Bigg Boss Kannada 13: ಕಾವ್ಯಾ-ಗಾನವಿ ಜಗಳ; ಸ್ಟೇಜ್ ಬಿಟ್ಟು ತೆರಳಿದ ಕಿಚ್ಚ
Bigg Boss Kannada 13: ‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ (Bigg Boss Kannada 13) ವೈಲ್ಡ್ ಕಾರ್ಡ್ ಸ್ಪರ್ಧಿಗಳ ವರ್ತನೆ ಕಿಚ್ಚ ಸುದೀಪ್ ಅವರ ಪಂಚಾಯ್ತಿಯಲ್ಲಿ ತೀವ್ರ ಚರ್ಚೆಗೆ ಒಳಪಟ್ಟಿತು. ಪ್ರಶಾಂತ್ ಹಾಗೂ ಸೋನಿಕಾ ವಿಷಯ ಚರ್ಚೆಗೆ ಬಂತು. ಇನ್ನು, ಸ್ಯಾಂಡಿ ಅವರು ಈ ವಾರ ಸ್ವಾರ್ಥ ಪ್ರದರ್ಶನ ಮಾಡಿದ್ದರ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಗಾನವಿ ಅವರಿಗೆ ಕಳಪೆ ನೀಡಿದ ವಿಷಯದ ಬಗ್ಗೆಯೂ ಚರ್ಚೆ ಆಗಲಿದೆ. ಗಾನವಿ, ಪ್ರಶಾಂತ್ ಹಾಗೂ ಸೋನಿಕಾ ವೈಲ್ಡ್ ಕಾರ್ಡ್ (Wild Card) ಆಗಿ ಮನೆಗೆ ಬಂದಿದ್ದಾರೆ. ಇವರ ಬಳಿಕ ಕ್ಯಾಪ್ಟನ್ ಆಗಿ ತಾಂಡವ್ 'ದೊಡನೆ'ಗೆ ಎಂಟ್ರಿ ಕೊಟ್ಟಿದ್ದಾರೆ.
ಬಿಗ್ ಬಾಸ್ ಕನ್ನಡ -
‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ (Bigg Boss Kannada 13) ವೈಲ್ಡ್ ಕಾರ್ಡ್ ಸ್ಪರ್ಧಿಗಳ ವರ್ತನೆ ಕಿಚ್ಚ ಸುದೀಪ್ ಅವರ ಪಂಚಾಯ್ತಿಯಲ್ಲಿ ತೀವ್ರ ಚರ್ಚೆಗೆ ಒಳಪಟ್ಟಿತು. ಪ್ರಶಾಂತ್ ಹಾಗೂ ಸೋನಿಕಾ (Prashanth Sonika) ವಿಷಯ ಚರ್ಚೆಗೆ ಬಂತು. ಇನ್ನು, ಸ್ಯಾಂಡಿ ಅವರು ಈ ವಾರ ಸ್ವಾರ್ಥ ಪ್ರದರ್ಶನ ಮಾಡಿದ್ದರ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಗಾನವಿ ಅವರಿಗೆ ಕಳಪೆ ನೀಡಿದ ವಿಷಯದ ಬಗ್ಗೆಯೂ ಚರ್ಚೆ ಆಗಲಿದೆ. ಗಾನವಿ, ಪ್ರಶಾಂತ್ ಹಾಗೂ ಸೋನಿಕಾ ವೈಲ್ಡ್ ಕಾರ್ಡ್ (Wild Card) ಆಗಿ ಮನೆಗೆ ಬಂದಿದ್ದಾರೆ. ಇವರ ಬಳಿಕ ಕ್ಯಾಪ್ಟನ್ ಆಗಿ ತಾಂಡವ್ 'ದೊಡನೆ'ಗೆ ಎಂಟ್ರಿ ಕೊಟ್ಟಿದ್ದಾರೆ.
ಗೇಮ್ ಚೇಂಜ್ ಮಾಡ್ತೀನಿ ಅಂತ ಮನೆಯೊಳಗೆ ಮೂರು ಮಂದಿ ಹೋಗಿದ್ದಾರೆ. ಆದರೆ ಮನೆಯೊಳಗೆ ಏನು ಮಾಡುತ್ತಿದ್ದಾರೆ ಎಂದು ಕಟಕಟೆಯಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಗಳನ್ನು ನಿಲ್ಲಿಸಿ ಕಿಚ್ಚ ಪ್ರಶ್ನೆ ಮಾಡಿದ್ದಾರೆ.
