ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bigg Boss Kannada 13: ಮಂಜ ನಡವಳಿಕೆಗೆ ಬೇಸತ್ತು ಬಿಗ್ ಬಾಸ್ ಶೋನಿಂದ ಹೊರಗೆ ಬರಲು ನಿರ್ಧರಿಸಿದ ಅವಿನಾಶ್

Bigg Boss Kannada 13: ಬಿಗ್‌ ಬಾಸ್‌ ಮನೆಯಲ್ಲಿ ಮಂಜನ (mahakavi Manja) ಹಾವಳಿ ಕಿತಾಪತಿ ಜೋರಾಗಿದೆ. ಇದರಿಂದಾಗಿ ಸ್ಪರ್ಧಿಗಳು ಪರದಾಡುವಂತಾಗಿದೆ. ಸ್ಪರ್ಧಿಗಳೆಲ್ಲರೂ ಮಲಗಿರುವಾಗ, ಮಂಜು, ಲಿಖಿತ್‌ ಮತ್ತು ಧನುಷ್‌ ಮನಸಿಗೆ ಬಂದಂತೆ ಅಡುಗೆ ಮಾಡಿ ತಿಂದಿದ್ದಾರೆ. ಇದೇ ವಿಚಾರಕ್ಕೆ ಬೇಸರಗೊಂಡ ಅವಿನಾಶ್‌ ರೇಗಾಡಿದ್ದಾರೆ. ಇಂಥ ವ್ಯಕ್ತಿಗಳ ಜೊತೆಯಲ್ಲಿ ತಾವು ಇರುವುದಿಲ್ಲ ಎಂದು ಅವಿನಾಶ್ ಬಿಗ್‌ ಬಾಸ್‌ ಮನೆಯಿಂದ ಹೊರ ಹೋಗಲು ನಿರ್ಧರಿಸಿದ್ದಾರೆ.

ಮಂಜ ನಡವಳಿಕೆಗೆ ಬೇಸತ್ತು ಶೋನಿಂದ ಹೊರಗೆ ಬರಲು ನಿರ್ಧರಿಸಿದ ಅವಿನಾಶ್

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Sep 18, 2026 8:18 AM

ಬಿಗ್‌ ಬಾಸ್‌ ಮನೆಯಲ್ಲಿ (Bigg Boss Kannada 13) ಮಂಜನ (mahakavi Manja) ಹಾವಳಿ ಕಿತಾಪತಿ ಜೋರಾಗಿದೆ. ಇದರಿಂದಾಗಿ ಸ್ಪರ್ಧಿಗಳು ಪರದಾಡುವಂತಾಗಿದೆ. ಸ್ಪರ್ಧಿಗಳೆಲ್ಲರೂ ಮಲಗಿರುವಾಗ, ಮಂಜು, ಲಿಖಿತ್‌ ಮತ್ತು ಧನುಷ್‌ ಮನಸಿಗೆ ಬಂದಂತೆ ಅಡುಗೆ ಮಾಡಿ ತಿಂದಿದ್ದಾರೆ. ಇದೇ ವಿಚಾರಕ್ಕೆ ಬೇಸರಗೊಂಡ ಅವಿನಾಶ್‌ (Avinash) ರೇಗಾಡಿದ್ದಾರೆ. ಇಂಥ ವ್ಯಕ್ತಿಗಳ ಜೊತೆಯಲ್ಲಿ ತಾವು ಇರುವುದಿಲ್ಲ ಎಂದು ಅವಿನಾಶ್ ಬಿಗ್‌ ಬಾಸ್‌ ಮನೆಯಿಂದ ಹೊರ ಹೋಗಲು ನಿರ್ಧರಿಸಿದ್ದಾರೆ.

ಅವಿನಾಶ್ ಬಟ್ಟೆ ಪ್ಯಾಕ್‌ ಮಾಡಿ ನನ್ನನ್ನ ಮನೆಗೆ ಕಳುಹಿಸಿ ಕೊಡಿ ಎಂದು ಬಿಗ್‌ ಬಾಸ್‌ ಬಳಿ ಬೇಡಿಕೊಂಡಿದ್ದಾರೆ. ನನಗೆ ಈ ಮನೆಯಲ್ಲಿ ಇರಲು ಇಷ್ಟವಿಲ್ಲ, ನನ್ನ ಆತ್ಮಗೌರವಕ್ಕಿಂತ ಈ ಆಟ ದೊಡ್ಡದಲ್ಲ ಇನ್ನೊಬ್ಬರ ಊಟವನ್ನ ಕದ್ದುಕೊಂಡು ತಿನ್ನಿ ಅಂತ ಕಳಿಸಿದ್ದಾರಾ? ಇಂತಹ ದರಿದ್ರದವರ ಜೊತೆಗೆ ನಾನಿರಲ್ಲ ನನ್ನನ್ನ ತಕ್ಷಣವೇ ಈ ಮನೆಯಿಂದ ಹೊರಗೆ ಕಳುಹಿಸಿ, ನಾನು ಈ ಶೋನಿಂದ ಕ್ವಿಟ್ ಆಗಲು ಬಯಸುತ್ತೇನೆ ಎಂದು ಮನವಿ ಮಾಡಿದರು ಅವಿನಾಶ್‌.

