ಬಿಗ್ ಬಾಸ್ (Bigg Boss Kannada 13) ಮನೆಯಲ್ಲಿ ಸ್ಪರ್ಧಿಗಳ ವರ್ತನೆ ಮಿತಿ ಮೀರುತ್ತಿದೆ. ಅದರಲ್ಲೂ ಮಂಜನ ಹಾವಳಿ ಜೋರಾಗಿದೆ. ಬಿಗ್ ಬಾಸ್ ಕನ್ನಡ 13ರಲ್ಲಿ ಮಾಡರ್ನ್ ಮಹಾಕವಿ (Mahakavi Manja) ಮಂಜು ನಡೆದುಕೊಳ್ಳುತ್ತಿರುವ ರೀತಿ ಹಾಗೂ ಸಹ-ಸ್ಪರ್ಧಿಗಳ ಕ್ಯಾರೆಕ್ಟರ್ ಬಗ್ಗೆ ಆಡಿದ ಮಾತುಗಳು ತೀವ್ರ ವಿವಾದಕ್ಕೆ ಕಾರಣವಾಗಿವೆ. ಕಿಚ್ಚ ಸುದೀಪ್ ಅವರಿಂದ ತಮಗೆ ಭಾರಿ ಕ್ಲಾಸ್ ಕಾದಿದೆ ಎಂದು ಸ್ವತಃ ಮಂಜನೇ ಭಯ ಹೊರ ಹಾಕಿದ್ದಾರೆ. ಕಾಮನ್ ಮ್ಯಾನ್ (Common Man) ಸ್ಪರ್ಧಿಗಳ ಆಟ ದಿಕ್ಕು ತಪ್ಪಿದ್ದು, ಬೇರೆಯವರ ಆಹಾರ ಕದ್ದು ತಿನ್ನುವ ಮೂಲಕ ಸಹ-ಸ್ಪರ್ಧಿಗಳು ಹಾಗೂ ವೀಕ್ಷಕರ ಆಕ್ರೋಶಕ್ಕೆ ಈಡಾಗಿದ್ದಾರೆ.
ಉದ್ದೇಶಪೂರ್ವಕವಾಗಿ ಟ್ರಿಗರ್
ಕಿರಣ್ ಶಾಸ್ತ್ರಿ, ಧನುಷ್, ಲಿಖಿತ್ ಹಾಗೂ ಮಾಡರ್ನ್ ಮಹಾಕವಿ ಮಂಜು ಅವರು ಕಾಮನ್ ಮ್ಯಾನ್ ಕೆಟಗರಿಯಲ್ಲಿ ಬಿಗ್ ಬಾಸ್ ಮನೆ ಸೇರಿದವರು. ಮಾಡರ್ನ್ ಮಹಾಕವಿ ಮಂಜು ಅವರು ಉದ್ದೇಶಪೂರ್ವಕವಾಗಿ ಎಲ್ಲರನ್ನೂ ಟ್ರಿಗರ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಬೇರೆಯವರಿಗೋಸ್ಕರ ಇಟ್ಟ ಮೊಟ್ಟೆ ಹಾಲನ್ನು ಲಿಖಿತ್, ಮಂಜು ಕದ್ದಿದ್ದೂ ಅಲ್ಲದೆ, ತಮ್ಮ ತಪ್ಪೇ ಇಲ್ಲ ಎಂಬ ರೀತಿಯಲ್ಲಿ ಅವರುಗಳು ನಡೆದುಕೊಂಡಿದ್ದಾರೆ. ಕಾಮನ್ ಮ್ಯಾನ್ಗಳು ನಡೆದುಕೊಳ್ಳುತ್ತಿರುವ ರೀತಿಗೆ ವೀಕ್ಷಕರು ಬೇಸರ ಹೊರಹಾಕಿದ್ದಾರೆ.
ಇದನ್ನೂ ಓದಿ: Bigg Boss Kannada 13: ಮುಚ್ಚೋ ಬಾಯಿ; ಶಾಸ್ತ್ರಿ ಕಿರಿಕ್, ಆಸಿಯಾ ಆವಾಜ್!
