀತ ಸಿಟ್ಟು ತರಿಸಿತ್ತು. ಇದೀಗ ಹೊಸ ಪ್ರೋಮೋ ಔಟ್ ಆಗಿದೆ. ಗಿಲ್ಲಿ ನಟ (Gilli Nata) ಅವರು ಸಾಕಷ್ಟು ಕುತಂತ್ರ ಮಾಡಿದ್ದರು. ರಕ್ಷಿತಾನ (Rakshitha Shetty) ತಮ್ಮ ತಂಡದ ವಿರುದ್ಧವೇ ಎತ್ತಿ ಕಟ್ಟಿದ್ದರು. ಇದೇ ವಿಷಯ ಇಟ್ಟುಕೊಂಡು ಸುದೀಪ್ ಮಾತನಾಡುವುದು ಕನ್‌ಫರ್ಮ್ ಆಗಿದೆ.
ಬಿಗ್ ಬಾಸ್ ಕನ್ನಡ -
ವೀಕೆಂಡ್ ಬಂತು ಅಂದ್ರೆ ಬಿಗ್ ಬಾಸ್ (Bigg Boss Kannada 12) ಹೊಸ ಪ್ರೋಮೋಗೆ (New Promo) ಕಾಯ್ತಾ ಇರ್ತಾರೆ ವೀಕ್ಷಕರು. ಕಿಚ್ಚ (Sudeep) ಯಾರಿಗೆ ಕ್ಲಾಸ್ (Class) ತೆಗೆದುಕೊಳ್ಳಬಹುದು ಎಂಬ ಕುತೂಹಲ ವೀಕ್ಷಕರಿಗೆ. ಇದೀಗ ಹೊಸ ಪ್ರೋಮೋ ಔಟ್ ಆಗಿದೆ. ಗಿಲ್ಲಿ ನಟ ಅವರು ಸಾಕಷ್ಟು ಕುತಂತ್ರ ಮಾಡಿದ್ದರು. ರಕ್ಷಿತಾನ (Rakshitha Shetty) ತಮ್ಮ ತಂಡದ ವಿರುದ್ಧವೇ ಎತ್ತಿ ಕಟ್ಟಿದ್ದರು. ಇದೇ ವಿಷಯ ಇಟ್ಟುಕೊಂಡು ಸುದೀಪ್ ಮಾತನಾಡುವುದು ಖಚಿತವಾಗಿದೆ.
ಸೀಕ್ರೆಟ್ ಮ್ಯಾಚ್
ಸುದೀಪ್ ಪ್ರೋಮೋದಲ್ಲಿ ಹೇಳಿದ್ದು ಹೀಗೆ, ಬಿಗ್ ಬಾಸ್ ಮನೆಯ ಉದ್ದೇಶವನ್ನು ಪಕ್ಕದಲ್ಲಿ ಇಟ್ಟು, ಸೀಕ್ರೆಟ್ ಮ್ಯಾಚ್ ಸ್ಟಾರ್ಟ್ ಮಾಡಿದ್ರೆ, ಒಂದು ಲೆವೆಲ್ ತನಕ ಇದ್ದರೆ ಓಕೆ. ಅದೇ ಉಲ್ಟಾ ಹೊಡೆಯೋಕೆ ಹೋದ್ರೆ, ಟ್ರಾಜಡಿ ಅಲ್ಲಿಂದ ಪ್ರಾರಂಭವಾಗುತ್ತೆ ಅಂತ ಖಡಕ್ ಆಗಿಯೇ ಸುದೀಪ್ ಹೇಳಿದ್ದಾರೆ. ಅಂದರೆ ಈ ಮೂಲಕ ಮೂರನೇಯ ಟೀಮ್ (ಗಿಲ್ಲಿ-ರಕ್ಷಿತಾ) ಬಗ್ಗೆ ಸುದೀಪ್ ಖಡಕ್ ಆಗಿ ಹೇಳಿದ್ದಾರೆ.
ಇದನ್ನೂ ಓದಿ: Bigg Boss Kannada 12: ರಕ್ಷಿತಾ ಶೆಟ್ಟಿ ಬಗ್ಗೆ ಕಾವ್ಯ ಅಸಮಾಧಾನ! ವೀಕ್ಷಕರು ಗರಂ
ಗಿಲ್ಲಿ ಕೈಗೊಂಬೆ ಆದ್ರಾ ರಕ್ಷಿತಾ?
ಈ ವಾರ ಒಂದರ ಹಿಂದೊಂದು ಟಾಸ್ಕ್ಗಳು ನಡೆದಿವೆ. ಎಲ್ಲ ಸ್ಪರ್ಧಿಗಳು ಸಹ ಟಾಸ್ಕ್ನಲ್ಲಿ ಆಡಲು, ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಶ್ರಮ ಪಟ್ಟಿದ್ದರು. ಅಶ್ವಿನಿ ಮತ್ತು ಗಿಲ್ಲಿ ಬೇರೆ ಬೇರೆ ತಂಡಗಳಲ್ಲಿ ಇದ್ದರು. ಅಶ್ವಿನಿ ತಂಡದಲ್ಲಿ ರಕ್ಷಿತಾ ಶೆಟ್ಟಿ ಸಹ ಇದ್ದರು. ಆದರೆ ಟಾಸ್ಕ್ ವೇಳೆ ಗಿಲ್ಲಿ ಮತ್ತು ರಕ್ಷಿತಾ ಪರಸ್ಪರ ಗುಟ್ಟಾಗಿ ಮಾತನಾಡಿದ್ದು, ಅಶ್ವಿನಿಗೆ ವಿಪರೀತ ಸಿಟ್ಟು ತರಿಸಿತ್ತು. ಅಶ್ವಿನಿ, ರಕ್ಷಿತಾ ಮೇಲೆ ಕೂಗಾಡಿದ್ದರು. ಗಿಲ್ಲಿ ಮತ್ತು ರಕ್ಷಿತಾ ತಂತ್ರ-ಕುತಂತ್ರಕ್ಕೆ ಬೆಂಕಿಯಾಗಿದ್ದರು.
