ಬಿಗ್ ಬಾಸ್ ಕನ್ನಡ 13 ‘ಅಗ್ನಿಪರೀಕ್ಷೆ’; ʻಒಂದು ವೃತ್ತಕ್ಕೆ ಎಷ್ಟು ಸೈಡ್ಸ್ ಇರುತ್ತವೆ?ʼ, ವಿನಯ್ ಗೌಡ ಕೇಳಿದ ಪ್ರಶ್ನೆಗೆ ನೆಟ್ಟಿಗರ ಭಾರಿ ಟ್ರೋಲ್!
ಬಿಗ್ ಬಾಸ್ ಕನ್ನಡ 13 ಅಗ್ನಿಪರೀಕ್ಷೆ ವೇದಿಕೆಯಲ್ಲಿ ತೀರ್ಪುಗಾರ ವಿನಯ್ ಗೌಡ ಕೇಳಿದ ವಿಚಿತ್ರ ಪ್ರಶ್ನೆ ಜಾಲತಾಣಗಳಲ್ಲಿ ನಗೆಪಾಟಲಿಗೀಡಾಗಿದೆ. ಸ್ಪರ್ಧಿಯೊಬ್ಬರಿಗೆ ವೃತ್ತದ ಬದಿಗಳ ಬಗ್ಗೆ ಪ್ರಶ್ನಿಸಿದಾಗ, ಆತ ಶೂನ್ಯ ಎಂದಿದ್ದಾನೆ. ಆದರೆ ವಿನಯ್ ಇನ್‌ಸೈಡ್-ಔಟ್‌ಸೈಡ್ ಎಂದು ಕೌಂಟರ್ ಕೊಡಲು ಹೋಗಿ ತಪ್ಪು ಲಾಜಿಕ್ ಬಳಸಿದ್ದಾರೆ.
-
ಬಿಗ್ ಬಾಸ್ ಕನ್ನಡ ಸೀಸನ್ 13ರ ಆರಂಭಕ್ಕೂ ಮುನ್ನ ಪ್ರಸಾರವಾಗುತ್ತಿರುವ ‘ಅಗ್ನಿಪರೀಕ್ಷೆ’ ಸಂಚಿಕೆಗಳು ವೀಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿವೆ. ಆದರೆ, ಇದೇ ವೇದಿಕೆಯಲ್ಲಿ ತೀರ್ಪುಗಾರರಾಗಿರುವ ಬಿಗ್ ಬಾಸ್ ಮಾಜಿ ಸ್ಪರ್ಧಿ ವಿನಯ್ ಗೌಡ ಅವರು ಕೇಳಿದ ಒಂದು ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲಿಂಗ್‌ಗೆ ಗುರಿಯಾಗಿದೆ. ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿರುವ ಹೊಸ ಪ್ರೋಮೋ ಈ ಚರ್ಚೆಗೆ ಮುನ್ನುಡಿ ಬರೆದಿದೆ.
ನೀವು ಕೇಳುತ್ತಿರುವ ಪ್ರಶ್ನೆಯೇ ತಪ್ಪು!
ಪ್ರೋಮೋದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ವೇದಿಕೆಗೆ ನೃತ್ಯ ಮಾಡುತ್ತಾ ಆಗಮಿಸಿ, "ನಾನು ಇಷ್ಟು ಚೆನ್ನಾಗಿ ಡ್ಯಾನ್ಸ್ ಮಾಡಿದರೂ ಯಾರೂ ಗಮನಿಸಲಿಲ್ಲ" ಎಂದು ಜಡ್ಜ್‌ಗಳನ್ನೇ ಪ್ರಶ್ನಿಸಿದ್ದಾನೆ. ಇದಕ್ಕೆ ತೀರ್ಪುಗಾರ್ತಿ ಶ್ರುತಿ, "ನಮ್ಮ ಪ್ರತಿಕ್ರಿಯೆಗೆ ಕಾಯದೆ ಹಾಗೆ ಕಾಮೆಂಟ್ ಮಾಡಬಾರದು" ಎಂದು ಎಚ್ಚರಿಕೆ ನೀಡಿದ್ದಾರೆ. ಇದರಿಂದ ಕೆರಳಿದ ಆ ಯುವಕ, "ನಾನು ಇರುವುದೇ ಹೀಗೆ" ಎಂದು ಖಡಕ್ ಆಗಿ ಉತ್ತರಿಸಿದ್ದಾನೆ. ಅಷ್ಟೇ ಅಲ್ಲದೆ, "ನಿಮ್ಮನ್ನೇ ಏಕೆ ಆಯ್ಕೆ ಮಾಡಬೇಕು?" ಎಂದು ನಿರೂಪಕ ನಿರಂಜನ್ ದೇಶಪಾಂಡೆ ಕೇಳಿದ ಪ್ರಶ್ನೆಗೆ, "ನೀವು ಕೇಳುತ್ತಿರುವ ಪ್ರಶ್ನೆಯೇ ತಪ್ಪು" ಎಂದು ತಿರುಗೇಟು ನೀಡಿದ್ದಾನೆ.
