Bigg Boss Kannada: ಸುದೀಪ್ ಮಾತಿಗೂ ಬೆಲೆ ಇಲ್ವಾ? ಅಶ್ವಿನಿ ಗೌಡ - ಜಾಹ್ನವಿ ಉದ್ಧಟತನಕ್ಕೆ ಕಠಿಣ ಶಿಕ್ಷೆ ನೀಡಿದ ಬಿಗ್ ಬಾಸ್
BBK 12: ಬಿಗ್ ಬಾಸ್ ಮನೆಯಲ್ಲಿ ಕೆಲವು ನಿಯಮಗಳಿವೆ. ಪಿಸು ಧ್ವನಿಯಲ್ಲಿ ಮಾತನಾಡುವಂತಿಲ್ಲ. ಮೈಕ್ ಧರಿಸದೇ ಇರುವಂತಿಲ್ಲ.ಇಷ್ಟು ಇದ್ದರೂ ಈ ಹಿಂದೆ ಜಾಹ್ನವಿ ಹಾಗೂ ಅಶ್ವಿನಿ ಗೌಡ ಡ್ರೆಸಿಂಗ್ ರೂಮ್ಗೆ ತೆರಳಿ, ಮೈಕ್ ಇಲ್ಲದೇ ಮಾತನಾಡಿದ್ದು ಕೂಡ ಅವರಿಂದಲೇ ಬಯಲಾಗಿತ್ತು. ಈಗ ಅವರು ಮತ್ತೆ ಡ್ರೆಸಿಂಗ್ ರೂಮ್ಗೆ ತೆರಳಿ ಪಿಸುದನಿಯಲ್ಲಿ ಮಾತನಾಡಿದ್ದಾರೆ. ಇದು ಬಿಗ್ ಬಾಸ್ ಅನ್ನೇ ಕೆರಳಿಸಿದೆ. ಮಾತ್ರವಲ್ಲ ಬಿಗ್ ಬಾಸ್ ಕೂಡ ಅತ್ಯಂತ ಕಠಿಣ ಶಿಕ್ಷೆ ನೀಡಿದ್ದಾರೆ.
ಬಿಗ್ ಬಾಸ್ ಕನ್ನಡ -
ಕಳೆದ ವಾರವಷ್ಟೇ ಅಶ್ವಿನಿ ಗೌಡ (Ashwini Gowda) ಹಾಗೂ ಜಾಹ್ನವಿ (Janhvi) ಅವರಿಗೆ ಸುದೀಪ್ ಅವರು ರೂಲ್ಸ್ ಬ್ರೇಕ್ ಮಾಡಿದ್ದಕ್ಕಾಗಿ ವಾರ್ನಿಂಗ್ (Warning) ಕೊಟ್ಟಿದ್ದರು. ಆದರೆ ಈ ಜೋಡಿ ಸೀರಿಯೆಸ್ ಆಗಿ ತೆಗೆದುಕೊಂಡಂತೆ ಕಾಣುತ್ತಿಲ್ಲ. ಮತ್ತದೇ ರಾಗ ಎಂಬಂತೆ, ಡ್ರೆಸ್ಸಿಂಗ್ ರೂಮ್‌ನಲ್ಲಿ (Dressing Room) ಗುಟ್ಟಾಗಿ ಮಾತಾಡಿಕೊಂಡಿದ್ದಾರೆ. ಇದು ಬಿಗ್ ಬಾಸ್ (Bigg Boss) ಅನ್ನೇ ಕೆರಳಿಸಿದೆ. ಮಾತ್ರವಲ್ಲ ಬಿಗ್ ಬಾಸ್ ಕೂಡ ಅತ್ಯಂತ ಕಠಿಣ ಶಿಕ್ಷೆ ನೀಡಿದ್ದಾರೆ.
ಕಿಚ್ಚ ಸುದೀಪ್ ನೀಡಿದ ಎಚ್ಚರಿಕೆಯನ್ನೂ ಮೀರಿದ ಜೋಡಿ!
