Bigg Boss Kannada 12: ನನ್ನ ಶಿಷ್ಯ ಎಂದು ಒಬ್ಬೇ ಒಬ್ಬನನ್ನು ಸಹ ನಾನು ಬಿಗ್ಬಾಸ್ಗೆ ಕಳಿಸಿಲ್ಲ! ಹೀಗ್ಯಾಕೆ ಅಂದ್ರು ಕಿಚ್ಚ?
Dhruvanth: ವೀಕೆಂಡ್ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ಅವರು ಕೆಲ ಸ್ಪರ್ಧಿಗಳ ವಿಚಾರ ಮಾತ್ರವಲ್ಲ, ತಮ್ಮ ಬಗ್ಗೆ ಇರೋ ಗಾಸಿಪ್, ಆರೋಪ, ಅದೆಲ್ಲದಕ್ಕೂ ಕ್ಲಾರಿಟಿ ಕೊಟ್ಟೇ ಹೇಳ್ತಾರೆ. ಒಂದು ಸ್ಪಷ್ಟನೆಗೆ ಬಿಗ್ಬಾಸ್ ವೇದಿಕೆಯನ್ನು ಸುದೀಪ್ ಬಳಸಿಕೊಂಡರು. ಧ್ರುವಂತ್ ಅವರು ಪ್ರತಿ ಬಾರಿ ಬಿಗ್ ಬಾಸ್‌ಗೆ ಮನೆಯಿಂದ ಹೊರಗೆ ಕಳಹಿಸಿ ಎಂದು ಮನವಿ ಮಾಡ್ತಾರೆ. ಈ ವಾರ ನಾಮಿನೇಶನ್ ಮುಂಚೆಯೇ ಕ್ಯಾಮರ ಮುಂದೆ ಬೇಡಿಕೆ ಇಟ್ಟರು. ಇದಾದ ಬಳಿಕ ಮೊದಲು ಸೇಫ್ ಆಗಿದ್ದು ಧ್ರುವಂತ್. ಇಷ್ಟು ಹೇಳಿದ ಮೇಲೆ ಕಿಚ್ಚ ಒಂದು ಸ್ಪಷ್ಟನೆ ಕೊಡುತ್ತಾರೆ.
ಬಿಗ್ ಬಾಸ್ ಕನ್ನಡ -
ವೀಕೆಂಡ್ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ (Kichcha Sudeep) ಅವರು ಕೆಲ ಸ್ಪರ್ಧಿಗಳ ವಿಚಾರ ಮಾತ್ರವಲ್ಲ, ತಮ್ಮ ಬಗ್ಗೆ ಇರೋ ಗಾಸಿಪ್, ಆರೋಪ, ಅದೆಲ್ಲದಕ್ಕೂ ಕ್ಲಾರಿಟಿ ಕೊಟ್ಟೇ ಹೇಳ್ತಾರೆ. ಒಂದು ಸ್ಪಷ್ಟನೆಗೆ ಬಿಗ್ಬಾಸ್ ವೇದಿಕೆಯನ್ನು ಸುದೀಪ್ ಬಳಸಿಕೊಂಡರು. ಧ್ರುವಂತ್ (Dhruvanth) ಅವರು ಪ್ರತಿ ಬಾರಿ ಬಿಗ್ ಬಾಸ್‌ಗೆ ಮನೆಯಿಂದ ಹೊರಗೆ ಕಳಹಿಸಿ ಎಂದು ಮನವಿ ಮಾಡ್ತಾರೆ. ಈ ವಾರ ನಾಮಿನೇಶನ್ (Nomination) ಮುಂಚೆಯೇ ಕ್ಯಾಮರ ಮುಂದೆ ಬೇಡಿಕೆ ಇಟ್ಟರು. ಇದಾದ ಬಳಿಕ ಮೊದಲು ಸೇಫ್ ಆಗಿದ್ದು ಧ್ರುವಂತ್. ಇಷ್ಟು ಹೇಳಿದ ಮೇಲೆ ಕಿಚ್ಚ ಒಂದು ಸ್ಪಷ್ಟನೆ ಕೊಡುತ್ತಾರೆ.
