ಬಿಗ್‌ಬಾಸ್ ಕನ್ನಡ (Bigg Boss Kannada 13) ಕರ್ನಾಟಕದ ಜನಪ್ರಿಯ ರಿಯಾಲಿಟಿ ಶೋ ಪ್ರತಿ ಸೀಸನ್‌ನಲ್ಲೂ ಹೊಸತನದ ಮೂಲಕ ವೀಕ್ಷಕರನ್ನು ರಂಜಿಸುತ್ತಿದೆ. ಲಕ್ಷಾಂತರ ಮಂದಿ ತಮ್ಮ ವಿಡಿಯೋಗಳನ್ನು ಕಳುಹಿಸಿದ್ದು, ಅವುಗಳಲ್ಲಿ ಅಳೆದು-ತೂಗಿ ಒಟ್ಟು 60 ಸ್ಪರ್ಧಿಗಳನ್ನು ಅಗ್ನಿಪರೀಕ್ಷೆ ರೌಂಡ್‌ಗೆ ಆಯ್ಕೆ ಮಾಡಲಾಗಿದೆ. ಆದರೆ ಬಿಗ್‌ಬಾಸ್ ಅಗ್ನಿಪರೀಕ್ಷೆ (Bigg boss Agnipariksha) ಅಂದುಕೊಂಡಷ್ಟು ಸುಲಭವಲ್ಲ. ಇದಕ್ಕೆ ಸಾಕ್ಷಿಯಾಗಿರುವುದು ಇದೀಗ ಬಿಡುಗಡೆಯಾಗಿರುವ ಅಗ್ನಿ ಪರೀಕ್ಷೆ ಹೊಸ ಪ್ರೋಮೋ.
ರೂಲ್ಸ್‌ಗೆ ವಿರುದ್ಧ
ಅಪ್ಪ ಮಗ ಕಂಟೆಸ್ಟ್ ಆಗಿ ಬಂದಿದ್ದರು. ಇಬ್ಬರೂ ಒಟ್ಟಿಗೆ ಬಿಗ್ ಬಾಸ್ ಮನೆಗೆ ಹೋಗಲು ಬಂದಿದ್ದರು. ಆದರೆ ಅದು ರೂಲ್ಸ್‌ಗೆ ವಿರುದ್ಧವಾಗಿತ್ತು. ಅದಕ್ಕೆ ಶೃತಿ ಅವರು ಒಬ್ಬರ ಫ್ಯಾಮಿಲಿಯಿಂದ ಇಬ್ಬರನ್ನು ಕಳಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಆದರೆ ಚಂದನ್ ಶೆಟ್ಟಿ ಮಾತ್ರ, ಇಬ್ಬರಿಗೂ ಟ್ಯಾಲೆಂಟ್ ಇದ್ದೂ ಪ್ರೂವ್ ಮಾಡಿದರೆ ಇಬ್ಬರಿಗೂ ಮನೆಯೊಳಗೆ ಹೋಗೋ ಚಾನ್ಸ್ ಸಿಗತ್ತೆ ಎಂದರು. ಈ ಬಗ್ಗೆ ಶೃತಿ ಗರಂ ಆದರು. ಹಾಗೆಲ್ಲ ಫಾರ್ಮೆಟ್ ಚೇಂಜ್ ಮಾಡ್ತಾ ಇದ್ದಿರಾ ನನಗೆ ಇಷ್ಟ ಆಗ್ತಿಲ್ಲ ಎಂದಿದ್ದಾರೆ. ಅದೇ ವೇಳೆ ಸಂಗೀತಾ ಇದ್ದವರು , ಇಬ್ಬರಲ್ಲಿ ಒಬ್ಬರು ಡಿಸೈಡ್ ಮಾಡಿ ಹೊರಗೆ ಹೋಗಿ ಎಂದಿದ್ದಾರೆ.
ಅಪ್ಪನಾ? ಮಗನಾ? ಅಗ್ನಿಪರೀಕ್ಷೆಗೆ entry ಯಾರದ್ದು? ಅನ್ನೋ ಕುತೂಹಲ ವೀಕ್ಷಕರಲ್ಲಿದೆ.
Bigg Boss Kannada-13 ಅಗ್ನಿ ಪರೀಕ್ಷೆ ಆಗಸ್ಟ್ 16ರಂದು ಪ್ರಾರಂಭವಾಗಲಿದೆ. ಇದು ಜನಸಾಮಾನ್ಯರನ್ನು ಆಯ್ಕೆ ಮಾಡುವ ವಿಶೇಷ ಪ್ರಕ್ರಿಯೆಯಾಗಿದೆ. ಈಗಾಗಲೇ 60 ಮಂದಿಯನ್ನು ಶಾರ್ಟ್‌ಲಿಸ್ಟ್ ಮಾಡಿ ಅಗ್ನಿಪರೀಕ್ಷೆಗೆ ಆಯ್ಕೆ ಮಾಡಲಾಗಿದೆ. ಇವರಲ್ಲಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡಲು ಯಾರು ಅಸಾಮಾನ್ಯರು ಎಂಬುದನ್ನು ಆಯ್ಕೆ ಮಾಡಲು ಸಂಗೀತಾ ಶೃಂಗೇರಿ, ವಿನಯ್ ಗೌಡ, ಚಂದನ್ ಶೆಟ್ಟಿ ಮತ್ತು ಶ್ರುತಿ ಜ್ಯೂರಿಗಳ ಸೀಟ್ ಅಲಂಕರಿಸಿದ್ದಾರೆ.
ಬಿಗ್ ಬಾಸ್ ಮನೆಯ ಸ್ಟಾರ್ ಕಂಟೆಸ್ಟಂಟ್ ಆಗಿ ಕೋಲಾರ ಜಿಲ್ಲೆಯಲ್ಲಿಯ ಬಂಗಾರಪೇಟೆ ಊರಿನ 72ವರ್ಷದ ರತ್ನ ಮತ್ತು 20ವರ್ಷದ ಯುವತಿ ಕುಮಾರಿ ಎಂಬುವವರು ಆಯ್ಕೆ ಆಗಿದ್ದಾರೆ. ‘ಬಂಗಾರಪೇಟೆ ಆನೆ’ ಎಂದು ವಿನಯ್ ಗೌಡ ಅವರು ಬಿರುದು ಕೊಟ್ಟಿದ್ದಾರೆ.
ಇದನ್ನೂ ಓದಿ: Bigg boss Kannada 13: ಬಿಗ್ ಬಾಸ್ ಮನೆಯಲ್ಲಿ ಒಬ್ಬರಾಗೋದು ಸುಲಭ ಅಲ್ಲ! ಯಾರು ಈ ಹೇಮಲತಾ ?
ಅದೇರೀತಿ ಜೆನ್ ಝೀ(Gen Z) ಕ್ಯಾಟಗರಿಯಲ್ಲಿ ಕುಮಾರಿ ಆವರು ಆಯ್ಕೆ ಆಗಿದ್ದಾರೆ. ಇದರ ಬೆನ್ನಲ್ಲೇ ಈಗ ಹೇಮಲತಾ ಜಯಣ್ಣ ಕೂಡ ಅಗ್ನಿಪರೀಕ್ಷೆಗೆ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ. ಆಗಸ್ಟ್ 16ರಿಂದ ಈ ವಿಶೇಷ ಸಂಚಿಕೆ ಪ್ರಸಾರವಾಗಲಿದೆ.