ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bigg Boss Kannada 12: ಇದು ಅನ್ನವನ್ನೇ ಕದ್ದು ತಿಂದ ಕಥೆ! ಮೊದಲ ಬಾರಿಗೆ ಮನದಾಳದ ನೋವನ್ನು ಹೊರಹಾಕಿದ ಗಿಲ್ಲಿ ನಟ

Gilli Nata: ಬಿಗ್‌ ಬಾಸ್‌ ಫಿನಾಲೆಗೆ ಇನ್ನು ಕೇವಲ ಎರಡು ದಿನಗಳು ಬಾಕಿ ಇವೆ. ಅಶ್ವಿನಿ ಗೌಡ, ಗಿಲ್ಲಿ ನಟ, ಕಾವ್ಯಾ, ರಘು, ಧನುಷ್, ರಕ್ಷಿತಾ ಶೆಟ್ಟಿ ಅವರು ಈಗ ಫಿನಾಲೆ ತಲುಪಿದ್ದಾರೆ. ಬಿಗ್‌ ಬಾಸ್‌ ಫಿನಾಲೆಗೆ ಕೇವಲ ಎರಡು ದಿನಗಳು ಬಾಕಿ ಇರುವಾಗ, ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುತ್ತಿದ್ದ 24 ಗಂಟೆಗಳ ಲೈವ್ ಫೀಡ್ ಅನ್ನು ಅಧಿಕೃತವಾಗಿ ಸ್ಥಗಿತಗೊಳಿಸಲಾಗಿದೆ. ಇದೀಗ ವಾಹಿನಿ ಹೊಸ ಪ್ರೋಮೋ ಹಂಚಿಕೊಂಡಿದೆ. ತಮ್ಮ ಜೀವನದ ಜರ್ನಿಯನ್ನು ನೆನಪಿಸಿಕೊಂಡು ಕಣ್ಣೀರಿಟ್ಟಿದ್ದಾರೆ ಸ್ಪರ್ಧಿಗಳು.

ಇದು ಅನ್ನವನ್ನೇ ಕದ್ದು ತಿಂದ ಕಥೆ! ಮನದಾಳದ ನೋವನ್ನು ಹೊರಹಾಕಿದ ಗಿಲ್ಲಿ

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Jan 16, 2026 4:08 PM

ಬಿಗ್‌ ಬಾಸ್‌ ಫಿನಾಲೆಗೆ (Bigg Boss Kannada Finale) ಇನ್ನು ಕೇವಲ ಎರಡು ದಿನಗಳು ಬಾಕಿ ಇವೆ. ಅಶ್ವಿನಿ ಗೌಡ, ಗಿಲ್ಲಿ ನಟ, ಕಾವ್ಯಾ, ರಘು, ಧನುಷ್, ರಕ್ಷಿತಾ ಶೆಟ್ಟಿ ಅವರು ಈಗ ಫಿನಾಲೆ (Finale) ತಲುಪಿದ್ದಾರೆ. ಬಿಗ್‌ ಬಾಸ್‌ ಫಿನಾಲೆಗೆ ಕೇವಲ ಎರಡು ದಿನಗಳು ಬಾಕಿ ಇರುವಾಗ, ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುತ್ತಿದ್ದ 24 ಗಂಟೆಗಳ ಲೈವ್ ಫೀಡ್ ಅನ್ನು ಅಧಿಕೃತವಾಗಿ ಸ್ಥಗಿತಗೊಳಿಸಲಾಗಿದೆ. ಸತತ 108 ದಿನಗಳ ಕಾಲ ವೀಕ್ಷಕರನ್ನು ರಂಜಿಸಿದ ಈ ಲೈವ್ ಪ್ರಸಾರಕ್ಕೆ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಬಿಗ್ ಬಾಸ್ ವಿದಾಯ ಹೇಳಿದ್ದಾರೆ. ಇದೀಗ ವಾಹಿನಿ ಹೊಸ ಪ್ರೋಮೋ ಹಂಚಿಕೊಂಡಿದೆ. ತಮ್ಮ ಜೀವನದ ಜರ್ನಿಯನ್ನು (Bigg Boss Kannada Jorney) ನೆನಪಿಸಿಕೊಂಡು ಕಣ್ಣೀರಿಟ್ಟಿದ್ದಾರೆ ಸ್ಪರ್ಧಿಗಳು.

