ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ʻಗೆಟ್‌ ಔಟ್‌ʼ ಎಂದ ವಿನಯ್‌ ಗೌಡ! ತಮ್ಮದೇ ಸ್ಟೈಲ್‌ನಲ್ಲಿ ತಿರುಗೇಟು ಕೊಟ್ಟ ಸ್ಪರ್ಧಿ ಶ್ರೇಯಸ್

Bigg Boss Kannada 13: ಟಾಪ್ 3 ಕಂಟೆಸ್ಟೆಂಟ್ಸ್‌ನ ಬಿಗ್ ಬಾಸ್ ಮನೆಯೊಳಗೆ ವೋಟ್ ತುಂಬಾ ಮುಖ್ಯ. ಜಿಯೋಹಾಟ್‌ಸ್ಟಾರ್ ಓಪನ್ ಮಾಡಿ, ನಿಮ್ಮ ಇಷ್ಟದ ಕಂಟೆಸ್ಟೆಂಟ್ ಹೆಸರಿನ ಮೇಲೆ ಕ್ಲಿಕ್ ಮಾಡಿ, ವೋಟ್ ಮಾಡಿ ಎಂದು ವಾಹಿನಿ ಸದ್ಯ ಹಂಚಿಕೊಂಡಿದೆ. ಇದೆಲ್ಲದರ ಹೊರತಾಗಿ ಮತ್ತೆ ಸುದ್ದಿಯಾಗಿದ್ದು ವಿನಯ್‌ ಗೌಡ . ಈಗ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋವೋಂದು ವೈರಲ್‌ ಆಗಿದ್ದು, ವಿನಯ್‌ ಗೌಡ ಅವರ ಸುತ್ತ ಮತ್ತಷ್ಟು ಟ್ರೋಲ್‌ಗಳು ಹರಿದಾಡ್ತಿವೆ.

ʻಗೆಟ್‌ ಔಟ್‌ʼ ಎಂದ ವಿನಯ್‌ ಗೌಡಗೆ ಸ್ಪರ್ಧಿ ಶ್ರೇಯಸ್ ಹೇಳಿದ್ದೇನು?

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Aug 24, 2026 8:11 AM

ಈ ಬಾರಿ ಬಿಗ್ ಬಾಸ್ (Bigg Boss Kannada 13) ನೇರವಾಗಿ ಆರಂಭ ಆಗುತ್ತಿಲ್ಲ. ಬಿಗ್ ಬಾಸ್​ಗೆ ಬರೋ 18 ಸ್ಪರ್ಧಿಗಳ ಪೈಕಿ 3 ಸ್ಪರ್ಧಿಗಳು ಅಗ್ನಿಪರೀಕ್ಷೆಯಿಂದ ತೆರಳುತ್ತಿದ್ದಾರೆ. ಟಾಪ್ 3 ಕಂಟೆಸ್ಟೆಂಟ್ಸ್‌ನ ಬಿಗ್ ಬಾಸ್ ಮನೆಯೊಳಗೆ ವೋಟ್ ತುಂಬಾ ಮುಖ್ಯ. ಜಿಯೋಹಾಟ್‌ಸ್ಟಾರ್ (Jio Hotstar) ಓಪನ್ ಮಾಡಿ, ನಿಮ್ಮ ಇಷ್ಟದ ಕಂಟೆಸ್ಟೆಂಟ್ ಹೆಸರಿನ ಮೇಲೆ ಕ್ಲಿಕ್ ಮಾಡಿ, ವೋಟ್ ಮಾಡಿ ಎಂದು ವಾಹಿನಿ ಸದ್ಯ ಹಂಚಿಕೊಂಡಿದೆ. ಇದೆಲ್ಲದರ ಹೊರತಾಗಿ ಮತ್ತೆ ಸುದ್ದಿಯಾಗಿದ್ದು ವಿನಯ್‌ ಗೌಡ (Vinay Gowda). ಈಗ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋವೋಂದು ವೈರಲ್‌ ಆಗಿದ್ದು, ವಿನಯ್‌ ಗೌಡ ಅವರ ಸುತ್ತ ಮತ್ತಷ್ಟು ಟ್ರೋಲ್‌ಗಳು ಹರಿದಾಡ್ತಿವೆ.

