ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss Kannada 13: ಬಿಗ್‌ ಬಾಸ್‌ ವೋಟಿಂಗ್ ಪ್ರಕ್ರಿಯೆ ಆರಂಭ! ಮತ್ತೆ ಸ್ಪರ್ಧಿ ಮೇಲೆ ವಿನಯ್‌ ಗರಂ

Bigg Boss Kannada 13: ಬಿಗ್ ಬಾಸ್ ಮುಖ್ಯ ಮನೆಗೆ ಹೋಗುವ 18 ಸ್ಪರ್ಧಿಗಳಲ್ಲಿ 3 ಸ್ಪರ್ಧಿಗಳನ್ನು ನೇರವಾಗಿ ಆಯ್ಕೆ ಮಾಡುವ ಸಂಪೂರ್ಣ ಹಕ್ಕನ್ನು ವೀಕ್ಷಕರಿಗೆ ನೀಡಲಾಗಿದೆ. ಈ ಅಗ್ನಿಪರೀಕ್ಷೆಯಲ್ಲಿ ಹಲವು ಟಾಸ್ಕ್ (Task) ನೀಡಲಾಗುತ್ತಿದೆ. 3 ಪ್ಯಾಸೆಂಜರ್‌ಗಳನ್ನು ಆಯ್ಕೆ ಮಾಡಲು ವೀಕ್ಷಕರಿಗೆ ಅವಕಾಶನೀಡಲಾಗಿದೆ. ಈಗಾಗಲೇ ಜಿಯೋ ಹಾಟ್‌ಸ್ಟಾರ್‌ನಲ್ಲಿ ವೋಟಿಂಗ್ ಆರಂಭವಾಗಿದೆ.

ಬಿಗ್‌ ಬಾಸ್‌ ಕನ್ನಡ

ಬಿಗ್ ಬಾಸ್ ಕನ್ನಡದ (Bigg Boss kannada 13) ಹೊಸ ಆವೃತ್ತಿಯ ‘ಅಗ್ನಿಪರೀಕ್ಷೆ’ (Agniparikshe) ಪ್ರಮುಖ ಘಟ್ಟ ತಲುಪುತ್ತಿದೆ. ಬಿಗ್ ಬಾಸ್ ಮುಖ್ಯ ಮನೆಗೆ ಹೋಗುವ 18 ಸ್ಪರ್ಧಿಗಳಲ್ಲಿ 3 ಸ್ಪರ್ಧಿಗಳನ್ನು ನೇರವಾಗಿ ಆಯ್ಕೆ ಮಾಡುವ ಸಂಪೂರ್ಣ ಹಕ್ಕನ್ನು ವೀಕ್ಷಕರಿಗೆ ನೀಡಲಾಗಿದೆ. ಈ ಅಗ್ನಿಪರೀಕ್ಷೆಯಲ್ಲಿ ಹಲವು ಟಾಸ್ಕ್ (Task) ನೀಡಲಾಗುತ್ತಿದೆ.

ಉಳಿದವರು ಕಡಂತೆ ಟಾಸ್ಕ್‌

ಉಳಿದವರು ಕಡಂತೆ ಟಾಸ್ಕ್‌ ನೀಡಿದ್ದರು. ಅದರಲ್ಲಿ ಲಿಖಿತ್‌ ಯಾವುದೇ ಸ್ಪರ್ಧಿಯ ಹೆಸರನ್ನು ಬರೆದಿರಲಿಲ್ಲ. ಅದಕ್ಕೆ ವಿನಯ್‌ ಗೌಡ ಇದ್ದವರು ಗರಂ ಆದ್ರು. ಅಷ್ಟೇ ಅಲ್ಲ ಸಂಗೀತಾ ಕೂಡ ಗರಂ ಆಗಿ, ನಾವೇ ಇಲ್ಲಿ ಸೀರಯೆಸ್‌ ಆಗಿ ತೆಗೆದುಕೊಂಡಿದ್ದೇವೆ ಅಂದ್ರೆ ಯಾರಿಗೋಸ್ಕರ? ನಮಗೆ ಇಲ್ಲಿ ಕಿರೀಟ್ ಸಿಗತ್ತಾ ಅಂತ ಕೇಳಿದ್ದಾರೆ.

ಇನ್ನು ವಿನಯ್‌ ಕೂಡ ಈ ಓವರ್‌ ಸ್ಮಾರ್ಟ್‌ ಬೇಡ ಎಂದು ಗರಂ ಆದರು. ಇಲ್ಲಿ ಯಾರೂ ಯಾರಿಗೂ ಸ್ನೇಹಿತರಲ್ಲ, ಸುಮ್-ಸುಮ್ನೆ ದುಶ್ಮನ್‍‍ಗಳೂ ಅಲ್ಲ; just ಅಗ್ನಿಪರೀಕ್ಷೆ ಅಂತ ಪ್ರೋಮೋ ಹಂಚಿಕೊಂಡಿದೆ ವಾಹಿನಿ.