ಬಿಗ್‌ ಬಾಸ್‌ ಒಂದು ಟಾಸ್ಕ್‌ ಕೊಟ್ಟಿದ್ದಾರೆ. ಜೀವನದಲ್ಲಿ ಎದುರಿಸಿದ ಕಷ್ಟದ ದಿನಗಳನ್ನು ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಈ ವೇಳೆ ಬಹುತೇಕರು ಕಣ್ಣೀರಿಟ್ಟಿದ್ದಾರೆ.

ಜೀವನದಲ್ಲಿ ತುಂಬಾ ಸ್ಟ್ರಗಲ್‌ ಮಾಡಿದ್ದು ಊಟಕ್ಕೆ!

ಮೊದಲಿಗೆ ಗಿಲ್ಲಿ ಮಾತನಾಡಿ, ನನ್ನ ಜೀವನದಲ್ಲಿ ತುಂಬಾ ಸ್ಟ್ರಗಲ್‌ ಮಾಡಿದ್ದು ಒಂದು ಊಟ, ಹಾಗೇ ಮಲಗಲು ಒಂದು ಜಾಗಕ್ಕೆ. ದುಡ್ಡು ಚಿನ್ನ ಕದಿಯೋದು ನೋಡಿದ್ದೀರಾ. ಆದರೆ ಅನ್ನ ಕದ್ದುಕೊಂಡು ತಿನ್ನೋ ಪರಿಸ್ಥಿತಿಯೂ ಎದುರಾಗಿತ್ತು ಎಂದು ಭಾವುಕರಾಗಿದ್ದಾರೆ ಗಿಲ್ಲಿ. ಮೊದಲ ಬಾರಿಗೆ ಮನಸ್ಸಿನೊಳಗೆ ಅಡಗಿದ್ದ ನೋವನ್ನು ಹೊರಹಾಕಿದ್ದಾರೆ ಗಿಲ್ಲಿ ನಟ.

ಇದನ್ನೂ ಓದಿ: Bigg Boss Kannada 12 Finale: ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್‌ ಮಾಡಿದ್ರಾ? ವೋಟಿಂಗ್‌ಗೆ ಡೆಡ್‌ಲೈನ್‌ ಯಾವಾಗ ಗೊತ್ತಾ?

ಕಲರ್ಸ್‌ ಕನ್ನಡ ಪ್ರೋಮೋ

ಧನುಷ್‌ ಕೂಡ, ಬೀದಿ ಬೀದಿಯಲ್ಲಿ ಒಬ್ಬೊಬ್ಬರು ಹೀರೋ ಇರ್ತಾರೆ ಇದೆಲ್ಲ ಆಗದೇ ಇರೋ ಕೆಲಸ ಅಂತ ಅನೇಕರು ನನಗೆ ಹೇಳಿದ್ದರು ಅಂತ ನೋವು ತೋಡಿಕೊಂಡಿದ್ದಾರೆ. ಕಾವ್ಯ ಮಾತನಾಡಿ, ಹಾಲು ತೆಗೆದುಕೊಳ್ಳಲು ಹಣ ಇರ್ತಾ ಇರಲಿಲ್ಲ. ಅಕ್ಕಿಯನ್ನೂ ಕೂಡ ಲೆಕ್ಕ ಹಾಕುವ ಪರಿಸ್ಥಿತಿ ಬಂದಿತ್ತು ಎಂದು ಕಣ್ಣಿರಿಟ್ಟಿದ್ದಾರೆ. ನನ್ನ ಮಗಳ ದೇವರ ಕೊಟ್ಟ ಉಡುಗೊರೆ ಅಂತ ಇದ್ದರು ನನ್ನ ತಂದೆ ಎಂದು ತಂದೆಯನ್ನು ನೆನಪಿಸಿಕೊಂಡು ಕಣ್ಣೀರಿಟ್ಟಿದ್ದಾರೆ ಅಶ್ವಿನಿ ಗೌಡ.