ವೈಲ್ಡ್ ಕಾರ್ಡ್ ಸ್ಪರ್ಧಿಗಳು ಮನೆಗೆ ಎಂಟ್ರಿ ಆಗಿ ಒಂದು ವಾರವಾಗಿದೆ. ಈ ವಾರ ಮಂಜ ಹಾಗೂ ಇತರರು ಸೇರಿಕೊಂಡು ಕ್ಯಾಪ್ಟೆನ್ಸಿ ಓಟವೇ ರದ್ದಾಗುವಂತೆ ಮಾಡಿದ್ದಾರೆ. ಗಾನವಿ ಜಗಳ ಜಾಸ್ತಿ ಮಾಡುತ್ತೇನೆ ಎನ್ನುವ ಮೈಂಡ್ ಸೆಟ್‌ನಲ್ಲಿ ಮನೆಗೆ ಬಂದಿದ್ದಾರೆ ಎಂದು ಸೌಂದರ್ಯ ಹೇಳಿದ್ದಾರೆ.
ಎರಡು ಕೈ ಸೇರಿದರೆ ಚಪ್ಪಾಳೆ
ಎರಡು ಕೈ ಸೇರಿದರೆ ಚಪ್ಪಾಳೆ ಎಂದು ಗಾನವಿ ಹೇಳಿದ್ದು, ಇದಕ್ಕೆ ಕಿಚ್ಚ ಯಾರಿಗಾದ್ರೂ ತಟ್ಟಬೇಕು ಅಂತ ಅನ್ನಿಸಿದ್ರೆ ಒಂದು ಕೈ ಸಾಕು. ನೀವು ಚಪ್ಪಾಳೆ ತಟ್ಟುತ್ತಿದ್ದೀರೋ ಅಥವಾ ತಟ್ಟುತ್ತಿದ್ದೀರೋ? ಎಂದಿದ್ದಾರೆ. ನಿಮಗೆ ಯಾರೆಲ್ಲ ಕಾಂಪಿಟೇಷನ್ ಅಲ್ಲ ಅಂತ ಅನ್ನಿಸುತ್ತದೆ ಎಂದು ಕೇಳಿದ್ದಾರೆ. ಇದಕ್ಕೆ ಗಾನವಿ ಅವರು ಕಾವ್ಯ ಅವರ ಹೆಸರು ಹೇಳಿದ್ದಾರೆ.
ಕಾವ್ಯ ಅವರು ನನ್ನ ಜತೆ ಗೇಮ್ ಆಡೇ ಇಲ್ಲವೆಂದು ಹೇಳಿದ್ದಾರೆ. ಫಸ್ಟ್ ಟಾಸ್ಕ್ ನಾವು ಆಡಿದ್ದೇವೆ. ತುಂಬಾ ರೀಸನ್ ಕೊಡುತ್ತಾ ಇದ್ದೀರಿ ಎಂದು ಗಾನವಿ ಕಾವ್ಯನಿಗೆ ಹೇಳಿದ್ದಾರೆ.
ಇದನ್ನೂ ಓದಿ: OM release date: ಧನುಷ್- ಮಮ್ಮುಟ್ಟಿ ನಟನೆಯ 'ಓಂ' ಸಿನಿಮಾ ರಿಲೀಸ್ ಡೇಟ್ ಪೋಸ್ಟ್‌ಪೋನ್! ಕಾರಣ ಇದು
ಕಾವ್ಯ ಗಾನವಿ ನಡುವೆ ಮಾತಿನ ಚಕಮಕಿ ನಡೆದಿದೆ. ಇದನ್ನು ಕೇಳಿದ ಸುದೀಪ್ ಇಬ್ಬರು ಮಾತನಾಡಿ ಮುಗಿಸಿದ ಮೇಲೆ ಹೇಳಿ ಬ್ಯಾಕ್ ಸ್ಟೇಜ್‌ನಲ್ಲಿ ಇರುತ್ತೇನೆ ಎಂದು ಹೇಳಿ ಹೋಗಿದ್ದಾರೆ.