ಬಿಗ್ ಬಾಸ್ ಫಿನಾಲೆ (Bigg Boss Kannada Finale) ಬಂತು ಅಂದರೆ ವೀಕ್ಷರಲ್ಲಿ ವೋಟಿಂಗ್ ಮಾತ್ರ ಅಲ್ಲ ತಮ್ಮ ನೆಚ್ಚಿನ ಸ್ಪರ್ಧಿ ಧರಿಸುವ ಕಾಸ್ಟ್ಯೂಮ್ ಬಗ್ಗೆಯೂ ಚರ್ಚೆ ಮಾಡುತ್ತಲೇ ಇರ್ತಾರೆ. ಫಿನಾಲೆಗೆ ಕಾವ್ಯಾ ಹಾಗೂ ರಕ್ಷಿತಾ (Kavya Rakshitha) ಡಿಸೈನರ್ ಗೌನ್‌ಗಳನ್ನು ತೊಟ್ಟು ಮಿಂಚಲಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋಗಳು ವೈರಲ್ ಆಗ್ತಿದೆ. ಆದರೆ ವೀಕ್ಷಕರಲ್ಲಿ ಹೆಚ್ಚಾಗಿ ಕುತೂಹಲದಲ್ಲಿ ಇರೋದು ಗಿಲ್ಲಿ (Gilli Nata) ನಟನ ಡ್ರೆಸ್ ಬಗ್ಗೆ.
ಗಿಲ್ಲಿ ಡ್ರೆಸ್ ಹೇಗಿರತ್ತೆ?
ಹೌದು ಬಿಗ್ ಬಾಸ್ ಮನೆಯಲ್ಲಿ ಬರೀ ಬನಿಯನ್ ಧರಿಸಿಕೊಂಡೇ ಫಿನಾಲೆ ಹಂತದವರೆಗೆ ಬಂದಿದ್ದಾರೆ ಗಿಲ್ಲಿ. ಬನಿಯನ್ ಹಾಕಿಕೊಂಡಿದ್ರು ಗಿಲ್ಲಿ ರಾಜನ ರೀತಿ ಮೆರೆಯುತ್ತಿದ್ದಾರೆ ಎಂದು ಸ್ವತಃ ಕಿಚ್ಚ ಸುದೀಪ್ ಹೇಳಿದ್ದರು.
ಇದನ್ನೂ ಓದಿ: Bigg Boss Kannada 12: ಇದು ಅನ್ನವನ್ನೇ ಕದ್ದು ತಿಂದ ಕಥೆ! ಮೊದಲ ಬಾರಿಗೆ ಮನದಾಳದ ನೋವನ್ನು ಹೊರಹಾಕಿದ ಗಿಲ್ಲಿ ನಟ
ಗಿಲ್ಲಿ ಯಾವಾಗಲೂ ಬನಿಯನ್ ಹಾಕಿಕೊಂಡಿರ್ತಾನೆ ಎಂದು ಅಶ್ವಿನಿ ಅವರು ಹೇಳಿದ್ದೂ ಇದೆ. ಬಿಗ್‌ಬಾಸ್ ಫಿನಾಲೆ ದಿನ ಗಿಲ್ಲಿ ಬನಿಯನ್ ಧರಿಸಿ ಬರ್ತಾರಾ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬರು ಗಿಲ್ಲಿ ಬನಿಯನ್ ಹಾಕೊಂಡು ಫಿನಾಲೆಗೆ ಬನ್ನಿ ಎಂದು ಕೂಗಿ ಹೇಳಿದ್ದರು. ಬನಿಯನ್ ಹಾಕ್ಕೊಂಡು ಬರ್ತೀನಿ ಎಂದು ಗಿಲ್ಲಿ ಪ್ರತಿಕ್ರಿಯಿಸಿದ್ದರು. ಇದೀಗ ಅದೇ ಕುತೂಹದಲ್ಲಿದ್ದಾರೆ ಫ್ಯಾನ್ಸ್.
