Bigg Boss Telugu 9: ತೆಲುಗು ಬಿಗ್‌ಬಾಸ್ 9 ಟ್ರೋಫಿ ಗೆದ್ದ ಸೈನಿಕ ಕಲ್ಯಾಣ್ ಪಡಾಲ; ರನ್ನರ್ ಅಪ್ ಆದ ಕನ್ನಡತಿ ತನುಜಾ
Bigg Boss Telugu 9 Trophy : ಬಿಗ್ ಬಾಸ್ ತೆಲುಗು ಸೀಸನ್ 9 ಫಿನಾಲೆ (ಡಿಸೆಂಬರ್ 21) ನಡೆದಿದೆ. ಈ ಸೀಸನ್ ಯಶಸ್ವಿಯಾಗಿ ಪೂರ್ಣಗೊಂಡಿದೆ. ವಿನ್ನರ್ ಕೂಡ ಅನೌನ್ಸ್ ಆಗಿದ್ದಾಗಿದೆ. ಹಿಂದಿನ ಸೀಸನ್‌ಗಳಿಗಿಂತ ಈ ಸೀಸನ್‌ಗೆ ಹೆಚ್ಚಿನ ಪ್ರತಿಕ್ರಿಯೆ ಸಿಕ್ಕಿದೆ. ಒಟ್ಟು ಐದು ಜನ ಫಿನಾಲೆಗೆ ಬಂದಿದ್ದರು. ಕಲ್ಯಾಣ್, ಇಮಾನ್ಯುಯೆಲ್, ಸಂಜನಾ ಗಲ್ರಾನಿ, ತನುಜಾ ಮತ್ತು ಪವನ್ ಅವರುಗಳು ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟಿದ್ದರು.
ಬಿಗ್ ಬಾಸ್ ತೆಲುಗು -
ಬಿಗ್ ಬಾಸ್ ತೆಲುಗು (Bigg boss Telugu 9) ಸೀಸನ್ 9 ಫಿನಾಲೆ (ಡಿಸೆಂಬರ್ 21) ನಡೆದಿದೆ. ಈ ಸೀಸನ್ ಯಶಸ್ವಿಯಾಗಿ ಪೂರ್ಣಗೊಂಡಿದೆ. ವಿನ್ನರ್ ಕೂಡ ಅನೌನ್ಸ್ ಆಗಿದ್ದಾಗಿದೆ. ಹಿಂದಿನ ಸೀಸನ್‌ಗಳಿಗಿಂತ ಈ ಸೀಸನ್‌ಗೆ ಹೆಚ್ಚಿನ ಪ್ರತಿಕ್ರಿಯೆ ಸಿಕ್ಕಿದೆ. ಒಟ್ಟು ಐದು ಜನ ಫಿನಾಲೆಗೆ ಬಂದಿದ್ದರು. ಕಲ್ಯಾಣ್, ಇಮಾನ್ಯುಯೆಲ್, ಸಂಜನಾ ಗಲ್ರಾನಿ, ತನುಜಾ ಮತ್ತು ಪವನ್ ಅವರುಗಳು ಫಿನಾಲೆ ವಾರಕ್ಕೆ ಎಂಟ್ರಿ ಕೊಟ್ಟಿದ್ದರು. ಕಲ್ಯಾಣ್ ಅವರು ಬಿಗ್‌ಬಾಸ್ ತೆಲುಗು ಸೀಸನ್ 09ರ ವಿಜೇತರಾಗಿದ್ದಾರೆ. ಕನ್ನಡತಿ ತನುಜಾ ಅವರು ರನ್ನರ್ ಅಪ್ ಆಗಿದ್ದಾರೆ.
ಮೂರನೇ ವಾರದಲ್ಲಿ ಪ್ರಿಯಾ ಎಲಿಮಿನೇಟ್ ಆದ ನಂತರ, ಕಲ್ಯಾಣ್ ಅವರ ನಿಜವಾದ ಆಟ ಪ್ರಾರಂಭವಾಯಿತು. ಆ ವಾರದಿಂದ, ಕಲ್ಯಾಣ್ ಅವರ ಗ್ರಾಫ್ ಪ್ರತಿ ವಾರವೂ ಹೆಚ್ಚುತ್ತಲೇ ಇತ್ತು. ಮೊದಲಿಗೆ ಇಮಾನ್ಯುಯೆಲ್ ನಾಲ್ಕನೇ ರನ್ನರ್ ಅಪ್ ಆದರು. ಬಳಿಕ ಸಂಜನಾ ಅವರು ಮೂರನೇ ರನ್ನರ್ ಅಪ್ ಆದರು. ಡಿಮಾನ್ ಪವನ್ ಎರಡನೇ ರನ್ನರ್ ಅಪ್ ಆದರೆ. ವೇದಿಕೆ ಹೋಗಿ ಮೊದಲ ರನ್ನರ್ ಅಪ್ ಆದರು ತನುಜಾ ಪುಟ್ಟಸ್ವಾಮಿ. ಕಲ್ಯಾಣ್ ಅವರು ವಿಜೇತರಾದರು.