ಇದನ್ನೂ ಓದಿ: Aasha Singh: 'ಮಹಾಭಾರತ'ದಲ್ಲಿ ನಟಿಸಿದ್ದ ಖ್ಯಾತ ನಟಿ ಇನ್ನಿಲ್ಲ

ವೀಕ್ಷಕರಿಗೆ ಅವಕಾಶ

3 ಪ್ಯಾಸೆಂಜರ್‌ಗಳನ್ನು ಆಯ್ಕೆ ಮಾಡಲು ವೀಕ್ಷಕರಿಗೆ ಅವಕಾಶನೀಡಲಾಗಿದೆ. ಈಗಾಗಲೇ ಜಿಯೋ ಹಾಟ್‌ಸ್ಟಾರ್‌ನಲ್ಲಿ ವೋಟಿಂಗ್ ಆರಂಭವಾಗಿದೆ. ಒಬ್ಬರಿಗೆ ಒಂದು ಮತ ಹಾಕುವ ಅವಕಾಶ ಇದೆ. ಇಲ್ಲಿಂದ ಆಯ್ಕೆಯಾಗಿ ಹೋಗುವ 3 ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.



ಜಿಯೋಹಾಟ್‌ಸ್ಟಾರ್‌ನಲ್ಲಿ ಬಿಗ್ ಬಾಸ್ ಅಗ್ನಿಪರೀಕ್ಷೆ ನೋಡಿ, ಅತಿ ಹೆಚ್ಚು ವಾಚ್‌ಟೈಮ್ ದಾಖಲಿಸಿ ಪಾಯಿಂಟ್ಸ್ ಪಡೆಯಿರಿ. ಅತಿ ಹೆಚ್ಚು ಪಾಯಿಂಟ್ಸ್ ಗಳಿಸಿ ಟಾಪ್ ಪಟ್ಟಿ ಸೇರುವವರಿಗೆ ಬಿಗ್ ಬಾಸ್ ಮನೆಯೊಳಗೆ ಅತಿಥಿಯಾಗಿ ಹೋಗೋ ಸುವರ್ಣಾವಕಾಶ ಕೂಡ ಇದೆ.

ದಿನಕ್ಕೆ ಒಬ್ಬರಿಗೆ ಒಂದೇ ವೋಟ್

ಇನ್ನು ಟಾಪ್ 3 ಕಂಟೆಸ್ಟೆಂಟ್ಸ್‌ನ ಬಿಗ್ ಬಾಸ್ ಮನೆಯೊಳಗೆ ಕಳಿಸಲು ವೋಟ್ ತುಂಬಾ ಮುಖ್ಯ. ಜಿಯೋಹಾಟ್‌ಸ್ಟಾರ್ ಓಪನ್ ಮಾಡಿ, ಇಷ್ಟದ ಕಂಟೆಸ್ಟೆಂಟ್ ಹೆಸರಿನ ಮೇಲೆ ಕ್ಲಿಕ್ ಮಾಡಿ, ವೋಟ್ ಮಾಡಬೇಕು. ದಿನಕ್ಕೆ ಒಬ್ಬರಿಗೆ ಒಂದೇ ವೋಟ್ ಮಾಡುವ ಅವಕಾಶ ಇದೆ. ಕಲರ್ಸ್ ಕನ್ನಡದಲ್ಲಿ ಶನಿವಾರ-ಭಾನುವಾರ ರಾತ್ರಿ 9 ಗಂಟೆಗೆ ಹಾಗೂ ಸೋಮವಾರದಿಂದ ಶುಕ್ರವಾರ ರಾತ್ರಿ 9:30ಕ್ಕೆ ಈ ಶೋ ಪ್ರಸಾರವಾಗಲಿದೆ.

ಇದೇ ಸೆಪ್ಟೆಂಬರ್ 6 ರಿಂದ ಬಿಗ್ ಬಾಸ್ ಕನ್ನಡ ಸೀಸನ್ 13 ಅಧಿಕೃತವಾಗಿ ಆರಂಭವಾಗಲಿದೆ ಎಂದು ಖುದ್ದು ಕಿಚ್ಚ ಸುದೀಪ್ ಅವರು ತಿಳಿಸಿದ್ದಾರೆ. ಈ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಇದರೊಂದಿಗೆ, ದೊಡ್ಮನೆಯ ಹೊಸ ಆಟವನ್ನು ಕಣ್ಣುಂಬಿಕೊಳ್ಳಲು ಇಡೀ ಕರ್ನಾಟಕವೇ ಕಾಯುತ್ತಿದೆ. ಬಿಗ್ ಬಾಸ್ ಕನ್ನಡ ಸೀಸನ್ 13 ಸೆಪ್ಟೆಂಬರ್ 6 ರಂದು ಅದ್ಧೂರಿಯಾಗಿ ಚಾಲನೆ ಪಡೆಯಲಿದೆ ಎಂದು ಸುದೀಪ್ ತಿಳಿಸಿದ್ದಾರೆ.

ಇದನ್ನೂ ಓದಿ: Bigg Boss Kannada 13: ʻಗೆಟ್‌ ಔಟ್‌ʼ ಎಂದ ವಿನಯ್‌ ಗೌಡ! ತಮ್ಮದೇ ಸ್ಟೈಲ್‌ನಲ್ಲಿ ತಿರುಗೇಟು ಕೊಟ್ಟ ಸ್ಪರ್ಧಿ ಶ್ರೇಯಸ್

ಅಂದು ಸಂಜೆ 7 ಗಂಟೆಗೆ ಸರಿಯಾಗಿ ಗ್ರ್ಯಾಂಡ್ ಓಪನಿಂಗ್ ಸಂಚಿಕೆಯು ಪ್ರಸಾರವಾಗಲಿದ್ದು, ಸುದೀಪ್ ಅವರು ಎಲ್ಲಾ ಸ್ಪರ್ಧಿಗಳನ್ನು ಮನೆಗೆ ಬರಮಾಡಿಕೊಳ್ಳಲಿದ್ದಾರೆ.

Yashaswi Devadiga

View all posts by this author