ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss Kannada 13: ಜೋಕರ್‌ ಕಾರ್ಡ್‌ ಗೆದ್ದು ಮನೆಮಂದಿಗೆ ಶಾಕ್‌ ಕೊಟ್ಟ ಧನುಷ್‌! ವೀಕ್ಷಕರಿಂದ ʻಟಾಸ್ಕ್‌ ಮಾಸ್ಟರ್‌ʼ ಪಟ್ಟ

Bigg Boss Kannada 13: ಬಿಗ್ ಬಾಸ್ ಕನ್ನಡ ಸೀಸನ್ 13ರ (Bigg Boss Kannada 13) ಮನೆಯಲ್ಲಿ ದಿನದಿಂದ ದಿನಕ್ಕೆ ಆಟದ ರಂಗು ಹೆಚ್ಚಾಗುತ್ತಿದೆ. ಸ್ಪರ್ಧಿಗಳ ನಡುವಿನ ಪೈಪೋಟಿ, ತಂತ್ರಗಾರಿಕೆ ಹಾಗೂ ಅನಿರೀಕ್ಷಿತ ತಿರುವುಗಳು ವೀಕ್ಷಕರಲ್ಲಿ ಕುತೂಹಲ ಮೂಡಿಸುತ್ತಿವೆ. ಇದೀಗ ಮನೆಯೊಳಗೆ ನಡೆದ ಜೋಕರ್ ಕಾರ್ಡ್ ಟಾಸ್ಕ್‌ನಲ್ಲಿ ಧನುಷ್ ನೀಡಿದ ಪ್ರದರ್ಶನ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮೊದಲಿಗೆ ಟಾಸ್ಕ್‌ಗೆ (task Master) ಆಯ್ಕೆಯಾಗದಿದ್ದರೂ, ಕೊನೆಯ ಕ್ಷಣದಲ್ಲಿ ಸಿಕ್ಕ ಅವಕಾಶವನ್ನು ಗೆಲುವಾಗಿ ಪರಿವರ್ತಿಸಿಕೊಂಡ ಧನುಷ್ ಮತ್ತೊಮ್ಮೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ.

ಬಿಗ್‌ ಬಾಸ್‌ ಕನ್ನಡ

ಬಿಗ್ ಬಾಸ್ ಕನ್ನಡ ಸೀಸನ್ 13ರ (Bigg Boss Kannada 13) ಮನೆಯಲ್ಲಿ ದಿನದಿಂದ ದಿನಕ್ಕೆ ಆಟದ ರಂಗು ಹೆಚ್ಚಾಗುತ್ತಿದೆ. ಸ್ಪರ್ಧಿಗಳ ನಡುವಿನ ಪೈಪೋಟಿ, ತಂತ್ರಗಾರಿಕೆ ಹಾಗೂ ಅನಿರೀಕ್ಷಿತ ತಿರುವುಗಳು ವೀಕ್ಷಕರಲ್ಲಿ ಕುತೂಹಲ ಮೂಡಿಸುತ್ತಿವೆ. ಇದೀಗ ಮನೆಯೊಳಗೆ ನಡೆದ ಜೋಕರ್ ಕಾರ್ಡ್ ಟಾಸ್ಕ್‌ನಲ್ಲಿ ಧನುಷ್ ನೀಡಿದ ಪ್ರದರ್ಶನ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮೊದಲಿಗೆ ಟಾಸ್ಕ್‌ಗೆ (task Master) ಆಯ್ಕೆಯಾಗದಿದ್ದರೂ, ಕೊನೆಯ ಕ್ಷಣದಲ್ಲಿ ಸಿಕ್ಕ ಅವಕಾಶವನ್ನು ಗೆಲುವಾಗಿ ಪರಿವರ್ತಿಸಿಕೊಂಡ ಧನುಷ್ ಮತ್ತೊಮ್ಮೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ.

ಯಶಸ್ ಆಯ್ಕೆ ಮಾಡಿದ ನಾಲ್ವರು ಸ್ಪರ್ಧಿಗಳು ಯಾರು?

ಈ ಸೀಸನ್ ಮುಗಿಯುವವರೆಗೂ ನಾಮಿನೇಷನ್‌ನಲ್ಲಿರುವ ಯಶಸ್ ಕೃಷ್ಣ ಅವರಿಗೆ ಜೋಕರ್ ಕಾರ್ಡ್ ಟಾಸ್ಕ್‌ನಲ್ಲಿ ಭಾಗವಹಿಸುವ ಅವಕಾಶ ಇರಲಿಲ್ಲ. ಹೀಗಾಗಿ, ಟಾಸ್ಕ್‌ನಲ್ಲಿ ಸ್ಪರ್ಧಿಸಬೇಕಾದ ನಾಲ್ವರನ್ನು ಮನೆಯ ಸದಸ್ಯರು ಒಮ್ಮತದಿಂದ ಆಯ್ಕೆ ಮಾಡುವಂತೆ ಬಿಗ್ ಬಾಸ್ ಸೂಚಿಸಿದ್ದರು.

ಆದರೆ ಸ್ಪರ್ಧಿಗಳ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಆಯ್ಕೆಯ ಜವಾಬ್ದಾರಿಯನ್ನು ಬಿಗ್ ಬಾಸ್ ಯಶಸ್ ಅವರ ಹೆಗಲಿಗೆ ಹಾಕಿದರು. ಅದರಂತೆ ಯಶಸ್ ಅವರು ಸೌಂದರ್ಯ ಶೆಟ್ಟಿ, ಆಸಿಯಾ ಫಿರ್ದೋಸ್, ಜಗ್ಗ ಮಮ್ಮಿ ಹಾಗೂ ಕಿರಣ್ ಶಾಸ್ತ್ರಿ ಅವರನ್ನು ಟಾಸ್ಕ್‌ಗೆ ಆಯ್ಕೆ ಮಾಡಿದರು. ಈ ಆಯ್ಕೆಯಲ್ಲಿ ಧನುಷ್ ಮಂಜುನಾಥ್ ಹೆಸರು ಇರಲಿಲ್ಲ.

ಇದನ್ನೂ ಓದಿ: Gowri Putra Serial: ಇಕ್ಕಟ್ಟಿನಲ್ಲಿ ಸಿಲುಕಿದ ಕಾರ್ತಿಕ್‌ಗೆ ಎದುರಾಯ್ತು ಹೊಸ ಸಂಕಷ್ಟ

ಕಿರಣ್ ಶಾಸ್ತ್ರಿ ಬದಲಿಗೆ ಧನುಷ್‌ಗೆ ಸಿಕ್ಕ ಅವಕಾಶ!

ಟಾಸ್ಕ್ ಆರಂಭದಲ್ಲಿ ಎಲ್ಲವೂ ಸಹಜವಾಗಿಯೇ ಸಾಗುತ್ತಿತ್ತು. ಆದರೆ ಆಟದ ನಡುವೆ ಕಿರಣ್ ಶಾಸ್ತ್ರಿ ಅವರು ನಿರೀಕ್ಷಿತ ಮಟ್ಟದ ಆಸಕ್ತಿ ತೋರಿಸದೆ ನಿರ್ಲಕ್ಷ್ಯ ವಹಿಸಿದ್ದು ಬಿಗ್ ಬಾಸ್ ಗಮನಕ್ಕೆ ಬಂತು. ಇದರಿಂದ ಟಾಸ್ಕ್‌ನ ಸ್ಪರ್ಧಾತ್ಮಕತೆಗೆ ಧಕ್ಕೆಯಾಗುತ್ತಿರುವುದನ್ನು ಗಮನಿಸಿದ ಬಿಗ್ ಬಾಸ್, ಕಿರಣ್ ಅವರನ್ನು ಆಟದಿಂದ ಹೊರಗಿಟ್ಟು ಅವರ ಸ್ಥಾನಕ್ಕೆ ಮತ್ತೊಬ್ಬ ಸ್ಪರ್ಧಿಯನ್ನು ಕಳುಹಿಸುವಂತೆ ಸೂಚಿಸಿದರು.



ಈ ಸಂದರ್ಭದಲ್ಲಿ ಕ್ಯಾಪ್ಟನ್ ಗಾನವಿ ಗೌಡ ಮತ್ತು ಗಗನ್ ಚಿನ್ನಪ್ಪ ಚರ್ಚಿಸಿ ಧನುಷ್ ಮಂಜುನಾಥ್ ಅವರನ್ನು ಬದಲಿ ಸ್ಪರ್ಧಿಯಾಗಿ ಆಯ್ಕೆ ಮಾಡಿದರು.

ಸಿಕ್ಕ ಅವಕಾಶವನ್ನು ಗೆಲುವಾಗಿ ಬದಲಿಸಿದ ಧನುಷ್!

ಆರಂಭದಲ್ಲಿ ಟಾಸ್ಕ್‌ಗೆ ಆಯ್ಕೆಯಾಗದಿದ್ದ ಧನುಷ್‌ಗೆ ಇದು ಅನಿರೀಕ್ಷಿತ ಅವಕಾಶವಾಗಿತ್ತು. ಆದರೆ ಸಿಕ್ಕ ಅವಕಾಶವನ್ನು ವ್ಯರ್ಥ ಮಾಡಿಕೊಳ್ಳದ ಅವರು ಆಟದ ಅಖಾಡಕ್ಕೆ ಇಳಿದ ತಕ್ಷಣವೇ ತಮ್ಮ ವೇಗ ಮತ್ತು ಚುರುಕುತನ ಪ್ರದರ್ಶಿಸಿದರು.

ಇತರ ಸ್ಪರ್ಧಿಗಳು ಆಟದ ವೇಗಕ್ಕೆ ಹೊಂದಿಕೊಳ್ಳುವಷ್ಟರಲ್ಲಿ ಧನುಷ್ ತಮ್ಮ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಈ ಮೂಲಕ ಜೋಕರ್ ಕಾರ್ಡ್ ಅನ್ನು ತಮ್ಮದಾಗಿಸಿಕೊಂಡರು. ಅವರ ಈ ಅದ್ಭುತ ಪ್ರದರ್ಶನ ಮನೆಯ ಸದಸ್ಯರಿಗೂ ಅಚ್ಚರಿ ಮೂಡಿಸಿತು.

ಇದನ್ನೂ ಓದಿ: Bigg Boss Kannada 13: ಬಿಗ್ ಬಾಸ್ ಮನೆಯಲ್ಲಿ ಈ ಗುಳ್ಳೆನರಿಯ ಆಟ ಶುರು! ಸ್ಪರ್ಧಿಗಳಿಗೆ ಢವ ಢವ

ಟಾಸ್ಕ್ ಮಾಸ್ಟರ್ ಧನುಷ್!

ಟಾಸ್ಕ್‌ಗೆ ಮೊದಲ ಆಯ್ಕೆಯಲ್ಲೇ ಸ್ಥಾನ ಸಿಗದಿದ್ದರೂ, ಬದಲಿ ಆಟಗಾರನಾಗಿ ಬಂದಾಗ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿರುವುದು ವೀಕ್ಷಕರ ಗಮನ ಸೆಳೆದಿದೆ.ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಗೆಲುವು ಸಾಧಿಸಿದ ಧನುಷ್ ಅವರ ಆಟಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಮೂಲಕ ಮತ್ತೊಮ್ಮೆ ಮನೆಯ ಟಾಸ್ಕ್ ಮಾಸ್ಟರ್ ಎಂಬ ತಮ್ಮ ಇಮೇಜ್ ಅನ್ನು ಗಟ್ಟಿಗೊಳಿಸಿಕೊಂಡಿದ್ದಾರೆ.

Yashaswi Devadiga

View all posts by this author