ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss 13: ʻನನ್ನ ಟ್ರೋಲ್‌ ಮಾಡಿದಷ್ಟು ನಂಗೇ ಲಾಭ, ಕೋಟಿ ಖರ್ಚು ಮಾಡಿದ್ರೂ ಇಷ್ಟೊಂದು ಪ್ರಚಾರ ಸಿಕ್ತಿರಲಿಲ್ಲʼ; ವಿನಯ್‌ ಗೌಡ ಖಡಕ್‌ ಮಾತು

ʻಬಿಗ್‌ ಬಾಸ್‌ ಕನ್ನಡ ಸೀಸನ್‌ 13 ಅಗ್ನಿಪರೀಕ್ಷೆಯ ಜ್ಯೂರಿ ಸದಸ್ಯ ವಿನಯ್ ಗೌಡ ತಮ್ಮ ಮೇಲಿನ ಟ್ರೋಲ್‌ಗಳಿಗೆ ಖಡಕ್ ಉತ್ತರ ನೀಡಿದ್ದಾರೆ. ವೃತ್ತಕ್ಕೆ ಎರಡು ಭಾಗಗಳಿರುತ್ತವೆ ಎಂಬ ಹೇಳಿಕೆಗೆ ಜೋರ್ಡಾನ್ ಕರ್ವ್ ಪ್ರಮೇಯದ ವಿವರಣೆ ನೀಡಿದ ಅವರು, ನಕಾರಾತ್ಮಕ ಪ್ರಚಾರದಿಂದಲೇ ತಮಗೆ ಸಾಲು ಸಾಲು ಬ್ರ್ಯಾಂಡ್ ಪ್ರಮೋಷನ್ ಆಫರ್ ಸಿಗುತ್ತಿವೆ ಎಂದು ವ್ಯಂಗ್ಯವಾಡಿದ್ದಾರೆ.

ʻಟ್ರೋಲ್ ಮಾಡಿದಷ್ಟು ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚುತ್ತಿದೆʼ ಎಂದ ವಿನಯ್ ಗೌಡ

-

Avinash GR
Avinash GR Aug 21, 2026 1:06 PM

ʻಬಿಗ್‌ ಬಾಸ್‌ ಕನ್ನಡ ಸೀಸನ್‌ 13- ಅಗ್ನಿಪರೀಕ್ಷೆಯಲ್ಲಿ ಜ್ಯೂರಿ ಆಗಿರುವ ನಟ ವಿನಯ್‌ ಗೌಡ ಸಖತ್‌ ಟ್ರೋಲ್‌ ಆಗುತ್ತಿದ್ದಾರೆ. ಸ್ಪರ್ಧಿಯೊಬ್ಬರಿಗೆ, "ಸರ್ಕಲ್‌ಗೆ ಎರಡು ಸೈಡ್ಸ್‌ ಇರುತ್ತವೆ" ಎಂಬ ವಿನಯ್‌ ಗೌಡ ಅವರ ಉತ್ತರವನ್ನು ಇಟ್ಟುಕೊಂಡು ಟ್ರೋಲ್‌ ಮಾಲಾಗುತ್ತಿದೆ. ಇದೀಗ ಈ ಬಗ್ಗೆ ವಿನಯ್‌ ಗೌಡ ವಿಶ್ವವಾಣಿ ಟಿವಿಗೆ ನೀಡಿರುವ ಎಕ್ಸ್‌ಕ್ಲೂಸಿವ್‌ ಸಂದರ್ಶನದಲ್ಲಿ ಮಾತನಾಡಿದ್ದಾರೆ. "ನನ್ನ ಟ್ರೋಲ್‌ ಮಾಡಿದಷ್ಟು ನಂಗೇ ಲಾಭ, ಕೋಟಿ ಖರ್ಚು ಮಾಡಿದ್ರು ಇಷ್ಟೊಂದು ಪ್ರಚಾರ ಸಿಕ್ತಾ ಇರಲಿಲ್ಲ" ವಿನಯ್‌ ಗೌಡ ಹೇಳಿದ್ದಾರೆ.

