ಈ ಬಾರಿ ಬಿಗ್ಬಾಸ್ಗೆ (Bigg Boss kannada 13) ಸಾಮಾನ್ಯರನ್ನು ಸ್ಪರ್ಧಿಗಳನ್ನಾಗಿ ಆಯ್ಕೆ ಮಾಡಲು ಅಗ್ನಿಪರೀಕ್ಷೆ ಎಂಬ ವಿಶೇಷ ಟಾಸ್ಕ್ ಅನ್ನು ಮಾಡಲಾಗುತ್ತಿದೆ. ಈ ವೀಶೇಷ ಶೋನಲ್ಲಿ ವಿನಯ್, ಚಂದನ್, ಸಂಗೀತ, ಶ್ರುತಿ ಅವರುಗಳು ಜಡ್ಜ್ಗಳಾಗಿದ್ದಾರೆ. ವಿನಯ್ ಗೌಡ ಮತ್ತು ಸಂಗೀತಾ ಶೃಂಗೇರಿ ಅವರ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಜಾಲತಾಣಗಳಲ್ಲಿ ವಿನಯ್ ಗೌಡ (vinay Gowda) ಅವರು ಬಳಸಿದ ಭಾಷೆಗಳ ಬಗ್ಗೆ, ಸ್ಪರ್ಧಿಗಳಿಗೆ ಅವಮಾನ ಮಾಡಿದ್ದಾರೆ ಎನ್ನುವ ಬಗ್ಗೆ ನೆಟ್ಟಿಗರು ಗರಂ ಆಗುತ್ತಿದ್ದಾರೆ. ಇದೀಗ ಈ ಬಗ್ಗೆ ಸುದೀಪ್ ಅವರಿಗೆ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆ ಕೇಳಲಾಗಿದೆ. ಅವರು ಉತ್ತರ ಕೊಟ್ಟಿದ್ದು ಹೀಗೆ.
ಅಗ್ನಿಪರೀಕ್ಷೆಗಳನ್ನು ದಾಟಿ ಬಂದರಷ್ಟೆ ಸ್ವರ್ಗ
‘ಅಗ್ನಿಪರೀಕ್ಷೆಗಳನ್ನು ದಾಟಿ ಬಂದರಷ್ಟೆ ಸ್ವರ್ಗ ಸಿಗುತ್ತದೆ’ ಹಾಗೆಯೇ ಆ ಕಠಿಣವಾದ ಅಗ್ನಿಪರೀಕ್ಷೆಯನ್ನು ದಾಟಿದರೆ ಮಾತ್ರವೇ ಬಿಗ್ಬಾಸ್ನಲ್ಲಿ ಸ್ವರ್ಗ ಸಿಗಬಹುದು’ ಎಂದರು. ಕೆಲವು ಅಗ್ನಿಪರೀಕ್ಷೆಗಳು ಮುಗಿದ ಮೇಲೆಯೇ ನಿಜವಾದ ಯಶಸ್ಸು ಅಥವಾ ಸ್ವರ್ಗ ಸಿಗುವುದು. ಶಾಲೆಯಲ್ಲಿ ವಿದ್ಯಾರ್ಥಿಗಲು ತಪ್ಪು ಮಾಡಿದಾಗಲೂ ಟೀಚರ್ಸ್ ‘ಗೆಟ್ ಔಟ್’ ಅಂತಾರೆ. ಹೀಗೆ ಹೇಳಿದಾಗ, ಆ ಕ್ಷಣಕ್ಕೆ ಅದು ಕಹಿಯೆನಿಸಿದರೂ ಅವೆಲ್ಲಾ ನಮ್ಮ ಒಳ್ಳೆಯದಕ್ಕೇ ಆಗಿರುತ್ತದೆ. ಇಲ್ಲಿ ಜಡ್ಜ್‌ಗಳ ನಡವಳಿಕೆ ಎಷ್ಟು ಸರಿ-ತಪ್ಪು ಎಂದು ಚರ್ಚಿಸುವುದು ಮುಖ್ಯವಲ್ಲ.
