ಬಿಗ್ ಬಾಸ್ ಮನೆಯಲ್ಲಿ (Bigg Boss Kannada 13) ಅನೇಕ ಸ್ಪರ್ಧಿಗಳು ಫಿಲ್ಟರ್ ಇಲ್ಲದೇ ಮಾತನಾಡುತ್ತಿದ್ದಾರೆ. ಅಶ್ಲೀಲ ಪದಗಳ ಬಳಕೆ, ಕೆಟ್ಟ ವರ್ತನೆ ವೀಕ್ಷಕರಿಗೆ ಬೇಸರ ತರಿಸಿದೆ. ʻಬಿಗ್ ಬಾಸ್ʼ ಮನೆಯೊಳಗೆ ಆಟದ ಕಾವು ಏರುತ್ತಿದ್ದಂತೆ ಸ್ಪರ್ಧಿಗಳ ನಡುವಿನ ಘರ್ಷಣೆಗಳೂ ಹೆಚ್ಚಾಗುತ್ತಿವೆ. 'ರಾಕ್ಷಸರು ಹಾಗೂ ಗಂಧರ್ವರು' ಎಂಬ ಟಾಸ್ಕ್ ವೇಳೆ ಸಾಮಾನ್ಯ ಸಂಭಾಷಣೆಗಳಲ್ಲೂ ತಾಳ್ಮೆ ಕಳೆದುಕೊಳ್ಳುತ್ತಿದಾರೆ. ಇದೀಗ ಬಿಗ್ ಬಾಸ್ ಮನೆಯಿಂದ ಹೊರನಡೆಯುವ ಇಚ್ಛೆಯನ್ನು ನಟ ಗಗನ್ ಚಿನ್ನಪ್ಪ (Gagan Chinnappa) ವ್ಯಕ್ತಪಡಿಸಿದ್ದಾರೆ.
ಟಾಸ್ಕ್ ನೆಪದಲ್ಲಿ ಗಗನ್‌ಗೆ ಕುನ್ನಿ ಎಂದಿದ್ದಾರೆ ಗಾನವಿ. ಈ ಪದ ಬಳಕೆ ಗಗನ್ ಅವರಿಗೆ ತೀವ್ರ ಬೇಸರ ಹಾಗೂ ಕೋಪ ಬರಿಸಿದೆ. ಅದರಲ್ಲೂ ತನ್ನ ಆತ್ಮಗೌರವ ಬಿಟ್ಟು ಈ ಶೋನಲ್ಲಿ ಇರಲಾರೆ ಎಂದು ಹೇಳಿಕೊಂಡಿದ್ದಾರೆ ಗಗನ್. ಆ ಕುನ್ನಿ ಪದ ತುಂಬಾ ಹರ್ಟ್ ಆಗಿದೆ. ನನ್ನ ಸೆಲ್ಫ್ ರೆಸ್ಪೆಕ್ಟ್ ಹಾಳಾಗುತ್ತಿದೆ. ಈ ರೀತಿ ಅಸಹ್ಯವಾಗಿ ಆಟ ಆಡಲು ನನಗೆ ಸಾಧ್ಯವಿಲ್ಲ. ಬೇಕಿದ್ದರೆ ನಾನು ಈ ಶೋ ಬಿಟ್ಟು ಹೊರಡುತ್ತೇನೆ ಎಂದು ಸ್ನೇಹಿತ ತಾಂಡವ್ ಬಳಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Bigg Boss kannada 13: ನೀವು ಯಾವಾಗಲೂ ಗಗನ್ ಪಕ್ಕ ಇರೋ ತಾಂಡವ್! ಗಾನವಿ ಕೌಂಟರ್
ಇನ್ನೊಂದು ಕಡೆ ಮಂಜ ಅವರು ಯಶಸ್ ವಿರುದ್ಧ ಅಸಭ್ಯ ಮತ್ತು ನಿಂದನೀಯ ಪದಗಳನ್ನ ಬಳಸುತ್ತಿರುವುದು ಮನೆಯ ವಾತಾವರಣವನ್ನ ಕೆಡಿಸಿದೆ.‘ಸ್ತ್ರೀ ವ್ಯಾಮೋಹ ಇರುವ ಕಳ್ಳನಾಯಿ’, ‘ನಾಯಿ ನಾಯಿ’ ಎಂದು ಹಂಗಿಸಲು ಶುರು ಮಾಡಿದ್ದರು ಮಂಜ. ಯಶಸ್ ಅವರನ್ನ 'ಕಾಮುಕ' ಎಂದು ಕರೆದು, ʻಬಿಗ್ ಬಾಸ್ʼ ಆ ಸಂಭಾಷಣೆಯನ್ನ ಪ್ರಸಾರ ಮಾಡದೇ ಇದ್ದರು. ಅಲ್ಲಿ ತನಕ ಹೋಗಿ ಮುಟ್ಟಿದೆ.
ಇದನ್ನೂ ಓದಿ: Bigg Boss Kannada 13: ಈ ವಾರ ಮಹಾಕವಿ ಮಂಜ ಎಲಿಮಿನೇಟ್? ವೀಕ್ಷಕರಿಗೆ ಭಾರೀ ಅಸಮಾಧಾನ
ಈ ವಾರ ಕಿಚ್ಚ ಸುದೀಪ್ ಅವರು ಯಾವ ರೀತಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಅನ್ನೊ ಕುತೂಹಲ ವೀಕ್ಷಕರಲ್ಲಿದೆ.