ರಕ್ಷಿತಾ ಶೆಟ್ಟಿ ಅವರು ಒಂದು ಟೀಂ ಆದರೆ, ಗಿಲ್ಲಿ ಮತ್ತೊಂದು ತಂಡದಲ್ಲಿ ಇದ್ದರು. ರಕ್ಷಿತಾ ತಂಡ ಗೆದ್ದಿತು. ಈ ಕಾರಣಕ್ಕೆ ಅವರ ತಂಡದ ಒಬ್ಬರನ್ನು ನಾಮಿನೇಷನ್‌ನಿಂದ ಬಚಾವ್ ಮಾಡಬೇಕಿತ್ತು. ಈ ಬಗ್ಗೆ ಚರ್ಚೆ ಮಾಡಲು ಹೊರಡುವ ಮುನ್ನ ಗಿಲ್ಲಿ ಅವರು ರಕ್ಷಿತಾ ಶೆಟ್ಟಿ ಬಳಿ ಮಾತನಾಡುತ್ತಿರುತ್ತಿದ್ದರು. ರಕ್ಷಿತಾ ಅವರು ಆಗಾಗ ಎದುರಾಳಿ ತಂಡದ ಗಿಲ್ಲಿಯಿಂದ ಹಿಂಟ್ ತೆಗೆದುಕೊಂಡು ಹೋಗುತ್ತಿದ್ದರು.
ರಾಶಿಕಾ ಕೂಡ ರಕ್ಷಿತಾ ಮೇಲೆ ಗರಂ!
ರಾಶಿಕಾ ವಿಚಾರದಲ್ಲಿಯೂ ರಕ್ಷಿತಾ ಎಡವಿದ್ದರು. ನಾಮಿನೇಷನ್‌ನಿಂದ ಪಾರಾಗಲು ಅಶ್ವಿನಿ ತಂಡದಲ್ಲಿ ಬಹುತೇಕರು ರಾಶಿಕಾ ಅವರನ್ನು ಸೇಫ್ ಮಾಡಲು ವೋಟ್ ಹಾಕಿದ್ದರು. ಆದರೆ ರಕ್ಷಿತಾ ಅವರು ಸುಧಿ ಅವರ ಹೆಸರನ್ನು ತೆಗೆದುಕೊಂಡರು. ಇದು ರಾಶಿಕಾ ಅವರಿಗೆ ಕೋಪ ಬರಿಸುವಂತೆ ಮಾಡಿತ್ತು.
ರಾಶಿಕಾ ಈ ವೇಳೆ ಪ್ರತಿ ವಾರ ನಾನು ನಾಮಿನೇಟ್ ಆಗಿದ್ದೇನೆ ಎಂದರು. ಅದಕ್ಕೆ ಒಪ್ಪದ ರಕ್ಷಿತಾ, ನಾವು ಕೂಡ ನಾಮಿನೇಷನ್ ಫೇಸ್ ಮಾಡಿದ್ದೇವೆ ಎಂದಿದ್ದಾರೆ. ರಾಶಿಕಾ ಕೂಡ ಇಡೀ ತಂಡವೇ ಒಂದು ನಿರ್ಧಾರ ತೆಗೆದುಕೊಂಡಿರುವಾಗ, ರಕ್ಷಿತಾ ನಿರ್ಧಾರವನ್ನು ನಾನು ಒಪ್ಪುವುದಿಲ್ಲ ಎಂದು ಕೂಗಾಡಿದ್ದರು.
ಇದನ್ನೂ ಓದಿ: Bigg Boss Kannada 12: ಮುಖದ ಮೇಲೆ ಟವೆಲ್ ಹಾಕಿಕೊಂಡು ಬಿಕ್ಕಿ ಬಿಕ್ಕಿ ಅತ್ತ ಮಾಳು ; ವೀಕ್ಷಕರ ಬೇಸರ
ಬಿಗ್ ಬಾಸ್ʼ ಮನೆಯಲ್ಲಿ ಈ ವಾರ ಒಟ್ಟು 8 ಮಂದಿ ನಾಮಿನೇಟ್ ಆಗಿದ್ದಾರೆ. ಅಶ್ವಿನಿ ಗೌಡ, ಜಾಹ್ನವಿ, ರಿಷಾ ಗೌಡ, ರಾಶಿಕಾ ಶೆಟ್ಟಿ, ರಘು, ಕಾಕ್ರೋಚ್ ಸುಧಿ, ರಕ್ಷಿತಾ ಶೆಟ್ಟಿ ಹಾಗೂ ಧ್ರುವಂತ್ ಅವರು ಈ ವಾರ ನಾಮಿನೇಟ್ ಆಗಿದ್ದಾರೆ. ಇದರಲ್ಲಿ ಬಹುತೇಕರನ್ನು ನಾಮಿನೇಟ್ ಮಾಡಿರುವುದು ಕ್ಯಾಪ್ಟನ್ ಆಗಿದ್ದ ಮಾಳು ನಿಪನಾಳ್