ಇದನ್ನೂ ಓದಿ: Bigg Boss Kannada 12: ʻನೀನು ಸುಳ್ಳಿʼ ಎಂದು ಚೈತ್ರಾಗೆ ನೇರವಾಗಿ ಹೇಳಿದ ರಜತ್!
ಸಿಆರ್‌ಪಿಎಫ್ ಜವಾನ ಕಲ್ಯಾಣ್‌ಗೆ ಬಾಲ್ಯದಿಂದಲೂ ಸಿನಿಮಾಗಳ ಹುಚ್ಚು. ಆದರೆ, ಮನೆಯಲ್ಲಿನ ಆರ್ಥಿಕ ಪರಿಸ್ಥಿತಿಯಿಂದಾಗಿ, ಬಂದ ಅವಕಾಶವನ್ನು ನಿರಾಕರಿಸಲು ಸಾಧ್ಯವಾಗದೆ ಅವರು ಸಿಆರ್‌ಪಿಎಫ್‌ಗೆ ಸೇರಿದರು. ಸಾಮಾನ್ಯ ವ್ಯಕ್ತಿಯಾಗಿ ಮನೆಗೆ ಪ್ರವೇಶಿಸಿದ ಪವನ್ ಕಲ್ಯಾಣ್ ಪಡಾಲ ಭಾರತೀಯ ಸೇನಾ ಅಧಿಕಾರಿ. ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರು.
This name remember history of BiggBoss
— SuresH GowdA B (@SureshGowdaBzr) December 21, 2025
Youngsters commoner genuine trustworthy #KalyanPadala Winner of season 9 🏆 🔥 🔥
One name enough 💥 💥 💥 💥 pk kalyan ♥️ #biggbosstelugu9
pic.twitter.com/UtIkSlcmZ5
ಬೆಂಗಳೂರು ಮೂಲದ ನಟಿ ತನುಜಾಗೌಡ ತಮ್ಮ ಆಟದಿಂದ ಬಿಗ್‌ಬಾಸ್ ಮನೆಯಲ್ಲಿ ಗಮನ ಸೆಳೆದಿದ್ದರು. ಕನ್ನಡದ ಬ್ಲಾಕ್ ಬಸ್ಟರ್ ಚಿತ್ರ '6-5=2' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. 'ಮುದ್ದ ಮಂದಾರಂ' ಎಂಬ ತೆಲುಗು ಧಾರಾವಾಹಿಯಲ್ಲಿ ನಟಿಸಿ ಟಾಲಿವುಡ್ ಅಂಗಳದಲ್ಲಿ ಜನಪ್ರಿಯರಾಗಿದ್ದರು.
ಇನ್ನು ಟ್ರೋಫಿ ಗೆದ್ದ ಕಾಮನ್‌ಮ್ಯಾನ್ ಕಲ್ಯಾಣ್ ಪದಲ ಅವರಿಗೆ 35 ಲಕ್ಷ ರೂ. ಬಹುಮಾನದ ಹಣ ಸಿಕ್ಕಿದೆ. ಜೊತೆಗೆ ಒಂದು ಎಸ್‌ಯುವಿ ಕಾರ್ ಕೂಡ ಗೆದ್ದಿದ್ದಾರೆ. ಒಟ್ಟು 50 ಲಕ್ಷ ರೂ. ಬಹುಮಾನದ ಹಣದಲ್ಲಿ 2ನೇ ರನ್ನರ್ ಅಪ್ ಡೆಮನ್ ಪವನ್ 15 ಲಕ್ಷ ರೂ. ತೆಗೆದುಕೊಂಡು ಮನೆಯಿಂದ ಹೊರಬಂದಿದ್ದರು.
ಇದನ್ನೂ ಓದಿ: Bigg Boss Kannada 12: ಬಿಗ್‌ಬಾಸ್ ಮನೆಯಿಂದ ಹೊರಬಂದ ಚೈತ್ರಾ, ರಜತ್
ಸೆಪ್ಟೆಂಬರ್ 7ರಂದು ಬಿಗ್‌ಬಾಸ್ ತೆಲುಗು ಸೀಸನ್-9 ಆರಂಭವಾಗಿತ್ತು. 15 ಮಂದಿ ಸ್ಪರ್ಧಿಗಳು ದೊಡ್ಮನೆ ಒಳಗೆ ಹೋಗಿದ್ದರು. ಅದರಲ್ಲಿ ಕಲ್ಯಾಣ್ ಸೇರಿ 6 ಮಂದಿ ಕಾಮನ್‌ನರ್ ಇದ್ದರು. 7 ಮಂದಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದರು. ಈ ಬಾರಿ ಕೂಡ ನಟ ನಾಗಾರ್ಜುನ ಶೋ ನಿರೂಪಣೆ ಮಾಡಿದ್ದರು. ಒಟ್ಟು 106 ದಿನಗಳ ಕಾಲ ಈ ಬಾರಿ ಸೀಸನ್ ನಡೆದಿದೆ.