ಬಿಗ್‌ಬಾಸ್ ಕನ್ನಡ ಸೀಸನ್ 13 (Bigg Boss kannada 13) ಆರಂಭವಾಗಿದೆ. ಸುದೀಪ್ ಅವರು ಇಂದು (ಸೆಪ್ಟೆಂಬರ್ 06) ಶೋ ಪ್ರಾರಂಭ ಮಾಡಿದ್ದು, ಸ್ಪರ್ಧಿಗಳನ್ನು ಒಬ್ಬೊಬ್ಬರನ್ನಾಗಿ ಬಿಗ್‌ಬಾಸ್ ಮನೆಗೆ ಆಹ್ವಾನಿಸುತ್ತಿದ್ದಾರೆ. ಹಲವು ಟಿವಿ, ಸಿನಿಮಾ ಸೆಲೆಬ್ರಿಟಿಗಳು ಬಿಗ್‌ಬಾಸ್ ಮನೆಗೆ ಬಂದಿದ್ದಾರೆ. ಪವಿತ್ರʼ ಬಂಧನ (Pavithra Bandhana) ಧಾರಾವಾಹಿ, ಕಡಿಮೆ ಸಮಯದಲ್ಲಿ ಪ್ರೇಕ್ಷಕರ ಫೇವರಿಟ್ ಸೀರಿಯಲ್ ಆಗಿಬಿಟ್ಟಿತ್ತು. ಅದರಲ್ಲೂ ತಿಲಕ್ ದೇಶಮುಖ್ ಅವರ ಪಾತ್ರ ಎಲ್ರಿಗೂ ಕನೆಕ್ಟ್ ಆಗಿತ್ತು. ಪವಿತ್ರಾ ಜೊತೆ ಮದುವೆಯಾಗಬೇಕಿದ್ದ ತಿಲಕ್, ಮದುವೆಯ ದಿನವೇ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಡ್ತಾನೆ. ಯಶಸ್ ಕೃಷ್ಣ (Yashas Krishna) ಪಾತ್ರ ಮುಗಿದಾಗ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದರು. ಇದೀಗ ನಟ ಬಿಗ್ ಬಾಸ್ ವೇದಿಕೆ ಬಂದಿದ್ದಾರೆ.
ನಾನು ತುಂಬಾ ಸೋಮಾರಿ
ಪವಿತ್ರ ಬಂಧನ ಇಂದ ಶುರು ಆಯ್ತು ಜರ್ನಿ. ನಾನು ತುಂಬಾ ಸೋಮಾರಿ. ಹಠಮಾರಿ. ಶೈ ಆಗಿದ್ದೆ. ಸೋಷಿಯಲ್ ಮೀಡಿಯಾ ಅಕೌಂಟ್ ಇರಲಿಲ್ಲ. ಆದರೆ ಬೆಂಗಳೂರು ಬಂದಾಗ ಎಲ್ಲ ಚೇಂಜ್ ಆಯ್ತು. ನಾನು ಯಾವುದೇ ಕೆಲಸ ಕೊಟ್ಟರೂ ಅಚ್ಚುಕಟ್ಟಾಗಿ ಮಾಡುತ್ತೀನಿ. ವೀಕ್‌ನೆಸ್ ಅಂದ್ರೆ ತುಂಬಾ ಜನರ ನಂಬ್ತೀನಿ. ಈ ಶೋನಲ್ಲಿ ವೀಕ್‌ನೆಸ್ ಆಗಬಹುದು. ನಮ್ಮ ಅಮ್ಮನಿಗೆ ಶೋ ಇಷ್ಟ, ಅವರಿಗೋಸ್ಕರ ಬಂದೆ ಎಂದಿದ್ದಾರೆ.
ಇದನ್ನೂ ಓದಿ: Bigg Boss Kannada 13: ಅಗ್ನಿಪರೀಕ್ಷೆಯಲ್ಲಿ ಗೆದ್ದು ದೊಡ್ಮನೆಗೆ ಎಂಟ್ರಿ ಕೊಟ್ಟ ಲಿಖಿತ್ ಗೋಂದಿ
ಬಿಗ್‌ಬಾಸ್ ಕನ್ನಡ ಜೊತೆ ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಯಲ್ಲಿಯೂ ಆರಂಭವಾಗಿದೆ. ಈ ಬಾರಿಯ ಶೋಗೆ ಸೆಲೆಬ್ರಿಟಿಗಳ ಜೊತೆ ಕಾಮನ್ ಮ್ಯಾನ್ ಸಹ ಆಗಮಿಸುತ್ತಿದ್ದಾರೆ. ಈ ಬಾರಿಯೂ ಕಿಚ್ಚ ಸುದೀಪ್ ಅವರ ನಿರೂಪಣೆಯಲ್ಲಿ ಬಿಗ್‌ಬಾಸ್ ನಡೆಯುತ್ತಿದೆ.
ಇದನ್ನೂ ಓದಿ: Bigg Boss Kannada 13: ಕಿರುತೆರೆಯ ಖ್ಯಾತ ನಟಿ ವೈಷ್ಣವಿ ಕೌಂಡಿನ್ಯ ಈಗ ಬಿಗ್ಬಾಸ್ಗೆ!
ಈಗಾಗಲೇ ಜಗದೀಶ್, ಸೌಂದರ್ಯ ಶೆಟ್ಟಿ, ಅವಿನಾಶ್, ಪ್ರಥಮ ಪ್ರಸಾದ್, ಗಗನ್ ಚಿನ್ನಪ್ಪ, ಸಂಗೀತಾ ಭಟ್ ಹಾಗೂ ಕಾವ್ಯಾ ಗೌಡ ಸೇರಿದಂತೆ ಹಲವು ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಎಲ್ಲರೂ ಫ್ಲೈಟ್ ಬೋರ್ಡಿಂಗ್ ಪಾಸ್ ಹಿಡಿದುಕೊಂಡೇ ‘ದೊಡ್ಮನೆ’ ಪ್ರಯಾಣ ಆರಂಭಿಸಿರುವುದು ಈ ಸೀಸನ್‌ನ ವಿಶೇಷತೆಯಾಗಿದೆ.