ಫಿನಾಲೆಗೆ ಕ್ಷಣಗಣನೆ
ಮತ್ತೊಂದು ಕಡೆ ಕಾವ್ಯ ಹಾಗೂ ರಕ್ಷಿತಾ ಅವರ ಗೌನ್ ಡ್ರೆಸ್ ಸಾಕಷ್ಟು ವೈರಲ್ ಆಗ್ತಿದೆ. ನೀಲಿ ಬಣ್ಣದ ಗೌನ್ ಕೂಡ ಸಿದ್ಧವಾಗಿದ್ದು ರಕ್ಷಿತಾ ಫಿನಾಲೆಗೆ ಧರಿಸಿ ಮಿಂಚುತ್ತಾರೆ ಎನ್ನಲಾಗ್ತಿದೆ. ಕಾವ್ಯ ಅವರ ಸಹೋದರ ಕಾರ್ತಿಕ್ ಗೌನ್ ಮುಂದೆ ಕಾಣಿಸಿಕೊಂಡಿರುವ ವಿಡಿಯೋ ವೈರಲ್ ಆಗ್ತಿದೆ. ಒಟ್ಟಾರೆಯಾಗಿ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ.
ವಿಜೇತರಿಗೆ 50 ಲಕ್ಷ ರೂ. ನಗದು ಬಹುಮಾನ ಸಿಗಲಿದೆ. ಇನ್ನುಳಿದಂತೆ ರನ್ನರ್ ಅಪ್ ಆಗುವವರಿಗೂ ನಗದು ಜೊತೆಗೆ ಉಡುಗೊರೆಗಳು ಸಿಗುವ ನಿರೀಕ್ಷೆಯಿದೆ.
ದಾಖಲೆಯ ಮತ
ಸದ್ಯ ವೋಟಿಂಗ್ ಆರಂಭವಾಗಿದ್ದು, ಜನವರಿ 18ರ ಭಾನುವಾರ ಬೆಳಗ್ಗೆ 10 ಗಂಟೆವರೆಗೂ ವೋಟಿಂಗ್ ಮಾಡಲು ಅವಕಾಶ ಇರುತ್ತದೆ. ಹಾಗಾಗಿ, ಸೋಶಿಯಲ್ ಮೀಡಿಯಾದಲ್ಲಿ ನೆಚ್ಚಿನ ಸ್ಪರ್ಧಿಗಳಿಗೆ ವೋಟ್ ಹಾಕಿ ಎಂದು ಅವರ ಬೆಂಬಲಿಗರು ಪ್ರಚಾರ ಮಾಡುತ್ತಿದ್ದಾರೆ. ಈ ಬಾರಿ ಅಂತೂ ಈ ವೋಟಿಂಗ್ ಪ್ರಚಾರ ಭಾರಿ ತಾರಕಕ್ಕೇರಿದೆ.ಕಳೆದ ಸೀಸನ್‌ನಲ್ಲಿ ಹನುಮಂತ ಲಮಾಣಿ ಅವರು ವಿನ್ನರ್ ಆಗಿದ್ದರು.
ಇದನ್ನೂ ಓದಿ: Bigg Boss Kannada 12 Finale: ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡಿದ್ರಾ? ವೋಟಿಂಗ್‌ಗೆ ಡೆಡ್‌ಲೈನ್ ಯಾವಾಗ ಗೊತ್ತಾ?
ಅವರು ದಾಖಲೆಯ 5.23 ಕೋಟಿ ಮತಗಳನ್ನು ಪಡೆದುಕೊಂಡಿದ್ದರು. ಇದು ಬಿಗ್ ಬಾಸ್ ಕನ್ನಡ ಇತಿಹಾಸದಲ್ಲೇ ಸ್ಪರ್ಧಿಯೊಬ್ಬರು ಪಡೆದ ಅತಿ ಹೆಚ್ಚು ಮತಗಳ ದಾಖಲೆಯಾಗಿದೆ. ರನ್ನರ್ ಅಪ್ ಆಗಿದ್ದ ತ್ರಿವಿಕ್ರಮ್ ಅವರು ಸುಮಾರು 2.53 ಕೋಟಿ ಮತಗಳನ್ನು ಪಡೆದಿದ್ದರು. ಸದ್ಯದ ಕ್ರೇಜ್ ನೋಡಿದರೆ, ಹನುಮಂತು ದಾಖಲೆಯನ್ನು ಗಿಲ್ಲಿ ನಟ ಬ್ರೇಕ್ ಮಾಡುವ ಸಾಧ್ಯತೆಗಳಿವೆ.