ಬಿಗ್ ಬಾಸ್ ಮನೆಯಲ್ಲಿ (Bigg Boss Kannada 12) ಸಖತ್ ಹೈಲೈಟ್ ಆಗೋ, ಒಳ್ಳೆಯ ರೀತಿಯಲ್ಲಿ ಆಟ ಪ್ರದರ್ಶನ ಮಾಡುತ್ತಿರುವವರಲ್ಲಿ ಗಿಲ್ಲಿಯೇ (Gilli) ಮುಂದೆ. ಈ ಬಾರಿ ಕಪ್ ಗೆಲ್ಲುವ ಎಲ್ಲ ಲಕ್ಷಣ ಇವರಿಗೆ ಇದೆ. ಆದರೆ ಈಗೀಗ ಆಟದಲ್ಲಿ ಹಳಿ ತಪ್ಪಿರುವಂತಿದೆ ಎಂಬುದು ಕೆಲವು ವೀಕ್ಷಕರ ಅಭಿಪ್ರಾಯ. ನಿನ್ನೆ ಗುಲಾಮ ಪಟ್ಟ ತೆಗೆದುಕೊಂಡಿದ್ದರೂ, ಕಾವ್ಯರ(Kavya Shaiva) ವಿಚಾರಕ್ಕೆ ಗಿಲ್ಲಿ ಆಟವನ್ನ ಸರಿಯಾಗಿ ನಿಭಾಯಿಸದೇ, ಮನೆಮಂದಿಗೆಲ್ಲ ಶಿಕ್ಷೆ ಆಗುವಂತಾಯ್ತು ಎಂಬುದು ನೆಟ್ಟಿಗರು ಅಭಿಪ್ರಾಯ.
ಟಾಸ್ಕ್ ಏನು?
ನಿನ್ನೆ ಬಿಗ್ ಬಾಸ್ ಮನೆಮಂದಿಗೆ ದಿನಸಿ ಗಳಿಸಲು ಟಾಸ್ಕ್‌ವೊಂದನ್ನ ನೀಡಿದ್ದರು. ಮನೆಯಲ್ಲಿ ಊಟಕ್ಕೆ ಸದಾ ಮುಂದು, ಕೆಲಸ ಅಂತ ಬಂದರೆ ಹಿಂದೆ ಇರೋ ಸ್ಪರ್ಧಿಯನ್ನ ಹೇಳಿ ಎಂದಿದ್ದರು. ಅದರಂತೆ ಮನೆಯವರು ಒಮ್ಮತದಿಂದ ಗಿಲ್ಲಿ ಅವರ ಹೆಸರನ್ನು ಹೇಳಿದರು. ಹೀಗಾಗಿ ಗುಲಾಮ ಎಂಬ ಪಟ್ಟವನ್ನು ಪಡೆದ ಗಿಲ್ಲಿ, ಬಿಗ್ ಬಾಸ್ ರೂಲ್ಸ್‌ನಂತೆ ಎಲ್ಲ ಸದಸ್ಯರ ವೈಯಕ್ತಿಕ ಕೆಲಸವನ್ನು ಮಾಡಬೇಕಿತ್ತು.
ಇದನ್ನೂ ಓದಿ: Bigg Boss Kannada 12: ಒಬ್ಬರಿಗೊಬ್ಬರು ದೃಷ್ಟಿ ತೆಗೆದುಕೊಂಡ ಅಶ್ವಿನಿ-ಜಾಹ್ನವಿ; ಇವರೆಲ್ಲರ ಕಣ್ಣು ಬೀಳಬಾರದಂತೆ!
ಗಿಲ್ಲಿ ಅವರಿಗೆ ಕೆಲಸ ಮಾಡಿಸಲು ಕ್ಯಾಪ್ಟನ್ ರಘು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಆದರೂ ಬಹುತೇಕ ಎಲ್ಲ ಕೆಲಸವನ್ನು ಮಾಡಿಸಿದ್ದರು. ಆದರೆ ಯಾವಗ ಕಾವ್ಯ ಹಿಂದೆ ಹೋದರೋ ಅಲ್ಲಿ ಹಳಿ ತಪ್ಪಿದ್ದಾರೆ ಗಿಲ್ಲಿ.
ಕಾವ್ಯ ಅಣ್ಣ ಅಂತ ಕರೆದಿದ್ದೇ ತಪ್ಪಾಯ್ತಾ?
ಕಾವ್ಯಾ ಶೈವ ಅವರು ಗಿಲ್ಲಿಯನ್ನು ಅಣ್ಣ ಎಂದು ಕರೆದರು. ಇದರಿಂದ ಗಿಲ್ಲಿ ಕೋಪ ನೆತ್ತಿಗೇರಿತು. ಈ ಕಾರಣದಿಂದಲೇ ತಾವು ಕೆಲಸ ಮಾಡೋದಿಲ್ಲ ಎಂದು ಕುಳಿತರು. ಅವರನ್ನು ಸಮಾಧಾನ ಮಾಡಲು ಸಾಕಷ್ಟು ಸಮಯವೇ ಬೇಕಾಯಿತು. ಕಾವ್ಯಾ ಕ್ಷಮೆ ಕೇಳಿದರೆ ನಾನು ಕೆಲಸ ಮಾಡುತ್ತೇನೆ ಎಂದು ಗಿಲ್ಲಿ ಕೂತೇ ಬಿಟ್ಟರು. ಎಷ್ಟಾದರೂ ಕಾವ್ಯ ಮಾತ್ರ ಕ್ಷಮೆ ಕೇಳಿಲ್ಲ. ಬಳಿಕ ಕಾವ್ಯ ಜೊತೆ ಇನ್ಮುಂದೆ ಮಾತನಾಡುವುದಿಲ್ಲ ಎಂದು ಗಿಲ್ಲಿ ಶಪಥ ಮಾಡಿದರು.