ಜನವರಿ 18ರಂದು ವಿಜೇತರ ಘೋಷಣೆಯಾಗಲಿದೆ. ವೀಕ್ಷಕರು ತಮ್ಮ ಜಿಯೋ ಹಾಟ್‌ಸ್ಟಾರ್ ಮೂಲಕ ಮತ ಚಲಾಯಿಸಬಹುದು. ಜನವರಿ 14ರ ನಂತರದ ಮತಗಳು ಮಾತ್ರ ಫಿನಾಲೆಗೆ ಪರಿಗಣಿಸಲ್ಪಡುತ್ತವೆ. ಪ್ರತಿ ಖಾತೆಗೆ 99 ಮತ ಹಾಕುವ ಅವಕಾಶವಿದೆ. ಜನವರಿ 14 ಹೊಸ ವೋಟಿಂಗ್ ಲೈನ್ ಓಪನ್ ಆಗಿದ್ದು, ಇದನ್ನು ಮಾತ್ರ ಫಿನಾಲೆಗೆ ಪರಿಗಣಿಸಲಾಗುತ್ತದೆ. ಪ್ರತಿ ಖಾತೆಗೆ 99 ಮತ ಹಾಕಲು ಅವಕಾಶ ಇದೆ. ಆರು ಜನರ ಪೈಕಿ ಓರ್ವ ಸ್ಪರ್ಧಿಗೆ 99 ಮತ ಹಾಕಬಹುದು.

ವೀಕ್ಷಕರಿಗೆ ಮನವಿ ಮಾಡಿಕೊಂಡ ಗಿಲ್ಲಿ ನಟ

ಇದಕ್ಕೂ ಮುಂಚೆ ಗಿಲ್ಲಿ ಫ್ಯಾನ್ಸ್‌ಗೆ ಮನವಿ ಮಾಡಿಕೊಂಡಿದ್ದಾರೆ. ಆ ವಿಡಿಯೋ ವೈರಲ್‌ ಆಗಿತ್ತು."ನನ್ನ ಆಟದಲ್ಲಿ ಉತ್ಸಾಹ ಹುಮ್ಮಸ್ಸು ಹೇಗೆ ಬಂತು ಎಂದರೆ, ಅದು ನಿಮ್ಮಿಂದ. ಕರ್ನಾಟಕ ಜನತೆಯಿಂದ. ನೀವು ನನಗೆ ಮಾಡಿರುವ ಸಪೋರ್ಟ್‌, ವೋಟ್‌ ನಮ್ಮನ್ನು ಇಲ್ಲಿವರೆಗೂ ಕರೆದುಕೊಂಡು ಬಂದಿದೆ. ನನ್ನ ಪ್ರಾಣ ಇರುವವರೆಗೂ ನಾನು ಕನ್ನಡ ಜನತೆಯನ್ನುಯಾವತ್ತೂ ಮರೆಯೋದಿಲ್ಲ.

ಇದನ್ನೂ ಓದಿ: Bigg Boss Kannada 12: ಡಿಸಿಪ್ಲಿನ್‌ನಲ್ಲಿ ಕಿಂಗ್, ಟಾಸ್ಕ್‌ಗಳಲ್ಲಿ ಮಾಸ್ಟರ್! ರಘು ಜರ್ನಿ ಇದು

ಅವರ ಸಪೋರ್ಟ್‌ನಿಂದಲೇ ನಾಲ್ಕು ಜನ ಗುರುತಿಸುವಂತೆ ನಾನು ಆಗಿದ್ದೇನೆ. ಇಲ್ಲಿವರೆಗೂ ಕರೆದುಕೊಂಡು ಬಂದಿರುವ ನೀವು, ಫಿನಾಲೆಯಲ್ಲೂ ನನಗೆ ವೋಟ್‌ ಮಾಡಿ ಗೆಲ್ಲಿಸಿ. ನನ್ನ ಆಟ ನಿಮಗೆ ಇಷ್ಟವಾಗಿರುತ್ತದೆ ಎಂಬ ನಂಬಿಕೆ ನನಗೆ ಇದೆ. ದಯವಿಟ್ಟು ವೋಟ್‌ ಮಾಡಿ, ಫಿನಾಲೆಯಲ್ಲಿ ನನ್ನನ್ನು ಗೆಲ್ಲಿಸಿ" ಎಂದು ಮನವಿ ಗಿಲ್ಲಿ ನಟ ಮಾಡಿದ್ದಾರೆ.