ಕೆಲವರಿಗೆ ಇಲ್ಲಿ ತಪ್ಪು ಕಲ್ಪನೆಯಿದೆ
ಧ್ರುವಂತ್‌ಗೆ ಸುದೀಪ್ ಮಾತನಾಡಿ, ಬಿಗ್ ಬಾಸ್ ಮನೆಗೆ ಹೋಗುವಾಗ, ನನಗೆ ಹೇಳಿಕೊಂಡು ಹೋಗಿದ್ರಾ? ಕೆಲವರಿಗೆ ಇಲ್ಲಿ ತಪ್ಪು ಕಲ್ಪನೆಯಿದೆ. ಕೆಲವರು ಹೊರಗೆ ಕೂತುಕೊಂಡು ಉದ್ದುದ್ದ ಮಾತನಾಡುವವರು ಸಹ ಇದ್ದಾರೆ ಅವರಿಗೆಲ್ಲ ಸೇರಿ ಹೇಳುತ್ತೀನಿ. ನನ್ನ ಹುಡುಗುರು, ನನ್ನ ಶಿಷ್ಯ ಎಂದು ಇಷ್ಟು ಸೀಸನ್ ಅಲ್ಲಿ ಒಬ್ಬೇ ಒಬ್ಬನನ್ನು ಸಹ ನಾನು ಬಿಗ್ಬಾಸ್ಗೆ ಕಳಿಸಿಲ್ಲ. ಮೇಕಪ್ ಹಾಕುವ ಈ ವೇದಿಕೆ ಮೇಲೆ ನಿಂತು ಈ ಮಾತನ್ನು ಹೇಳುತ್ತಿದ್ದೀನಿ ಎಂದರು.
ಇದನ್ನೂ ಓದಿ: Bigg Boss Kannada 12: ಗಿಲ್ಲಿ ಮಾಡಿದ ತಪ್ಪಿಗೆ ಕ್ಯಾಪ್ಟನ್ ರೂಂಗೆ ಬೀಗ!
ʻವೇದಿಕೆ ಮೇಲೆ ನೀವು ನಡೆದುಕೊಂಡು ಬರುವವರೆಗೆ ಮುಂದಿನ ಸ್ಪರ್ಧಿ ಯಾರು ಎಂಬುದನ್ನು ಸಹ ನಾನು ತಿಳಿದುಕೊಳ್ಳುವುದಿಲ್ಲ. ಈ ಕಾರ್ಯಕ್ರಮ ಬಹಳ ದೊಡ್ಡ ಕಾರ್ಯಕ್ರಮ, ನಿಮಗೆ ಅನುಕೂಲ ಆಗುವಂತೆ ಬಳಸಿಕೊಳ್ಳಿ. ಆದರೆ ಇಲ್ಲಿ, ನಿಮ್ಮನ್ನು ಒಳಗೆ ಕಳಿಸುವವನೂ ನಾನಲ್ಲ, ನಿಮ್ಮನ್ನು ಹೊರಗೆ ಕರೆಸಿಕೊಳ್ಳುವ ಅಧಿಕಾರವೂ ನನಗೆ ಇಲ್ಲ’ ಎಂದರು ಸುದೀಪ್.
ಈ ವಾರ ನಾಮಿನೇಟ್
ಧ್ರುವಂತ್, ಸೂರಜ್ ಸಿಂಗ್, ರಾಶಿಕಾ ಶೆಟ್ಟಿ, ಮಾಳು ನಿಪನಾಳ, ಕಾವ್ಯಾ ಶೈವ, ಅಭಿಷೇಕ್, ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಸ್ಪಂದನಾ ಅವರು ಈ ವಾರ ನಾಮಿನೇಟ್ ಆಗಿದ್ದಾರೆ. . ಧ್ರುವಂತ್ ಅವರೇ ಎಲಿಮಿನೇಟ್ ಆಗಬಹುದು ಎಂಬುದೇ ಎಲ್ಲರ ಊಹೆ ಆಗಿತ್ತು. ಆದರೆ ಅವರನ್ನು ಜನರು ವೋಟ್ ಮಾಡಿ ಅವರನ್ನು ಉಳಿಸಿಕೊಂಡರು.
ಬಿಗ್ ಬಾಸ್ ಮನೆಯಲ್ಲಿ ಧ್ರುವಂತ್ ಅವರು ಆಡುತ್ತಿರುವ ರೀತಿಯ ಬಗ್ಗೆ ಅವರ ಕುಟುಂಬದವರಿಗೆ ಹೆಮ್ಮೆ ಇದೆ. ಧ್ರುವಂತ್ ತಂದೆ ಮಾತನಾಡಿದ ಆಡಿಯೋ ಪ್ಲೇ ಮಾಡಲಾಯಿತು.ಅಷ್ಟೇ ಅಲ್ಲ ಧ್ರುವಂತ್‌ಗೆ ಸುದೀಪ್ ಬುದ್ಧಿ ಮಾತನ್ನೂ ಹೇಳಿದರು.ಸೆಲ್ಫ ಎಲಿಮಿನೇಟ್ ಆಗೋ ಹಾಗಿಲ್ಲ ಎಂದರು.