ಇದನ್ನೂ ಓದಿ: Bigg Boss kannada 13: ಬಿಗ್‌ಬಾಸ್ ಮನೆಯಲ್ಲಿ ದರ್ಶನ್ ಹಾಡು ಯಾಕೆ ಹಾಕಲ್ಲ? ಸುದೀಪ್ ಖಡಕ್ ರಿಪ್ಲೈ
ಅಲ್ಲಿ ರಿಜೆಕ್ಟ್ ಆದವರಿಗೂ ಅದು ದೊಡ್ಡ ಹೈಪ್ ಮತ್ತು ಜನಪ್ರಿಯತೆ ತಂದುಕೊಟ್ಟಿರಬಹುದು. ಒಮ್ಮೆ ತಿರಸ್ಕೃತರಾದ ಮಾತ್ರಕ್ಕೆ ಬದುಕಿನ ಬಾಗಿಲುಗಳು ಮುಚ್ಚುವುದಿಲ್ಲ. ಯಾರು ಆ ಕಠಿಣತೆಗಳನ್ನು ಎದುರಿಸಿದರೋ ಅವರು ಮುಂದೆ ಬರುತ್ತಿದ್ದಾರೆ.
ಎಲ್ಲ ವಿಚಾರಕ್ಕೂ ಎರಡು ಸೈಡ್ ಇರುತ್ತವೆ. ನಾನೂ ಸಹ ಸಾಕಷ್ಟು ಕಠಿಣ ಸಮಯ, ಕಠಿಣವಾದ ಜವಾಬ್ದಾರಿಗಳನ್ನು ಎದುರಿಸಿಕೊಂಡೇ ಬಂದವನು. ಆಗೆಲ್ಲ ದೊಡ್ಡವರು ಹೇಳುವುದು ಬೈಗುಳ ಎನಿಸುತ್ತಿತ್ತು, ಆದರೆ ಈಗ ಅವರೆಲ್ಲ ಎಷ್ಟು ಸರಿಯಿದ್ದರು ಅನಿಸುತ್ತದೆ. ಇದೂ ಹಾಗೆಯೇ ಈಗ ಜಡ್ಜ್ಗಳು ಹೇಳಿರುವುದು ಕಠಿಣವಾಗಿದೆ ಎನಿಸಬಹುದು ಅದರಿಂದಲೇ ಒಳ್ಳೆಯದೂ ಆಗಬಹುದು’ ಎಂದಿದ್ದಾರೆ ಸುದೀಪ್.
ಇದೇ ಸೆಪ್ಟೆಂಬರ್ 6 ರಿಂದ ಬಿಗ್ ಬಾಸ್ ಕನ್ನಡ ಸೀಸನ್ 13 ಅಧಿಕೃತವಾಗಿ ಆರಂಭವಾಗಲಿದೆ ಎಂದು ಖುದ್ದು ಕಿಚ್ಚ ಸುದೀಪ್ ಅವರು ತಿಳಿಸಿದ್ದಾರೆ. ಈ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಇದರೊಂದಿಗೆ, ದೊಡ್ಮನೆಯ ಹೊಸ ಆಟವನ್ನು ಕಣ್ಣುಂಬಿಕೊಳ್ಳಲು ಇಡೀ ಕರ್ನಾಟಕವೇ ಕಾಯುತ್ತಿದೆ.
ಇದನ್ನೂ ಓದಿ: Bigg Boss Kannada 13: ಬಿಗ್ ಬಾಸ್ ವೋಟಿಂಗ್ ಪ್ರಕ್ರಿಯೆ ಆರಂಭ! ಮತ್ತೆ ಸ್ಪರ್ಧಿ ಮೇಲೆ ವಿನಯ್ ಗರಂ
ಬಿಗ್ ಬಾಸ್ ಕನ್ನಡ ಸೀಸನ್ 13 ಸೆಪ್ಟೆಂಬರ್ 6 ರಂದು ಅದ್ಧೂರಿಯಾಗಿ ಚಾಲನೆ ಪಡೆಯಲಿದೆ ಎಂದು ಸುದೀಪ್ ತಿಳಿಸಿದ್ದಾರೆ. ಅಂದು ಸಂಜೆ 7 ಗಂಟೆಗೆ ಸರಿಯಾಗಿ ಗ್ರ್ಯಾಂಡ್ ಓಪನಿಂಗ್ ಸಂಚಿಕೆಯು ಪ್ರಸಾರವಾಗಲಿದ್ದು, ಸುದೀಪ್ ಅವರು ಎಲ್ಲಾ ಸ್ಪರ್ಧಿಗಳನ್ನು ಮನೆಗೆ ಬರಮಾಡಿಕೊಳ್ಳಲಿದ್ದಾರೆ