ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bigg Boss Kannada 12: ನನ್ನ ವ್ಯಕ್ತಿತ್ವದ ಮೇಲೆ ಪ್ರಶ್ನೆ ಬಂದಾಗ ಯಾರನ್ನೂ ಬಿಟ್ಟಿಲ್ಲ! ಅಭಿಮಾನಿಗಳ ಮುಂದೆ ಧ್ರುವಂತ್‌ ಅಬ್ಬರ

Bigg boss: ಬಿಗ್‌ ಬಾಸ್‌ ಫಿನಾಲೆಗೆ ಕೆಲವೇ ದಿನಗಳು ಇವೆ. ಬಿಗ್‌ ಬಾಸ್‌ ಮನೆಯಲ್ಲಿ ಈಗಾಗಲೇ ಸಂಭ್ರಮ ಶುರುವಾಗಿದೆ. ಮಿಡ್‌ ವೀಕ್‌ ಎಲಿಮಿನೇಶನ್‌ ಕೂಡ ಇದೆ. ಇದರ ಜೊತೆಗೆ ಇದೀಗ ಅಭಿಮಾನಿಗಳೇ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಸ್ಪರ್ಧಿಗಳು ತಮ್ಮ ಮೆಚ್ಚಿನ ಫ್ಯಾನ್ಸ್‌ ಮುಂದೆ ವೋಟ್‌ಗೆ ಮನವಿ ಮಾಡಿದ್ದಾರೆ. ಅದರಲ್ಲೂ ತಮ್ಮ ಗತ್ತು, ತಾಕತ್ತು ಬಗ್ಗೆ ವ್ಯಕ್ತಪಡಿಸಿದ್ದಾರೆ.

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ ಫಿನಾಲೆಗೆ (Bigg Boss Kannada Finale) ಕೆಲವೇ ದಿನಗಳು ಇವೆ. ಬಿಗ್‌ ಬಾಸ್‌ ಮನೆಯಲ್ಲಿ ಈಗಾಗಲೇ ಸಂಭ್ರಮ ಶುರುವಾಗಿದೆ. ಮಿಡ್‌ ವೀಕ್‌ ಎಲಿಮಿನೇಶನ್‌ (Mid Week Elimination) ಕೂಡ ಇದೆ. ಇದರ ಜೊತೆಗೆ ಇದೀಗ ಅಭಿಮಾನಿಗಳೇ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಸ್ಪರ್ಧಿಗಳು ತಮ್ಮ ಮೆಚ್ಚಿನ ಫ್ಯಾನ್ಸ್‌ (Vote Fans) ಮುಂದೆ ವೋಟ್‌ಗೆ ಮನವಿ ಮಾಡಿದ್ದಾರೆ. ಅದರಲ್ಲೂ ತಮ್ಮ ಗತ್ತು, ತಾಕತ್ತು ಬಗ್ಗೆ ವ್ಯಕ್ತಪಡಿಸಿದ್ದಾರೆ.

ನಾನು ಮಟ್ಟ ಹಾಕಿದ್ದೀನಿ

ಹೊಸ ಪ್ರೋಮೋ ಔಟ್‌ ಆಗಿದೆ. ಅಭಿಮಾನಿಗಳ ಕೈಯಲ್ಲೇ ಸೋಲು ಗೆಲುವಿನ ನಿರ್ಧಾರ ಇದೆ ಎಂದು ಬಿಗ್‌ ಬಾಸ್‌ ಹೇಳಿದ್ದಾರೆ. ಕಾವ್ಯ ಅವರು ಫ್ಯಾನ್ಸ್‌ ಬಂದಾಗ, ಖುಷಿ ಆಗ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Bigg Boss Kannada 12: ಬಿಗ್‌ ಬಾಸ್‌ ಮನೆಗೆ ಬಂದು ಉರುಳು ಸೇವೆ ಮಾಡಿದ ಮಲ್ಲಮ್ಮ! ಕಾರಣ ಇದು

ನನ್ನ ವ್ಯಕ್ತಿತ್ವದ ಮೇಲೆ ಪ್ರಶ್ನೆ ಬಂದಾಗ, ಯಾರೇ ಆಗಿರಲಿ ಅಷ್ಟೂ ಜನರನ್ನು ನಾನು ಮಟ್ಟ ಹಾಕಿದ್ದೀನಿ ಎಂದಿದ್ದಾರೆ ಧ್ರುವಂತ್‌, ಇನ್ನು ಧನುಷ್‌ ಅವರು, ಇಷ್ಟು ಕಷ್ಟ ಪಟ್ಟಿದ್ದೀನಿ, ಅಷ್ಟು ಕಷ್ಟ ಪಟ್ಟಿದ್ದೀನಿ ಅಂತ ಹೇಳಲ್ಲ. ಒಬ್ಬರು ಬೆಳಿಬೇಕು ಅಂದರೆ ಅವರು ಅವರೇ ಕಷ್ಟ ಪಡಬೇಕು. ನಿಮಗೆಲ್ಲರಿಗೂ ನಾನು ಫ್ಯಾನ್‌ ಆದೆ, ನೀವೆಲ್ಲ ನನಗೆ ಸ್ಟಾರ್‌ ಆದ್ರಿ ಎಂದಿದ್ದಾರೆ.