ಬಿಗ್ ಬಾಸ್ ಮನೆಯಲ್ಲಿ ಕೆಲವು ನಿಯಮಗಳಿವೆ. ಪಿಸು ಧ್ವನಿಯಲ್ಲಿ ಮಾತನಾಡುವಂತಿಲ್ಲ. ಮೈಕ್ ಧರಿಸದೇ ಇರುವಂತಿಲ್ಲ.ಇಷ್ಟು ಇದ್ದರೂ ಈ ಹಿಂದೆ ಜಾಹ್ನವಿ ಹಾಗೂ ಅಶ್ವಿನಿ ಗೌಡ ಡ್ರೆಸಿಂಗ್ ರೂಮ್ಗೆ ತೆರಳಿ, ಮೈಕ್ ಇಲ್ಲದೇ ಮಾತನಾಡಿದ್ದು ಕೂಡ ಅವರಿಂದಲೇ ಬಯಲಾಗಿತ್ತು. ಈಗ ಅವರು ಮತ್ತೆ ಡ್ರೆಸಿಂಗ್ ರೂಮ್ಗೆ ತೆರಳಿ ಪಿಸುದನಿಯಲ್ಲಿ ಮಾತನಾಡಿದ್ದಾರೆ. ಕಿಚ್ಚ ಸುದೀಪ್ ನೀಡಿದ ಎಚ್ಚರಿಕೆ ಮೀರಿಯೂ ಮತ್ತೆ ಪಿಸುದನಿಯಲ್ಲಿ ಮಾತನಾಡಿದ್ದಾರೆ ಎಂದು ಬಿಗ್ ಬಾಸ್ ಹೇಳಿ ಅತ್ಯಂತ ಕಠಿಣ ಶಿಕ್ಷೆ ನೀಡಿದ್ದಾರೆ.
ಇದನ್ನೂ ಓದಿ: Bigg Boss Kannada 12: ಬರ್ತ್‌ಡೇ ಪಾರ್ಟಿಗೆ ಗಿಲ್ಲಿನ ಮಾತ್ರ ಸೇರಿಸಲ್ಲ! ಹೀಗ್ಯಾಕೆ ಅಂದ್ರು ಡಾಗ್ ಸತೀಶ್?
ನೇರವಾಗಿ ನಾಮಿನೇಟ್ ಆದ ಜಾಹ್ನವಿ, ಅಶ್ವಿನಿ
ಈ ತಪ್ಪು ಮಾಡಿದ್ದಕ್ಕೆ ಹಾಗೂ ಉದ್ದಟತನ ತೋರಿದ್ದಕ್ಕೆ ಅಶ್ವಿನಿ ಗೌಡ ಹಾಗೂ ಜಾಹ್ನವಿ ಅವರು ನೇರವಾಗಿ ನಾಮಿನೇಟ್ ಆಗಿದ್ದಾರೆ ಎಂದು ಬಿಗ್ ಬಾಸ್ ಹೇಳಿದರು. ಮನೆಯ ಸದಸ್ಯರನ್ನೆಲ್ಲ ಮನೆಯೊಳಗೆ ಕರೆದು ಅಶ್ವಿನಿ ಗೌಡ ಹಾಗೂ ಜಾಹ್ನವಿಯವರು ಡ್ರೆಸ್ಸಿಂಗ್ ರೂಮ್ ಗುಟ್ಟಾಗಿ ಮಾತಾಡಿಕೊಂಡ ವಿಡಿಯೋ ಮಾಡಲಾಯ್ತು. ವಿಡಿಯೋ ನೋಡಿ ನಗುವುದಕ್ಕೆ ಶುರು ಮಾಡಿದ್ದರು. ಇದರಿಂದ ಕೋಪಗೊಂಡ ಬಿಗ್ ಬಾಸ್ ಇಬ್ಬರನ್ನು ನೇರವಾಗಿ ನಾಮಿನೇಟ್ ಮಾಡಿದರು.
ಕ್ಯಾಮರಾ ಮುಂದೆ ಕ್ಷಮೆ
ನೇರವಾಗಿ ನಾಮಿನೇಟ್ ಆದ ಬಳಿಕ ಅಶ್ವಿನಿ ಗೌಡ ಹಾಗೂ ಜಾಹ್ನವಿಗೆ ತಮ್ಮ ತಪ್ಪಿನ ಅರಿವಾಗಿತ್ತು. ತಾವೇಕೆ ಗುಟ್ಟಾಗಿ ಮಾತಾಡಿದೆವು ಅನ್ನೋದನ್ನು ಕ್ಯಾಮರಾ ಮುಂದೆ ಹೇಳಿಕೊಂಡರು. ನಾಮಿನೇಟ್ ಮಾಡುವುದು ಬೇಡವೆಂದು ಕ್ಯಾಮರಾ ಮುಂದೆ ಕೇಳಿಕೊಂಡಿದ್ದಾರೆ. ಇಡೀ ವಾರ ಅವರು ಏನೇ ಟಾಸ್ಕ್ ಮಾಡಿದರೂ ನಾಮಿನೇಷನ್ ಪ್ರಕ್ರಿಯೆಯಿಂದ ಮಾತ್ರ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಎಂಬುದನ್ನ ಅವರಲ್ಲೇ ಚರ್ಚಿಸಿಕೊಂಡರು.