ವಿನಯ್ ಗೌಡಗೆ ಕೌಂಟರ್

ವೃತ್ತಕ್ಕೆ ‘ಇನ್ ಸೈಡ್ ಹಾಗೂ ಔಟ್​ ಸೈಡ್’ ಎಂಬ ಎರಡು ಸೈಡ್ ಇರುತ್ತದೆ ಎಂದು ಹೇಳಿ ಟ್ರೋಲ್ ಆಗಿದ್ದಾರೆ. ಈಗ ಅವರು ನಡೆದುಕೊಂಡ ರೀತಿಗೆ ಸ್ಪರ್ಧಿಯೇ ಸಿಟ್ಟಾಗಿ ಕೌಂಟರ್ ಕೊಟ್ಟಿದ್ದಾರೆ.

ವಿನಯ್ ಗೌಡ ಅವರಿಗೆ ಅತಿಯಾದ ಆ್ಯಟಿಟ್ಯೂಡ್ ಎಂಬ ಆರೋಪ ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬಂದಿದೆ. ಸ್ಪರ್ಧಿಗಳ ವಿರುದ್ಧ ಅವರು ಬಳಕೆ ಮಾಡುವ ಪದಗಳ ಬಗ್ಗೆ ಚರ್ಚೆ ಶುರುವಾಗಿದೆ. ಹೀಗಿರುವಾಗಲೇ ಸ್ಪರ್ಧಿಯೊಬ್ಬರು ವಿನಯ್ ಗೌಡಗೆ ಕೌಂಟರ್ ಕೊಟ್ಟಿದ್ದಾರೆ.

ಟಾಸ್ಕ್‌ ವೇಳೆ ಸ್ಪರ್ಧಿ ಶ್ರೇಯಸ್, ತಮಗಿಂತಲೂ ಅಭಿಷೇಕ್ ಎಂಬ ಸ್ಪರ್ಧಿಗೆ ಈ ಶೋನಲ್ಲಿ ಮುಂದುವರಿಯುವ ಅಗತ್ಯತೆ ಹೆಚ್ಚಿದೆ ಎಂಬ ಕಾರಣ ನೀಡಿ ತಮ್ಮ ಟಾಸ್ಕ್ ಬಿಟ್ಟುಕೊಡಲು ಮುಂದಾದ್ರು ಇದನ್ನ ಕಂಡು ಕೋಪಗೊಂಡ ಜ್ಯೂರಿ ವಿನಯ್ ಗೌಡ, ʻಈ ವೇದಿಕೆಯನ್ನು ಇನ್ಸಲ್ಟ್ ಮಾಡಬೇಡಿ, ಪ್ಲೀಸ್ ಗೆಟ್ ಔಟ್ʼ ಎಂದರು.

ಗೆಟೌಟ್ ಪದ ಬೇಡ

ಇದನ್ನು ಸಹಿಸದ ಸ್ಪರ್ಧಿ ‘ಗೆಟೌಟ್ ಪದ ಬೇಡ’ ಎಂದು ನೇರವಾಗಿ ಹೇಳಿದ್ದಾರೆ. ಆಗ ವಿನಯ್ ಅವರು ‘ಈ ವೇದಿಕೆಗೆ ಅವಮಾನ ಮಾಡಬೇಡಿ’ ಎಂದು ಕೌಂಟರ್ ಕೊಟ್ಟಿದ್ದಾರೆ.

ತುಂಬಾ ಡೀಸೆಂಟ್‌ ಆಗಿ ಹೇಳ್ತಿದ್ದೀನಿ ಪ್ಲೀಟ್‌ ಗೆಟ್‌ ಔಟ್‌, ಈ ಶೋ ನಿಮಗಲ್ಲ.. ಎಂದು ಹೇಳುತ್ತಿರುವಾಗಲೇ ಸ್ಪರ್ಧಿ ಶ್ರೇಯಸ್‌ ಶೋನಿಂದ ಡೈರೆಕ್ಟ್‌ ಆಗಿ ಹೊರನಡೆದಿದ್ದಾರೆ. ಈ ಘಟನೆಯ ಬಳಿಕ ವಿನಯ್ ಗೌಡ ವರ್ತನೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್ ಹಾಗೂ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.