ಇನ್ನು ಕಮೆಂಟ್‌ನಲ್ಲಿ ಗಿಲ್ಲಿ ಪ್ರೋಮೋ ಎಲ್ಲಿ ಅಂತ ಮಾಡ್ತಿದ್ದಾರೆ ಫ್ಯಾನ್ಸ್‌. ಆದಷ್ಟು ಬೇಗ ಗಿಲ್ಲಿ ಪ್ರೋಮೋ ಹಾಕಿ ಅಂತ ರಿಕ್ವೆಸ್ಟ್‌ ಮಾಡ್ತಿದ್ದಾರೆ. ಒಟ್ಟಾರೆಯಾಗಿ ಈ ಮೀಡ್‌ವೀಕ್‌ ಅಲ್ಲಿ ಯಾರು ಹೋಗ್ತಾರೆ ಅನ್ನೋ ಕುತೂಹಲ ವೀಕ್ಷಕರಲ್ಲಿದೆ.

ಕಲರ್ಸ್‌ ಕನ್ನಡ ಪ್ರೋಮೋ



ಟೈಟಲ್‌ ಕೊಟ್ಟಿಕೊಂಡ ಸ್ಪರ್ಧಿಗಳು

ಅಭಿಮಾನಿಗಳು ಯಾವ ಬಿರುದುಯಿಂದ ಗುರುತಿಸಬೇಕು ಅಂತ ಹೇಳಿದ್ದಾರೆ. ಆಗ ಗಿಲ್ಲಿ ಅವರು ಸಕಲ ಕಲಾ ವಲ್ಲಭ ಎಲ್ಲ ಆಟ ಬಲ್ಲವ ಎಂದು ಬರೆದಿದ್ದಾರೆ. ಇನ್ನು ಧ್ರುವಂತ್‌ ಅವರು ಡ್ಯಾಶಿಂಗ್‌ ಧ್ರುವಂತ್‌ ಅಂತ ಬರೆದಿದ್ದಾರೆ.ಆಗ ಅಶ್ವಿನಿ ಅವರು ಸೀಕ್ರೆಟ್‌ ರೂಂ ಹೀರೋ ಅಂತ ಸಲಹೆ ಕೊಟ್ಟರು. ಆಗ ರಕ್ಷಿತಾ ಇದ್ದವರು, ಧನುಷ್‌ ಅವರ ಬಳಿ ಸೀಕ್ರೆಟ್‌ ರೂಂ ಜೀರೋ ಎಂದಿದ್ದಾರೆ.

ಇದನ್ನೂ ಓದಿ: Bigg Boss Kannada 12: ಗಿಲ್ಲಿ ಕೈರುಚಿ ಸವಿದು ಧ್ರುವಂತ್‌ ಬ್ರೈನ್ ವರ್ಕ್‌ ಆಗ್ತಿಲ್ವಂತೆ; ಗಿಲ್ಲಿ ಮೂಗು ಆಲೂಗಡ್ಡೆ ಥರಾನೇ ಇದೆಯಂತೆ!

ಆಗ ಧನುಷ್‌ ಅವರು, ಟಾರ್ಗೆಟ್‌ ಮಾಡ್ತಾರೆ ಅನ್ನಿಸಿದಾಗ ದೊಡ್ಡ ಘರ್ಜನೆಯೊಂದಿಗೆ ಬಂದಿದ್ದೀನಿ ಎಂದರು.ಅಶ್ವಿನಿ ಅವರು, ಛಲಗಾರ್ತಿ ಅಶ್ವಿನಿ ಎಂದು ಕೊಡುವೆ. ಅನೇಕ ಟೈಟಲ್‌ ಕೊಡ್ತಾ ಇರ್ತಾರೆ. ಅದು ಯಾವುದೂ ತೆಗೆದುಕೊಳ್ಳದೇ ನಮ್ಮ ಒಳಗೆ ಒಂದು ಫೈರ್‌ ಇದ್ದರೆ ನಾವು ಏನಾದದೂ ಒಂದು ಮಾಡಲು ಸಾಧ್ಯ. ನಾನು ಬಿಗ್‌ ಬಾಸ್‌ ಬ್ರ್ಯಾಂಡ್‌ ಸೀಸನ್‌ 12 ಎಂದು ಅಶ್ವಿನಿ ಹೇಳಿದರು.

Yashaswi Devadiga

View all posts by this author