ಅದರಲ್ಲೂ ಮಂಜ ನಡವಳಿಕೆಗೆ ಬೇಸತ್ತು ಅವಿನಾಶ್ ಮನೆಯಿಂದ ಹೊರ ಹೋಗಲು ನಿರ್ಧರಿಸಿದ್ದಾರೆ. ಹಾಲು-ಮೊಟ್ಟೆ ಕಳ್ಳತನ ಮಾಡಿ ಸಿಕ್ಕಿಬಿದ್ದಿರುವ ಮಂಜು ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಅವರಿಂದ ತಮಗೆ ಭಾರಿ ಕ್ಲಾಸ್ ಕಾದಿದೆ ಎಂದು ಭಯ ವ್ಯಕ್ತಪಡಿಸಿದ್ದಾರೆ. ಸೌಂದರ್ಯಾ ಅವರ ಕ್ಯಾರೆಕ್ಟರ್ ಬಗ್ಗೆ ಮಂಜು ಕೆಟ್ಟದಾಗಿ ಮಾತನಾಡಿದ್ದರು. ಈ ರೀತಿ ಕದ್ದಿದ್ದೂ ಅಲ್ಲದೆ, ತಮ್ಮನ್ನು ತಾವು ಸಮರ್ಥನೆ ಮಾಡಿಕೊಂಡಿದ್ದಾರೆ. ವೀಕೆಂಡ್ನಲ್ಲಿ ನಾನು ಧ್ವಂಸ ಆಗೋದು ಫಿಕ್ಸ್ ಅಂತ ಹೇಳಿಕೊಂಡಿದ್ದಾರೆ.
ಅವಿನಾಶ್‌ಗೆ ಕಿರಿಕ್ ಕೊಟ್ಟ ಮಂಜ
ಅವಿನಾಶ್ ಬಟ್ಟೆ ಪ್ಯಾಕ್ ಮಾಡಿ ನನ್ನನ್ನ ಮನೆಗೆ ಕಳುಹಿಸಿ ಕೊಡಿ ಎಂದು ಬಿಗ್ ಬಾಸ್ ಬಳಿ ಬೇಡಿಕೊಂಡಿದ್ದಾರೆ. ನನಗೆ ಈ ಮನೆಯಲ್ಲಿ ಇರಲು ಇಷ್ಟವಿಲ್ಲ, ನನ್ನ ಆತ್ಮಗೌರವಕ್ಕಿಂತ ಈ ಆಟ ದೊಡ್ಡದಲ್ಲ ಇನ್ನೊಬ್ಬರ ಊಟವನ್ನ ಕದ್ದುಕೊಂಡು ತಿನ್ನಿ ಅಂತ ಕಳಿಸಿದ್ದಾರಾ? ಇಂತಹ ದರಿದ್ರದವರ ಜೊತೆಗೆ ನಾನಿರಲ್ಲ ನನ್ನನ್ನ ತಕ್ಷಣವೇ ಈ ಮನೆಯಿಂದ ಹೊರಗೆ ಕಳುಹಿಸಿ, ನಾನು ಈ ಶೋನಿಂದ ಕ್ವಿಟ್ ಆಗಲು ಬಯಸುತ್ತೇನೆ ಎಂದು ಮನವಿ ಮಾಡಿದರು ಅವಿನಾಶ್.
ತಮ್ಮನ್ನು ಕನ್ಫೆಷನ್ ರೂಮ್‌ಗೆ ಕರೆಸುವಂತೆ ಮನವಿ ಮಾಡಿದ್ದಾರೆ. ಇಷ್ಟೆಲ್ಲ ನಡೆಯುವ ವೇಳೆಗೆ ಅವರನ್ನು ಇನ್ನಷ್ಟು ಕೆಣಕಲು ಮಂಜ ಪ್ರಯತ್ನಿಸಿದ್ದಾರೆ. ಕೋಪ ಜಾಸ್ತಿಯಾದರೆ ಮಂಜನಿಗೆ ಹೊಡೆಯುವುದಾಗಿ ಕೂಡ ಅವಿನಾಶ್ ಎಚ್ಚರಿಸಿದ್ದಾರೆ.
ಇದನ್ನೂ ಓದಿ: Bigg Boss Kannada 13: ಮಂಜ ನಡವಳಿಕೆಗೆ ಬೇಸತ್ತು ಬಿಗ್ ಬಾಸ್ ಶೋನಿಂದ ಹೊರಗೆ ಬರಲು ನಿರ್ಧರಿಸಿದ ಅವಿನಾಶ್
ಕೊನೆಗೆ ಬಿಗ್ ಬಾಸ್ ಅವಿನಾಶ್ ಅವರನ್ನ ಕನ್ಫೆಶನ್ ರೂಮ್‌ಗೆ ಕರೆದಿದ್ದಾರೆ. ಅಲ್ಲಿಗೆ ಎಪಿಸೋಡ್ ಎಂಡ್ ಆಗಿದೆ. ಮುಂದೇನಾಗಲಿದೆ ಅನ್ನೋದು ಇಂದಿನ ಎಪಿಸೋಡ್‌ನಲ್ಲಿ ಗೊತ್ತಾಗಲಿದೆ.