ನನಗೆ ಇದರಿಂದ ಖುಷಿಯೇ ಆಗುತ್ತಿದೆ

"ಈ ಪ್ರಶ್ನೆಯನ್ನು ನೀವು ಮ್ಯಾಥಮೆಟಿಕಲ್ ಪ್ರಶ್ನೆ ಅಥವಾ ಯಾವ ಸಂದರ್ಭದಲ್ಲಿ ಕೇಳುತ್ತಿದ್ದೀರಿ ಎಂಬುದು ಮುಖ್ಯವಾಗುತ್ತದೆ. ಅವನು (ಬಿಗ್‌ ಬಾಸ್‌ ಅಗ್ನಿಪರೀಕ್ಷೆ ವೇದಿಕೆಗೆ ಬಂದಿದ್ದ ಸ್ಪರ್ಧಿ) ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ. ಅವನು ನಿಂತಿದ್ದು ಬಿಗ್ ಬಾಸ್ ಅಗ್ನಿಪರೀಕ್ಷೆಯ ವೃತ್ತದ ಒಳಗೆ. ಒಳಗಡೆ ನಿಂತಿರುವವನು ಹೊರಗಡೆ ಹೋಗಬೇಕು ಎಂದರೆ ಸರಿಯಾಗಿ ಉತ್ತರಿಸಬೇಕು. ಅದಕ್ಕೆ ನಾನು 'ಸರ್ಕಲ್ ಹ್ಯಾಸ್ ಟೂ ಸೈಡ್ಸ್: ಇನ್‌ಸೈಡ್ ಅಂಡ್ ಔಟ್‌ಸೈಡ್' ಎಂದು ಹೇಳಿದ್ದು. ಈ ಒಂದು ಪ್ರಶ್ನೆಯಿಂದ ಬಿಗ್ ಬಾಸ್ ಅಗ್ನಿಪರೀಕ್ಷೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ಸಿಗಲಾರದಷ್ಟು ಪ್ರಚಾರ ಸಿಕ್ಕಿದೆ. ನನಗೆ ಇದರಿಂದ ಖುಷಿಯೇ ಆಗುತ್ತಿದೆ" ಎಂದು ವಿನಯ್‌ ಗೌಡ ಹೇಳಿದ್ದಾರೆ.

ಒಂದೇ ದಿನ 3 ಪ್ರಮೋಷನ್ಸ್ ಬುಕ್ ಆಗಿವೆ

"ಕರ್ನಾಟಕದ ಜನ ನನಗೋಸ್ಕರ ಸಮಯ ಬಿಡುವು ಮಾಡಿಕೊಂಡು ಚಾಟ್ ಜಿಪಿಟಿಯಲ್ಲಿ ಫೋಟೋ ಹಾಕಿ, ಐನ್‌ಸ್ಟೈನ್ ಹೇರ್‌ಸ್ಟೈಲ್ ಜೋಡಿಸಿ 'ಆಲ್ಬರ್ಟ್ ವಿನಯ್ ಗೌಡ್‌ಸ್ಟೀನ್' ಎಂದೆಲ್ಲಾ ಮಾಡುತ್ತಿದ್ದಾರೆ. ಐ ಆಮ್ ರಿಯಲಿ ಲವಿಂಗ್ ಇಟ್!.. ನನಗೆ ಯಾರ ಮೇಲೂ ಕೋಪ ಇಲ್ಲ. ಕೆಲವರು ಪಿಆರ್ ತಂಡ ಇಟ್ಟುಕೊಂಡು ಟ್ರೋಲ್ ಮಾಡಿಸುತ್ತಾರೆ. ಬೆಳಗ್ಗೆ ಎದ್ದ ತಕ್ಷಣ ನಾನು ಇನ್‌ಸ್ಟಾಗ್ರಾಮ್ ನೋಡಲ್ಲ, ಬ್ಯಾಂಕ್ ಅಕೌಂಟ್ ನೋಡುತ್ತೇನೆ! ಟ್ರೋಲ್ಸ್ ಜಾಸ್ತಿಯಾದಷ್ಟೂ ನನಗೆ ಪ್ರಮೋಷನ್ಸ್, ವ್ಯವಹಾರ ಹೆಚ್ಚಾಗುತ್ತಿದೆ. ನಿನ್ನೆ ಒಂದೇ ದಿನ 3 ಪ್ರಮೋಷನ್ಸ್ ಬುಕ್ ಆಗಿವೆ" ಎಂದು ವಿನಯ್ ಗೌಡ ಹೇಳಿದ್ದಾರೆ.