ವಿನಯ್ ಗೌಡ ಕುರಿತ ಟ್ರೋಲ್
Vinay Gowda's - INTELLIGENCE 📈
— Ustaad Veera Gambhira 🚩 (@PKYtrishira) August 19, 2026
Contestant - Gives full bow & exits chat. 🤣🤣😭
Have both sides! Inside & outside. 😨😭
Confidence level : 100
Knowledge level : 0#Agnipariksha #BiggBossKannada #VinayGowda #biggboss13kannada pic.twitter.com/ul834eNqbl
ವೃತ್ತಕ್ಕೆ ಯಾವುದೇ ಸೈಡ್ಸ್ ಇರುವುದಿಲ್ಲ
ಸ್ಪರ್ಧಿಯ ಈ ನಡವಳಿಕೆಯನ್ನು ಕಂಡ ವಿನಯ್ ಗೌಡ, ಆತನ ವಿದ್ಯಾಭ್ಯಾಸದ ಬಗ್ಗೆ ವಿಚಾರಿಸಿ "ಒಂದು ವೃತ್ತಕ್ಕೆ (Circle) ಎಷ್ಟು ಸೈಡ್ಸ್ ಇರುತ್ತವೆ?" ಎಂಬ ಗಣಿತದ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಆ ಯುವಕ "ವೃತ್ತಕ್ಕೆ ಯಾವುದೇ ಸೈಡ್ಸ್ ಇರುವುದಿಲ್ಲ" ಎಂದು ಸರಿಯಾಗಿಯೇ ಉತ್ತರಿಸಿದ್ದಾನೆ. ಆದರೆ ವಿನಯ್ ಗೌಡ, "ವೃತ್ತಕ್ಕೆ ಎರಡು ಸೈಡ್ಸ್ ಇರುತ್ತವೆ; ಒಂದು ಇನ್‌ಸೈಡ್ (ಒಳಗೆ), ಇನ್ನೊಂದು ಔಟ್‌ಸೈಡ್ (ಹೊರಗೆ)" ಎಂದು ಕೌಂಟರ್ ಕೊಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ.
Bigg boss Kannada 13: ಆಗಲ್ಲ ಅಂದ್ರೆ ಹೋಗ್ತಾ ಇರು! ಅಮುಕು ಡುಮುಕುಗೆ ಬೆಂಡೆತ್ತಿದ ವಿನಯ್ ಗೌಡ
ವಿನಯ್ ಗೌಡಗೆ ಸಖತ್ ಟ್ರೋಲ್
ಈ ಪ್ರೋಮೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಗೂಗಲ್‌ನಲ್ಲಿ ಚೆಕ್ ಮಾಡಿದ್ದು, ವೃತ್ತಕ್ಕೆ ಶೂನ್ಯ ಸೈಡ್ಸ್ (Zero sides) ಇರುತ್ತದೆ ಎಂಬುದು ಗೊತ್ತಾಗಿದೆ. ಸ್ಪರ್ಧಿ ಸರಿಯಾದ ಉತ್ತರ ನೀಡಿದ್ದರೂ, ವಿನಯ್ ಗೌಡ ತಪ್ಪು ಲಾಜಿಕ್ ನೀಡಿ ಸ್ಪರ್ಧಿಯನ್ನು ಮಣಿಸಲು ಯತ್ನಿಸಿದ್ದಾರೆ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದು, ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ.