ವೀಕೆಂಡ್ ಬಂತು ಅಂದರೆ ಬಿಗ್ ಬಾಸ್ ವೀಕ್ಷಕರಿಗೆ (Bigg Boss Kannada 13) ಹಬ್ಬ. ಆದರೆ ಈ ಬಾರಿ ಕಿಚ್ಚನ ಮಾತುಗಳು ವೀಕ್ಷಕರಿಗೂ ಬೇಸರ ತರಿಸಿದೆ. ಅದರಲ್ಲೂ ಗಾನವಿ (Ganavi) ಅಂತೂ ಬಾಯಿಗೆ ಬಿಡುವಿಲ್ಲದೆ ಮಾತನಾಡಿದ್ದು, ತಾಳ್ಮೆಯೇ ಇಲ್ಲದ ರೀತಿ ವರ್ತಿಸಿದ್ದು, ಸುದೀಪ್ (Sudeep) ಅವರಿಗೆ ತೀವ್ರ ಬೇಸರ ತರಿಸಿದೆ. ಇಡೀ ಮನೆಯವರನ್ನೇ ಮನೆ ಬಿಟ್ಟು ಹೋಗಿ ಎಂದು ನೇರವಾಗಿ ಹೇಳಿದ್ದಾರೆ ಕಿಚ್ಚ.
ಗಾನವಿ ವರ್ತನೆ ಕಿಚ್ಚನಿಗ ಬೇಸರ
ಎಪಿಸೋಡ್ ಶುರು ಆಗುತ್ತಲೇ ಈ ಮನೆಯಲ್ಲಿ ಕ್ಯಾಪ್ಟನ್ಸಿ ಆಗಲಿ, ರೂಲ್ಸ್ ಆಗಲಿ ಯಾವುದೇ ವಿಚಾರ ಬಗ್ಗೆ ಡಿಸಿಪ್ಲಿನ್ ಇಲ ಎಂದರು ಕಿಚ್ಚ. ಒಬ್ಬರ ಜೊತೆ ಮಾತನಾಡುವಾಗ ಕೇಳುವಷ್ಟು ತಾಳ್ಮೆ ಇಲ್ಲ. ಗಾನವಿ ವರ್ತನೆ ಕಿಚ್ಚನಿಗ ಬೇಸರ ತರಿಸಿದೆ.
ಇದನ್ನೂ ಓದಿ: Bigg Boss Kannada 13: ಇಬ್ರು ಹುಡುಗ್ರನ್ನ ಹೊಡೆದು ಹೋಗ್ತೀನಿ; ಲಿಖಿತ್, ಮಂಜಗೆ ಆಸಿಯಾ ಆವಾಜ್
ತಾಂಡವ್ ಇನ್ನೂ ಮಾತನಾಡಲು ಶುರು ಸಹ ಮಾಡಿರುವುದಿಲ್ಲ ಆಗಲೇ ನೀವು ಅವರಿಗೆ ಪ್ರತ್ಯುತ್ತರ ಕೊಡಲು ರೆಡಿ ಆಗಿಬಿಟ್ಟಿರುತ್ತೀರದಯವಿಟ್ಟು ಹೊರಗೆ ಹೋಗಿಬಿಡಿ. ನೀವ್ಯಾರೂ ಇಲ್ಲದೇ ಇದ್ದರೂ ಪರವಾಗಿಲ್ಲ, ಪ್ರತಿ ವಾರವೂ ನಾನು ಈ ವೇದಿಕೆಗೆ ಬರುತ್ತೀನಿ, ಹಾಡು ಹಾಡಿಯೋ, ಡ್ಯಾನ್ಸ್ ಮಾಡಿಯೋ ಜನರನ್ನು ರಂಜಿಸುತ್ತೇನೆ. ಶೋ ಕಂಪ್ಲೀಟ್ ಮಾಡುತ್ತೀನಿ’ ಎಂದರು ಸುದೀಪ್.
. ವೈಲ್ಡ್ ಕಾರ್ಡ್ ಸ್ಪರ್ಧಿಗಳನ್ನು ಕಟಕಟೆಗೆ ಕರೆಸಿ ವಿಚಾರಣೆ ನಡೆಸುತ್ತಿದ್ದರು. ಗಾನವಿ ಕಟಕಟೆಗೆ ಬಂದಾಗ ಸುದೀಪ್ ಅವರಿಗೂ ಸಹ ಮಾತನಾಡಲು ಅವಕಾಶ ಕೊಡದೆ ಕಾವ್ಯಾ ಜೊತೆ ಅಲ್ಲೇ ಜಗಳಕ್ಕೆ ನಿಂತರು.ನೀವು ಮಾತನಾಡಿಕೊಳ್ಳಿ ನಾನು ಹೊರಗೆ ಹೋಗುತ್ತೇನೆ’ ಎಂದು ಕಿಚ್ಚ ಹೋದರು. ಇನ್ನು ಸುದೀಪ್ ಕೂಡ ನನ್ನ ಮೇಲೆ ನನಗೆ ಅಪಾರ ಗೌರವವಿದೆ ಎಂದು ನೇರವಾಗಿ ಹೇಳಿದ್ದಾರೆ.
ಇದನ್ನೂ ಓದಿ: Bigg Boss Kannada 13: ಕಾವ್ಯಾ-ಗಾನವಿ ಜಗಳ; ಸ್ಟೇಜ್ ಬಿಟ್ಟು ತೆರಳಿದ ಕಿಚ್ಚ
ಗಾನವಿ ಕೂಡ ಒಂದು ಗೇಮ್ ವಿಚಾರವಾಗಿ ಸುದೀಪ್ ಅವರಿಗೇ ಗಮನಿಸಿ ನೋಡಿ ಎಂದಿದ್ದಾರೆ. ಪದೇ ಪದೇ ಗಾನವಿ ಹೇಳಿದ ಮಾತಿಗೆ ಸಿಟ್ಟಾದ ಕಿಚ್ಚ, ನೀವು ಹೊರ ಹೋಗ್ತೀರಾ ಅಂದ್ರೆ ಹೊರಡಿ. ಈಗಲೇ ಡೋರ್ ಓಪನ್ ಮಾಡಿಸ್ತೀನಿ ಎಂದು ಖಡಕ್ ಆಗಿ ಹೇಳಿದರು.