Bigg boss Kannada 13: ಆಗಲ್ಲ ಅಂದ್ರೆ ಹೋಗ್ತಾ ಇರು! ಅಮುಕು ಡುಮುಕುಗೆ ಬೆಂಡೆತ್ತಿದ ವಿನಯ್‌ ಗೌಡ

ಸೆಲೆಬ್ರಿಟಿಗಳ ಮುಂದೆ ಡಮ್ಮಿ ಆಗಬಾರದು

"ಜೋರ್ಡಾನ್ ಕರ್ವ್ ಪ್ರಮೇಯದ (ಥಿಯರಮ್) ಪ್ರಕಾರ ಒಂದು ಕ್ಲೋಸ್ಡ್ ಲೈನ್ ಕರ್ವ್‌ಗೆ ಇನ್‌ಸೈಡ್ ಮತ್ತು ಔಟ್‌ಸೈಡ್ ಎಂಬ ಎರಡು ಭಾಗಗಳು ಇರುತ್ತವೆ. ಕಂಪ್ಯೂಟರ್ ಸೈನ್ಸ್ ಓದಿರುವವರಿಗೆ ಇದು ಗೊತ್ತಿರುತ್ತದೆ. ಬಿಗ್ ಬಾಸ್ ಅಗ್ನಿಪರೀಕ್ಷೆಯಲ್ಲಿ ಕಾಮನ್ ಮ್ಯಾನ್ ಒಳಗೆ ಹೋಗುವಾಗ ಸೆಲೆಬ್ರಿಟಿಗಳ ಮುಂದೆ ಡಮ್ಮಿ ಆಗಬಾರದು, ಸ್ಪರ್ಧಿಸಬೇಕು ಎನ್ನುವ ಕಾರಣಕ್ಕಾಗಿಯೇ ನಾವು ಜ್ಯೂರಿಯಾಗಿ ಅವರಿಗೆ ಗ್ರಿಲ್ ಮಾಡುತ್ತಿದ್ದೇವೆ. ಇದು ಅವರಿಗೆ ಒಂದು ರೀತಿಯಲ್ಲಿ ಕ್ರಾಶ್ ಕೋರ್ಸ್" ಎಂದು ವಿನಯ್ ಗೌಡ ಹೇಳಿದ್ದಾರೆ.

ನನ್ ಯೋಗ್ಯತೆ ಬಗ್ಗೆ ಮಾತಾಡೋರು ಅವರ ಯೋಗ್ಯತೆ ನೋಡಿಕೊಳ್ಳಲಿ!



ಬೆವರು-ರಕ್ತ ಸುರಿಸಿ ಈ ಹಂತಕ್ಕೆ ಬಂದಿದ್ದೇವೆ

"'ಜ್ಯೂರಿ ಆಗಿ ಕೂರುವುದಕ್ಕೆ ವಿನಯ್ ಗೌಡ ಅವರಿಗೆ ಏನು ಅರ್ಹತೆ ಇದೆ ಎಂದು ಕೆಲವರು ಕೇಳುತ್ತಿದ್ದಾರಲ್ಲ" ಎಂಬ ಪ್ರಶ್ನೆಗೆ ಉತ್ತರಿಸಿದ ವಿನಯ್‌ ಗೌಡ, "ನನಗೆ ಏನು ಯೋಗ್ಯತೆ ಇದೆ ಎಂದು ಕೇಳುವವರಿಗೆ ಯಾವ ಯೋಗ್ಯತೆ ಇದೆ? ನಾವು ಕಷ್ಟಪಟ್ಟು ಮೇಲೆ ಬಂದಿದ್ದೇವೆ, ಬೆವರು-ರಕ್ತ ಸುರಿಸಿ ಈ ಹಂತಕ್ಕೆ ಬಂದಿದ್ದೇವೆ. ನಮ್ಮ ಯೋಗ್ಯತೆ ಚಾನೆಲ್‌ನವರಿಗೆ ಗೊತ್ತು. ನಾವು ಜ್ಯೂರಿ ಆಗಿ ಕುಳಿತಿದ್ದಕ್ಕೇ ಇವತ್ತು ಇಡೀ ಕರ್ನಾಟಕದಲ್ಲಿ ಇದು ಟ್ರೆಂಡ್ ಆಗಿದೆ" ಎಂದು ವಿನಯ್ ಗೌಡ ಹೇಳಿದ್ದಾರೆ.