ಹೆಚ್ಚು ರೂಲ್ಸ್ ಬ್ರೇಕ್ ಮಾಡೋದೇ ಅಶ್ವಿನಿ
ಇದಾದ ಬಳಿಕ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದರು. ಯಾರು ಹೆಚ್ಚು ಬಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆಂದು ವೋಟ್ ಮಾಡಲಾಯಿತು. ಅದಕ್ಕೆ ಮನೆ ಮಂದಿ ಎಲ್ಲರೂ ಅಶ್ವಿನಿ ಗೌಡ ಅವರಿಗೆ ಹೆಚ್ಚು ಮತ ಹಾಕಿದರು. ಮನೆಯ ಸದಸ್ಯರ ಬಳಿ ಬಸ್ಕಿ ಹೊಡೆದು ನಿಯಮಗಳನ್ನು ಮುರಿಯುವುದಿಲ್ಲ ಎಂದು ಹೇಳಬೇಕು ಎಂದು ಬಿಗ್ ಬಾಸ್ ಸೂಚನೆ ಕೊಟ್ಟರು. ಅಶ್ವಿನಿ ಅವರೂ ಅದರಂತೆ ಮಾಡಿದ್ದಾರೆ.
ಇದಾದ ಬಳಿಕ ಅಶ್ವಿನಿ ಹಾಗೂ ಜಾಹ್ನವಿ ಇಬ್ಬರೇ ಮಾತನಾಡಿಕೊಂಡಿದ್ದಾರೆ. ನಾವಿಬ್ಬರೇ ಟಾರ್ಗೆಟ್ ಆಗ್ತೀವಿ. ಕಣ್ಣು ಬಿದ್ದಿರಬೇಕು ಅಂತ ಒಬ್ಬರಿಗೊಬ್ಬರು ದೃಷ್ಟಿ ತೆಗೆದುಕೊಂಡಿದ್ದಾರೆ. ಮೊದಲಿಗೆ ಅಶ್ವಿನಿ ಅವರು ಜಾಹ್ನವಿ ಅವರಿಗೆ ದೃಷ್ಟಿ ತೆಗೆದಿದ್ದಾರೆ.
ಇದನ್ನೂ ಓದಿ: Bigg Boss Kannada 12: ಒಬ್ಬರಿಗೊಬ್ಬರು ದೃಷ್ಟಿ ತೆಗೆದುಕೊಂಡ ಅಶ್ವಿನಿ-ಜಾಹ್ನವಿ; ಇವರೆಲ್ಲರ ಕಣ್ಣು ಬೀಳಬಾರದಂತೆ!
ಕಾವ್ಯ ಕಣ್ಣು, ಅಭಿ ಕಣ್ಣು, ರಕ್ಷಿತಾ ಕಣ್ಣು,ಬಿಗ್ ಬಾಸ್ ಕಣ್ಣು, ಎಲ್ಲರ ಕಣ್ಣು ಹೋಗಲಿ ಎಂದು ದೃಷ್ಟಿ ತೆಗೆದಿದ್ದಾರೆ. ಜಾಹ್ನವಿ ಅವರು ಅಶ್ವಿನಿ ಅವರಿಗೆ ದೃಷ್ಟಿ ತೆಗೆಯುತ್ತಾ, ಗಿಲ್ಲಿ ಕಣ್ಣು, ರಘು ಕಣ್ಣು, ರಾಶಿಕಾ, ರಿಷಾ ಕಣ್ಣು , ಬಿಗ್ ಬಾಸ್ ಮನೆಯವರ ಎಲ್ಲ ಕಣ್ಣು ಹೋಗಲಿ ಅಂತ ದೃಷ್ಟಿ ತೆಗೆದಿದ್ದಾರೆ .