ಇನ್ನು ಅವಿನಾಶ್‌ ಇ ರೀತಿ ವರ್ತನೆ ಕಂಡು ಸ್ಪರ್ಧಿಗಳು ಸಮಾಧಾನ ಪಡಿಸಲು ನೋಡಿದರು. ಕೋಪದಲ್ಲಿ ಇಂತಹ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ತಿಳಿಹೇಳಿದ್ರು. ಆದರೂ ಅವಿನಾಶ್‌ ಕೇಳೋದಕ್ಕೆ ರೆಡಿ ಇರ್ಲಿಲ್ಲ.

ಇದನ್ನೂ ಓದಿ: Bigg Boss Kannada 12: Bigg Boss 12 Finale: ಕುಚಿಕು ದೋಸ್ತಿಗಳೇ ವಿನ್ನರ್‌, ರನ್ನರ್‌! ಗೆದ್ದ ಗಿಲ್ಲಿ ಪಕ್ಕಾ ನಿಂತ ಪಟಾಕಿ ರಕ್ಷಿತಾ

ಆಹಾರದ ಸಾಮಾಗ್ರಿಗಳನ್ನು ಬಳಸುವಾಗಲೂ ಆ ನಿಯಮ ಪಾಲಿಸಬೇಕು. ಆದರೆ ಲಿಖಿತ್, ಧನುಷ್, ಮಂಜ ಈ ವಿಚಾರದಲ್ಲಿ ಬ್ರೇಕ್‌ ಮಾಡಿದರು. ಅಡುಗೆ ಮನೆಗೆ ಬಂದು ಬೇರೆಯವರ ಪಾಲಿನ ಮೊಟ್ಟೆ ಇತ್ಯಾದಿಯನ್ನು ತಿಂದಿದ್ದಾರೆ.

ತಮ್ಮನ್ನು ಕನ್​ಫೆಷನ್ ರೂಮ್​ಗೆ ಕರೆಸುವಂತೆ ಮನವಿ ಮಾಡಿದ್ದಾರೆ. ಇಷ್ಟೆಲ್ಲ ನಡೆಯುವ ವೇಳೆಗೆ ಅವರನ್ನು ಇನ್ನಷ್ಟು ಕೆಣಕಲು ಮಂಜ ಪ್ರಯತ್ನಿಸಿದ್ದಾರೆ. ಕೋಪ ಜಾಸ್ತಿಯಾದರೆ ಮಂಜನಿಗೆ ಹೊಡೆಯುವುದಾಗಿ ಕೂಡ ಅವಿನಾಶ್ ಎಚ್ಚರಿಸಿದ್ದಾರೆ.

ಇದನ್ನೂ ಓದಿ: Bigg Boss Kannada 12: ಬಿಗ್‌ ಬಾಸ್‌ ಶೋಗೆ ಬಿಗ್‌ ಸಂಕಷ್ಟ, ಪ್ರತಿಭಟನೆ, ಪೊಲೀಸ್‌ ಅನುಮತಿಯೂ ಇಲ್ಲ

ಕೊನೆಗೆ ಬಿಗ್‌ ಬಾಸ್‌ ಅವಿನಾಶ್‌ ಅವರನ್ನ ಕನ್ಫೆಶನ್‌ ರೂಮ್‌ಗೆ ಕರೆದಿದ್ದಾರೆ. ಅಲ್ಲಿಗೆ ಎಪಿಸೋಡ್‌ ಎಂಡ್‌ ಆಗಿದೆ. ಮುಂದೇನಾಗಲಿದೆ ಅನ್ನೋದು ಇಂದಿನ ಎಪಿಸೋಡ್‌ನಲ್ಲಿ ಗೊತ್ತಾಗಲಿದೆ.