ಬಿಗ್ ಬಾಸ್ ಮನೆಗೆ (Bigg Boss Kannada 13) ಕುಮಾರಿ ಹಾಗೂ ಲಕ್ಷ್ಮೀ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾಗಿದೆ. ಇನ್ನೊಂದು ಕಡೆ ಮನೆ ಮಂದಿ ಕೂಡ ಇಬ್ಬರು ಹೊಸ ವೈಲ್ಡ್ ಕಾರ್ಡ್ ಸ್ಪರ್ಧಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಇದರ ಜೊತೆಗೆ ನಾಮಿನೇಶನ್ (Nomination) ಕಾವು ಜೋರಾಗಿದೆ. ಸ್ನೇಹಕ್ಕೂ ಆಟಕ್ಕೂ ಸಮರ ಶುರುವಾಗಿದೆ. ತಾಂಡವ್ ಅವರು ಪ್ರಶಾಂತ್ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಇಕ್ಕಟ್ಟಿಗೆ ಸಿಲುಕಿಸಿದ ಪ್ರಶಾಂತ್
ಬಿಗ್ ಬಾಸ್ ಚಟುವಟಿಕೆವೊಂದನ್ನು ನೀಡಿದ್ದರು. ಮೊದಲು ಎಲ್ಲರೂ ಒಟ್ಟಾಗಿ ಕುಣಿಯುತ್ತಾರೆ. ಆ ಬಳಿಕ ಹಾಡು ನಿಂತಾಗ ಎಲ್ಲರೂ ನಿಲ್ಲಬೇಕು. ಮೂರು ನಾಲ್ಕು ಮಂದಿಯ ಹಾಗೆ ಗುಂಪಾಗಿ ಒಂದೊಂದು ಕಡೆ ನಿಲ್ಲಬೇಕು. ಒಟ್ಟಾಗಿ ನಿಂತವರ ಪೈಕಿಯಲ್ಲೇ ಒಬ್ಬರನ್ನು ನಾಮಿನೇಟ್ ಮಾಡಬೇಕು.!
ಇದನ್ನೂ ಓದಿ: Bigg Boss Kannada 13: ʻನಾನು ಹೇಳಿಯೇ ಚೂರಿ ಹಾಕೋದುʼ; ಸೌಂದರ್ಯಗೆ ನೇರವಾಗಿ ಹೇಳಿದ ಕುಮಾರಿ!
ಯಶಸ್, ಕಾವ್ಯ, ಆಸಿಯಾ ಅವರು ಜಗದೀಶ್ ಅವರನ್ನು ಆಯ್ಕೆ ಮಾಡಿ ನಾಮಿನೇಟ್ ಮಾಡಿದ್ದಾರೆ. ತಾಂಡವ್ ಅವರನ್ನಿ ಪ್ರಶಾಂತ್ ಹಾಗೂ ಸೋನಿಕಾ ನಾಮಿನೇಟ್ ಮಾಡಿದರು. ಸ್ನೇಹಿತರಂತೆ ಇದ್ದೂ ಒಬ್ಬರನ್ನ ಇಕಟ್ಟಿಗೆ ಸಿಲುಕಿಸಿದಂತೆ ಇತ್ತು.
ತಾಂಡವ್ ಈ ಬಗ್ಗೆ ಪ್ರಶಾಂತ್ ಬಳಿ ಮಾತನಾಡಿದ್ದಾರೆ. ತಾಂಡವ್ ಅವರು ಪ್ರಶಾಂತ್ ಬಳಿ ಬಂದು ನಿನ್ನ ಯೋಗ್ಯತೆಯನ್ನು ಬಿಗ್ ಬಾಸ್ ೨ ನಿಮಿಷದಲ್ಲಿ ಬಿಚ್ಚಿಟ್ಟರು ಎಂದಿದ್ದಾರೆ. ಒಳ್ಳೆ ಸ್ನೇಹಿತ ಹೇಗೆ ಅನ್ನೋದು ತೋರಿಸಿದರು ಎಂದರು. ಅದಕ್ಕೆ ಪ್ರಶಾಂತ್ ಮಾತನಾಡಿ, ನಾವು ಏನೂ ಮಾಡಿದರೂ ನಿಮಗೆ ಕೆಟ್ಟದ್ದು.
ಇದೆ ನಿನ್ನ ಫ್ರೆಂಡ್ ಗಗನ್ ಫೈನಲಿಸ್ಟ್ ಬೇರೆ ಅವರಿಗೆ ಕೊಟ್ಟ. ನಿನ್ ಜೊತೆ ಇದ್ದ, ಉಂಡ ತಿಂದ ಆದರೆ ಬೇರೆ ಯಾರಿಗೂ ಕೊಟ್ಟ. ಎಂದಿದ್ದಾರೆ. ಅದಕ್ಕೆ ತಾಂಡವ್ ಇದ್ದವರು ನಾನೇ ಹೇಳು ಅಂದಿದ್ದೆ ಎಂದಿದ್ದಾರೆ, ಅದಕ್ಕೆ ಪ್ರಶಾಂತ್, ನೀನು ಏನೂ ಹೇಳಿಲ್ಲ. ನಿನಗೂ ಅದು ಶಾಕಿಂಗ್ ಆಗಿತ್ತು ಎಂದು ನೇರವಾಗಿ ಹೇಳಿದ್ದಾರೆ. ಒಟ್ಟಾರೆಯಾಗಿ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ವೈಮನಸ್ಸು ಶುರುವಾಗಿದೆ.