ಮನೆಮಂದಿಗೆಲ್ಲ ಶಿಕ್ಷೆ
ಇದಾದ ಬಳಿಕ ಬಿಗ್ ಬಾಸ್ ಮನೆಯ ದಿನಸಿಗಳನ್ನು ಕಳುಹಿಸಿದರು. ಆದರೆ ಗಿಲ್ಲಿ ಟಾಸ್ಕ್ ಸರಿಯಾಗಿ ನಿರ್ವಹಿಸದ ಕಾರಣ ಕೇವಲ 3 ಐಟಮ್ ಕೊಟ್ಟರು. ಗಿಲ್ಲಿ ಸರಿಯಾಗಿ ಕೆಲಸ ನಿರ್ವಹಿಸದ ಕಾರಣಕ್ಕೆ ಬಿಗ್ ಬಾಸ್ ಇಡೀ ಮನೆಗೆ ಶಿಕ್ಷೆ ನೀಡಿದರು. ಕೆಲವು ಸ್ಪರ್ಧಿಗಳಲ್ಲಿ ಗಿಲ್ಲಿ ಕೆಲಸದ ಬಗ್ಗೆ ಅಸಮಾಧನ ಇತ್ತು ಎಂದು ಬಿಗ್ ಬಾಸ್ ಸೂಚಿಸಿದರು. ಇದಾದ ಬಳಿಕ ರಘು ಹಾಗೂ ಗಿಲ್ಲಿ ಅವರು ಮಾತನಾಡಿಕೊಂಡರು.
ಗಿಲ್ಲಿ, ಅಶ್ವಿನಿ ಗೌಡ ಮಧ್ಯೆ ಮಾತಿನ ಚಕಮಕಿ
ಇನ್ನೊಂದು ಕಡೆ ಅಶ್ವಿನಿ ಅವರಿಗೂ ಟಾಸ್ಕ್ ಇತ್ತು. ಬಿಗ್ ಬಾಸ್ ಸ್ಪರ್ಧಿಗಳಿಗೆ ಪದೇ ಪದೇ ಮನೆಯ ಮೂಲ ನಿಯಮವನ್ನು ಮುರಿಯುವ ಸ್ಪರ್ಧಿಯನ್ನು ಸೂಚಿಸಿ ಎಂದು ಬಿಗ್ ಬಾಸ್ ಹೇಳಿದ್ದಾರೆ. ಬಹುತೇಕ ಸ್ಪರ್ಧಿಗಳು ಅಶ್ವಿನಿ ಅವರ ಹೆಸರನ್ನು ಹೇಳಿದ್ದಾರೆ.
ಮನೆಯ ಸದಸ್ಯರ ಬಳಿ ಬಸ್ಕಿ ಹೊಡೆದು ನಿಯಮಗಳನ್ನು ಮುರಿಯುವುದಿಲ್ಲ ಎಂದು ಹೇಳಬೇಕು' ಎಂದು ಶಿಕ್ಷೆ ಕೊಟ್ಟಿದ್ದರು ಬಿಗ್ ಬಾಸ್, ಅಶ್ವಿನಿ ಅವರೂ ಅದರಂತೆ ಮಾಡಿದ್ದಾರೆ. ಆದರೆ ಗಿಲ್ಲಿ ಅವರ ವರ್ತನೆ ಕಂಡು ಅಶ್ವಿನಿ ಅವರಿಗೆ ಕೋಪ ಬರುವಂತೆ ಮಾಡಿದೆ. ಗಿಲ್ಲಿ ಬಳಿ ಬಂದಾಗ ಅವರು ಕಾಲ ಮೇಲೆ ಕಾಲು ಹಾಕಿ ಕೂತಿದ್ದರು.
ಇದು ಅಶ್ವಿನಿ ಗೌಡ ಕೋಪಕ್ಕೆ ಕಾರಣ ಆಗಿದೆ. `ತೀರಾ ಓವರ್ ಆಗಿ ಆಡಬೇಡ. ನಿನ್ನ ಧಿಮಾಕು ನಿನ್ನ ಹತ್ತಿರ ಇಟ್ಕೋ. ನಿನ್ನ ವ್ಯಕ್ತಿತ್ವ ಗೊತ್ತಾಗತ್ತೆ, ನನ್ನದಲ್ಲ' ಎಂದು ಗಿಲ್ಲಿಗೆ ಆವಾಜ್ ಹಾಕಿದ್ದಾರೆ.